
Egg Dosa Recipe: ಬೆಳಗಿನ ಉಪಹಾರಕ್ಕೆ ಪ್ರತಿದಿನ ಒಂದೇ ರೀತಿಯ ದೋಸೆ, ಇಡ್ಲಿ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ರುಚಿಕರ ಎಗ್ ದೋಸೆ ಟ್ರೈ ಮಾಡಿ. ಸರಳ ಪದಾರ್ಥಗಳಿಂದ ತಯಾರಿಸಬಹುದಾದ ಈ ಎಗ್ ದೋಸೆ ಹೊರಗೆ ಕ್ರಿಸ್ಪಿಯಾಗಿದ್ದು, ಒಳಗೆ ಮೃದುವಾದ ಮೊಟ್ಟೆಯ ಲೇಯರ್‌ನಿಂದ ಸಖತ್ ರುಚಿಯಾಗಿರುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿ ಬಿಸಿಯಾಗಿ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.
ಎಗ್ ದೋಸೆಗೆ ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು – 1 ಕಪ್
ಗೋಧಿ ಹಿಟ್ಟು – ½ ಕಪ್
ಮೊಟ್ಟೆ – 2
ಈರುಳ್ಳಿ – ½ ಕಪ್, ಸಣ್ಣಗೆ ಹೆಚ್ಚಿದ್ದು
ಹಸಿಮೆಣಸಿನಕಾಯಿ – 2, ಸಣ್ಣಗೆ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು – 2 ಟೇಬಲ್‌ಸ್ಪೂನ್
ಕಾಳು ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ತುಪ್ಪ – ಅಗತ್ಯಕ್ಕೆ ತಕ್ಕಷ್ಟು
ಎಗ್ ದೋಸೆ ಮಾಡುವ ವಿಧಾನ
ಹಂತ 1: ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಉಪ್ಪು ಸೇರಿಸಿ ನೀರು ಹಾಕುತ್ತಾ ಮೃದುವಾದ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ.
ಹಂತ 2: ಮತ್ತೊಂದು ಬಟ್ಟಲಿನಲ್ಲಿ 2 ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಬಡಿದುಕೊಳ್ಳಿ.
ಹಂತ 3: ಮೊಟ್ಟೆಯ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಕಾಳು ಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 4: ಈಗ ದೋಸೆ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ. ತಯಾರಿಸಿಟ್ಟ ದೋಸೆ ಹಿಟ್ಟನ್ನು ಹಾಕಿ ತೆಳುವಾಗಿ ಹರಡಿಕೊಳ್ಳಿ.
ಹಂತ 5: ದೋಸೆಯ ಮೇಲೆ ಮೊಟ್ಟೆಯ ಮಿಶ್ರಣವನ್ನು ಸಮವಾಗಿ ಹರಡಿ. ಬೇಕಿದ್ದರೆ ಮೇಲೆ ಸ್ವಲ್ಪ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಬಹುದು.
ಹಂತ 6: ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮೊಟ್ಟೆ ಚೆನ್ನಾಗಿ ಸೆಟ್ ಆಗುವವರೆಗೆ ಕಾಯಿರಿ.
ಹಂತ 7: ನಂತರ ದೋಸೆಯನ್ನು ನಿಧಾನವಾಗಿ ಒಂದು ಬದಿಯಿಂದ ಮಡಚಿ, ಸ್ವಲ್ಪ ತುಪ್ಪ ಹಾಕಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
ಹಂತ 8: ದೋಸೆ ಗೋಲ್ಡನ್ ಬ್ರೌನ್ ಆಗಿ ಕ್ರಿಸ್ಪಿಯಾದ ಬಳಿಕ ತಟ್ಟೆಗೆ ತೆಗೆದುಕೊಳ್ಳಿ. ಹಂತ 9: ಬಿಸಿಬಿಸಿಯಾದ ಎಗ್ ದೋಸೆಯನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.
ರುಚಿ ಹೆಚ್ಚಿಸಲು ಈ ಟಿಪ್ಸ್ ಪಾಲಿಸಿ
ಎಗ್ ದೋಸೆಯನ್ನು ಮಧ್ಯಮ ಉರಿಯಲ್ಲಿ ನಿಧಾನವಾಗಿ ಬೇಯಿಸಿದರೆ ಹೊರಭಾಗ ಕ್ರಿಸ್ಪಿಯಾಗಿ, ಒಳಗೆ ಮೃದುವಾದ ಮೊಟ್ಟೆಯ ಲೇಯರ್ ಸಿಗುತ್ತದೆ. ಕೊನೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬೇಯಿಸುವುದರಿಂದ ದೋಸೆಯ ರುಚಿ ಮತ್ತು ಸುವಾಸನೆ ಮತ್ತಷ್ಟು ಹೆಚ್ಚುತ್ತದೆ.
ಸರಳ ಪದಾರ್ಥಗಳಿಂದ ತಯಾರಾಗುವ ಈ ಎಗ್ ದೋಸೆ ಬಳಗಿನ ಉಪಹಾರ ಮಾತ್ರವಲ್ಲದೆ, ಸಂಜೆ ಲಘು ಆಹಾರವಾಗಿಯೂ ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.