FIFA World Cup 2022: ಫುಟ್‌ಬಾಲ್‌ ವಿಶ್ವಕಪ್‌ಗೆ ಅದ್ದೂರಿ ಆರಂಭ!

Published : Nov 20, 2022, 08:53 PM ISTUpdated : Nov 20, 2022, 09:13 PM IST
FIFA World Cup 2022: ಫುಟ್‌ಬಾಲ್‌ ವಿಶ್ವಕಪ್‌ಗೆ ಅದ್ದೂರಿ ಆರಂಭ!

ಸಾರಾಂಶ

ಸಾಕಷ್ಟು ವಿವಾದಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದ ಮಧ್ಯಪ್ರಾಚ್ಯದ ಮೊಟ್ಟಮೊದಲ ಫಿಫಾ ವಿಶ್ವಕಪ್‌ ಟೂರ್ನಿಗೆ ಕತಾರ್‌ನಲ್ಲಿ ವಿದ್ಯುಕ್ತ ಆರಂಭ ಸಿಕ್ಕಿದೆ. ಐದು ಬಾರಿಯ ಆಸ್ಕರ್‌ ಪ್ರಶಸ್ತಿ ವಿಜೇತ ಅಮೆರಿಕದ ಮಾರ್ಗನ್‌ ಫ್ರೀಮನ್‌ ಅವರ ಉದ್ಘಾಟನಾ ಮಾತುಗಳು, ಬಿಟಿಎಸ್‌ ಸ್ಟಾರ್‌  ಜಂಗ್ ಕುಕ್ ಮನಮೋಹಕ ಕಾರ್ಯಕ್ರಮ ಗಮನಸೆಳೆದವು.

ದೋಹಾ (ನ.20): ಕಳೆದ 12 ವರ್ಷಗಳಿಂದ ವಿವಾದಗಳಿಂದಲೇ ಸುದ್ದಿಯಾಗಿದ್ದ ಕತಾರ್‌ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಭಾನುವಾರ ರಾತ್ರಿ ವಿದ್ಯುಕ್ತ ಚಾಲನೆ ಸಿಕ್ಕಿದೆ. ಅಂದಾಜು ಒಂದು ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ ಕತಾರ್‌ನ ಸಾಂಸ್ಕೃತಿಕ ಪರಂಪರೆಯೊಂದಿಗೆ ಮುಸ್ಲಿಂ ದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನಾವರಣ ಕೂಡ ನಡೆಯಿತು. ಈ ವೇಳೆ ಕಲಾವಿದರ ಆಕರ್ಷಕ ನೃತ್ಯ ಕೂಡ ಹೈಲೈಟ್‌ ಎನಿಸಿತು. ಐದು ಬಾರಿಯ ಆಸ್ಕರ್‌ ಪ್ರಶಸ್ತಿ ವಿಜೇತ ಅಮೆರಿಕದ ಹಿರಿಯ ನಟ ಮಾರ್ಗನ್‌ ಫ್ರೀಮನ್‌ ಅವರ ವಾಯ್ಸ್‌ ಓವರ್‌ ವಿಡಿಯೋ ಮೂಲಕ ಸಮಾರಂಭ ಆರಂಭಗೊಂಡಿತು. ಅವರ ಮಾತನ್ನೇ ನಿರೀಕ್ಷೆ ಮಾಡುತ್ತಿದ್ದ ಜನರಿಗೆ ಅಚ್ಚರಿ ಎನ್ನುವಂತೆ, ಸ್ವತಃ ಮಾರ್ಗನ್‌ ಫ್ರೀಮನ್‌ ವೇದಿಕೆಯ ಮೇಲೆ ಆಗಮಿಸಿದರು. ಅವರೊಂದಿಗೆ ಕತಾರ್‌ನ ಪ್ರಖ್ಯಾತ ಯೂ ಟ್ಯೂಬರ್‌, ಅಪರೂಪದ ಕಾಯಿಲೆಗೆ ತುತ್ತಾಗಿರುವ 20 ವರ್ಷದ ಘನಿಮ್ ಅಲ್-ಮುಫ್ತಾ ಕೂಡ ಮಾತನಾಡಿದರು. ಇಡೀ ಕಾರ್ಯಕ್ರಮವನ್ನು ಮಾರ್ಗನ್‌ ಫ್ರೀಮನ್‌ ಅಚ್ಚುಕಟ್ಟಾಗಿ ನೆರವೇರಿಸಿದರು. 2010ರ ವಿಶ್ವಕಪ್‌ನ ಪ್ರಖ್ಯಾತ ಧ್ಯೇಯಗೀತೆ, ವಾಕಾ ಹಾಗೂ ಈ ಬಾರಿಯ ವಿಶ್ವಕಪ್‌ನ ಧ್ಯೇಯಗೀತೆ ಫೀಲ್‌ ದ ಮ್ಯಾಜಿಕ್‌ ಇನ್‌ ದ ಏರ್‌ ಹಾಡನ್ನು ಮಿಶ್ರಣ ಮಾಡಿ ಅದ್ಭುತ ನೃತ್ಯವನ್ನು ಕಲಾವಿದರು ಮಾಡಿದರು.

