ಶಿಲ್ಪಾ ಶೆಟ್ಟಿಯ ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಫುಡ್ ಸೇರಿ ಎಲ್ಲವೂ ಕನ್ನಡ ಮಯ

Published : Feb 26, 2026, 01:16 PM IST
Kananda Food in Shilpa shetty Resturant mumbai

ಸಾರಾಂಶ

ಶಿಲ್ಪಾ ಶೆಟ್ಟಿಯ ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಫುಡ್ ಸೇರಿ ಎಲ್ಲವೂ ಕನ್ನಡ ಮಯ, ಕರ್ನಾಟಕದ ಪ್ರಸಿದ್ಧ ಬೆಣ್ಣೆ ದೋಸೆ, ಮಸಾಲೆ ದೋಸೆ, ಕರಾವಳಿಯ ವಿಷೇಷ ಖಾದ್ಯಗಳು ಅದೆ ಕನ್ನಡ ಹೆಸರಿನಲ್ಲೇ ಇದೆ. ಜೊತೆಗೆ ಕರ್ನಾಟಕ ಭೂಪಟವೂ ಇದೆ. 

ಮುಂಬೈ (ಫೆ.26) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಹೊಟೆಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಶಿಲ್ಪಾ ಶೆಟ್ಟಿ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮುಂಬೈನ ಬಾಂದ್ರಾದಲ್ಲಿ ಅಮ್ಮಾ ಕೈ ರೆಸ್ಟೋರೆಂಟ್ ಆರಂಭಿಸಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಇದೇ ರೆಸ್ಟೋರೆಂಟ್‌ನಲ್ಲಿ ಫ್ರೀ ಬ್ರೇಕ್‌ಫಾಸ್ಟ್ ಭಾರಿ ವಿವಾದಕ್ಕೂ ಕಾರಣವಾಗಿತ್ತು. ಉಚಿತ ಬ್ರೇಕ್‌ಫಾಸ್ಟ್‌ಗಾಗಿ ಭಾರಿ ಕ್ಯೂ, ಜನದಟ್ಟಣೆ ನಿರ್ಮಾಣವಾಗಿತ್ತು. ಅಷ್ಟೇ ವೇಗದಲ್ಲಿ ಅಮ್ಮಾ ಕೈ ರೆಸ್ಟೋರೆಂಟ್ ಭಾರಿ ಜನಪ್ರಿಯತೆ ಪಡೆದಿದೆ. ಈ ರೆಸ್ಟೋರೆಂಟ್‌ ವಿಶೇಷವಾಗಿ ಸೌತ್ ಇಂಡಿಯನ್ ಫುಡ್ ಎಂದಿದ್ದರೂ ಇದು ಪ್ರಮುಖವಾಗಿ ಕರ್ನಾಟಕ ಆಹಾರದ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿ ಕರ್ನಾಟಕದ ವಿಶೇಷ ಮಸಾಲದೋಸೆ, ಬೆಣ್ಣೆ ದೋಸೆ, ಕರಾವಳಿಯ ಕೊಟ್ಟೆ ಕಡಬು, ಕೋರಿ ರೊಟ್ಟಿ ಸೇರಿದಂತೆ ಹಲವು ಖಾದ್ಯಗಳು ಅದೇ ಸ್ವಾದ ಹಾಗೂ ರುಚಿಯಲ್ಲಿ ಲಭ್ಯವಿದೆ.

ಶಿಲ್ಲಾ ಶೆಟ್ಟಿ ಮುಂಬೈ ರೆಸ್ಟೋರೆಂಟ್‌ನಲ್ಲಿ ಕನ್ನಡದ ಕಂಪು

ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಕನ್ನಡದ ಕಂಪು ಕಾಣುತ್ತಿದೆ. ಅಮ್ಮಾ ಕೈ ರೆಸ್ಟೋರೆಂಟ್ ಫುಡ್ ಮೆನುವಿನಲ್ಲಿ ಕರ್ನಾಟ ಭೂಪಟ ಹಾಗೂ ಇಲ್ಲಿನ ವಿಶೇಷ ಖಾದ್ಯಗಳನ್ನು ಅದೇ ಹೆಸರಿನಲ್ಲಿ ನೀಡಲಾಗಿದೆ. ಕರ್ನಾಟಕದ ಬಹುತೇಕ ಭಾಗದ ಎಲ್ಲಾ ವಿಶೇಷ ಖಾದ್ಯಗಳು ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಲಭ್ಯವಿದೆ.

