FIFA Womens World Cup 2023: ಚೊಚ್ಚಲ ಬಾರಿಗೆ ಫಿಫಾ ಮಹಿಳಾ ವಿಶ್ವಕಪ್‌ ಟ್ರೋಫಿ ಜಯಿಸಿದ ಸ್ಪೇನ್‌

By Santosh Naik  |  First Published Aug 20, 2023, 6:22 PM IST

Spain Won Maiden FIFA Womens World Cup 2023: ಓಲ್ಗಾ ಕಾರ್ಮೋನಾ ಪಂದ್ಯದ 29ನೆ ನಿಮಿಷದಲ್ಲಿ ಬಾರಿಸಿದ ಆಕರ್ಷಕ ಗೋಲಿನ ಸಾಹಸದಿಂದ ಸ್ಪೇನ್‌ ತಂಡ ಇದೇ ಮೊದಲ ಬಾರಿಗೆ ಫಿಫಾ ಮಹಿಳೆಯರ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.


ಸಿಡ್ನಿ (ಆ.20): ಸ್ಪೇನ್‌ ಪಾಲಿಗೆ ಮತ್ತೊಮ್ಮೆ ಫುಟ್‌ಬಾಲ್‌ನ ಗತವೈಭವ ಮರುಳಿದೆ. ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ ಸ್ಪೇನ್‌ ತಂಡ ಸಿಡ್ನಿಯ ಅಕೋರ್‌ ಸ್ಟೇಡಿಯಂನಲ್ಲಿ ಭಾನುವಾರ ನಟೆದ ಮಹಿಳೆಯರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಚಾಂಪಿಯನ್‌ ಆಗಿದೆ. ಫೈನಲ್‌ ಪಂದ್ಯದಲ್ಲಿ ಓಲ್ಗಾ ಕಾರ್ಮೋನಾ ಬಾರಿಸಿದ ಆಕರ್ಷಕ ಗೋಲಿನಿಂದ ಸ್ಪೇನ್‌ ತಂಡ 1-0 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿತು. ಇದು ಸ್ಪೇನ್‌ ಮಹಿಳಾ ತಂಡದ ಮೊಟ್ಟಮೊದಲ ವಿಶ್ವಕಪ್‌ ಟ್ರೋಫಿ ಎನಿಸಿದೆ. ಸ್ಪೇನ್‌ ತಂಡದ ನಾಯಕಿಯೂ ಆಗಿರುವ ಓಲ್ಗಾ ಕಾರ್ಮೋನಾ ಪಂದ್ಯದ ಮೊದಲ ಅವಧಿಯ ಆಟದ 29ನೇ ನಿಮಿಷದಲ್ಲಿ ಆಕರ್ಷಕ ಗೋಲು ಸಿಡಿಸಿದ್ದರು. ಈ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಯಶಸ್ವಿಯಾಗುವ ಮೂಲಕ ಚಾಂಪಿಯನ್‌ ಎನಿಸಿಕೊಂಡಿತು. ಮೊದಲ ಅವಧಿಯ ಆಟದ ಕೊನೆಯ ನಿಮಿಷಗಳಲ್ಲಿ ಪಂದ್ಯದಲ್ಲಿ ಸಮಬಲ ಸಾಧಿಸುವ ಅಪೂರ್ವ ಅವಕಾಶ ಇಂಗ್ಲೆಂಡ್‌ ತಂಡಕ್ಕೆ ಸಿಕ್ಕಿತ್ತು. ಲೌರೆನ್‌ ಹೆಂಪ್‌ ಬಾರಿಸಿದ ಆಕರ್ಷಕ ಶಾಟ್‌, ಗೋಲು ಪೆಟ್ಟಿಗೆಯ ಪಟ್ಟಿಗೆ ತಾಗಿ ವಾಪಸಾಗುವುದರೊಂದಿಗೆ ಇಂಗ್ಲೆಂಡ್‌ ತಂಡದ ವಿಶ್ವಕಪ್‌ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು.

