
ಖತಾರ್(ನ.26): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹಲವು ಅಚ್ಚರಿ ಫಲಿತಾಂಶ, ರೋಚಕ ಹೋರಾಟಗಳಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಇತ್ತ ಬಲಿಷ್ಠ ಸ್ಪೇನ್ ತಂಡ ಕೋಸ್ಟರಿಕಾ ವಿರುದ್ಧ 7-0 ಅಂತರದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಗೆಲುವಿನ ಅಲೆಯಲ್ಲಿರುವ ಸ್ಪೇನ್ ತಂಡದ ಕೋಚ್, ಆಟಗಾರರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಫಿಫಾ ಪಂದ್ಯಕ್ಕೂ ಮೊದಲು ಸೆಕ್ಸ್ ಮಾಡುವುದು ತಪ್ಪಲ್ಲ. ಸಂಗಾತಿ ಜೊತೆಗೆ ಸೆಕ್ಸ್ ಮಾಡುವುದು ತಪ್ಪಾಗಿ ಪರಿಗಣಿಸಲು ಸಾಧ್ಯವಿಲ್ಲ. ವಿಶ್ವಕಪ್ ಟೂರ್ನಿಯಲ್ಲಿನ ಒತ್ತಡ ನಿಭಾಯಿಸಲು ಮನಸ್ಸು ಶಾಂತಿ ಹಾಗೂ ಉತ್ಸಾಹದಲ್ಲಿಡಬೇಕು. ಇದಕ್ಕೆ ಸೆಕ್ಸ್ ನೆರವು ನೀಡಲಿದೆ ಎಂದು ಕೋಚ್ ಲೂಯಿಸ್ ಎನ್ರಿಕ್ ಹೇಳಿದ್ದಾರೆ. ಕೋಚ್ ಹೇಳಿಕೆ ಭಾರಿ ಸಂಚನಲ ಸೃಷ್ಟಿಸಿದೆ. ಸೆಕ್ಸ್ ತಪ್ಪಲ್ಲ ಅನ್ನೋ ಹೇಳಿಕೆಯನ್ನು ಈಗಾಗಲೇ ಹಲವು ಕೋಚ್ ಹಾಗೂ ಮಾಜಿ ಆಟಗಾರರು ನೀಡಿದ್ದಾರೆ. ಆದರೆ ಲೂಯಿಸ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಲು ಕಾರಣ ಸ್ಪೇನ್ ತಂಡದ ಆಟಗಾರ ಫೆರಾನ್ ಟೊರೆಸ್.
ಕೋಚ್ ಲೂಯಿಸ್ ಮಾತು ತಂಡದ ಸದಸ್ಯ ಫೆರಾನ್ ಟೊರೆಸ್‌ಗೆ ಅನ್ವಯವಾಗುತ್ತಾ ಅನ್ನೋ ಪ್ರಶ್ನೆಯನ್ನು ಹಲವು ಅಭಿಮಾನಿಗಳು ಕೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಕೋಚ್ ಲೂಯಿಸ್ ಮಹತ್ವದ ವಿಚಾರ ಬಹಿರಂಗ ಪಡಿಸಿದ್ದಾರೆ. ಆಟಗಾರ ಫೆರಾನ್ ಟೊರೆಸ್ ಹಾಗೂ ನನ್ನ ಪುತ್ರಿ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋದನ್ನು ಬಹಿರಂಗ ಪಡಿಸಿದ್ದರು. ಹೀಗಾಗಿ ಕೋಚ್ ಮಾತು ಫೆರಾನ್‌ಗೆ ಅನ್ವಯವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.
