ಕತಾರ್‌ನಲ್ಲಿ ಭರ್ಜರಿಯಾಗಿ ಸಾಗುತ್ತಿದೆ ಫಿಫಾ ವಿಶ್ವಕಪ್ ಟೂರ್ನಿ
ಹಲವು ಗೋಲು ರಹಿತ ಡ್ರಾ ಪಂದ್ಯಗಳಿಗೆ ಸಾಕ್ಷಿಯಾದ ಫಿಫಾ ವಿಶ್ವಕಪ್
ಒಂದು ವಾರದೊಳಗಾಗಿ ನಾಲ್ಕು ಪಂದ್ಯಗಳು ಡ್ರಾ ನಲ್ಲಿ ಅಂತ್ಯವಾಗಿವೆ
ದೋಹಾ(ನ.26): 2022ರ ಫಿಫಾ ವಿಶ್ವಕಪ್ ಶುರುವಾಗಿ ಇನ್ನೂ ಒಂದು ವಾರವಾಗಿಲ್ಲ ಆಗಲೇ ನಾಲ್ಕು ಪಂದ್ಯಗಳು ಗೋಲು ರಹಿತ ಡ್ರಾಗೊಂಡಿವೆ. ಈ ವಿಶ್ವಕಪ್ ಅತಿಹೆಚ್ಚು ಗೋಲು ರಹಿತ ಪಂದ್ಯಗಳಿಗೆ ಸಾಕ್ಷಿಯಾಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಶುಕ್ರವಾರ ಕತಾರ್-ಸೆನೆಗಲ್ ಪಂದ್ಯದ ವರೆಗೂ ಈ ವಿಶ್ವಕಪ್‌ನಲ್ಲಿ ಒಟ್ಟು 18 ಪಂದ್ಯಗಳು ನಡೆದಿದ್ದು, ಮೆಕ್ಸಿಕೋ-ಪೋಲೆಂಡ್, ಡೆನ್ಮಾರ್ಕ್-ಟ್ಯುನೀಶಿಯಾ, ಕ್ರೊವೇಷಿಯಾ-ಮೊರಾಕ್ಕೊ ಹಾಗೂ ದಕ್ಷಿಣ ಕೊರಿಯಾ-ಉರುಗ್ವೆ ಪಂದ್ಯಗಳು 0-0ಯಲ್ಲಿ ಡ್ರಾಗೊಂಡಿವೆ. ಈ ವರೆಗೂ 1982, 2006, 2010 ಹಾಗೂ 2014ರಲ್ಲಿ ತಲಾ 7 ಪಂದ್ಯಗಳು ಗೋಲು ರಹಿತ ಡ್ರಾಗೊಂಡಿದ್ದವು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಡೆನಾರ್ಕ್ ಹಾಗೂ ಫ್ರಾನ್ಸ್ ನಡುವಿನ ಪಂದ್ಯ ಮಾತ್ರ 0-0ಯಲ್ಲಿ ಡ್ರಾಗೊಂಡಿತ್ತು. 1930, 1934, 1938, 1950 ಹಾಗೂ 1954ರ ವಿಶ್ವಕಪ್‌ಗಳಲ್ಲಿ ಒಂದೂ ಪಂದ್ಯ ಗೋಲು ರಹಿತ ಡ್ರಾಗೊಂಡಿರಲಿಲ್ಲ.
undefined
ವಿಶ್ವ ಚೆಸ್: ಸೆಮೀಸ್‌ನಲ್ಲಿ ಭಾರತ ತಂಡಕ್ಕೆ ಸೋಲು
ಜೆರುಸಲೆಮ್: ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಭಾರತ 1-3ರ ಅಂತರದಲ್ಲಿ ಉಜ್ಬೇಕಿಸ್ತಾನ ವಿರುದ್ಧ ಸೋತು ನಿರಾಸೆ ಅನುಭವಿಸಿದೆ. ಮತ್ತೊಂದು ಸೆಮೀಸ್‌ನಲ್ಲಿ ಸ್ಪೇನ್ ವಿರುದ್ಧ ಚೀನಾ ಜಯಿಸಿ ಫೈನಲ್ ಪ್ರವೇಶಿಸಿತು. 3ನೇ ಸ್ಥಾನಕ್ಕಾಗಿ ಭಾರತ, ಸ್ಪೇನ್ ವಿರುದ್ಧ ಸೆಣಸಲಿದೆ.
