Penguin Toby: ಅರ್ಜೆಂಟೀನಾದ ವಿರುದ್ಧ ಸೌದಿಯ ಗೆಲುವನ್ನು ಪ್ರೆಡಿಕ್ಟ್‌ ಮಾಡಿದ್ದ ಪೆಂಗ್ವಿನ್‌!

By Santosh Naik  |  First Published Nov 26, 2022, 3:04 PM IST

13 ವರ್ಷದ ಪೆಂಗ್ವಿನ್‌ ಟೋಬಿ ಈಗಾಗಲೇ ಫಿಫಾ ವಿಶ್ವಕಪ್‌ನಲ್ಲಿ ಐದು ಗೆಲುವುಗಳನ್ನು ಯಶಸ್ವಿಯಾಗಿ ಪ್ರೆಡಿಕ್ಟ್‌ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಸೌದಿ ಅರೇಬಿಯಾ ಹಾಗೂ ಜಪಾನ್‌ ಗೆಲುವನ್ನು ಟೋಬಿ, ಭವಿಷ್ಯ ನುಡಿದಿದೆ. 


ದುಬೈ (ನ.26): ಪೌಲ್‌ ದಿ ಅಕ್ಟೋಪಸ್‌ ಹೆಸರನ್ನು ಬಹುಶಃ ಫುಟ್‌ಬಾಲ್‌ನ ಯಾವ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. 2010ರ ಫಿಫಾ ವಿಶ್ವಕಪ್‌ನಲ್ಲಿ ಸ್ಪೇನ್‌ ತಂಡ ವಿಶ್ವಕಪ್‌ ಗೆದ್ದಿದ್ದು ಎಷ್ಟು ದೊಡ್ಡ ಸುದ್ದಿಯಾಗಿತ್ತೋ, ಬಹುತೇಕ ಗೆಲುವನ್ನು ಭವಿಷ್ಯ ನುಡಿದಿದ್ದ ಪೌಲ್‌ ಎನ್ನುವ ಹೆಸರಿನ ಆಕ್ಟೋಪಸ್‌ ಕೂಡ ಸುದ್ದಿಯಾಗಿತ್ತು. ಅದಾದ ಕೆಲವೇ ತಿಂಗಳಲ್ಲಿ ಪೌಲ್‌ ಸಾವು ಕಂಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ 2010 ರ ವಿಶ್ವಕಪ್‌ ಸಮಯದಲ್ಲಿ ಜರ್ಮನ್ ಪಟ್ಟಣವಾದ ಓಬರ್‌ಹೌಸೆನ್‌ನಲ್ಲಿರುವ ಸೀ ಲೈಫ್ ಕೇಂದ್ರದಲ್ಲಿ ವಾಸಿಸಿದ್ದ ಸಾಮಾನ್ಯ ಆಕ್ಟೋಪಸ್ ಪೌಲ್‌,  ಜರ್ಮನಿಯ ಎಲ್ಲಾ ಏಳು ಪಂದ್ಯಗಳ ವಿಜೇತರನ್ನು ಸರಿಯಾಗಿ ಊಹಿಸುವ ಮೂಲಕ ವಿಶ್ವದಲ್ಲಿಯೇ ಸೆನ್ಸೇಷನ್‌ ಸೃಷ್ಟಿ ಮಾಡಿತ್ತು.  ಆ ಬಳಿಕ ಪೌಲ್‌ ರೀತಿಯಲ್ಲಿ ಭವಿಷ್ಯ ನುಡಿಯುವ ಪ್ರಾಣಿಗಳ ಬಗ್ಗೆ ಪ್ರತಿ ವಿಶ್ವಕಪ್‌ ಸಮಯದಲ್ಲೂ ಸುದ್ದಿಯಾಗುತ್ತಿತ್ತು. ಈ ಬಾರಿಯ ಫಿಫಾ ವಿಶ್ವಕಪ್‌ ಸಮಯದಲ್ಲೂ ಜಪಾನ್‌ ದೇಶದ ಪ್ರಾಣಿಯೊಂದು ಭವಿಷ್ಯ ನುಡಿಯುವಂಥ ಸಮಯದಲ್ಲಿ ದುಬೈನ ಸ್ಕೀ ದುಬೈನಲ್ಲಿ ವಾಸ ಮಾಡುತ್ತಿರುವ 13 ವರ್ಷದ ಜಿಂಟೋ ಪೆಂಗ್ವಿನ್‌ ಪ್ರೆಡಿಕ್ಷನ್ ಸ್ವಲ್ಪ ಮಟ್ಟಿಗೆ ಸುದ್ದಿಯಾಗಿದೆ. ಅದಕ್ಕೆ ಕಾರಣ, ಒಳಾಂಗನ ಸ್ಕೀ ರೆಸಾರ್ಟ್‌ನಲ್ಲಿರುವ ಈ ಪೆಂಗ್ವಿನ್‌ ಈವರೆಗೂ ಮಾಡಿರುವ ಪ್ರೆಡಿಕ್ಷನ್‌ನಲ್ಲಿ ಐದು ಸರಿಯಾಗಿದೆ. ಅದರಲ್ಲಿ ಪ್ರಮುಖವಾಗಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಹಾಗೂ ಜರ್ಮನಿ ವಿರುದ್ಧ ಜಪಾನ್‌ನ ಗೆಲುವನ್ನು ಇದು ಭವಿಷ್ಯ ನುಡಿದಿತ್ತು.

