* ಕೊರೋನಾ ಅಟ್ಟಹಾಸಕ್ಕೆ ಭಾರತ ಫುಟ್ಬಾಲ್ ಮಾಜಿ ನಾಯಕ ಬಲಿ
* ಉಡುಪಿ ಮೂಲದ ಶೇಖರ್ ಬಂಗೇರ ಬಲಿ ಪಡೆದ ಕೊರೋನಾ
* ರಾಷ್ಟ್ರೀಯ ತಂಡದಲ್ಲಿ ಉತ್ತಮ ಗೋಲ್ ಕೀಪರ್ ಆಗಿ ಹೆಸರು ಮಾಡಿದ್ದ ಶೇಖರ್
ಉಡುಪಿ(ಜೂ.10): ಕೋವಿಡ್ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದ್ದು, ದೇಶದಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಇದೀಗ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ, ಉಡುಪಿ ಮೂಲದ ಶೇಖರ್ ಬಂಗೇರ(74) ಅವರನ್ನು ಗುರುವಾರ(ಜೂ.10) ಕೊರೋನಾ ಬಲಿಪಡೆದಿದೆ.
ಮೂಲತಃ ಉಡುಪಿ ಸಮೀಪದ ಬಡಾನಿಡಿಯುರು ಗ್ರಾಮದ ನಿವಾಸಿಯಾಗಿದ್ದ ಶೇಖರ್ ಬಂಗೇರ, ಮುಂಬೈನಲ್ಲಿ ವಾಸವಾಗಿದ್ದರು. 80ರ ದಶಕದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಬಂಗೇರ, ಉತ್ತಮ ಗೋಲ್ ಕೀಪರ್ ಆಗಿಯೂ ಗಮನ ಸೆಳೆದಿದ್ದರು. ನಂತರದ ದಿನಗಳಲ್ಲಿ ಶೇಖರ್ ಬಂಗೇರ ತಂಡದ ನಾಯಕರಾಗಿಯೂ ಸೈ ಎನಿಸಿಕೊಂಡಿದ್ದರು. ಫುಟ್ಬಾಲ್‌ನಿಂದ ನಿವೃತ್ತಿಯಾದ ಬಳಿಕ ಮುಂಬೈನಲ್ಲಿಯೇ ಪುಟ್ಬಾಲ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
undefined
ಭಾರತದ ಬಾಕ್ಸರ್ ಡಿಂಗ್ಕೊ ಸಿಂಗ್ ಬಲಿ ಪಡೆದ ಕೊರೋನಾ..!
ಇತ್ತೀಚೆಗೆ ಊರಿಗೆ ಬಂದಿದ್ದ ಶೇಖರ್ ಬಂಗೇರ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಬಗೇರ ಅವರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona