2018ರ ಚಾಂಪಿಯನ್ ಬೆಂಗಳೂರು ತಂಡ ತನ್ನ ಮೊದಲ ತವರಿನ ಪಂದ್ಯವನ್ನು ಅಕ್ಟೋಬರ್ 4ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದೆ. ಹಾಲಿ ಚಾಂಪಿಯನ್ ಮೋಹನ್ ಬಗಾನ್ ತಂಡ ಸೆಪ್ಟೆಂಬರ್ 23ರಂದು ಪಂಜಾಬ್ ಎಫ್‌ಸಿ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ನವದೆಹಲಿ(ಸೆ.09): 2023-24ರ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೆ.21ರಂದು ಕೊಚ್ಚಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬದ್ಧವೈರಿಗಳಾದ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಮುಖಾಮುಖಿಯಾಗಲಿವೆ.
ಆಯೋಜಕರು ಸದ್ಯ ಡಿಸೆಂಬರ್ 29ರ ವರೆಗಿನ ಮೊದಲ ಹಂತದ ವೇಳಾಪಟ್ಟಿ ಪ್ರಕಟಗೊಳಿಸಿದ್ದಾರೆ. 2018ರ ಚಾಂಪಿಯನ್ ಬೆಂಗಳೂರು ತಂಡ ತನ್ನ ಮೊದಲ ತವರಿನ ಪಂದ್ಯವನ್ನು ಅಕ್ಟೋಬರ್ 4ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದೆ. ಹಾಲಿ ಚಾಂಪಿಯನ್ ಮೋಹನ್ ಬಗಾನ್ ತಂಡ ಸೆಪ್ಟೆಂಬರ್ 23ರಂದು ಪಂಜಾಬ್ ಎಫ್‌ಸಿ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು, 6 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ.
US Open 2023: ಸೆಮಿಫೈನಲ್‌ಗೆ ಲಗ್ಗೆಯಿಟ್ಟಿ ಕಾರ್ಲೊಸ್ ಆಲ್ಕರಜ್
ಸ್ಟಾರ್‌ಸ್ಪೋರ್ಟ್ಸ್‌ಗೆ ಮತ್ತೆ ಭಾರಿ ಹೊಡೆತ!
ಈ ಬಾರಿ ಐಎಸ್‌ಎಲ್ ಪಂದ್ಯಗಳು ರಿಲಯನ್ಸ್ ಒಡೆತನದ ಜಿಯೋ ಸಿನೆಮಾ ಮತ್ತು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪ್ರಸಾರಗೊಳ್ಳುವುದಾಗಿ ಈಗಾಗಲೇ ಆಯೋಜಕರು ಪ್ರಕಟಿಸಿದ್ದಾರೆ. ಇದರೊಂದಿಗೆ ಒಂದು ದಶಕದ ಸ್ಟಾರ್ ಸ್ಪೋರ್ಟ್ಸ್ ಅಧಿಪತ್ಯಕ್ಕೆ ತಡೆ ಬಿದ್ದಿದೆ. 2014ರಿಂದಲೂ ಐಎಸ್‌ಎಲ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್‌ನಲ್ಲಿ ಪ್ರಸಾರಗೊಳ್ಳುತ್ತಿತ್ತು. ಈಗಾಗಲೇ ಐಪಿಎಲ್, ಭಾರತದ ತವರಿನ ಪಂದ್ಯಗಳ ಪ್ರಸಾರ ಹಕ್ಕನ್ನು ಸ್ಟಾರ್‌ಸ್ಪೋರ್ಟ್ಸ್ ಕೈಯಿಂದ ರಿಲಯನ್ಸ್ ತನ್ನ ತೆಕ್ಕಗೆ ಪಡೆದುಕೊಂಡಿದೆ.
ಕಿಂಗ್ಸ್ ಕಪ್: ಭಾರತಕ್ಕೆ ಸೋಲು!