ಈ ವೇಳೆ ಭಾಗವಹಿಸುವ ಎಲ್ಲಾ ದೇಶಗಳ ಧ್ವಜಗಳನ್ನು ಕಲಾವಿದರು ಹಾರಿಸುತ್ತಾ ವೇದಿಕೆಯಲ್ಲಿ ನಡೆದರು. ದಕ್ಷಿಣ ಕೊರಿಯಾದ ಗಾಯಕ ಜಂಗ್ ಕುಕ್ ಕೂಡ ಆಕರ್ಷಕ ಗೀತೆ ಹಾಡಿ ಕಾರ್ಯಕ್ರಮವನ್ನು ಅದ್ದೂರಿ ಮಾಡಿದರು. ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಕಾರ್ಯಕ್ರಮದ ಅಂತ್ಯದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಕತಾರ್‌ ಹಾಗೂ ಅರಬ್‌ ರಾಷ್ಟ್ರಗಳಿಂದ ಎಲ್ಲರಿಗೂ ಫಿಫಾ ವಿಶ್ವಕಪ್‌ಗೆ ನಾವು ಸ್ವಾಗತವನ್ನು ಕೋರುತ್ತಿದ್ದೇವೆ. ಈ ವಿಶ್ವಕಪ್‌ಅನ್ನು ಯಶಸ್ವಿ ಮಾಡುವ ನಿಟ್ಟಿನಲ್ಲಿ ನಮ್ಮೊಂದಿಗೆ ಹಲವರು ಕೆಲಸ ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ನೀವು ಕಾಯುತ್ತಿದ್ದ ಒಂದು ಸಂಭ್ರಮದ ಟೂರ್ನಿಯ ಆರಂಭದಲ್ಲಿ ನಾವಿದ್ದೇವೆ. ಮುಂದಿನ 28 ದಿನಗಳ ಕಾಲ ವಿಶ್ವ ನಮ್ಮ ದೇಶದತ್ತ ನೋಡುತ್ತಿರುತ್ತದೆ. ಈ ವಿಶ್ವಕಪ್‌ನೊಂದಿಗೆ ಆದ ಎಲ್ಲಾ ವಿಚಾರಗಳನ್ನು ಮರೆತು ಜನರು ಇಷ್ಟದಿಂದ ವಿಶ್ವಕಪ್‌ ನೋಡುತ್ತಾರೆ ಎನ್ನುವ ವಿಶ್ವಾಸವನ್ನು ನಾವು ಇಡುತ್ತೇವೆ' ಎಂದು ಹೇಳುವ ಮೂಲಕ ವಿಶ್ವಕಪ್‌ಗೆ ಚಾಲನೆ ನೀಡಿದರು.

