
ಉಪ್ಪಿಟ್ಟು ಅಂದಾಕ್ಷಣ ನಮಗೆ ಮೊದಲು ನೆನಪಾಗೋದೇ ಬಾಂಬೆ ರವೆ. ಹೆಚ್ಚಾಗಿ ನಾವು ಇದೇ ರವೆಯಿಂದ ಉಪ್ಪಿಟ್ಟು ಮಾಡ್ತೀವಿ. ಆದ್ರೆ, ಈ ರವೆಗೆ 'ಬಾಂಬೆ ರವೆ' ಅನ್ನೋ ಹೆಸರು ಹೇಗೆ ಬಂತು ಅಂತ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ?
ಬೆಳಗಿನ ತಿಂಡಿಗೆ ಇಡ್ಲಿ, ದೋಸೆ ಬಿಟ್ಟರೆ ಜನ ಹೆಚ್ಚಾಗಿ ತಿನ್ನೋದು ಉಪ್ಪಿಟ್ಟು. ಇದನ್ನ ಮಾಡೋಕೆ ಜಾಸ್ತಿ ಸಮಯ ಕೂಡ ಬೇಕಾಗಲ್ಲ. ಕಡಿಮೆ ಸಮಯದಲ್ಲಿ, ಹೆಚ್ಚು ಜನರಿಗೆ ತಿಂಡಿ ಮಾಡಬೇಕು ಅಂದ್ರೆ ಎಲ್ಲರ ಮೊದಲ ಆಯ್ಕೆ ಉಪ್ಪಿಟ್ಟು. ಮನೆಯಲ್ಲಾಗಲಿ, ಹೋಟೆಲ್‌ನಲ್ಲಾಗಲಿ ಉಪ್ಪಿಟ್ಟನ್ನು ಹೆಚ್ಚಾಗಿ ಬಾಂಬೆ ರವೆಯಿಂದಲೇ ಮಾಡ್ತಾರೆ. ಆದ್ರೆ, ಉಪ್ಪಿಟ್ಟು ರವೆಗೆ 'ಬಾಂಬೆ ರವೆ' ಅಂತ ಯಾಕೆ ಕರೀತಾರೆ? ಇದರ ಹಿಂದಿನ ಕಾರಣ ಏನು? ಅಸಲಿಗೆ ಆ ಹೆಸರು ಹೇಗೆ ಬಂತು ಗೊತ್ತಾ?
ಬೆಳಗಿನ ತಿಂಡಿಗೆ ಇಡ್ಲಿ, ದೋಸೆ ಬಿಟ್ಟರೆ ಜನ ಹೆಚ್ಚಾಗಿ ತಿನ್ನೋದು ಉಪ್ಪಿಟ್ಟು. ಕಡಿಮೆ ಸಮಯದಲ್ಲಿ, ಹೆಚ್ಚು ಜನರಿಗೆ ತಿಂಡಿ ಮಾಡಬೇಕು ಅಂದ್ರೆ ಎಲ್ಲರ ಮೊದಲ ಆಯ್ಕೆ ಉಪ್ಪಿಟ್ಟು. ಆದ್ರೆ, ಉಪ್ಪಿಟ್ಟು ರವೆಗೆ 'ಬಾಂಬೆ ರವೆ' ಅಂತ ಯಾಕೆ ಕರೀತಾರೆ? ಬ್ರಿಟಿಷರ ಕಾಲದಲ್ಲಿ ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಮುಂಬೈ ಕೂಡ ಒಂದಾಗಿತ್ತು. ಆ ಸಮಯದಲ್ಲಿ ಮಹಾರಾಷ್ಟ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಗೋಧಿಯನ್ನು ಸಂಸ್ಕರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳು ಮುಂಬೈ (ಆಗಿನ ಬಾಂಬೆ)ನಲ್ಲಿ ಇದ್ದವು. ಅಲ್ಲಿನ ಗಿರಣಿಗಳಲ್ಲಿ ಗೋಧಿ ಅಥವಾ ಮೈದಾವನ್ನು ಸಂಸ್ಕರಿಸುವಾಗ ಸಿಗುವ ಸಣ್ಣ ರವೆಯೇ ಇದು. ಬಾಂಬೆಯ ದೊಡ್ಡ ಗಿರಣಿಗಳಿಂದ ಈ ರವೆಯನ್ನು ದೇಶದ ಇತರ ಭಾಗಗಳಿಗೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತಕ್ಕೆ ಹೆಚ್ಚಾಗಿ ರಫ್ತು ಮಾಡಲಾಗುತ್ತಿತ್ತು.
