* ಯೂರೋ ಕಪ್ 2020 ಟೂರ್ನಿಯಲ್ಲಿ ಕ್ವಾರ್ಟರ್ ಪ್ರವೇಶಿಸಿದ ಇಟಲಿ ಹಾಗೂ ಡೆನ್ಮಾರ್ಕ್
* ಆಸ್ಟ್ರೀಯಾ ವಿರುದ್ದ ರೋಚಕ ಜಯ ಸಾಧಿಸಿದ ಇಟಲಿ
* ವೇಲ್ಸ್ ಎದುರು ಭರ್ಜರಿ ಜಯ ಸಾಧಿಸಿದ ಡೆನ್ಮಾರ್ಕ್
ಲಂಡನ್(ಜೂ.28): 2020ರ ಯುರೋ ಕಪ್ ಫುಟ್ಬಾಲ್ ಟೂರ್ನಿ ಕ್ವಾರ್ಟರ್ ಫೈನಲ್‌ಗೆ ಇಟಲಿ ಹಾಗೂ ಡೆನ್ಮಾಕ್ ತಂಡಗಳು ಪ್ರವೇಶ ಪಡೆದಿವೆ. ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಟಲಿ 2-1 ಗೋಲುಗಳಲ್ಲಿ ಆಸ್ಟ್ರಿಯಾ ವಿರುದ್ಧ ಜಯಿಸಿದರೆ, ವೇಲ್ಸ್ ವಿರುದ್ಧ ನಡೆದ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ 4-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.
ಇಟಲಿ-ಆಸ್ಟ್ರಿಯಾ ಪಂದ್ಯ ನಿಗದಿತ 90 ನಿಮಿಷಗಳಲ್ಲಿ ಯಾವುದೇ ಗೋಲಿಗೆ ಸಾಕ್ಷಿಯಾಗಲಿಲ್ಲ. ಹೆಚ್ಚುವರಿ ಸಮಯದಲ್ಲಿ ಒಟ್ಟು 3 ಗೋಲು ದಾಖಲಾದವು. 95ನೇ ನಿಮಿಷದಲ್ಲಿ ಫೆಡ್ರಿಕೋ, 105ನೇ ನಿಮಿಷದಲ್ಲಿ ಪೆಸ್ಸಿನಾ ಇಟಲಿ ಪರ ಗೋಲು ಬಾರಿಸಿದರು. 114ನೇ ನಿಮಿಷದಲ್ಲಿ ಸಾಸಾ ಕಾಲಾಡ್ಜಿಕ್ ಆಸ್ಟ್ರಿಯಾ ಪರ ಏಕೈಕ ಗೋಲು ಬಾರಿಸಿದರು.
undefined
ಕೋಕಾ ಕೋಲಾ ಬದಿಗಿಟ್ಟು ನೀರು ಕುಡಿಯಲು ಸಲಹೆ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೋ..!
ಇನ್ನು ವೇಲ್ಸ್ ವಿರುದ್ಧ ಡೆನ್ಮಾರ್ಕ್ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ತಂಡದ ಪರ ಡೋಲ್ಬರ್ಗ್(27, 48ನೇ ನಿಮಿಷ,), ಜೋಕಿಮ್(88ನೇ ನಿಮಿಷ,) ಹಾಗೂ ಬ್ರಾಥ್‌ವೇಟ್ (90+4ನೇ ನಿಮಿಷ,) ಗೋಲು ಬಾರಿಸಿದರು.
ಇಂದಿನ ಪಂದ್ಯಗಳು:
ಕ್ರೊವೇಷಿಯಾ-ಸ್ಪೇನ್ (ರಾತ್ರಿ 9.30ಕ್ಕೆ),
ಫ್ರಾನ್ಸ್-ಸ್ವಿಜರ್‌ಲೆಂಡ್(ತಡರಾತ್ರಿ 12.30ಕ್ಕೆ)