ಕರ್ನಾಟಕ ಪ್ರತಿ ಭಾಗದ ವಿಶೇಷ ಖಾದ್ಯಗಳು ಈ ರೆಸ್ಟೋರೆಂಟ್‌ನಲ್ಲಿ ಲಭ್ಯವಿದೆ. ಮೆಣಸಿನಕಾಯಿ ಬಜ್ಜಿ, ಪುಳಿಯೋಗರೆ, ಚಿಕನ್ ಬೆಂಗಳೂರು ಕಬಾಬ್, ಪನ್ನೀರ್ ಟೋಮೋಟೋ ಗೊಜ್ಜು, ಮೈಸೂರು ಮಸಾಲ ಬೇಬೆ ಪೋಟೆಟೋ, ಮೈಸೂರು ಮಸಾಲಾ ಎಗ್ ಬುರ್ಜಿ, ಕೂರ್ಗ್ ಪಂದಿ ಕರಿ, ಕೂರ್ಕ್ ಚಿಕನ್ ಸಾಸೆಜ್ ನಾನ್ ರೋಲ್, ಕರಾವಳಿಯ ಅಂಜಲ್ ಫ್ರೈ, ಬೆಳಗಾವಿ ಚಿಕನ್ ಕರಿ,ಕರಾವಳಿಯ ಮಂಗಳೂರು ಫಿಶ್ ಕರಿ, ಕೋರಿ ಗಸಿ, ಕೋರಿ ಪುಳಿಮುಂಚಿ ಸೇರಿದಂತೆ ಕರ್ನಾಟಕ ಪ್ರತಿ ಜಿಲ್ಲೆಯ ವಿಶೇಷ ಖಾದ್ಯಗಳು ಅದೇ ಹೆಸರಿನಲ್ಲಿ ಲಭ್ಯವಿದೆ.

ಇದೀಗ ಶಿಲ್ಪ ಶೆಟ್ಟಿಯ ಈ ಅಮ್ಮಾ ಕೈ ರೆಸ್ಟೋರೆಂಟ್ ಮುಂಬೈನಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಕರ್ನಾಟಕದ ಅತ್ಯುತ್ತಮ ಖಾದ್ಯಗಳು ಇಲ್ಲಿ ಲಭ್ಯವಿದೆ. ಇದೇ ಕಾರಣದಿಂದ ಶಿಲ್ಪಾ ಶೆಟ್ಟಿಯ ರೆಸ್ಟೋರೆಂಟ್ ಇದೀಗ ಮುಂಬೈನಲ್ಲಿ ಅತೀ ಹೆಚ್ಚು ಮಂದಿ ಪ್ರತಿ ದಿನ ಆಹಾರ ಸವಿಯುವ ಕೇಂದ್ರವಾಗಿ ಹೊರಹೊಮ್ಮಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಡೆಕಾಯಿ ಹೆಚ್ಚುವಾಗ ಕೈ ಜಿಗುಟಾಗದಂತೆ ತಡೆಯಲು ಈ ಎಣ್ಣೆ ಬಳಸಿ!
ಮಲೆನಾಡಿನ ಮಳೆ, ಮಣ್ಣಿನ ಘಮ ಹೊತ್ತ ಆ ಮುಳ್ಳು ಮುಳ್ಳಿನ 'ಮಡಹಾಗಲಕಾಯಿ' ಎಂಬ ಅದ್ಭುತ; ಚಟ್ನಿ ಹೀಗೆ ಮಾಡಿ!