ಫುಟ್ಬಾಲ್‌: ಭಾರತಕ್ಕಿಂದು ಬಾಂಗ್ಲಾದೇಶ ಸವಾಲು

By Suvarna News  |  First Published Jun 7, 2021, 11:11 AM IST

* 2023ರ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನಲ್ಲಿ ಭಾರತಕ್ಕಿಂದು  ಬಾಂಗ್ಲಾದೇಶ ಸವಾಲು

* ದೋಹಾದಲ್ಲಿ ನಡೆಯಲಿರುವ ಮಹತ್ವದ ಫುಟ್ಬಾಲ್ ಪಂದ್ಯ.

* ಈಗಾಗಲೇ ಮೊದಲ ಪಂದ್ಯದಲ್ಲಿ ಕತಾರ್‌ ವಿರುದ್ದ ಭಾರತಕ್ಕೆ ಸೋಲು


ದೋಹಾ(ಜೂ.07): 2023ರ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಮವಾರ ಭಾರತ ಫುಟ್ಬಾಲ್‌ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಕಳೆದ ಪಂದ್ಯದಲ್ಲಿ ಕತಾರ್‌ ವಿರುದ್ಧ ಸೋತಿದ್ದ ಭಾರತಕ್ಕಿದು ಮಹತ್ವದ ಪಂದ್ಯವೆನಿಸಿದೆ. 

ಭಾರತ ಫುಟ್ಬಾಲ್ ತಂಡವು ಕತಾರ್ ವಿರುದ್ದ 1-0 ಅಂತರದಲ್ಲಿ ವಿರೋಚಿತ ಸೋಲು ಕಂಡಿತ್ತು. ಪಂದ್ಯದಲ್ಲಿ ಕೇವಲ 10 ಆಟಗಾರರೊಂದಿಗೆ ಆಡಿ ಬಲಿಷ್ಠ ಕತಾರ್ ಎದುರು 1-0 ಅಂತರದಲ್ಲಿ ಭಾರತ ರೋಚಕ ಸೋಲು ಕಂಡಿತ್ತು. 

Tap to resize

Latest Videos

undefined

ಫುಟ್ಬಾಲ್: ಕತಾರ್ ವಿರುದ್ದ ಭಾರತಕ್ಕೆ ವಿರೋಚಿತ ಸೋಲು..!

‘ಇ’ ಗುಂಪಿನಲ್ಲಿರುವ ಭಾರತ, 6 ಪಂದ್ಯಗಳಿಂದ ಕೇವಲ 3 ಅಂಕ ಕಲೆಹಾಕಿದೆ. ತಂಡ ಇದುವರೆಗೂ ಒಂದೂ ಗೆಲುವು ಕಂಡಿಲ್ಲ. ಗುಂಪಿನಲ್ಲಿ ಅಗ್ರ 4ರಲ್ಲಿ ಸ್ಥಾನ ಉಳಿಸಿಕೊಂಡರಷ್ಟೇ ಅರ್ಹತಾ ಸುತ್ತಿನ 3ನೇ ಹಂತಕ್ಕೆ ಪ್ರವೇಶ ಸಿಗಲಿದೆ. ಇಲ್ಲವಾದಲ್ಲಿ ಭಾರತ ಪ್ಲೇ-ಆಫ್‌ ಹಂತದಲ್ಲಿ ಸೆಣಸಬೇಕಿದೆ. ಬಾಂಗ್ಲಾದೇಶ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದೆ.

ಪಂದ್ಯದ ಮಾಹಿತಿ:

ದಿನಾಂಕ: ಜೂನ್ 07, ಸೋಮವಾರ
ಸ್ಥಳ: ಜಸ್ಸೀಮ್ ಬಿನ್ ಹಮದ್ ಸ್ಟೇಡಿಯಂ, ದೋಹಾ
ನೇರಪ್ರಸಾರ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್.
 

click me!