ಮೈದಾನದಲ್ಲಿ ಕುಸಿದು ಬಿದ್ದು ICUನಲ್ಲಿ ಚಿಕಿತ್ಸೆ ಪಡೆಯತ್ತಿರುವ ಎರಿಕ್ಸನ್‌ಗೆ ನಿಷೇಧದ ಭೀತಿ!

Published : Jun 13, 2021, 09:24 PM IST
ಮೈದಾನದಲ್ಲಿ ಕುಸಿದು ಬಿದ್ದು ICUನಲ್ಲಿ ಚಿಕಿತ್ಸೆ ಪಡೆಯತ್ತಿರುವ ಎರಿಕ್ಸನ್‌ಗೆ ನಿಷೇಧದ ಭೀತಿ!

ಸಾರಾಂಶ

ಪ್ರತಿಷ್ಠಿತ ಯೂರೋ ಕಪ್ 2020ರ ಪಂದ್ಯದ ವೇಳೆ ಕುಸಿದ ಬಿದ್ದ ಎರಿಕ್ಸನ್ ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯದ ವೇಲೆ ತೀವ್ರ ಹೃದಯಾಘಾತ ಚಿಕಿತ್ಸೆ ಪಡೆಯುತ್ತಿರುವ ಎರಿಕ್ಸನ್‌ಗೆ ಫುಟ್ಬಾಲ್‌ನಿಂದ ನಿಷೇಧದ ಭೀತಿ

ಕೋಪನ್‌ಹ್ಯಾಗನ್(ಜೂ.13): ಪ್ರತಿಷ್ಠಿತ ಯೂರೋ ಕಪ್ 2020 ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಆದರೆ ಆರಂಭದಲ್ಲೇ ಸಂಭವಿಸಿದ ಆಘಾತಕಾರಿ ಬೆಳವಣಿಗೆ ಫುಟ್ಬಾಲ್ ಆಟಗಾರರು, ಅಭಿಮಾನಿಗಳು ಸೇರಿದಂತೆ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಡೆನ್ಮಾರ್ಕ್ ಹಾಗೂ ಫಿನ್‌ಲ್ಯಾಂಡ್ ನಡುವಿನ ಪಂದ್ಯದಲ್ಲಿ ಡೆನ್ಮಾರ್ಕ್ ಆ್ಯಟಾಕಿಂಗ್ ಮಿಡ್‌ಫೀಲ್ಡರ್, ನಾಯಕ ಕ್ರಿಶ್ಚಿಯನ್ ಎರಿಕ್ಸನ್ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. 5 ನಿಮಿಷ ಎರಿಕ್ಸನ್ ಹೃದಯವೇ ನಿಂತು ಹೋಗಿತ್ತು. ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ ಕಾರಣ ಬದುಕುಳಿದಿದ್ದಾರೆ. ಇದೀಗ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಿಕ್ಸನ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಎರಿಕ್ಸನ್‌ಗೆ ಇದೀಗ ಇಟಲಿಯಲ್ಲಿ ಫುಟ್ಬಾಲ್ ಆಡುವದನ್ನು ನಿಷೇಧಿಸುವ ಸಾಧ್ಯತೆ ದಟ್ಟವಾಗಿದೆ.

ಫುಟ್ಬಾಲ್ ದಿಗ್ಗಜ ಲಿಯೋನೆಲ್‌ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ

ಮೈದಾನದಲ್ಲಿ ದಿಢೀರ್ ಕುಸಿದು ಬಿದ್ದ ಎರಿಕ್ಸನ್ ದೇಹ ಚಲನವಲನ ಸಂಪೂರ್ಣ ನಿಂತಿತ್ತು. ಪರಿಸ್ಥಿತಿಯ ಗಂಭೀರತೆ ಅರಿತು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿತ್ತು. ತೀವ್ರ ನಿಘಾ ಘಟಕದಲ್ಲಿ ಎರಿಕ್ಸನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಆದರೆ ಚಿಕಿತ್ಸೆ ಮುಂದುವರಿಯಲಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಎರಿಕ್ಸನ್ ಆರೋಗ್ಯ ಪರಿಸ್ಥಿತಿಯನ್ನು ಗಮಮಿಸದರೆ ಮತ್ತೆ ಎಂದಿಗೂ ಫುಟ್‌ಬಾಲ್ ಆಡಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಹೃದ್ರೋಗ ತಜ್ಞ ಡಾ. ಸ್ಕಾಟ್ ಮುರ್ರೆ ಹೇಳಿದ್ದಾರೆ. ಇಟಲಿಯ ಇಂಟರ್ ಮಿಲನ್ ತಂಡದ ಪರ ಆಢುವ ಎರಿಕ್ಸನ್ ಇದೀಗ ಇಟಲಿಯಲ್ಲಿ ಫುಟ್ಬಾಲ್ ಆಟದಿಂದ ಬ್ಯಾನ್ ಆಗುವ ಸಾಧ್ಯತೆ ಇದೆ. ಕಾರಣ ಇಟಲಿ ನಿಯಮದ ಪ್ರಕಾರ, ಹೃದಯಾಘಾತ ಅಥವಾ ಹೃದಯ ಸಂಬಂಧಿ ಸಮಸ್ಯೆಯಿದ್ದವರನ್ನು ಫುಟ್ಬಾಲ್ ಆಟದಿಂದ ನಿಷೇಧಿಸಲಾಗುತ್ತಿದೆ. ಆರೋಗ್ಯ ಮುಂಜಾಗ್ರತೆಯಿಂದ ಇಟಲಿ ಈ ನಿಯಮ ಜಾರಿಗೆ ತಂದಿದೆ. ಈ ನಿಯಮ ಇದೀಗ ಎರಿಕ್ಸನ್‌ಗೂ ಅನ್ವಯವಾಗಲಿದೆ.

ರೆಫ್ರಿಯ ಬೋಳು ತಲೆಯನ್ನೇ ಚೆಂಡೆಂದು ಭಾವಿಸಿದ ಕ್ಯಾಮರಾ ಮಾಡಿದ ಎಡವಟ್ಟು!...

ಸದ್ಯ ಫುಟ್ಬಾಲ್ ಜಗತ್ತು, ಅಭಿಮಾನಿಗಳ ಪ್ರಾರ್ಥನೆ ಒಂದೇ, ಶೀಘ್ರದಲ್ಲೇ ಎರಿಕ್ಸನ್ ಗುಣಮುಖರಾಗಲಿ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಸಹಜ ಜೀವನಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ ₹10 ಲಕ್ಷ ಕೊಡಿ, ಮೆಸ್ಸಿ ಜತೆಗೆ ಒಂದು ಫೋಟೋ ತೆಗೆಸಿಕೊಳ್ಳಿ! ಕೇವಲ 100 ಮಂದಿಗಷ್ಟೇ ಈ ಚಾನ್ಸ್!
ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್