
ನವದೆಹಲಿ: ಭದ್ರತಾ ದೃಷ್ಟಿಯಿಂದ ಇರಾನ್‌ಗೆ ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಭಾರತೀಯ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ ತಂಡವನ್ನು ಆಯೋಜಕರು ಎಎಫ್‌ಸಿ ಏಷ್ಯನ್ ಚಾಂಪಿಯನ್ಸ್ ಲೀಗ್-2ನಿಂದಲೇ ಹೊರದಬ್ಬಿದ್ದಾರೆ.
‘ಎ’ ಗುಂಪಿನಲ್ಲಿದ್ದ ಮೋಹನ್ ಬಗಾನ್ ತಂಡ ಇತ್ತೀಚೆಗೆ ಗುಂಪು ಹಂತದ ಪಂದ್ಯದಲ್ಲಿ ಟ್ರಾಕ್ಟರ್ ಎಸ್‌ಸಿ ವಿರುದ್ಧ ಆಡಲು ಇರಾನ್‌ಗೆ ತೆರಳಬೇಕಿತ್ತು. ಆದರೆ ಇರಾನ್‌ನಲ್ಲಿ ಯುದ್ಧದ ಭೀತಿ ಇರುವ ಕಾರಣ ಬಗಾನ್ ತಂಡ ಅಲ್ಲಿಗೆ ಪ್ರಯಾಣಿಸಲು ನಿರಾಕರಿಸಿತ್ತು. ಇದಕ್ಕೆ ಶಿಕ್ಷೆ ಎಂಬಂತೆ ತಂಡವನ್ನು ಟೂರ್ನಿಯಿಂದಲೇ ಹೊರಗಿಟ್ಟಿದ್ದಾಗಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ ಮಾಹಿತಿ ಪ್ರಕಟಿಸಿದೆ. ಮೋಹನ್ ಬಗಾನ್ ತಂಡ ಇತ್ತೀಚೆಗೆ ಕೋಲ್ಕತಾದಲ್ಲಿ ಗುಂಪು ಹಂತದ ಪಂದ್ಯದಲ್ಲಿ ರಾವ್‌ಶನ್ ಎಫ್‌ಸಿ ವಿರುದ್ಧ ಆಡಿತ್ತು. ಪಂದ್ಯ ಡ್ರಾಗೊಂಡಿತ್ತು. ಸದ್ಯ ತಂಡವನ್ನೇ ಹೊರಹಾಕಿದ ಕಾರಣ ಗಳಿಸಿದ ಗೋಲು, ಪಡೆದ ಅಂಕಗಳನ್ನು ಕಡತಗಳಿಂದ ಅಳಿಸಿ ಹಾಕಲಾಗಿದೆ.
ಡೇವಿಸ್ ಕಪ್: ಮುಂದಿನ ವರ್ಷ ಭಾರತಕ್ಕೆ ಟೊಗೊ ಸವಾಲು
ಲಂಡನ್: ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪು-1ರ ಪ್ಲೇ ಆಫ್ ಡ್ರಾ ಬಿಡುಗಡೆಗೊಂಡಿದ್ದು, 2025ರ ಜ.31ರಿಂದ ಫೆ.2ರ ವರೆಗೆ ಭಾರತ ತಂಡ ಟೊಗೊ ದೇಶವನ್ನು ಎದುರಿಸಲಿದೆ. ಪಂದ್ಯ ಭಾರತದಲ್ಲೇ ನಡೆಯಲಿದೆ ಎಂದು ಭಾರತ ಟೆನಿಸ್ ಸಂಸ್ಥೆ ತಿಳಿಸಿದೆ. ಕಳೆದ ಫೆಬ್ರವರಿಯಲ್ಲಿ ಭಾರತ ವಿಶ್ವ ಗುಂಪು-1ರ ಪ್ಲೇ ಆಫ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿತ್ತು. ಗುಂಪು 1ರಲ್ಲಿ ಸ್ವೀಡನ್ ವಿರುದ್ಧ ಸೋತು ಮತ್ತೆ ಪ್ಲೇ-ಆಫ್‌ಗೆ ಹಿಂಬಡ್ತಿ ಪಡೆದಿದೆ.
