ಬಟರ್ ಚಿಕನ್ ಐಸ್‌ಕ್ರೀಂಗೆ ದಂಗಾದ ಜನ, ರೆಸಿಪಿ ಹಂಚಿಕೊಂಡ ಯುವತಿಗೆ ನೆಟ್ಟಿಗರ ಪ್ರಶ್ನೆ

Published : Mar 08, 2026, 05:12 PM IST
Butter chicken ice cream

ಸಾರಾಂಶ

ಬಟರ್ ಚಿಕನ್ ಐಸ್‌ಕ್ರೀಂಗೆ ದಂಗಾದ ಜನ, ರೆಸಿಪಿ ಹಂಚಿಕೊಂಡ ಯುವತಿಗೆ ನೆಟ್ಟಿಗರ ಪ್ರಶ್ನೆ, ಸ್ಟ್ರಾಬೆರೆ, ಮ್ಯಾಂಗೋ ಸೇರಿದಂತೆ ಹಲವು ಹಣ್ಣುಗಳ ಐಸ್‌ಕ್ರೀಂ ಸವಿದಿರುತ್ತೀರಿ? ಆದರೆ ಎಂದಾದರೂ ಬಟರ್ ಚಿಕನ್ ಐಸ್‌ಕ್ರೀಂ ತಿನ್ನೋದು ಬಿಡಿ ಕೇಳಿದ್ದೀರಾ? 

ಬೇರೆ ಬೇರೆ ಪ್ರದೇಶಗಳ ಆಹಾರ ಖಾದ್ಯಗಳನ್ನು ಸವಿಯುವುದು, ರುಚಿ ಮಾಡುವುದು ಹೊಸದೇನಲ್ಲ. ಯೂಟ್ಯೂಬ್ ವಿಡಿಯೋ ನೋಡಿ ಹಲವರು ಮನೆಯಲ್ಲಿ ವಿಶೇಷ ಖಾದ್ಯಗಳನ್ನು ಪ್ರಯತ್ನಿಸುತ್ತಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನೋ ರೂಲ್ ಕುಕ್ ಭಾರಿ ಜನಪ್ರಿಯತೆ ಪಡೆದಿದೆ. ಅಸಾಧ್ಯವನ್ನು ಸಾಧ್ಯವಾಗಿಸುವುದು, ಊಹೆಗೂ ನಿಲುಕದ ವಸ್ತುಗಳ ಖಾದ್ಯ ತಯಾರಿಸುವುದೇ ಈ ನೋ ರೂಲ್ ಕುಕ್. ಇದೀಗ ಯುವತಿಯೊಬ್ಬಳು ಯಾರೂ ಊಹೆ ಮಾಡಿಕೊಳ್ಳದ ರೆಸೆಪಿ ಪ್ರಯತ್ನಿಸದ್ದಾಳೆ. ಇದು ಬಟರ್ ಚಿಕನ್ ಐಸ್‌ಕ್ರೀಂ.

ಬಟರ್ ಚಿಕನ್ ಐಸ್‌ಕ್ರೀಂ ಹೇಗಿದೆ?

ಜ್ಯೂಲಿಯೆಟ್ ಮೊರೆನೊ ಈ ಬಟರ್ ಚಿಕನ್ ಐಸ್‌ಕ್ರೀಂ ಮಾಡಿದ್ದಾಳೆ. ಕೆಂಟೆಟ್ ಕ್ರಿಯೇಟರ್ ಜ್ಯೂಲಿಯೆಟ್ ತನ್ನ ಬಯೋದಲ್ಲಿ ಯಾವುದೇ ರೂಲ್ಸ್ ಇಲ್ಲದ ಕುಕಿಂಗ್ ಎಂದು ಬರೆದುಕೊಂಡಿದ್ದಾಳೆ. ಇದರ ರೆಸಿಪಿ ಕೇಳಿದರೂ ಹಲವರಿಗೆ ವಾಕರಿಕೆ ಬರವು ಸಾಧ್ಯತೆ ಇದೆ. ಆದರೆ ಜ್ಯೂಲಿಯೆಟ್ ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾಳೆ. ಇತ್ತ ಬಟರ್ ಚಿಕನ್ ಐಸ್‌ಕ್ರೀಂ ಕಲರ್ ಆಕರ್ಷಕವಾಗಿದೆ. ಆದರೆ ಟೇಸ್ಟ್ ಹೇಗಿದೆ ತಿಳಿದುಕೊಳ್ಳಲು ಈ ರೆಸೆಪಿ ಟ್ರೈ ಮಾಡಿ ನೋಡಿ.