 
 
 
 
 
 
 
 
 
 
 
 
 
 
 

A post shared by VOX Cinemas (@voxcinemas)

Latest Videos

undefined


13 ವರ್ಷದ ಟೋಬಿಗೆ ಫುಟ್‌ಬಾಲ್‌ ಎಂದರೆ ಇಷ್ಟ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಈಕೆ ಮಾಡಿರುವ ಕೆಲವೊಂದು ಭವಿಷ್ಯ ತಪ್ಪಾಗಿದ್ದರೂ, ಜರ್ಮನಿ ವಿರುದ್ಧ ಜಪಾನ್‌ ಹಾಗೂ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾದ ಗೆಲುವಿನ ಬಗ್ಗೆ ಭವಿಷ್ಯ ನುಡಿದಿತ್ತು ಎನ್ನುವುದನ್ನು ಸ್ಕೀ ದುಬೈ ತನ್ನ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಹಾಕಿದೆ. ಸೌದಿ ಅರೇಬಿಯಾ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಗೆಲುವು ಸಾಧಿಸಿಲಿದೆ ಎಂದಿದ್ದರೆ, ಖಲೀಫಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಪಾನ್‌ ತಂಡ ಜರ್ಮನಿಗೆ ಅಚ್ಚರಿ ನೀಡುತ್ತದೆ ಎಂದು ಪ್ರೆಡಿಕ್ಟ್‌ ಮಾಡಿತ್ತು.

ಐದು ಗೆಲುವನ್ನು ಪೆಂಗ್ವಿನ್‌ ಪ್ರೆಡಿಕ್ಟ್‌ ಮಾಡಿದ್ದರೂ, ಆಕೆಯ ಕೆಲವೊಂದು ಪ್ರೆಡಿಕ್ಷನ್‌ ಕೂಡ ತಪ್ಪಾಗಿದೆ ಎಂದು ಇದನ್ನು ನೋಡಿಕೊಳ್ಳುತ್ತಿರುವವರು ಹೇಳಿದ್ದಾರೆ. ಈಕ್ವಡಾರ್‌ ವಿರುದ್ಧ ಕತಾರ್‌, ಇಂಗ್ಲೆಂಡ್‌ ವಿರುದ್ಧ ಇರಾನ್‌ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರೂ ಇದು ಉಲ್ಟಾ ಆಗಿತ್ತು.

