ವೃತ್ತಿಜೀವನ ಉನ್ನತಘಟ್ಟದಲ್ಲಿರುವ ಲಿಯೋನೆಲ್ ಮೆಸ್ಸಿ
ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ಅರ್ಜೆಂಟೀನಾ ನಾಯಕ
ಬ್ಯೂನಸ್ ಐರಿಸ್(ಜ.01): ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ, ತಮ್ಮ ವೃತ್ತಿಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದು, ಕಳೆದ ತಿಂಗಳಷ್ಟೇ ತಮ್ಮ ಜೀವಮಾನದ ಕನಸಾದ ಫಿಫಾ ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಅರ್ಜೆಂಟೀನಾ ತಂಡವು ಬರೋಬ್ಬರಿ 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು.
ಲಿಯೋನೆಲ್ ಮೆಸ್ಸಿ ತಾವು ಫಿಫಾ ವಿಶ್ವಕಪ್ ಜಯಿಸಿದ್ದು ಮಾತ್ರವಲ್ಲದೇ, ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಕ್ಕಾಗಿ ನೀಡಲಾಗುವ ಗೋಲ್ಡನ್ ಬಾಲ್ ಪ್ರಶಸ್ತಿ ಜಯಿಸುವಲ್ಲಿ ಅರ್ಜೆಂಟೀನಾ ನಾಯಕ ಯಶಸ್ವಿಯಾಗಿದ್ದರು. ಇದೀಗ ಪ್ಯಾರಿಸ್ ಸೇಂಟ್ ಜರ್ಮೈನ್(PSG)ತಂಡದ ತಾರಾ ಆಟಗಾರ ಲಿಯೋನೆಲ್ ಮೆಸ್ಸಿ, 2023ರ ಹೊಸ ವರ್ಷದ ಮೊದಲ ದಿನ ಕುಟುಂಬದೊಟ್ಟಿಗೆ ಹೊಸ ವರ್ಷವನ್ನು ಬಿಂದಾಸ್ ಆಗಿಯೇ ಸ್ವಾಗತಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
undefined
ಈ ವರ್ಷವನ್ನು ನಾನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ, ನಾನು ಇಷ್ಟು ವರ್ಷ ಬೆನ್ನತ್ತಿದ ಕನಸು ನನಸಾಧ ವರ್ಷವಿದು. ನಾನು ನಿರಾಸೆ ಅನುಭವಿಸಿದಾಗ, ಕುಗ್ಗಿದಾಗ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು ಸಾಥ್ ನೀಡಿದ್ದರಿಂದಲೇ ಇದೆಲ್ಲವೂ ಸಾಧ್ಯವಾಗಿದೆ. ಹೊಸ ವರ್ಷವು ಎಲ್ಲರಿಗೂ ಒಳಿತನ್ನು ಮಾಡಲಿ. ಹೊಸ ವರ್ಷವು ಎಲ್ಲರಿಗೂ ಆರೋಗ್ಯ ಪೂರ್ಣ ದಿನಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೆಸ್ಸಿ ಬರೆದುಕೊಂಡಿದ್ದಾರೆ.
ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ದ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಎರಡು ಗೋಲು ಬಾರಿಸಿದ್ದರು. ಹೆಚ್ಚುವರಿ ಸಮಯದ ಬಳಿಕ ಉಭಯ ತಂಡಗಳು 3-3 ಗೋಲುಗಳ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಅರ್ಜೆಂಟೀನಾ ತಂಡವು ಮೂರೂವರೆ ದಶಕಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆಯೇ ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳು ಮೆಸ್ಸಿ ಪಡೆಯ ಗೆಲುವನ್ನು ಸಂಭ್ರಮಿಸಿದರು.
ನಿವೃತ್ತಿ ಇಲ್ಲ, ಚಾಂಪಿಯನ್ ಆಗಿಯೇ ಆಡುತ್ತೇನೆ: ಮೆಸ್ಸಿ
ದೋಹಾ: ಬಹುತೇಕ ಕೊನೆ ವಿಶ್ವಕಪ್ ಆಡಿದ ಲಿಯೋನೆಲ್ ಮೆಸ್ಸಿ, ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ಉಹಾಪೋಹ ಹರಡಿತ್ತು. ಇದನ್ನು ಸ್ವತಃ ಮೆಸ್ಸಿ ಅಲ್ಲಗಳೆದಿದ್ದು, ಈಗಲೇ ನಿವೃತ್ತಿ ಘೋಷಿಸಲ್ಲ. ಚಾಂಪಿಯನ್ ಆಗಿ ಅರ್ಜೆಂಟೀನಾ ಪರ ಇನ್ನಷ್ಟು ದಿನ ಆಡಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಗರೋಪಾದಿಯಲ್ಲಿ ಅರ್ಜೆಂಟೀನಾ ಆಟಗಾರರಿದ್ದ ಬಸ್ ಮುತ್ತಿದ ಫ್ಯಾನ್ಸ್, ಕೊನೆಗೆ ಹೆಲಿಕಾಪ್ಟರ್ ಬಳಸಿ ಸ್ಥಳಾಂತರ..!
‘ವಿಶ್ವಕಪ್ ಗೆಲ್ಲುವ ಕನಸು ನನಸಾಗಿದೆ. ಇದಕ್ಕಿಂತ ಇನ್ನೇನು ಬೇಕು. ಕೋಪಾ ಅಮೆರಿಕದ ಜೊತೆಗೆ ವಿಶ್ವಕಪ್ ಕೂಡಾ ಗೆದ್ದಿದ್ದೇನೆ. ದೇವರು ನನಗೆ ಈ ಉಡುಗೊರೆ ನೀಡುತ್ತಾರೆಂದು ಗೊತ್ತಿತ್ತು. ಇದೊಂದು ಅದ್ಭುತ ಕ್ಷಣ. ರಾಷ್ಟ್ರೀಯ ತಂಡದ ಭಾಗವಾಗಿರಲು ತುಂಬಾ ಸಂತೋಷವಾಗುತ್ತಿದೆ’ ಎಂದು ಫೈನಲ್ ಬಳಿಕ ಮೆಸ್ಸಿ ಪ್ರತಿಕ್ರಿಯಿಸಿದ್ದಾರೆ.