AFC fined AIFF ಭಾರತೀಯ ಫುಟ್ಬಾಲ್‌ಗೆ ಎಎಫ್‌ಸಿ ದಂಡ..!

Published : Aug 30, 2022, 10:25 AM ISTUpdated : Aug 30, 2022, 10:27 AM IST
AFC fined AIFF ಭಾರತೀಯ ಫುಟ್ಬಾಲ್‌ಗೆ ಎಎಫ್‌ಸಿ ದಂಡ..!

ಸಾರಾಂಶ

ಭಾರತೀಯ ಫುಟ್ಬಾಲ್ ಫೆಡರೇಷನ್‌ಗೆ ಶಾಕ್‌ ನೀಡಿದ ಏಷ್ಯನ್‌ ಫುಟ್ಬಾಲ್ ಕಾನ್ಫೆಡರೇಷನ್‌ ಭಾರತೀಯ ಫುಟ್ಬಾಲ್ ಫೆಡರೇಷನ್‌ಗೆ 18,000 ಯುಎಸ್‌ ಡಾಲರ್‌ ದಂಡ ಸುಮಾರು 14.39 ಲಕ್ಷ ರುಪಾಯಿ ದಂಡ ತೆರಬೇಕಿರುವ ಭಾರತೀಯ ಫುಟ್ಬಾಲ್ ಫೆಡರೇಷನ್‌

ನವದೆಹಲಿ(ಆ.30): ಜೂನ್‌ನಲ್ಲಿ ಏಷ್ಯಾಕಪ್‌ ಅರ್ಹತಾ ಪಂದ್ಯದ ವೇಳೆ ಪ್ರೇಕ್ಷಕರು ನಿಯಮ ಉಲ್ಲಂಘಿಸಿದ ಕಾರಣ ಏಷ್ಯನ್‌ ಫುಟ್ಬಾಲ್ ಕಾನ್ಫೆಡರೇಷನ್‌(ಎಎಫ್‌ಸಿ), ಭಾರತೀಯ ಫುಟ್ಬಾಲ್ ಫೆಡರೇಷನ್‌ಗೆ 18,000 ಯುಎಸ್‌ ಡಾಲರ್‌ (ಸುಮಾರು 14.39 ಲಕ್ಷ ರು.) ದಂಡ ವಿಧಿಸಿದೆ. 

ಇದರಲ್ಲಿ 10.79 ಲಕ್ಷ ಮೊತ್ತವನ್ನು ಇದೇ ತಪ್ಪು ಮುಂದಿನ 2 ವರ್ಷಗಳಲ್ಲಿ ಪುನರಾವರ್ತನೆಯಾದರೆ ಮಾತ್ರ ತೆರಬೇಕು ಎದು ಎಎಎಫ್‌ಸಿ ತಿಳಿಸಿದೆ. ಕೋಲ್ಕತಾದಲ್ಲಿ ನಡೆದ ಆಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಎದುರಿನ ಪಂದ್ಯದ ವೇಳೆ ಭಾರತದ ಪ್ರೇಕ್ಷಕರು ಅಂಗಳದಲ್ಲಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದರು.