Breaking: ಜಿಮ್ನಾಸ್ಟಿಕ್ಸ್‌ಗೆ ವಿದಾಯ ಹೇಳಿದ ದೀಪಾ ಕರ್ಮಾಕರ್
ವಿಶ್ವ ಕಿರಿಯರ ಶೂಟಿಂಗ್: 24 ಪದಕ ಗೆದ್ದ ಭಾರತ
ಲಿಮಾ(ಪೆರು): ಐಎಸ್‌ಎಸ್‌ಎಫ್ ಕಿರಿಯರ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 24 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಆರಂಭದಿಂದಲೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಭಾರತ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾರತ 13 ಚಿನ್ನ, 3 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಟಿ20 ವಿಶ್ವಕಪ್ ಬಳಿಕ ಕಿವೀಸ್ ವನಿತಾ ತಂಡ ಭಾರತಕ್ಕೆ
ಕೂಟದ ಕೊನೆ ದಿನವಾದ ಸೋಮವಾರ ಪುರುಷರ 50 ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ದೀಪಕ್, ಕಮಲ್‌ಜೀತ್ ಹಾಗೂ ರಾಜ್ ಚಂದ್ರ ಅವರನ್ನೊಳಗೊಂಡ ಭಾರತ ತಂಡಕ್ಕೆ ಚಿನ್ನ ಲಭಿಸಿತು. ಮುಕೇಶ್ ನೆಲವಲ್ಲಿ ಒಟ್ಟು 6 ಪದಕಗಳನ್ನು ಗೆದ್ದು ಶ್ರೇಷ್ಠ ಶೂಟರ್ ಎನಿಸಿಕೊಂಡರು. ಇಟಲಿ 13 ಪದಕಗಳೊಂದಿಗೆ 2ನೇ, ನಾರ್ವೆ 10 ಪದಕಗಳೊಂದಿಗೆ 3ನೇ ಸ್ಥಾನ ಪಡೆಯಿತು.
ಜೋಹರ್ ಕಪ್ ಹಾಕಿ: ಭಾರತಕ್ಕೆ ಅಲಿ ನಾಯಕ
ಬೆಂಗಳೂರು: ಅ.19ರಿಂದ ಮಲೇಷ್ಯಾದಲ್ಲಿ ನಡೆಯಲಿರುವ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಡಿಫೆಂಡರ್ ಅಮೀರ್ ಅಲಿ ನಾಯಕನಾಗಿ ನೇಮಕಗೊಂಡಿದ್ದಾರೆ. 18 ಆಟಗಾರರ ತಂಡದಲ್ಲಿ ರೋಹಿತ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಿರಿಯರ ತಂಡದ ಕೋಚ್ ಆಗಿ ನೇಮಕಗೊಂಡಿರುವ ದಿಗ್ಗಜ ಗೋಲ್‌ಕೀಪರ್ ಶ್ರೀಜೇಶ್ ಮೊದಲ ಬಾರಿ ಹುದ್ದೆ ನಿಭಾಯಿಸಲಿದ್ದಾರೆ.
ಭಾರತ ತಂಡ ಅ.19ರಂದು ಜಪಾನ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬಳಿಕ ಅ.20ಕ್ಕೆ ಗ್ರೇಟ್ ಬ್ರಿಟನ್, ಅ.22ಕ್ಕೆ ಮಲೇಷ್ಯಾ, ಅ.23ಕ್ಕೆ ಆಸ್ಟ್ರೇಲಿಯಾ ಹಾಗೂ ಅ.25ಕ್ಕೆ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಅಗ್ರ-2 ತಂಡಗಳು ಅ.26ಕ್ಕೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.