ಬೆಳಗಿನ ಗಡಿಬಿಡಿಯಲ್ಲಿ 10 ನಿಮಿಷದಲ್ಲಿ ರುಚಿಕರ ರೊಟ್ಟಿ; ರವೆ-ಗೋಧಿಹಿಟ್ಟಿನ ರೊಟ್ಟಿ ಹೀಗೆ ಮಾಡಿ

Published : Sep 30, 2026, 12:40 PM IST
rava wheat flour rotti recipe

ಸಾರಾಂಶ

ಬೆಳಗ್ಗೆ ಎದ್ದು ತಿಂಡಿ ಏನು ಮಾಡುವುದು ಎಂಬ ಚಿಂತೆ ಸಾಮಾನ್ಯ. ಅದರಲ್ಲೂ ಕೆಲಸಕ್ಕೆ, ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳದ ರೆಸಿಪಿ ಬೇಕೆನಿಸುತ್ತದೆ. ಅಂತಹ ಸಂದರ್ಭದಲ್ಲಿ ರವೆ-ಗೋಧಿಹಿಟ್ಟಿನ ರೊಟ್ಟಿ ಉತ್ತಮ ಆಯ್ಕೆಯಾಗಬಹುದು.

ಬೆಳಗ್ಗೆ ಎದ್ದು ತಿಂಡಿ ಏನು ಮಾಡುವುದು ಎಂಬ ಚಿಂತೆ ಸಾಮಾನ್ಯ. ಅದರಲ್ಲೂ ಕೆಲಸಕ್ಕೆ, ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳದ ರೆಸಿಪಿ ಬೇಕೆನಿಸುತ್ತದೆ. ಅಂತಹ ಸಂದರ್ಭದಲ್ಲಿ ರವೆ-ಗೋಧಿಹಿಟ್ಟಿನ ರೊಟ್ಟಿ ಉತ್ತಮ ಆಯ್ಕೆಯಾಗಬಹುದು. ಮನೆಯಲ್ಲೇ ಸುಲಭವಾಗಿ ಸಿಗುವ ಸಾಮಗ್ರಿಗಳಿಂದ ಈ ರೊಟ್ಟಿಯನ್ನು ತಯಾರಿಸಬಹುದು. ಮೊಸರು, ರವೆ ಮತ್ತು ಗೋಧಿಹಿಟ್ಟಿನೊಂದಿಗೆ ಈ ರೊಟ್ಟಿ ರುಚಿಯಾಗಿರುವುದರ ಜೊತೆಗೆ ಹೊಟ್ಟೆ ತುಂಬುವ ತಿಂಡಿಯೂ ಹೌದು.

ಬೇಕಾಗುವ ಸಾಮಗ್ರಿಗಳು

ರವೆ – 1 ಕಪ್

ಗೋಧಿ ಹಿಟ್ಟು – 1 ಕಪ್

ಈರುಳ್ಳಿ – 1/2 ಕಪ್

ಹಸಿಮೆಣಸು – 1 ಟೇಬಲ್ ಸ್ಪೂನ್

ಸಣ್ಣಗೆ ಹೆಚ್ಚಿದ ಶುಂಠಿ – 1 ಟೀ ಸ್ಪೂನ್

ಕೊತ್ತಂಬರಿ ಸೊಪ್ಪು – ಸ್ವಲ್ಪ

ಅರಿಶಿನ ಪುಡಿ – 1/4 ಟೀ ಸ್ಪೂನ್

ಕೆಂಪು ಮೆಣಸಿನ ಪುಡಿ – 1/2 ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಮೊಸರು – 1/2 ಕಪ್

ನೀರು – ಬೇಕಾಗುವಷ್ಟು

ತುಪ್ಪ ಅಥವಾ ಎಣ್ಣೆ – ರೊಟ್ಟಿ ಬೇಯಿಸಲು

ರವೆ-ಗೋಧಿಹಿಟ್ಟಿನ ರೊಟ್ಟಿ ಮಾಡುವ ವಿಧಾನ

ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ರವೆ ಮತ್ತು ಗೋಧಿಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ನಂತರ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಅರ್ಧ ಕಪ್ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕುತ್ತಾ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿಯಾಗದಂತೆ ನೋಡಿಕೊಳ್ಳಿ. ಈಗ ತವಾ ಬಿಸಿ ಮಾಡಿ. ಹಿಟ್ಟನ್ನು ತೆಗೆದುಕೊಂಡು ತವಾದ ಮೇಲೆ ರೊಟ್ಟಿಯ ಆಕಾರದಲ್ಲಿ ಕೈಯಿಂದ ಅಥವಾ ಅಗತ್ಯವಿರುವ ರೀತಿಯಲ್ಲಿ ಹರಡಿ. ರೊಟ್ಟಿ ಸ್ವಲ್ಪ ದಪ್ಪವಾಗಿರುವಂತೆ ನೋಡಿಕೊಳ್ಳಬಹುದು.

ರೊಟ್ಟಿಯ ಮೇಲೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಎರಡೂ ಬದಿಗಳು ಹೊಂಬಣ್ಣಕ್ಕೆ ತಿರುಗಿ ಚೆನ್ನಾಗಿ ಬೇಯಿಸಿದ ಬಳಿಕ ತವಾದಿಂದ ತೆಗೆದುಕೊಳ್ಳಿ. ಹೀಗೆ ರುಚಿಕರವಾದ ರವೆ-ಗೋಧಿಹಿಟ್ಟಿನ ರೊಟ್ಟಿ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ, ತರಕಾರಿ ಪಲ್ಯ ಅಥವಾ ಮೊಸರಿನೊಂದಿಗೆ ಬಡಿಸಬಹುದು.

ಬೆಳಗಿನ ತಿಂಡಿಗೆ ಸೂಪರ್ ಆಯ್ಕೆ

ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ರೊಟ್ಟಿ ಬೆಳಗಿನ ಗಡಿಬಿಡಿಯ ಸಮಯದಲ್ಲಿ ಕೈಹಿಡಿಯುವ ರೆಸಿಪಿಯಾಗಿದೆ. ರವೆ ಮತ್ತು ಗೋಧಿಹಿಟ್ಟಿನ ಸಂಯೋಜನೆಯೊಂದಿಗೆ ತಯಾರಿಸುವ ಈ ರೊಟ್ಟಿಯನ್ನು ಒಮ್ಮೆ ಮನೆಯಲ್ಲೇ ಮಾಡಿ ಸವಿಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಾಟ್ ಬಾಕ್ಸ್‌ನಲ್ಲಿಟ್ಟ ಕೆಳಗಿನ ಚಪಾತಿ, ರೊಟ್ಟಿ ಒದ್ದೆಯಾಗಿ ಮುದ್ದೆಯಂತೆ ಆಗ್ತಿದ್ಯಾ? ಇಲ್ಲಿದೆ ಬಟ್ಟಲಿನ ಟ್ರಿಕ್
ಸಸ್ಯಹಾರಿಗಳು 'ವಿಟಮಿನ್‌ ಬಿ12'ಗಾಗಿ ಮಶ್ರೂಮ್ ಸೇವಿಸಬಹುದೇ? ಸುಲಭಕ್ಕೆ ಸಿಗದ ಸೀಕ್ರೆಟ್ ಮಾಹಿತಿ ಇಲ್ಲಿದೆ ನೋಡಿ!