ಸುಂದರಿಯ ನೋಡಿ ಕಮೆಂಟರಿ ಬಿಟ್ಟು ಹಾಡು ಹಾಡಿದ ಕಮೆಂಟೇಟರ್; ವಿಡಿಯೋ ವೈರಲ್!

By Suvarna News  |  First Published Jun 19, 2021, 3:01 PM IST
  • ಫುಟ್ಬಾಲ್ ಪಂದ್ಯದ ರೋಚಕ ಘಟ್ಟದಲ್ಲಿ ಕಮೆಂಟರಿ ಮರೆತ ಕಮೆಂಟೇಟರ್
  • ಸುಂದರಿಯತ್ತ ತಿರುಗಿದ ಕ್ಯಾಮರ ಕಮೆಂಟರಿ ಬಿಟ್ಟು ಹಾಡು ಹಾಡಿದ ಕಮೆಂಟೇಟರ್
  • ಕ್ಯಾಮಾರಮ್ಯಾನ್ ಕೈಚಳಕ್ಕೆ ಹೆಚ್ಚಾಯ್ತು ಆಕ್ರೋಶ, ಕಮೆಂಟೇಟರ್‌ಗೆ ಬಹುಪರಾಕ್

ಯುಎಇ(ಜೂ.19): ಕ್ರೀಡೆಗಳಲ್ಲಿ ಅಭಿಮಾನಿಗಳ ಪಾತ್ರ ಪ್ರಮುಖವಾಗಿದೆ. ಕ್ರೀಡೆಯ ರೋಚಕತೆ, ಆಸಕ್ತಿ ಹೆಚ್ಚಿಸುವುದೇ ಕ್ರೀಡಾಭಿಮಾನಿಗಳು. ಇನ್ನು ಕ್ರೀಡಾಂಗಣಕ್ಕೆ ಆಗಮಿಸುವ ಕ್ರೀಡಾಭಿಮಾನಿಗಳತ್ತ ಕ್ಯಾಮಾರದ ಒಂದು ಕಣ್ಣು ಇದ್ದೇ ಇರುತ್ತೆ. ಅದರಲ್ಲೂ ಸುಂದರಿ ಹುಡುಗಿಯರು ಇದ್ದರೆ ಕ್ಯಾಮಾರ ಫೋಕಸ್ ಅಲ್ಲೆ ಇರುತ್ತೆ. ಹೀಗೆ ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮಾರ ಸುಂದರಿ ಹುಡುಗಿಯತ್ತ ತಿರುಗಿದೆ. ಕಮೆಂಟೇಟರ್, ಕಮೆಂಟರಿ ಬಿಟ್ಟು ಹಾಡು ಹಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ RCB ಅಭಿಮಾನಿಗೆ ನೆಟ್ಟಿಗರ ಕಿರುಕುಳ!

Tap to resize

Latest Videos

undefined

ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ರಾತ್ರೋರಾತ್ರೋ ಹಲವು ಸುಂದರಿಯರು ನ್ಯಾಶನಲ್ ಕ್ರಶ್ ಆದ ಹಲವು ಉದಾಹರಣೆಗಳಿವೆ. ಆರ್‌ಸಿಬಿ ಗರ್ಲ್ ಸೇರಿದಂತೆ ನಿದರ್ಶನ ನಮ್ಮ ಮುಂದಿದೆ. ಹೀಗೆ ಫುಟ್ಬಾಲ್ ಪಂದ್ಯದ ವೇಳೆ ಕಾಲು ಮೇಲಕ್ಕಿರಿಸಿ ಕೂತಿದ್ದ ಸುಂದರಿ ಮೇಲೆ ಕ್ಯಾಮರ ಕಣ್ಣು ಬಿದ್ದಿದೆ. ಇಷ್ಟೇ ಅಲ್ಲ, ಕ್ಯಾಮಾರ ಆಕೆ ಸೌಂದರ್ಯವನ್ನು ಸೆರೆಹಿಡಿದು ಜಗತ್ತಿಗೆ ತೋರಿಸುವ ಪ್ರಯತ್ನ ಮಾಡಿತ್ತು.

ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ಆದರೆ ಈ ಸುಂದರಿ ನೋಡಿದ ಕಮೆಂಟೇಟರ್ ಕಮೆಂಟರಿ ಬಿಟ್ಟು ಅರಬ್‌ನಲ್ಲಿ ಹಾಡು ಹಾಡಿದ್ದಾರೆ. ಹಾಡು ಮುಂದುವರಿದಿದೆ. ಇತ್ತ ಕ್ಯಾಮಾರಾ ಮ್ಯಾನ್ ಅಷ್ಟಕ್ಕೆ ಸುಮ್ಮನಾಗಿದ್ದರೆ, ವಿವಾದಕ್ಕೆ ಕಾರಣಾಗುತ್ತಿರಲಿಲ್ಲ. ಆದರೆ ಕ್ಯಾಮರಮ್ಯಾನ್ ಆಕೆಯ ಕಾಲುಗಳನ್ನೇ ಫೋಕಸ್ ಮಾಡಿದ್ದಾರೆ. 

 

This Arab commentator lost all composure and started singing to her 😭😭😭😭😭 pic.twitter.com/S8cATdbbnS

— 🇵🇸 (@hfussbaIl)

ಮಾಸ್ಕ್ ಹಾಕದೇ ಪಂದ್ಯ ವೀಕ್ಷಿಸಿದ 30ಸಾವಿರ ಫ್ಯಾನ್ಸ್: 7 ತಿಂಗಳ ಬಳಿಕ ದಾಖಲೆ!

ಕಮೆಂಟೇಟರ್ ಹಾಡಿಗೆ ಬಹುತೇಕರು ಮೆಚ್ಚಗೆ ವ್ಯಕ್ತಪಡಿಸಿದ್ದರೆ, ಇತ್ತ ಕ್ಯಾಮಾರಮ್ಯಾನ್ ಸುಂದರಿಯ ಕಾಲುಗಳನ್ನು ಫೋಕಸ್ ಮಾಡಿರುವುದು ಆಕ್ರೋಶಕ್ಕೆ ಕಾರಣಾಗಿದೆ. ಈ ವಿವಾದಕ್ಕೆ ಕಾರಣವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ವಿಡೋವನ್ನು 3.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 

click me!