ಅರ್ಜೆಂಟೀನಾ: ಪ್ರತಿ 70ರಲ್ಲಿ 1 ಮಗುವಿಗೆ ಲಿಯೋನೆಲ್‌ ಮೆಸ್ಸಿ ಹೆಸರು!

By Naveen Kodase  |  First Published Jan 7, 2023, 4:14 PM IST

36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಜಯಿಸಿದ ಅರ್ಜೆಂಟೀನಾ ಫುಟ್ಬಾಲ್ ತಂಡ
ಅರ್ಜೆಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಲಿಯೋನೆಲ್ ಮೆಸ್ಸಿ
ಪ್ರತಿ 70 ಮಕ್ಕಳ ಪೈಕಿ 1 ಮಗುವಿಗೆ ಲಿಯೋನೆಲ್‌ ಅಥವಾ ಲಿಯೊನೆಲಾ ಎಂದು ಹೆಸರು


ಬ್ಯೂನಸ್‌ ಐರಿಸ್‌(ಜ.07): ಫಿಫಾ ವಿಶ್ವಕಪ್‌ ಗೆದ್ದ ಬಳಿಕ ಅರ್ಜೆಂಟೀನಾದಲ್ಲಿ ದಿಗ್ಗಜ ಲಿಯೋನೆಲ್‌ ಮೆಸ್ಸಿ ಮೇಲಿನ ಕ್ರೇಜ್‌ ಮತ್ತಷ್ಟುಹೆಚ್ಚಾಗಿದ್ದು, ಕಳೆದ ಕೆಲ ವಾರಗಳಿಂದ ಹುಟ್ಟುತ್ತಿರುವ ಪ್ರತಿ 70 ಮಕ್ಕಳ ಪೈಕಿ 1 ಮಗುವಿಗೆ ಲಿಯೋನೆಲ್‌ ಅಥವಾ ಲಿಯೊನೆಲಾ ಎಂದು ಹೆಸರಿಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅರ್ಜೆಂಟೀನಾದ ಸ್ಯಾಂಟಾ ಫೆ ಪ್ರಾಂತ್ಯದ ಅಧಿಕಾರಿಗಳ ಮಾಹಿತಿ ಪ್ರಕಾರ, ಡಿಸೆಂಬರ್‌ನಲ್ಲಿ ಹುಟ್ಟಿದ 49 ಮಕ್ಕಳಿಗೆ ಲಿಯೋನೆಲ್‌, ಲಿಯೋನೆಲಾ ಎಂದು ಹೆಸರಿಡಲಾಗಿದೆ. ಸೆಪ್ಟಂಬರ್‌ನಲ್ಲೇ ಈ ಕ್ರೇಜ್‌ ಆರಂಭವಾಗಿದ್ದು, ಅಕ್ಟೋಬರ್‌, ನವೆಂಬರಲ್ಲಿ ತಲಾ 32 ಮಕ್ಕಳಿಗೆ ಇದೇ ಹೆಸರು ನಾಮಕರಣ ಮಾಡಲಾಗಿದೆ.

Latest Videos

undefined

ರೊನಾಲ್ಡೋಗಾಗಿ ನಿಯಮ ಸಡಿಲಗೊಳಿಸಿದ ಸೌದಿ!

ರಿಯಾದ್‌: ಸೌದಿ ಅರೇಬಿಯಾದ ಅಲ್‌-ನಸ್‌್ರ ಕ್ಲಬ್‌ಗೆ ಸೇರ್ಪಡೆಯಾಗಿರುವ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋಗಾಗಿ ಅಲ್ಲಿನ ಆಡಳಿತ ನಿಯಮ ಸಡಿಲಿಕೆ ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ನಿಯಮ ಉಲ್ಲಂಘಿಸಿದರೂ ರೊನಾಲ್ಡೋಗೆ ಶಿಕ್ಷೆ ವಿಧಿಸದಿರಲು ಸ್ಥಳೀಯ ಆಡಳಿತ ಅನಧಿಕೃತವಾಗಿ ನಿರ್ಧರಿಸಿದೆ ಎನ್ನಲಾಗಿದೆ. 

ಟೆನಿಸ್​ಗೆ ಸಾನಿಯಾ ಮಿರ್ಜಾ ವಿದಾಯ! ದುಬೈನಲ್ಲಿ ಕಟ್ಟ ಕಡೆಯ ಬಾರಿಗೆ ಕಣಕ್ಕಿಳಿಯೋ ಮೂಗುತಿ ಸುಂದರಿ

ಸೌದಿ ನಿಯಮದ ಪ್ರಕಾರ ಮದುವೆಯಾಗದೇ ಸಂಗಾತಿಗಳು ಒಟ್ಟಿಗೆ ಇರುವಂತಿಲ್ಲ. ಆದರೆ ತಮ್ಮ ಪ್ರೇಯಸಿ ಜಾರ್ಜಿನಾ ರೋಡ್ರಿಗಸ್‌ ಹಾಗೂ 5 ಮಕ್ಕಳೊಂದಿಗೆ ಸೌದಿಗೆ ಆಗಮಿಸಿರುವ ರೊನಾಲ್ಡೋಗೆ ವಿಶೇಷ ಆತಿಥ್ಯ ಸಿಕ್ಕಿದೆ. 2016ರಿಂದ ಜೊತೆಗಿದ್ದರೂ ರೊನಾಲ್ಡೋ ಹಾಗೂ ಜಾರ್ಜಿನಾ ಇನ್ನೂ ವಿವಾಹವಾಗಿಲ್ಲ.