ಭಾರತ ಫುಟ್ಬಾಲ್‌ ಮೇಲಿನ ನಿಷೇಧ ಹಿಂಪಡೆದ ಫಿಫಾ

ಕೆಲ ದಿನಗಳ ಹಿಂದಷ್ಟೇ ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಮೇಲಿನ ನಿಷೇಧವನ್ನು ಜಾಗತಿಕ ಫುಟ್ಬಾಲ್‌ ಆಡಳಿತ ಸಮಿತಿ(ಫಿಫಾ) ಇತ್ತೀಚೆಗಷ್ಟೇ ಹಿಂತೆಗೆದುಕೊಂಡಿತ್ತು. ಇದರೊಂದಗೆ ಭಾರತದಲ್ಲಿ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಅಂಡರ್‌-17 ಫಿಫಾ ಮಹಿಳಾ ವಿಶ್ವಕಪ್‌ ನಿಗದಿಯಂತೆ ನಡೆಯಲಿದೆ. ಇತ್ತೀಚೆಗೆ ಸಮಿತಿಯಲ್ಲಿ ಅನ್ಯರ ಹಸ್ತಕ್ಷೇಪದ ಕಾರಣ ನೀಡಿ ಫಿಫಾ, ಎಐಎಫ್‌ಎಫ್‌ಅನ್ನು ಅಮಾನತು ಮಾಡಿತ್ತು. 

ಬಾಸ್ಕೆಟ್‌ಬಾಲ್‌: ಭಾರತಕ್ಕೆ ಸೋಲು

ಬೆಂಗಳೂರು: 2023ರ ಬಾಸ್ಕೆಟ್‌ಬಾಲ್‌ ವಿಶ್ವಕಪ್‌ ಏಷ್ಯನ್ ಅರ್ಹತಾ ಸುತ್ತಿನ 'ಇ' ಗುಂಪಿನ ಪಂದ್ಯದಲ್ಲಿಆತಿಥೇಯ ಭಾರತ ತಂಡ ಲೆಬನಾನ್ ವಿರುದ್ದ 95-63 ಅಂಕಗಳಿಂದ ಸೋಲನ್ನನುಭವಿಸಿತು. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲೆಬನಾನ್‌ 21 ಅಂಕ ಗಳಿಸಿದರೇ, ಭಾರತದ ಪರ ಪ್ರಣವ್ 19, ಪ್ರಶಾಂತ್ ಹಾಗೂ ಮೋಯಿನ್ ತಲಾ 10 ಅಂಕ ಗಳಿಸಿದರು. ಅರ್ಹತಾ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ 4 ಪಂದ್ಯ ಸೋತಿದ್ದ ಭಾರತ, ಎರಡನೇ ಸುತ್ತಿನಲ್ಲಿ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡು 'ಇ' ಗುಂಪಿನಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ರಾಜ್ಯದ ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ

ಕ್ರೀಡಾ ದಿನಕ್ಕೆ ಪ್ರಧಾನಿ ಸೇರಿ  ಹಲವರಿಂದ ಶುಭ ಹಾರೈಕೆ

ನವದೆಹಲಿ: ಮೇಜರ್‌ ಧ್ಯಾನ್‌ಚಂದ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಮವಾರ(ಆ.29) ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ರಾಜಕೀಯ ನಾಯಕರು, ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ, ‘ಎಲ್ಲರಿಗೂ ಕ್ರೀಡಾ ದಿನದ ಶುಭಾಶಯಗಳು. ಈ ದಿನ ಧ್ಯಾನ್‌ ಚಂದ್‌ ಅವರನ್ನು ನಾವು ಸ್ಮರಿಸುತ್ತಿದ್ದೇವೆ. ಇತ್ತೀಚಿನ ವರ್ಷಗಳು ದೇಶದ ಕ್ರೀಡೆಗೆ ಉತ್ತಮವಾಗಿದೆ. ಈ ಪ್ರವೃತ್ತಿ ಮುಂದುವರಿಯಲಿ. ಕ್ರೀಡೆಗಳು ಭಾರತದಾದ್ಯಂತ ಜನಪ್ರಿಯವಾಗಲಿ’ ಎಂದು ಬರೆದಿದ್ದಾರೆ.

ಮಾಜಿ ಕ್ರೀಡಾ, ಹಾಲಿ ಕಾನೂನು ಸಚಿವ ಕಿರಣ್‌ ರಿಜಿಜು, ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌, ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ, ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌ ಸೇರಿದಂತೆ ಹಲವು ಮಾಜಿ-ಹಾಲಿ ಕ್ರೀಡಾಪಟುಗಳು ಕೂಡಾ ಶುಭಹಾರೈಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?