Penguin Toby: ಅರ್ಜೆಂಟೀನಾದ ವಿರುದ್ಧ ಸೌದಿಯ ಗೆಲುವನ್ನು ಪ್ರೆಡಿಕ್ಟ್ ಮಾಡಿದ್ದ ಪೆಂಗ್ವಿನ್
ಪಂದ್ಯಕ್ಕೂ ಮೊದಲು ಸ್ಪೇನ್ ಆಟಗಾರರಿಗೆ ಸೆಕ್ಸ್ ನಡೆಸಲು ಕೋಚ್ ಲೆವಿಸ್ ಅನುಮತಿ ನೀಡಿದ್ದಾರೆ. ನಾನು ಆಟಗಾರನಾಗಿದ್ದಾಗ ಪಂದ್ಯಕ್ಕೂ ಮೊದಲು ಸೆಕ್ಸ್ ಸಾಮಾನ್ಯವಾಗಿತ್ತು. ಇದರಲ್ಲಿ ಹೆಚ್ಚಿನ ವಿಶೇಷವಿಲ್ಲ. ಮೈದಾನಕ್ಕಿಳಿದಾಗ ಸಂಪೂರ್ಣ ಗಮನ ಪಂದ್ಯದ ಮೇಲಿರಬೇಕು. ಮನಸ್ಸು ಉಲ್ಲಾಸವಾಗಿರಬೇಕು. ಯಾವುದೇ ಅಡೆ ತಡೆ, ಚಡಪಡಿಕೆ ಇರಬಾರದು ಎಂದು ಲೆವಿಸ್ ಹೇಳಿದ್ದಾರೆ.
ಟಿಕಿ-ಟಾಕ ಶೈಲಿಯ ಆಟಕ್ಕೆ ದೊರೆತ ಯಶಸ್ಸು
ದೋಹಾ: ಸ್ಪೇನ್‌ಯ ಯುವ ಪಡೆ ವಿಶ್ವಕಪ್ ಅಭಿಯಾನವನ್ನು ಟಾಪ್ ಗೇರ್‌ನಲ್ಲಿ ಆರಂಭಿಸಿದೆ. ಕೋಸ್ಟರಿಕಾ ವಿರುದ್ಧ ಬುಧವಾರ ರಾತ್ರಿ ನಡೆದ ಗುಂಪು ‘ಇ’ ಪಂದ್ಯವನ್ನು 7-0 ಗೋಲುಗಳ ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ತಂಡದ ಜನಪ್ರಿಯ ಟಿಕಿ-ಟಾಕ ಶೈಲಿಯ ಆಟಕ್ಕೆ ದೊಡ್ಡ ಯಶಸ್ಸು ದೊರೆಯಿತು. ಡ್ಯಾನಿ ಒಲ್ಮೊ (11ನೇ ನಿಮಿಷ), ಮಾರ್ಕೊ ಅಸ್ಸೆನ್ಸಿಯೋ(21ನೇ ನಿ.,) ಹಾಗೂ ಫೆರ್ರಾನ್ ಟೋರ್ರೆಸ್(31ನೇ ನಿ., ಪೆನಾಲ್ಟಿ) ಮೊದಲ 31 ನಿಮಿಷಗಳಲ್ಲೇ ತಲಾ ಒಂದೊಂದು ಗೋಲು ಬಾರಿಸಿ ಕೋಸ್ಟರಿಕಾ ಮೇಲೆ ಒತ್ತಡ ಹೇರಿದರು. ಟೋರ್ರೆಸ್(54ನೇ ನಿ.,), ಪಾಬ್ಲೋ ಗಾವಿ(74ನೇ ನಿ.,), ಕಾರ್ಲೊಸ್ ಸೋಲರ್(90ನೇ ನಿ.,) ಹಾಗೂ ಇವಾರೊ ಮೊರಾಟ(92ನೇ ನಿ.,) ದ್ವಿತೀಯಾರ್ಧದಲ್ಲಿ ತಂಡದ ಮುನ್ನಡೆ ಹೆಚ್ಚಿಸಿದರು.
FIFA World Cup: ಈ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ ಗೋಲು ರಹಿತ ಡ್ರಾಗಳು..?
7 ಗೋಲು ಬಾರಿಸಿದ ಸ್ಪೇನ್‌ಗಿದು ವಿಶ್ವಕಪ್‌ನಲ್ಲಿ ಅತಿದೊಡ್ಡ ಗೆಲುವು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅಂತಿಮ 16ರ ಸುತ್ತು ದಾಟದ ಸ್ಪೇನ್, ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಮೊದಲ ಪಂದ್ಯದಲ್ಲೇ ಅಬ್ಬರಿಸಿ ಎದುರಾಳಿಗೆ ಎಚ್ಚರಿಕೆ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.