ಸ್ಕೀ ದುಬೈ ತನ್ನ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಇದರ ವಿಡಿಯೋಗಳನ್ನು ಪೋಸ್ಟ್‌ ಮಾಡಿದೆ. ಟೋಬಿಯ ಎದುರು ಎರಡು ಫುಟ್‌ಬಾಲ್‌ಗಳು ಹಾಗೂ ಆ ದಿನದಲ್ಲಿ ಆಡುವ ಆಯಾ ದೇಶಗಳ ಧ್ವಜವನ್ನು ಅಕ್ಕಪಕ್ಕ ಇಡಲಾಗುತ್ತದೆ. ಡ್ರಾ ಫಲಿತಾಂಶ ಹೇಳಲು ಅಲ್ಲಿ ಯಾವುದೇ ಅವಕಾಶವಿಲ್ಲ. ಈ ವಿಡಿಯೋದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಉರುಗ್ವೆ, ಘಾನಾ ವಿರುದ್ಧ ಪೋರ್ಚುಗಲ್ ಹಾಗೂ ಬ್ರೆಜಿಲ್‌ ವಿರುದ್ಧ ಸೆರ್ಬಿಯಾ ಗೆಲುವು ಕಾಣುತ್ತದೆ ಎಂದು ಪ್ರೆಡಿಕ್ಟ್‌ ಮಾಡಿತ್ತು. ಆ ಪೈಕಿ ಪೋರ್ಚುಗಲ್‌ ವಿಚಾರದಲ್ಲಿ ನಿಜವಾಗಿದ್ದರೆ, ಉರುಗ್ವೆ ಹಾಗೂ ದಕ್ಷಿಣ ಕೊರಿಯಾ ಪಂದ್ಯ ಡ್ರಾ ಆಗಿತ್ತು. ಬ್ರೆಜಿಲ್‌ ಹಾಗೂ ಸೆರ್ಬಿಯಾ ನಡುವಿನ ಮುಖಾಮುಖಿಯಲ್ಲಿ ಬ್ರೆಜಿಲ್‌ ಗೆಲುವು ಕಂಡಿತ್ತು.

'ಇಲ್ಲಿ ನೀವ್ಯಾರು ಮೆಸ್ಸಿ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಬಂದಿಲ್ಲ..!' ಸೌದಿ ಅರೇಬಿಯಾ ಮ್ಯಾನೇಜರ್‌ ಸೂಪರ್‌ ಸ್ಪೀಚ್ ವೈರಲ್!

"ಪೆಂಗ್ವಿನ್ ಭವಿಷ್ಯವಾಣಿಗಳು ಅತಿಥಿಗಳು ಮತ್ತು ಸೋಶಿಯಲ್‌ ಮೀಡಿಯಾ ಫಾಲೋವರ್ಸ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ" ಎಂದು ಸ್ಕೀ ದುಬೈ ಪ್ರತಿನಿಧಿ ಹೇಳಿದ್ದಾರೆ. "ಜನರು ಪ್ರತಿದಿನ ಮಧ್ಯಾಹ್ನದ ನಂತರ ವೋಕ್ಸ್ ಸಿನೆಮಾಸ್ ಮತ್ತು ಸ್ಕೀ ದುಬೈನ ಸಾಮಾಜಿಕ ಚಾನೆಲ್‌ಗಳಲ್ಲಿ ಪೆಂಗ್ವಿನ್ ಭವಿಷ್ಯವನ್ನು ಪಡೆಯಬಹುದು' ಎಂದೂ ಅವರು ಹೇಳಿದ್ದಾರೆ.

FIFA World Cup 2022: 'ಜಾಸ್ತಿ ಕಿರುಚಾಡ್ಬೇಡಿ..!' ಇಂಗ್ಲೆಂಡ್‌ ಫ್ಯಾನ್ಸ್‌ಗಳಿಗೆ ಕತಾರ್‌ ಪೊಲೀಸರ ವಾರ್ನಿಂಗ್‌!

ಟೋಬಿ ನೀಡಿರುವ ಇಂದಿನ ಪ್ರೆಡಿಕ್ಷನ್‌: ಇಂದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌-ಅಮೆರಿಕ, ಟುನೇಷಿಯಾ-ಆಸ್ಟ್ರೇಲಿಯಾ, ಪೋಲೆಂಡ್‌-ಸೌದಿ ಅರೇಬಿಯಾ, ಫ್ರಾನ್ಸ್-ಡೆನ್ಮಾರ್ಕ್‌ ಹಾಗೂ ಅರ್ಜೆಂಟಿನಾ-ಮೆಕ್ಸಿಕೋ ಕಾದಾಟ ನಡೆಸಲಿವೆ. ಈ ಪಂದ್ಯಗಳಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಡೆನ್ಮಾರ್ಕ್‌ ಹಾಗೂ ಅರ್ಜೆಂಟೀನಾ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.

click me!