ಕತಾರ್‌ನಲ್ಲಿ ಎಣ್ಣೆ ಬ್ಯಾನ್‌, ಗೋದಾಮಿನ ರಾಶಿ ರಾಶಿ ಬಿಯರ್‌ ಕ್ಯಾನ್‌ ಫೋಟೋ ಪ್ರಕಟಿಸಿದ ಬಡ್ವೈಸರ್‌!

ಸಮಾರಂಭಕ್ಕೆ ನೀರಸ ಪ್ರತಿಕ್ರಿಯೆ: ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಇತರ ವಿಚಾರಗಳ ಕಾರಣಕ್ಕಾಗಿ ಕತಾರ್‌ ಜಗತ್ತಿನ ಆಕ್ರೋಶ ಎದುರಿಸುತ್ತಿದೆ. ಅದೇ ಕಾರಣಕ್ಕಾಗಿ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಖಾಲಿ ಸೀಟುಗಳೇ ಹೆಚ್ಚಾಗಿ ಕಾಣುತ್ತಿದ್ದವು.  ಅಲ್ ಬೇಟ್ ಸ್ಟೇಡಿಯಂನಲ್ಲಿ ಖಾಲಿ ಆಸನಗಳೇ ಹೆಚ್ಚಾಗಿ ಕಂಡಿದ್ದವು. ಕಾರ್ಯಕ್ರಮದಲ್ಲಿ 'ಲೆಟಾ'ಅರಾಫೊ (ಒಬ್ಬರನ್ನೊಬ್ಬರು ತಿಳಿದುಕೊಳ್ಳಲು)' ಸೇರಿದಂತೆ ಹಲವು ದೃಶ್ಯಗಳನ್ನು ಒಳಗೊಂಡಿತ್ತು. ಆ ಬಳಿಕ, 'ಚಾಂಟ್ಸ್ ಆಫ್ ನೇಷನ್ಸ್', ವಿಶ್ವಕಪ್ ಮೆಡ್ಲಿ, ಅಧಿಕೃತ ಮ್ಯಾಸ್ಕಾಟ್‌ಗಳ ಪ್ರದರ್ಶನ ಮತ್ತು ದಕ್ಷಿಣ ಕೊರಿಯಾದ ಬಾಯ್ ಬ್ಯಾಂಡ್ ಬಿಟಿಎಸ್‌ನ ಜಂಗ್ ಕುಕ್ ನಿರ್ವಹಣೆ ಕೂಡ ಸೇರಿದ್ದವು.

FIFA World Cup: ಒಂದು ಪಿಂಟ್‌ ಬಡ್ವೈಸರ್‌ಗೆ ಕೊಡೋ ಹಣದಲ್ಲಿ ನೀವಿಲ್ಲಿ ಗೋವಾಕ್ಕೇ ಹೋಗಿ ಬರಬಹುದು!

ಮೊದಲ ಪಂದ್ಯ ಹಾಗೂ ಉದ್ಘಾಟನಾ ಸಮಾರಂಭಕ್ಕೂ ಮುನ್ನ, ಫ್ರಾನ್ಸ್‌ ತಂಡದ ಮಾಜಿ ಆಟಗಾರ ಮಾರ್ಸಲ್‌ ಡೆಸೈಲಿ ವಿಶ್ವಕಪ್‌ ಟ್ರೋಫಿಯನ್ನು ಮೈದಾನಕ್ಕೆ ತರುವ ಮೂಲಕ, ವಿಶ್ವಕಪ್‌ ಹೋರಾಟ ಆರಂಭವಾಗಿದೆ ಎನ್ನುವುದನ್ನು ಪ್ರಕಟಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಹಾಗೂ ದುಬೈನ ರೂಲರ್‌ ಕೂಡ ಆಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಅವರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು. ಸೌದಿ ಅರೇಬಿಯಾದ ಯುವರಾಜ ಮತ್ತು ಮಂತ್ರಿಗಳ ನಿಯೋಗವು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಬೆಳಿಗ್ಗೆ ನೆರೆಯ ದೇಶಕ್ಕೆ ಆಗಮಿಸಿದೆ ಎಂದು ಸೌದಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?