ಫುಟ್ಬಾಲ್ ಎಎಫ್‌ಸಿ ಕಪ್‌: ಬಿಎಫ್‌ಸಿಗಿಂದು ಬಾಂಗ್ಲಾದ ಕಿಂಗ್ಸ್‌ ಸವಾಲು

By Kannadaprabha News  |  First Published Aug 21, 2021, 10:44 AM IST

* ಎಎಫ್‌ಸಿ ಕಪ್‌ ಫುಟ್ಬಾಲ್ ಟೂರ್ನಿಯಲ್ಲಿ ಎರಡನೇ ಪಂದ್ಯಕ್ಕೆ ಸಜ್ಜಾದ ಬಿಎಫ್‌ಸಿ

* ಬಿಎಫ್‌ಸಿ ತಂಡಕ್ಕಿಂದು ಬಾಂಗ್ಲಾದೇಶದ ಬಶುಂಧರ ಕಿಂಗ್ಸ್‌ ಸವಾಲು

* ಇನ್ನುಳಿದ 2 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ ಬಿಎಫ್‌ಸಿ


ಮಾಲೆ(ಆ.21): 2021ರ ಎಎಫ್‌ಸಿ ಕಪ್‌ ಗುಂಪು ಹಂತದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಬೆಂಗಳೂರು ಎಫ್‌ಸಿ ತಂಡ, ಶನಿವಾರ ‘ಡಿ’ ಗುಂಪಿನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ಬಶುಂಧರ ಕಿಂಗ್ಸ್‌ ತಂಡದ ವಿರುದ್ಧ ಸೆಣಸಲಿದೆ. 

ಅಂತರ ವಲಯ ಸೆಮಿಫೈನಲ್‌ ಪ್ಲೇ-ಆಫ್‌ ಪಂದ್ಯಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬಿಎಫ್‌ಸಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ಭಾರತದ್ದೇ ತಂಡ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಸುನಿಲ್‌ ಚೆಟ್ರಿ ಪಡೆ 0-2 ಗೋಲುಗಳಲ್ಲಿ ಪರಾಭವಗೊಂಡಿತ್ತು. ಇದೀಗ ಮಾಲ್ಡೀವ್ಸ್‌ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಚಾಂಪಿಯನ್‌ ಬಶುಂಧರ ಕಿಂಗ್ಸ್‌ ಸುನಿಲ್‌ ಚೆಟ್ರಿ ಪಡೆಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

The Blues are BACK in action as they host Bashundhara Kings in their second Group Stage clash! 🔵 pic.twitter.com/ItQL0lOY4M

— Bengaluru FC (@bengalurufc)

The Blues are back at it against Bashundhara Kings in their second Group D game of the 2021 at the National Stadium, in Malé, today. Come on, BFC! 🔥🔵 pic.twitter.com/35652RucRi

— Bengaluru FC (@bengalurufc)

Latest Videos

undefined

ಎಎಫ್‌ಸಿ ಕಪ್‌: ಎಟಿಕೆ ಎದುರು ಮುಗ್ಗರಿಸಿದ ಬೆಂಗಳೂರು ಎಫ್‌ಸಿ

‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಅಂತರ ವಲಯ ಸೆಮೀಸ್‌ ಪ್ಲೇ-ಆಫ್‌ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಹೀಗಾಗಿ ಬಿಎಫ್‌ಸಿ ಕೊನೆ 2 ಪಂದ್ಯಗಳಲ್ಲಿ ಗೆದ್ದು, ಎಟಿಕೆ ಒಂದು ಪಂದ್ಯದಲ್ಲಿ ಸೋತರಷ್ಟೇ ಬಿಎಫ್‌ಸಿಗೆ ಮುಂದಿನ ಹಂತಕ್ಕೇರುವ ಅವಕಾಶ ಇರಲಿದೆ.

click me!