ಆ ಕಾಲದಲ್ಲಿ ಸಗಟು ವ್ಯಾಪಾರಿಗಳು ಬಾಂಬೆಯಿಂದ ಬರುವ ಈ ವಿಶೇಷ ರವೆಯ ಚೀಲಗಳ ಮೇಲೆ "Bombay Rava" ಅಂತ ಮುದ್ರಿಸಿ ಕಳುಹಿಸುತ್ತಿದ್ದರು. ಕಾಲಕ್ರಮೇಣ, ಬೆಳ್ಳಗಿರುವ ಈ ಗುಣಮಟ್ಟದ ಸಣ್ಣ ರವೆಯನ್ನು ಜನ 'ಬಾಂಬೆ ರವೆ' ಅಂತಲೇ ಕರೆಯೋಕೆ ಶುರುಮಾಡಿದರು.
ಗೋಧಿ ಅಥವಾ ಮೈದಾ ಹಿಟ್ಟನ್ನು ತಯಾರಿಸುವಾಗ, ಗಿರಣಿಗಳಲ್ಲಿ ಕಾಳುಗಳನ್ನು ರುಬ್ಬಿದಾಗ ಹಿಟ್ಟಿನಿಂದ ಸ್ವಲ್ಪ ಒರಟಾದ ಸಣ್ಣ ಕಣಗಳು ಬೇರೆಯಾಗುತ್ತವೆ. ಇವುಗಳನ್ನು ವಿಶೇಷವಾದ ಜರಡಿಗಳ ಮೂಲಕ ಪ್ರತ್ಯೇಕ ಮಾಡ್ತಾರೆ. ಇದೇ ನಮಗೆ ಮಾರುಕಟ್ಟೆಯಲ್ಲಿ ಉಪ್ಪಿಟ್ಟು ರವೆಯಾಗಿ ಸಿಗುತ್ತದೆ.
ಈ ಎರಡೂ ರವೆಗಳನ್ನು ಗೋಧಿಯಿಂದಲೇ ತಯಾರಿಸ್ತಾರೆ. ಆದ್ರೆ, ಗೋಧಿ ರವೆಗೆ ಹೋಲಿಸಿದರೆ ಬಾಂಬೆ ರವೆ ತುಂಬಾ ಮೃದುವಾಗಿ ಮತ್ತು ಸಣ್ಣದಾಗಿ ಇರುತ್ತೆ. ಇದು ಬೇಗ ಬೇಯುತ್ತದೆ. ಹಾಗಾಗಿ, ಉಪ್ಪಿಟ್ಟು, ರವೆ ದೋಸೆ, ರವೆ ಇಡ್ಲಿಯಂತಹ ತಿನಿಸುಗಳನ್ನು ಮಾಡಲು ಇದು ಹೇಳಿಮಾಡಿದಂತಿದೆ. ಗೋಧಿಯನ್ನು ಕುಟ್ಟಿ, ಗಿರಣಿಯಲ್ಲಿ ರುಬ್ಬಿ ಗೋಧಿ ರವೆಯನ್ನು ತಯಾರಿಸ್ತಾರೆ. ಅದಕ್ಕಾಗಿಯೇ ಗೋಧಿ ರವೆ ಸ್ವಲ್ಪ ದಪ್ಪಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.