ಪ್ರದರ್ಶನ ಫುಟ್ಬಾಲ್ ಪಂದ್ಯವನ್ನಾಡಿದ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ
ಫುಟ್ಬಾಲ್ ದಿಗ್ಗಜರನ್ನು ಭೇಟಿ ಮಾಡಿದ ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್
ರೊನಾಲ್ಡೋ ಎದುರು ಗೆದ್ದುಬೀಗಿದ ಲಿಯೋನೆಲ್ ಮೆಸ್ಸಿ ಪಡೆ
ರಿಯಾದ್(ಜ.20): ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿಯವರನ್ನು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಭೇಟಿ ಮಾಡಿ ಉಪಚರಿಸಿದ್ದಾರೆ. ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಹಾಗೂ ಸೌದಿ ಆಲ್-ಸ್ಟಾರ್ ಇಲೆವನ್ ನಡುವಿನ ಪ್ರದರ್ಶನ ಪಂದ್ಯದ ಸಂದರ್ಭದಲ್ಲಿ ಅಮಿತಾಬ್, ಈ ದಿಗ್ಗಜ ಫುಟ್ಬಾಲಿಗರನ್ನು ಭೇಟಿ ಮಾಡಿದ್ದು, ಫೋಟೋಗಳು ಸಾಕಷ್ಟು ವೈರಲ್ ಆಗಿವೆ.
ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಹಾಗೂ ಸೌದಿ ಆಲ್-ಸ್ಟಾರ್ ಇಲೆವನ್ ನಡುವಿನ ಪ್ರದರ್ಶನ ಪಂದ್ಯಕ್ಕೆ ಇಲ್ಲಿನ ಕಿಂಗ್ ಫಾಹದ್ ಇಂಟರ್‌ನ್ಯಾಷನಲ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಸಿನಿ ಹಾಗೂ ಫುಟ್ಬಾಲ್ ಅಭಿಮಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಲಿಯೋನೆಲ್ ಮೆಸ್ಸಿಯ ಪ್ಯಾರಿಸ್ ಸೇಂಟ್ ಜರ್ಮೈನ್ ಹಾಗೂ ಇತ್ತೀಚೆಗಷ್ಟೇ ಅರಬ್ ಫುಟ್ಬಾಲ್ ಕ್ಲಬ್ ಕೂಡಿಕೊಂಡಿರುವ ಕ್ರಿಸ್ಟಿಯಾನೋ ರೊನಾಲ್ಡೋ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಹಲವು ಗಣ್ಯ ವ್ಯಕ್ತಿಗಳು ಮೈದಾನದಲ್ಲಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್, ಈ ಇಬ್ಬರು ತಾರಾ ಫುಟ್ಬಾಲಿಗರ ಜತೆ, ಪಿಎಸ್‌ಜಿ ತಂಡದ ನೇಮಾರ್ ಜೂನಿಯರ್, ಕಿಲಿಯಾನ್ ಎಂಬಾಪೆ ಅವರೊಂದಿಗೂ ಹಸ್ತಲಾಘನ ಮಾಡಿದರು.
undefined
ಈ ಪ್ರದರ್ಶನ ಪಂದ್ಯದ ವೇಳೆ ಅಮಿತಾಬ್ ಬಚ್ಚನ್ ರಿಯಾದ್‌ನಲ್ಲಿ ಹಾಜರಿದ್ದಿದ್ದು, ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಅಚ್ಚರಿ ಹಾಗೂ ಸಾಕಷ್ಟು ಸಂತಸವನ್ನುಂಟು ಮಾಡಿದೆ. ಇದರ ಬೆನ್ನಲ್ಲೇ ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
Amitabh Bachchan with greatest football players of current generation
Messi neymar mbappe ronaldo pic.twitter.com/zOyJOriuz7
Amitabh Bachchan meets Leo Messi. pic.twitter.com/a2v3ipYrA1
— Mufaddal Vohra (@mufaddal_vohra)ಸಾಗರೋಪಾದಿಯಲ್ಲಿ ಅರ್ಜೆಂಟೀನಾ ಆಟಗಾರರಿದ್ದ ಬಸ್ ಮುತ್ತಿದ ಫ್ಯಾನ್ಸ್, ಕೊನೆಗೆ ಹೆಲಿಕಾಪ್ಟರ್ ಬಳಸಿ ಸ್ಥಳಾಂತರ..!
ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ, ಇತ್ತೀಚೆಗಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದು, ಸೌದಿ ಅರೇಬಿಯಾದ ಅಲ್ ನಸ್ರ್ ತಂಡವನ್ನು ಕೂಡಿಕೊಂಡಿದ್ದರು. ಈ ಪ್ರದರ್ಶನ ಪಂದ್ಯದಲ್ಲಿ ಪಿಎಸ್‌ಜಿ ತಂಡದ ಎದುರು ಸೌದಿ ಪ್ರೊ ಲೀಗ್‌ನಲ್ಲಿ ಪಾಲ್ಗೊಳ್ಳುವ ಅಲ್ ನಸ್ರ್ ಹಾಗೂ ಅಲ್ ಹಿಲಾಲ್ ತಂಡದಲ್ಲಿನ ಆಟಗಾರರನ್ನೊಳಗೊಂಡ ಆಟಗಾರರ ನಾಯಕರಾಗಿ ಕ್ರಿಸ್ಟಿಯಾನೋ ರೊನಾಲ್ಡೋ ಕಣಕ್ಕಿಳಿದಿದ್ದರು.
ಮಿಂಚಿದ ರೊನಾಲ್ಡೋ, ಆದರೂ ಗೆದ್ದು ಬೀಗಿದ ಮೆಸ್ಸಿ ಪಡೆ..!
ಫುಟ್ಬಾಲ್ ಮೈದಾನದ ಬದ್ದ ಎದುರಾಳಿಗಳೆಂದೇ ಗುರುತಿಸಿಕೊಂಡಿರುವ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿ ನಡುವಿನ ಕಾದಾಟದಲ್ಲಿ ಇದೀಗ ಮತ್ತೊಮ್ಮೆ ಮೆಸ್ಸಿ ಕೈ ಮೇಲಾಗಿದೆ. ಸೌದಿ ಅರೇಬಿಯಾದ ಅಲ್ ನಸ್ರ್ ತಂಡ ಕೂಡಿಕೊಂಡ ಬಳಿಕ ಮೊದಲ ಪಂದ್ಯವನ್ನಾಡಿದ ಕ್ರಿಸ್ಟಿಯಾನೋ ರೊನಾಲ್ಡೋ ಎರಡು ಗೋಲು ಬಾರಿಸಿದರಾದರೂ, ಗೆಲುವು ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ಪಾಲಾಯಿತು. ಯೂರೋಪಿನ ದೈತ್ಯ ಫುಟ್ಬಾಲ್ ತಂಡವೆನಿಸಿಕೊಂಡಿರುವ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡವು 5-4 ಗೋಲುಗಳ ಅಂತರದಲ್ಲಿ ಸೌದಿ ಆಲ್-ಸ್ಟಾರ್ ಇಲೆವನ್ ಎದುರು ಗೆಲುವಿನ ಕೇಕೆ ಹಾಕಿತು.
ಸುಮಾರು 69 ಸಾವಿರ ಮಂದಿ ಫುಟ್ಬಾಲ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಕಿಂಗ್ ಫಾಹದ್ ಸ್ಟೇಡಿಯಂನಲ್ಲಿ ಪಂದ್ಯದ ಆರಂಭದಲ್ಲೇ ಲಿಯೋನೆಲ್ ಮೆಸ್ಸಿ ಆಕರ್ಷಕ ಗೋಲು ಬಾರಿಸುವ ಪಿಎಸ್‌ಜಿ ತಂಡದ ಪರ ಗೋಲಿನ ಖಾತೆ ತೆರೆದರು. ಇನ್ನು ಇದರ ಬೆನ್ನಲ್ಲೇ ರೊನಾಲ್ಡೋ ಗೋಲು ಬಾರಿಸಿ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಇದಾದ ಬಳಿಕ ಮಾರ್ಕ್ಯೂನಸ್ ಬಾರಿಸಿದ ಗೋಲಿಗೆ ಪ್ರತಿಯಾಗಿ ರೊನಾಲ್ಡೋ ಮತ್ತೊಮ್ಮೆ ಗೋಲು ಬಾರಿಸಿ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ದ್ವಿತಿಯಾರ್ಧದಲ್ಲಿ ರೊನಾಲ್ಡೋ ಪಡೆ ಎದುರು ಪಿಎಸ್‌ಜಿ ತಂಡವು ಪ್ರಾಬಲ್ಯ ಮೆರೆಯಿತು. ಕೊನೆಯಲ್ಲಿ ಕಿಲಿಯಾನ್ ಎಂಬಾಪೆ ಪೆನಾಲ್ಟಿಯಲ್ಲಿ ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.