ಬಟರ್ ಚಿಕಿನ್ ಐಸ್‌ಕ್ರೀಂ ರೆಸೆಪಿ

ಜ್ಯೂಲಿಯೆಟ್ ತಾನು ಮಾಡಿದ ಬಟರ್ ಚಿಕನ್ ರೆಸೆಪಿಯನ್ನು ವಿಡಿಯೋ ಮೂಲಕ ತೋರಿಸಿದ್ದಾಳೆ. ಇದರಲ್ಲಿ ಬಟರ್ ಚಿಕನ್ ತೆಗೆದುಕೊಂಡು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಬೇಕು. ಇದಕ್ಕೆ ಮಿಲ್ಕ್ ಮೇಡ್ ಹಾಕಬೇಕು, ಜೊತೆಗೆ ತುಸು ಹೆಚ್ಚು ಕ್ರೀಮ್ ಕೂಡ ಸೇರಿಸಬೇಕು. ಬೇಕಿದ್ದರೆ ಸಕ್ಕರೆ ಕೂಡ ಸೇರಿಸಿಕೊಳ್ಳಬೇಕು. ಇವೆಲ್ಲವನ್ನು ಮಿಕ್ಸಿ ಜಾರ್‌ನಲ್ಲಿ ನುಣ್ಣಗೆ ರುಬ್ಬಬೇಕು. ಇಲ್ಲಿಗೆ ಒಂದು ಹಂತ ಅಂತ್ಯ. ಇನ್ನು ರುಬ್ಬಿದ ಪೇಸ್ಟ್‌ನ್ನು ಫ್ರೀಜರ್‌ನಲ್ಲಿ ಇಡಬೇಕು. ಬಳಿಕ ಮತ್ತೆ ಮಿಕ್ಸರ್ ಮಾಡಬೇಕು. ಬಳಿಕ ರಾತ್ರಿಯಿಡಿ ಫ್ರೀಜರ್‌ನಲ್ಲಿ ಇಟ್ಟರೆ ಬೆಳಗ್ಗೆ ಬಟರ್ ಚಿಕಿನ್ ಐಸ್‌ಕ್ರೀಂ ರೆಡಿ.

ಜ್ಯೂಲಿಯೆಟ್ ಇದನ್ನು ಅತ್ಯಂತ ಡೆಲಿಶಿಯಸ್ ಐಸ್‌ಕ್ರೀಂ ಎಂದು ಬಣ್ಣಿಸಿದ್ದಾಳೆ. ನನ್ನ ಫೇವರಿಟ್ ಐಸ್‌ಕ್ರೀಂ ಎಂದು ರ್ಯಾಂಕ್ ಬೇರೆ ನೀಡಿದ್ದಾಳೆ. ಐಸ್‌ಕ್ರೀಂ ನೋಡಲು ಆಕರ್ಷಕವಾಗಿದೆ. ತಿನ್ನುವಾದ ಸ್ವಾದಬರಿತವಾಗಿದೆ ಎಂದು ಹೇಳಿದ್ದಾಳೆ. ಆದರೆ ಇದರ ರೆಸಿಪಿ ನೋಡಿದ ಹಲವರು ಹತ್ತಿರ ಕೂಡ ಸುಳಿಯುವ ಸಾಧ್ಯತೆ ಇಲ್ಲ.

ಈಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಈ ಬಟರ್ ಚಿಕನ್ ಐಸ್‌ಕ್ರೀಂ ಕೇಳಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ರೂಲ್ಸ್ ಇಲ್ಲದೆ ಅಡುಗೆ ಮಾಡುವುದು ತಪ್ಪಲ್ಲ. ಆದರೆ ನೋಡುವಾಗಲೇ ವಾಂತಿ ಬರುವಂತೆ ಮಾಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇದು ಹೋಟೆಲ್ ಸ್ಟೈಲ್ ಬಿಳಿ ಕೊಬ್ಬರಿ ಚಟ್ನಿ.. ಈ ಒಂದು ಸೀಕ್ರೆಟ್ ಪದಾರ್ಥ ಬೆರೆಸಿದ್ರೆ ರುಚಿ ಅದ್ಭುತ!
Eggless Omelette: ಮೊಟ್ಟೆ ಇಲ್ಲದೆಯೂ ಮಾಡಿ ರುಚಿಕರ ಆಮ್ಲೆಟ್, ಬೇಕಾಗಿದ್ದು ಕೇವಲ 2 ಪದಾರ್ಥಗಳು!