SC ಈಸ್ಟ್ ಬೆಂಗಾಲ್ vs ATK ಮೋಹನ್ ಬಾಗನ್; ಕುತೂಹಲ ಮೂಡಿಸಿದೆ ಕೋಲ್ಕತಾ ಡರ್ಬಿ

By Suvarna News  |  First Published Nov 27, 2020, 2:15 PM IST

ಐಎಸ್‌ಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಕೋಲ್ಕತಾ ಡರ್ಬಿ ಹೋರಾಟ ಏರ್ಪಟ್ಟಿದೆ. ಈಸ್ಟ್ ಬೆಂಗಾಲ್ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. 


ಗೋವಾ(ನ.27):  ಫುಟ್ಬಾಲ್ ಜಗತ್ತಿನ ಅತ್ಯಂತ ಪುರಾತನ ಎದುರಾಳಿಗಳಲ್ಲಿ ಒಂದಾಗಿರುವ, ಇಂಡಿಯನ್ ಸೂಪರ್ ಲೀಗ್ ನ ಅತ್ಯಂತ ದೊಡ್ಡ ಮತ್ತು ಮ್ರಮುಖವಾದ ಪಂದ್ಯವೆನಿಸರುವ ಕೋಲ್ಕತಾ ಡರ್ಬಿಯಾಗಿರುವ ಮೊದಲ ಪಂದ್ಯದಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ತಿಲಕ್ ಮೈದಾನದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

ಮರ್ಸಿಸೈಡ್, ಮ್ಯಾಂಚೆಸ್ಟರ್ ಡರ್ಬಿ ಬಳಿಕ ಕೋಲ್ಕತಾ ಡರ್ಬಿಗೆ ಸಜ್ಜಾದ ಫ್ಲವರ್!.

Tap to resize

Latest Videos

undefined

ಭಾರತೀಯ ಫುಟ್ಬಾಲ್ ಲೀಗ್ ನಲ್ಲಿ ಈ ಎರಡು ದೈತ್ಯ ತಂಡಗಳ ನಡುವಿನ ಹೋರಾಟಕ್ಕೆ ಆರಂಭದಿಂದಲೂ ಫುಟ್ಬಾಲ್ ತಜ್ಞರು ಸಾಕಷ್ಟು ನಿರೀಕ್ಷೆ ಮತ್ತು ಹೊಗಳಿಕೆಗಳನ್ನು ಮಾಡಲಾಗಿದೆ. ಲಿವರ್ ಫೂಲ್ ತಂಡದ ಮಾಜಿ ಆಟಗಾರ ಹಾಗೂ ನೂತನ ಕೋಚ್ ರಾಬೀ ಫ್ಲವರ್ ಅವರಿಂದ ತರಬೇತಿ ಪಡೆದಿರುವ ಎಸ್ ಸಿ ಈಸ್ಟ್ ಬೆಂಗಾಲ್ ಜಯದ ಖಾಲತೆ ತೆರೆಯುವ ಗುರಿ ಹೊಂದಿದೆ.

ISL 7: ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ಥ್ ಈಸ್ಟ್ ಪಂದ್ಯ ಸಮಬಲದಲ್ಲಿ ಅಂತ್ಯ!.

ಜೆಜೆ ಲಾಲ್ಪೆಲ್ಖುವಾ, ಯುಗೇನ್ಸೇನ್ ಲಿಂಗ್ಡೋ, ಮತ್ತು ಭಲ್ವಂತ್ ಸಿಂಗ್ ಅವರಿಮದ ಕೂಡಿರುವ ಎಸ್ ಸಿ ಇ ಬಿ, ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ, ನಾಯಕ ಡೈಲಾನ್ ಫಾಕ್ಸ್ ಅವರ ಜತೆಯಲ್ಲಿ ಆಂಥೋನಿ ಪಿಲ್ಕಿಂಗ್ಟನ್, ಮತ್ತು ಜಾಕಸ್ ಮಘೊಮಾ ಅವರಿಂದ ಕೂಡಿದ ವಿದೇಶಿ ಆಟಗಾರರು ಫ್ಲವರ್ ಅವರ ನಿರೀಕ್ಷೆಗೆ ತಕ್ಕಂತೆ ಆಡುವ ಗುರಿ ಹೊಂದಿದ್ದಾರೆ.

“ನಮ್ಮ ತಂಡ ನಾಯಕರಿಂದಲೇ ತುಂಬಿಕೊಂಡಿದೆ, ಡ್ಯಾನಿ ಅವರು ನಾಯಕರಲ್ಲೇ ನಾಯಕರು,” ಎಂದು 45 ವರ್ಷದ ಕೋಚ್ ಹೇಳಿದ್ದು, “ಅವರ ಮೇಲೆ ನಾನು ನಂಬಿಕೆಯನ್ನು ಇಟ್ಟಿದ್ದೇನೆ, ಅವರು ಎಸ್ ಸಿ ಇ ಬಿ ಯ ಫಾರ್ವರ್ಡ್ ವಿಭಾಗವನ್ನು ಮುನ್ನಡೆಸಿ ನಮ್ಮ ಮೊದಲ ಪಂದ್ಯವಾದ ಡರ್ಬಿಯಲ್ಲಿ ಯಶಸ್ಸು ತರುತ್ತಾರೆಂಬ ನಂಬಿಕೆ ಇದೆ.  ಅವರೊಂದಿಗೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಿದ್ದೇನೆ. ಎಲ್ಲರಂತೆ ಅವರು ಕೂಡ ಜಯದ ಹಸಿವನ್ನು ವ್ಯಕ್ತಪಡಿಸಿದ್ದಾರೆ. ತಂಡಕ್ಕಾಗಿ ಉತ್ತಮವಾದುದನ್ನೇ ಮಾಡುವ ಹಂಬಲ ಅವರಲ್ಲಿದೆ,’’ ಎಂದರು.

ಜೆಮ್‌ಶೆಡ್‌ಪುರ ವಿರುದ್ಧ ಮಿಂಚಿದ ಥಾಪ, ಚೆನ್ನೈಯನ್FC ಶುಭಾರಂಭ!.

ಇಂಗ್ಲೆಂಡ್ ಮೂಲದ ಕೋಚ್, ಎಟಿಕೆಎಂಬಿ ಯ ಕೋಚ್ ಆಂಟೋನಿಯೊ ಲೊಪೇಜ್ ವಿರುದ್ಧ ತನ್ನ ರಣತಂತ್ರವನ್ನು ರೋಪಿಸಬೇಕಾಗಿದೆ. ಅವರು ನಾಲ್ಕನೇ ಬಾರಿಗೆ ಐಎಸ್ ಎಲ್ ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಬ್ಬಾಸ್ ಅವರಲ್ಲಿ ಅನುಭವದ ಕೊರತೆ ಇಲ್ಲ. ಜತೆಯಲ್ಲಿ ಎರಡು ಬಾರಿ ಐಎಸ್ ಎಲ್ ಕಿರೀಟ ಧರಿಸಿದ ಹೆಮ್ಮೆ ಇದೆ. ಎಟಿಕೆಬಿಎಂಬಿ ಬಲಿಷ್ಠ ತಂಡವಾಗಿದ್ದು ಹಬ್ಬಾಸ್ ಪಡೆ ಗೆಲ್ಲುವ ಫೇವರಿಟ್ ಎನಿಸಿದೆ.

ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ನೇರವಾಗಿ 1-0 ಗೋಲಿನಿಂದ ಗೆದ್ದಿರುವ ಮೆರಿನರ್ಸ್ ಪಡೆಗೆ ತಮ್ಮ ಬದ್ಧ ಎದುರಾಳಿ ವಿರುದ್ಧ ದಕ್ಕುವ ಜಯ ಲೀಗ್ ನಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಮುನ್ನಡೆಯಲು ನೆರವಾಗಲಿದೆ. “ಡರ್ಬಿ ಒಂದು ವಿಶೇಷ ಪಂದ್ಯ, ಕೋಲ್ಕತಾದಲ್ಲಿ ಇದರ ಬಗ್ಗೆ ಯಾವ ರೀತಿಯ ಕುತೂಹಲವಿದೆ ಎಂಬುದು ನನಗೆ ಗೊತ್ತು, ಆದ್ದರಿಂದ ಈ ಜಯದ ಪ್ರಾಮುಖ್ಯತೆಯ ಬಗ್ಗೆ ಅರಿವಿದೆ. ಅಭಿಮಾನಿಗಳಿಗೆ ಈ ಜಯದ ಪ್ರಾಮುಖ್ಯತೆ ಎಷ್ಟಿದೆ ಎಂಬುದೂ ಗೊತ್ತಿದೆ,” ಎಂದು ಹೇಳಿರುವ ಹಬ್ಬಾಸ್, “ಕೋಲ್ಕೊತಾದಲ್ಲಿರುವ ಅಭಿಮಾನಿಗಳಲ್ಲಿ ಸಂತಸವನ್ನುಂಟುಮಾಡಲು ಮತ್ತು ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯವಾಗಿದೆ,’’ ಎಂದರು.

“ಸಂಭ್ರಮದ ನಗರ’’ ಎಂದೇ ಖ್ಯಾತಿ ಪಡೆದಿರುವ ಕೋಲ್ಕತಾದಲ್ಲಿ ಈ ಹೋರಾಟ ಹೊಸ ಶಖೆಯನ್ನು ಆರಂಭಿಸಲಿದೆ.

click me!