ಫುಟ್ಬಾಲ್ ಪಂದ್ಯದಲ್ಲಿ ಮತ್ತೊಬ್ಬಳಿಗೆ ಮುತ್ತು; ವೈರಲ್ ವಿಡಿಯೋದಿಂದ ಲವ್ ಬ್ರೇಕ್ಅಪ್!

Suvarna News   | Asianet News
Published : Jan 23, 2020, 11:53 AM ISTUpdated : Jan 23, 2020, 05:13 PM IST
ಫುಟ್ಬಾಲ್ ಪಂದ್ಯದಲ್ಲಿ ಮತ್ತೊಬ್ಬಳಿಗೆ ಮುತ್ತು; ವೈರಲ್ ವಿಡಿಯೋದಿಂದ ಲವ್ ಬ್ರೇಕ್ಅಪ್!

ಸಾರಾಂಶ

ಒಂದಲ್ಲ, ಎರಡೆರಡು ಪ್ರೇಯಸಿರನ್ನು ಮೈಂಟೇನ್ ಮಾಡುವವರು ಹಲವರಿದ್ದಾರೆ. ಎಳ್ಳಷ್ಟು ಅನುಮಾನ ಬರದೆ, ಇಬ್ಬರಿಗೂ ಸಮಯ ನೀಡುತ್ತಾ, ಇಬ್ಬರ ಕೋರಿಕೆ ಈಡೇರಿಸುತ್ತಾ ಸರ್ಕಸ್ ಮಾಡುವವರನ್ನು ಮೆಚ್ಚಲೇ ಬೇಕು. ಹೀಗೆ ಇಷ್ಟು ದಿನ ಬಲಕ್ಕೊಂದು, ಎಡಕ್ಕೊಂದು ಎಂದು ಎರಡು ಹುಡುಗಿಯನ್ನು ಮೈಂಟೇನ್ ಮಾಡುತ್ತಿದ್ದ ಕಿಲಾಡಿ ಸಿಹಿ ಮುತ್ತಿನಿಂದ ಸಿಕ್ಕಿಬಿದ್ದಿದ್ದಾನೆ. ಫುಟ್ಬಾಲ್ ಪಂದ್ಯದ ವೇಳೆ ನೀಡಿದ ಮುತ್ತು ಮನೆಯಲ್ಲಿದ್ದ ಪ್ರೇಯಸಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ.

ಈಕ್ವೆಡಾರ್(ಜ.23): ಇದು ಸಾಮಾಜಿಕ ಜಾಲತಾಣ ಯುಗ. ಯಾರಿಗೂ ಪರಿಚಯವೇ ಇಲ್ಲದವರೂ ರಾತ್ರೋರಾತ್ರೋ ಸ್ಟಾರ್ ಆಗಿ ಬದಲಾಗುತ್ತಾರೆ. ಸ್ಟಾರ್ ಆಗಿದ್ದವ ದಿನಬೆಳಗಾಗುವದರೊಳಗೆ ವಿಲನ್ ಕೂಡ ಆಗಿಬಿಡುತ್ತಾರೆ. ಸಾಮಾಜಿಕ ಜಾಲತಾಣದ ಶಕ್ತಿ ಇದು. ಹೀಗೆ ಕ್ರೀಡಾಂಗಣದಲ್ಲಿ ಹಾಯಾಗಿ ಹುಡುಗಿ ಜೊತೆ ಪಂದ್ಯ ನೋಡುತ್ತಿದ್ದವನಿಗೆ ಸೋಶಿಯಲ್ ಮೀಡಿಯಾವೇ ವಿಲನ್ ಆಗಿದೆ. 