16ರ ಪ್ರಾಣೇಶ್‌ ಭಾರತದ 79ನೇ ಗ್ರ್ಯಾಂಡ್‌ಮಾಸ್ಟರ್‌

ಸ್ಟಾಕ್‌ಹೋಮ್‌(ಸ್ವೀಡನ್‌): ತಮಿಳುನಾಡಿನ 16 ವರ್ಷದ ಚೆಸ್‌ ಆಟಗಾರ ಎಂ.ಪ್ರಾಣೇಶ್‌ ಭಾರತದ 79ನೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. 3 ಜಿಎಂ ನಾಮ್‌ರ್‍ ಪೂರ್ತಿಗೊಳಿಸಿದ್ದ ಪ್ರಾಣೇಶ್‌ ಸ್ವೀಡನ್‌ನಲ್ಲಿ ನಡೆದ ಫಿಡೆ ರಿಲ್ಟನ್‌ ಕಪ್‌ ಟೂರ್ನಿಯಲ್ಲಿ 2500 ಎಲೋ ರೇಟಿಂಗ್‌ ಅಂಕಗಳನ್ನು ಪೂರ್ಣಗೊಳಿಸಿ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡರು. ಗುರುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ 22ನೇ ಶ್ರೇಯಾಂಕಿತ ಪ್ರಾಣೇಶ್‌ ಎಲ್ಲಾ 8 ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು.

ರಾಷ್ಟ್ರೀಯ ಬಾಕ್ಸಿಂಗ್‌: ರಾಜ್ಯದ ನಿಶಾಂತ್‌ಗೆ ಚಿನ್ನ

ಹಿಸಾರ್‌(ಹರಾರ‍ಯಣ): ರಾಷ್ಟ್ರೀಯ ಪುರುಷರ ಎಲೈಟ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಿಶಾಂತ್‌ ದೇವ್‌ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಶುಕ್ರವಾರ ಮುಕ್ತಾಯಗೊಂಡ ಕೂಟದಲ್ಲಿ , ಹರಾರ‍ಯಣ ಮೂಲದ ನಿಶಾಂತ್‌ 71 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದೆಹಲಿಯ ಹೇಮಂತ್‌ ಯಾದವ್‌ ವಿರುದ್ಧ ವಾಕ್‌ಓವರ್‌ ಪಡೆದು ಚಿನ್ನ ತಮ್ಮದಾಗಿಸಿಕೊಂಡರು. ಉಳಿದಂತೆ ಅಸ್ಸಾಂನ ಶಿವ ಥಾಪ(63.5 ಕೆ.ಜಿ.), ಸರ್ವಿಸಸ್‌ನ ಮೊಹಮದ್‌ ಹುಸ್ಸಮುದ್ದೀನ್‌(57 ಕೆ.ಜಿ.) ಕೂಡಾ ಬಂಗಾರ ಗೆದ್ದರು. ಸರ್ವಿಸಸ್‌ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ರಾಷ್ಟ್ರೀಯ ಕ್ರಾಸ್‌ ಕಂಟ್ರಿ: ರಾಜ್ಯದ 32 ಅಥ್ಲೀಟ್ಸ್‌

ಬೆಂಗಳೂರು: ಜ.8ರಿಂದ ಅಸ್ಸಾಂನಲ್ಲಿ ನಡೆಯಲಿರುವ 57ನೇ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ(ಕೆಎಎ)ಯು ರಾಜ್ಯದ 32 ಅಥ್ಲೀಟ್‌ಗಳ ತಂಡವನ್ನು ಪ್ರಕಟಿಸಿತು. 8 ವಿಭಾಗಗಳಲ್ಲಿ ನಡೆಯಲಿವ ಕೂಟಕ್ಕೆ ತೇಜಸ್ವಿನಿ, ನಿತಿನ್‌, ನಾಗಶ್ರೀ ಸೇರಿದಂತೆ ಹಲವರು ಆಯ್ಕೆಯಾಗಿದ್ದು, ಅಶೋಕ್‌ ಬಿ. ಹಾಗೂ ವಿಶ್ವನಾಥ್‌ ಕೋಚ್‌/ಮ್ಯಾನೇಜರ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ.

click me!