ಚಿಯಾಂಗ್ ಮಾಯ್(ಥಾಯ್ಲೆಂಡ್): 49ನೇ ಆವೃತ್ತಿಯ, ಪ್ರತಿಷ್ಠಿತ ಕಿಂಗ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲೇ ಸೋತು ಹೊರಬಿದ್ದಿದೆ. 4 ತಂಡಗಳು ಪಾಲ್ಗೊಂಡ, ನಾಕೌಟ್ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ ಭಾರತ ಗುರುವಾರ ಇರಾಕ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-5 ಗೋಲುಗಳಿಂದ ಸೋತು ಹೊರಬಿತ್ತು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 99ನೇ ಸ್ಥಾನದಲ್ಲಿರುವ ಭಾರತ, 70 ರ್‍ಯಾಂಕ್‌ನ ಇರಾಕ್ ವಿರುದ್ಧ ಪ್ರಬಲ ಪೈಪೋಟಿ ನೀಡಿ ನಿಗದಿತ ಅವಧಿ ಮುಕ್ತಾಯಕ್ಕೆ 2-2ರಲ್ಲಿ ಸಮಬಲ ಸಾಧಿಸಿತು. ಭಾರತದ ಪರ ಮಹೇಶ್ 1 ಗೋಲು ಬಾರಿಸಿದರೆ, ಇರಾಕ್ ಆಟಗಾರನ ತಪ್ಪಿನಿಂದ ಮತ್ತೊಂದು ಸ್ವಯಂ ಗೋಲು ಭಾರತದ ಖಾತೆಗೆ ಸೇರ್ಪಡೆಗೊಂಡಿತು. ಬಳಿಕ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇರಾಕ್ ಎಲ್ಲಾ 5 ಅವಕಾಶಗಳನ್ನೂ ಗೋಲಾಗಿ ಪರಿವರ್ತಿಸಿದರೆ, ಭಾರತ 4 ಗೋಲುಗಳನ್ನಷ್ಟೇ ಬಾರಿಸಿ ಪಂದ್ಯ ಕೈ ಚೆಲ್ಲಿತು. ಭಾನುವಾರ ಫೈನಲ್‌ನಲ್ಲಿ ಇರಾಕ್ ತಂಡ ಥಾಯ್ಲೆಂಡ್ ವಿರುದ್ಧ ಆಡಲಿದ್ದು, 3ನೇ ಸ್ಥಾನಕ್ಕಾಗಿ ಭಾರತ ತಂಡ ಲೆಬಾನಾನ್ ವಿರುದ್ಧ ಸೆಣಸಲಿದೆ.
World Cup 2023 ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ
ಭಾರತ ಫುಟ್ಬಾಲ್‌ಗೆ ಇನ್ನು ‘ಪರ್ಫಾರ್ಮ್ಯಾಕ್ಸ್’ ಜೆರ್ಸಿ
ಮುಂಬೈ: ಭಾರತೀಯ ಫುಟ್ಬಾಲ್ ತಂಡದ ಅಧಿಕೃತ ಕಿಟ್ ಮತ್ತು ಸರಕುಗಳ ಪ್ರಾಯೋಜಕರಾಗಿ ರಿಲಯನ್ಸ್ ಸಂಸ್ಥೆಯ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ ''ಪರ್ಫಾರ್ಮ್ಯಾಕ್ಸ್'' ಒಪ್ಪಂದ ಮಾಡಿಕೊಂಡಿದೆ. ಭಾರತೀಯ ಫುಟ್‌ಬಾಲ್ ಫೆಡರೇಶನ್‌ನೊಂದಿಗೆ ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಗುರುವಾರ ಪರ್ಫಾರ್ಮ್ಯಾಕ್ಸ್ ಘೋಷಿಸಿತು. ಗುರುವಾರ ಥಾಯ್ಲೆಂಡ್‌ನಲ್ಲಿ ಕಿಂಗ್ಸ್ ಕಪ್ ಫುಟ್ಬಾಲ್ ಟೂರ್ನಿಯ ಇರಾಕ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಆಟಗಾರರು ಪರ್ಫಾರ್ಮ್ಯಾಕ್ಸ್‌ನ ಜೆರ್ಸಿ ಧರಿಸಿ ಆಡಿದರು.