ಇದನ್ನೂ ಓದಿ: ನೇರ ಪ್ರಸಾರದಲ್ಲೇ ಬ್ರೆಜಿಲ್ ಪತ್ರಕರ್ತೆಗೆ ಕಿಸ್ ಕೊಟ್ಟ ಅಭಿಮಾನಿ

ದಕ್ಷಿಣ ಅಮೆರಿಕಾದ ಈಕ್ವೆಡಾರ್‍‌ನಲ್ಲಿ ನಡೆದ ಬಾರ್ಸಿಲೋನಾ ಹಾಗೂ ಡೆಲ್ಫಿನ್ ನಡುವಿನ ಫುಟ್ಬಾಲ್ ಪಂದ್ಯಕ್ಕಿಂತ ಪಂದ್ಯ ವೀಕ್ಷಿಸಿದ ಯುವ ಜೋಡಿಗಳದ್ದೇ ಮಾತು. ಡೇವ್ ಆ್ಯಂಡ್ರೆಡ್ ಅನ್ನೋ ಯುವಕ ಪಂದ್ಯದ ನೋಡುತ್ತಾ ಹುಡುಗಿಗೆ ಲಿಪ್ ಲಾಕ್ ಮಾಡಿದ್ದಾನೆ. ಹುಡುಗಿ ಕೂಡ ಅಷ್ಟೇ ಪ್ರೀತಿಯಿಂದ ತುಟಿಗೆ ತುಟಿ ನೀಡಿದ್ದಾಳೆ. ಆ್ಯಂಡ್ರೆಡ್ ನೀಡಿದ ಸಿಹಿ ಮುತ್ತು, ನೇರ ಪ್ರಸಾರವಾಗಿದೆ. ಮೈದಾನದಲ್ಲಿ ಹಾಕಿದ್ದ ದೊಡ್ಡ ಪರದೆ ಮೇಲೂ ಸಿಹಿ ಮುತ್ತು ತೇಲಿ ಬಂದಿದೆ. 

ಇದರಲ್ಲೇನು ವಿಶೇಷ ಅಂತೀರಾ? ಇಲ್ಲೇ ಇರೋದು ನೋಡಿ, ಡೇವ್ ಆ್ಯಂಡ್ರೆಡ್ ತನ್ನ ಪ್ರೇಯಸಿಗೆ ತಾನಿಂದು ತುಂಬಾ ಬ್ಯುಸಿ ಇದ್ದೇನೆ ಎಂದು ಸುಳ್ಳು ಹೇಳಿದ್ದ. ಬಳಿಕ ಬೇರೊಂದು ಹುಡಿಗಿ ಜೊತೆ ಬಾರ್ಸಿಲೋನಾ ಹಾಗೂ ಡೆಲ್ಫಿನ್ ನಡುವಿನ ಪಂದ್ಯ ನೋಡಲು ತೆರಳಿದ್ದಾನೆ. ಇಲ್ಲಿ ನೀಡಿದ ಸಿಹಿ ಮುತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾಗೆ ಮುತ್ತಿಕ್ಕಿದ ಅಭಿಮಾನಿ!.

ವೈರಲ್ ವಿಡಿಯೋ ಡೇವ್ ಪ್ರೇಯಸಿಗೂ ತಲುಪಿದೆ. ತನ್ನ ಬಿಟ್ಟು ಮತ್ತೊಬ್ಬಳಿಗೆ ಮುತ್ತು ನೀಡಿದ ಡೇವ್ ವಿರುದ್ದ ಕೆಂಡಾಮಂಡಲವಾಗಿದ್ದಾಳೆ. ಇನ್ಯಾವತ್ತು ನನ್ನ ನೋಡಬೇಡ, ನನ್ನ ಜೊತೆ ಮಾತನಾಡಬೇಡ ಎಂದು ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ. ಇತ್ತ ಡೇವ್ ಪ್ರೇಯಸಿ ಬಿಟ್ಟು ಹೋದ ಸಿಟ್ಟಿಗೆ, ವಿಡಿಯೋ ವೈರಲ್ ಮಾಡಿದವನಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. 

ಡೇವ್ ಅದೆಷ್ಟೇ ಫೋನ್ ಮಾಡಿದರೂ ಆಕೆ ರಿಸೀವ್ ಮಾಡುತ್ತಿಲ್ಲ, ವ್ಯಾಟ್ಯಾಪ್, ಮಸೇಜ್ ಮೂಲಕ ಮಾತನಾಡುವಂತೆ ಮನವಿ ಮಾಡಿದ್ದಾನೆ. ಆದರೆ ಯಾವುದಕ್ಕೂ ಪ್ರತಿಕ್ರಿಯೆ ಬಂದಿಲ್ಲ. ಇನ್ನೆಂದು ಈ ರೀತಿ ಮಾಡುವುದಿಲ್ಲ, ಕ್ಷಮಿಸಿಬಿಡು ಎಂದು ಬೇಡಿಕೊಂಡಿದ್ದಾನೆ. ಆದರೆ ಡೇವ್ ಪ್ರೇಯಸಿ ಮಾತ್ರ ಗಟ್ಟಿ ಮನಸು ಮಾಡಿ ಬ್ರೇಕ್ ಅಪ್ ಮಾಡಿದ್ದಾಳೆ. 
ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?