ಪ್ರೊ ಕಬಡ್ಡಿ: 2ನೇ ಸ್ಥಾನಕ್ಕೆ ಏರಿದ ಜೈಪುರ ಪ್ಯಾಂಥರ್ಸ್
ಹೈದರಾಬಾದ್: ತಮಿಳ್ ತಲೈವಾಸ್ ವಿರುದ್ಧ 41-26ರಲ್ಲಿ ಜಯಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರೊ ಕಬಡ್ಡಿ 9ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.
FIFA World Cup: ಮೆಸ್ಸಿಯ ಅರ್ಜೆಂಟೀನಾಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ..!
ಕಳೆದ 5 ಪಂದ್ಯಗಳಲ್ಲಿ ತಂಡ 4ರಲ್ಲಿ ಜಯಿಸಿದೆ. ಇನ್ನು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ 50-47ರಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯ ಪೂರ್ಣಗೊಳಿಸಿತು. ತಂಡ ಮತ್ತೆ ಅಗ್ರ 6ರಲ್ಲಿ ಸ್ಥಾನ ಪಡೆದಿದ್ದು ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಇಂದಿನಿಂದ ಭಾರತ, ಆಸೀಸ್ ಹಾಕಿ ಸರಣಿ
ಅಡಿಲೇಡ್: 2023ರ ಜನವರಿಯಲ್ಲಿ ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಕೊನೆ ಹಂತದ ಅಭ್ಯಾಸ ನಡೆಸಲು ಭಾರತ ಪುರುಷರ ಹಾಕಿ ತಂಡ ಆಸ್ಪ್ರೇಲಿಯಾಗೆ ತೆರಳಿದ್ದು, ವಿಶ್ವ ನಂ.1 ತಂಡದ ವಿರುದ್ಧ 5 ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಶನಿವಾರ ನಡೆಯಲಿದೆ. ಕಾಮನ್ವೆಲ್ತ್ ಗೇಮ್ಸ್‌ನ ಫೈನಲ್‌ನಲ್ಲಿ 0-7ರ ಸೋಲಿನ ಬಳಿಕ ಮೊದಲ ಬಾರಿಗೆ ಆಸ್ಪ್ರೇಲಿಯಾ ತಂಡವನ್ನು ಭಾರತ ಎದುರಿಸಲಿದೆ.
ಪಂದ್ಯ: ಬೆಳಗ್ಗೆ 11ಕ್ಕೆ, ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್ ಫಸ್ಟ್
Vijay Hazare Trophy ಕ್ವಾರ್ಟರ್‌ಗೇರುತ್ತಾ ಕರ್ನಾಟಕ?
ಅಹಮದಾಬಾದ್: ವಿಜಯ್ ಹಜಾರೆ ಏಕದಿನ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಜಾರ್ಖಂಡ್ ವಿರುದ್ಧ ಸೆಣಸಲಿದೆ. ಶುಕ್ರವಾರ ಇಲ್ಲಿನ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಎಲೈಟ್ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದರೂ, ಅಸ್ಸಾಂ ವಿರುದ್ಧ ಸೋತಿದ್ದ ಕಾರಣಕ್ಕೆ ಕರ್ನಾಟಕ ನೇರವಾಗಿ ಕ್ವಾರ್ಟರ್ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತ್ತು.
FIFA World Cup: ಮೆಸ್ಸಿಯ ಅರ್ಜೆಂಟೀನಾಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ..!
ಗುಂಪು ಹಂತದ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ತಂಡ ಬೌಲರ್‌ಗಳ ಸಾಹಸದಿಂದ ನಾಕೌಟ್ ಹಂತಕ್ಕೇರಿದ್ದು, ನಿಕಿನ್ ಜೋಸ್ ಹಾಗೂ ಶ್ರೇಯಸ್ ಗೋಪಾಲ್ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ತೋರಿಲ್ಲ. ಇದು ಕರ್ನಾಟಕದ ತಲೆನೋವಿಗೆ ಕಾರಣವಾಗಿದೆ.
ಪಂದ್ಯ: ಬೆಳಗ್ಗೆ 9ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1