ಇದು ಮಹಿಳಾ ವಿಶ್ವಕಪ್‌ ಟೂರ್ನಿಯ 9ನೇ ಆವತ್ತಿಯಾಗಿದ್ದು, ಭಾನುವಾರ ನಡೆದ ಫೈನಲ್‌ ಪಂದ್ಯಕ್ಕೆ 75 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಹಾಜರಿದ್ದರು. ಇಡೀ ಟೂರ್ನಿಗೆ ಆಸ್ಟ್ರೇಲಿಯಾ ಫೇವರಿಟ್‌ ಆಗಿದ್ದರೂ, ಟೂರ್ನಿಯ ಫೈನಲ್‌ಗೇರಲುವಲ್ಲಿ ತಂಡ ವಿಫಲವಾಗಿತ್ತು. ಫೈನಲ್‌ ಪಂದ್ಯಕ್ಕೆ ಸರಿಯಾ  ವಿಯೆಗ್‌ಮನ್‌ ಅವರ ಇಂಗ್ಲೆಂಡ್‌ ತಂಡ ಫೇವರಿಟ್‌ ಆಗಿದ್ದರೂ ಸ್ಪೇನ್‌ ತಂಡ ಅವರಿಗೆ ಆಘಾತ ನೀಡಿತು.

Tap to resize

Latest Videos

undefined

'25 ಬೆಡ್‌ ರೂಮ್‌ನ ಬಂಗಲೆ, ವಾರ್ಷಿಕ 903 ಕೋಟಿ ವೇತನ..' ಸೌದಿ ಕ್ಲಬ್‌ಗೆ ಸೇರಿದ ನೇಮರ್‌ಗೆ ಸಿಗೋ ಸೌಲಭ್ಯಗಳ ಲಿಸ್ಟ್‌..!

ಮಹಿಳಾ ವಿಶ್ವಕಪ್‌ ಗೆದ್ದ 5ನೇ ತಂಡ ಸ್ಪೇನ್‌: ನಾಯಕಿ ಓಲ್ಗಾ ಕಾರ್ಮೋನಾ ಫೈನಲ್‌ನಲ್ಲಿ ಮಾತ್ರವಲ್ಲ, ಸ್ವೀಡನ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲೂ ಓಲ್ಗಾ ಗೆಲುವು ಗೋಲು ಸಿಡಿಸಿದ್ದರು. ಈ ಗೆಲುವಿನೊಂದಿಗೆ ಸ್ಪೇನ್‌ ತಂಡ ಫಿಫಾ ವಿಶ್ವಕಪ್‌ ಟ್ರೋಫಿ ಜಯಿಸಿದ 5ನೇ ತಂಡ ಎನಿಸಿಕೊಂಡಿದೆ. ಅಮೆರಿಕ ದಾಖಲೆಯ ನಾಲ್ಕು ಬಾರಿ ಟ್ರೋಫಿ ಜಯಿಸಿದ್ದರೆ, ಜರ್ಮನಿ 2 ಬಾರಿ ಹಾಗೂ ಜಪಾನ್‌ ಮತ್ತು ನಾರ್ವೆ ತಂಡಗಳು ತಲಾ ಒಂದೊಂದು ಬಾರಿ ಟ್ರೋಫಿ ಗೆದ್ದಿದ್ದವು. ಈ ಟೂರ್ನಿಗೂ ಮುನ್ನ ಸ್ಪೇನ್‌ ತಂಡ ಮಹಿಳಾ ವಿಶ್ವಕಪ್‌ ವೇದಿಕೆಯಲ್ಲಿ ಕೇವಲ ಒಂದೇ ಒಂದು ಪಂದ್ಯ ಗೆದ್ದಿದ್ದ ಇತಿಹಾಸ ಹೊಂದಿತ್ತು.

 

ಫುಟ್ಬಾಲ್ ಪಂದ್ಯದಲ್ಲಿ ಸಿಕ್ಸ್‌-ಪ್ಯಾಕ್ ತೋರಿಸಿದ ಇಬ್ರಾಹಿಂ ಅಲಿ ಖಾನ್‌..! 90ರ ದಶಕದ ಸೈಫ್ ಎಂದ ಫ್ಯಾನ್ಸ್‌

click me!