ಈ ಬಾರಿ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ದಕ್ಷಿಣ ಡರ್ಬಿಯಲ್ಲಿ ಬೆಂಗಳೂರು ಎಫ್‌ಸಿ ಗೆಲುವು ಸಾಧಿಸಿದೆ. ಫುಟ್ಬಾಲ್ ವಿಚಾರದಲ್ಲಿ ಬೆಂಗಳೂರು, ಕರ್ನಾಟಕಕ್ಕಿಂತ ಕೇರಳದಲ್ಲೇ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಅಭಿಮಾನಿ ಬಣ. ಆದರೆ ದಕ್ಷಿಣ ಡರ್ಬಿ ಬಲಿಷ್ಠ ತಂಡದ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಸಿದೆ.
ಗೋವಾ(ಡಿ.13) : ಕ್ಲಿಟನ್ ಸಿಲ್ವಾ (29ನೇ ನಿಮಿಷ), ಎರಿಕ್ ಹಾರ್ಥಲು (51ನೇ ನಿಮಿಷ), ದಿಮಾಸ್ ಡೆಲ್ಗಾಡೊ (53ನೇ ನಿಮಿಷ) ಮತ್ತು ಸುನಿಲ್ ಛೆಟ್ರಿ (65ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ 7ನೇ ಅವೃತ್ತಿಯಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಬೃಹತ್ ಜಯ ಗಳಿಸಿದೆ. ಕೇರಳ ಬ್ಲಾಸ್ಟರ್ಸ್ ಪರ ರಾಹುಲ್ ಕೆಪಿ (17ನೇ ನಿಮಿಷ) ಹಾಗೂ ಜೋರ್ಡನ್ ಮರ್ರೆ (61ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ನಾಯಕ ಸುನಿಲ್ ಛೆಟ್ರಿ ಪೆನಾಲ್ಟಿ ಅವಕಾಶವೊಂದನ್ನು ಕೈ ಚೆಲ್ಲದೇ ಇರುತ್ತಿದ್ದರೆ ಬೆಂಗಳೂರು ಮತ್ತೊಂದು ಗೋಲನ್ನು ಗಳಿಸಿರುತ್ತಿತ್ತು. ಈ ಜಯದೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.
ISL 7: 3ನೇ ಪಂದ್ಯ ಡ್ರಾಮಾಡಿಕೊಂಡ ಬೆಂಗಳೂರು FC!
undefined
ಮುನ್ನಡೆದ ಕೇರಳ:
ಕೇರಳ ಅದ್ಭುತವಾದ ಆಟ ಪ್ರದರ್ಶಿಸಿತು, ಪರಿಣಾಮ ರಾಹುಲ್ ಕೆಪಿ 17ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಕೇರಳದ ಬಾಕ್ಸ್ ನಲ್ಲಿ ಬೆಂಗಳೂರಿಗೆ ಫ್ರೀ ಕಿಕ್ ಅವಕಾಶ. ಆದರೆ ಇದಕ್ಕೆ ಬೆಂಗಲೂರು ಆಟಗಾರರು ಸ್ಪಂದಿಸುವುದಕ್ಕೆ ಮುನ್ನ ಕೇರಳದ ಗ್ಯಾರಿ ಹೂಪರ್ ಚೆಂಡನ್ನು ನಿಯಂತ್ರಿಸಿ ಸುಮಾರು 60ರಿಂದ 70 ಅಡಿಗಳ ವರೆಗೆ ಒಂಟಿಯಾಗಿ ಕೊಂಡೊಯ್ದರು. ನಂತರ ಚೆಂಡನ್ನು ರಾಹುಲ್ ನಿಯಂತ್ರಣಕ್ಕೆ ನೀಡಿದರು. ರಾಹುಲ್ ಬಂದ ವೇಗದಲ್ಲೇ ಚೆಂಡನ್ನು ಗೋಲ್ ಬಾಕ್ಸ್ ಗೆ ನೇರವಾಗಿ ತುಳಿದರು. ಗುರ್ಪ್ರೀತ್ ಸಿಂಗ್ ಸಂಧೂ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಕೇರಳಕ್ಕೆ 1-0 ಮುನ್ನಡೆ ಗಳಿಸಿತು.
ಪ್ರಥಮಾರ್ಧದಲ್ಲಿ ಸಮಬಲ:
ಕೇರಳ ಬ್ಲಾಸ್ಟರ್ಸ್ ಪರ ರಾಹುಲ್ ಪೆಪಿ (17ನೇ ನಿಮಿಷ) ಹಾಗೂ ಬೆಂಗಳೂರು ಎಫ್ ಸಿ ಪರ ಕ್ಲಿಟನ್ ಸಿಲ್ವಾ (29ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ ದಕ್ಷಿಣದ ಡರ್ಬಿ ಎನಿಸಿರುವ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಳೂರು ಮತ್ತು ಕೇರಳ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು.
ಸಮಬಲಗೊಳಿಸಿದ ಸಿಲ್ವಾ:
29ನೇ ನಿಮಿಷದಲ್ಲಿ ಕ್ಲಿಟನ್ ಸಿಲ್ವಾ ಗಳಿಸಿದ ಗೋಲಿನಿಂದ ಬೆಂಗಳೂರು ಯಶಸ್ಸು ಕಂಡಿತು. ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಪೆನಾಲ್ಟಿ ವಲಯದಲ್ಲಿ ಕೇರಳದ ಆಟಗಾರ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದಾಗ ಕ್ಲಿಟನ್ ಸುಲಭವಾಗಿ ಚೆಂಡನ್ನು ಗೋಲ್ ಬಾಕ್ಸ್ ಗೆ ತಳ್ಳಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು.