ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಅಂತಿಮ ವಿದಾಯಕ್ಕೆ ಲಕ್ಷಾಂತರ ಅಭಿಮಾನಿಗಳು ಸೇರಿ ಗೌರವ ಸಮರ್ಪಣೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬ್ಯುನಸ್ ಐರಿಸ್(ನ.27): ಫುಟ್ಬಾಲ್ ದೇವರು, ಅರ್ಜೆಂಟೀನಾದ ದಿಗ್ಗಜ ಆಟಗಾರ ಡಿಗೋ ಮರಡೋನಾ ಅಂತಿಮ ವಿದಾಯಕ್ಕೆ ಲಕ್ಷಾಂತರ ಅಭಿಮಾನಿಗಳು ಸೇರಿದ್ದಾರೆ. ಇಲ್ಲಿನ ಅಧ್ಯಕ್ಷೀಯ ಭವನದ ಸುತ್ತಾಮುತ್ತ ಜನಸಾಗರ ಪ್ರವಾಹದಂತೆ ಸೃಷ್ಟಿಯಾಗಿತ್ತು.
ಗುರುವಾರ ಇಲ್ಲಿನ ಅಧ್ಯಕ್ಷೀಯ ಭವನದಲ್ಲಿ ಮರಡೋನಾ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿತ್ತು. ಮರಡೋನಾ ಕುಟುಂಬ ಹಾಗೂ ಆಪ್ತರಿಗೆ ಹತ್ತಿರದಿಂದ ನೋಡುವ ಅವಕಾಶವನ್ನು ನೀಡಲಾಯಿತು. ಆ ಬಳಿಕ ಮರಡೋನಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಕಳೆದುಕೊಂಡು ದುಖಃ ತಪ್ತರಾಗಿದ್ದರು.
The city of Naples pays tribute to Diego Maradona 🇮🇹 pic.twitter.com/eZJeu9Xhph
— B/R Football (@brfootball)A Palestinian flag was draped over an Argentinian flag at Diego Maradona’s funeral. Rest in power 😭 pic.twitter.com/yQMN19wbho
— jennine (@jennineak)undefined
ಪುಟ್ಬಾಲ್ ದಿಗ್ಗಜ ಮರಡೋನಾಗೆ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪದ ಗೌರವ ನಮನ!
ಬುಧವಾರ ಹೃದಯಾಘಾತದಿಂದ ಮರಡೋನಾ (60) ನಿಧನರಾಗಿದ್ದರು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣದಿಂದ 2 ವಾರಗಳ ಹಿಂದಷ್ಟೇ ಮರಡೋನಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಜಗತ್ತಿನಾದ್ಯಂತ ಮರಡೋನಾ ಅಭಿಮಾನಿಗಳು ಫುಟ್ಬಾಲ್ ದಿಗ್ಗಜನನ್ನು ನೆನೆದು ಕಣ್ಣೀರಾಗಿದ್ದಾರೆ. ತಮ್ಮದೇ ಶೈಲಿಯಲ್ಲಿ ಫುಟ್ಬಾಲ್ ದೇವರಿಗೆ ವಿದಾಯ ಹೇಳುತ್ತಿದ್ದಾರೆ.