
ಚಿಕನ್ ಮತ್ತು ಮಟನ್ ಎರಡೂ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಯಾವ ವಯಸ್ಸಿನವರು ಏನನ್ನು ತಿಂದರೆ ಒಳಿತು? ಸಣ್ಣ ಮಕ್ಕಳಿಗೆ ಚಿಕನ್ ಅಥವಾ ಮಟನ್, ಇವೆರಡರಲ್ಲಿ ಯಾವುದನ್ನು ಕೊಡುವುದು ಬೆಸ್ಟ್ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ
ನಾನ್-ವೆಜ್ ಅಂದರೆ ಇಷ್ಟಪಡದವರು ಬಹಳ ಕಡಿಮೆ. ನಾನ್-ವೆಜ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದೇ ಚಿಕನ್ ಮತ್ತು ಮಟನ್. ರುಚಿಯ ವಿಚಾರದಲ್ಲಿ ಇವೆರಡೂ ಯಾವಾಗಲೂ ಟಾಪ್. ಇವೆರಡರಲ್ಲೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಆದರೆ, ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು? ಮುಖ್ಯವಾಗಿ ಯಾವ ವಯಸ್ಸಿನವರು ಏನನ್ನು ತಿಂದರೆ ಬೆಸ್ಟ್?
ಮಕ್ಕಳ ಮೆದುಳು ಚುರುಕಾಗಿ ಕೆಲಸ ಮಾಡಲು, ಮೂಳೆಗಳು ಮತ್ತು ಸ್ನಾಯುಗಳ ಬಲವಾದ ಬೆಳವಣಿಗೆಗೆ ಪ್ರೋಟೀನ್ ತುಂಬಾ ಅವಶ್ಯಕ. ಚಿಕನ್‌ನಲ್ಲಿ ಈ ಪ್ರೋಟೀನ್ ಹೇರಳವಾಗಿರುತ್ತದೆ. ಅಷ್ಟೇ ಅಲ್ಲ, ಮಟನ್‌ಗೆ ಹೋಲಿಸಿದರೆ ಚಿಕನ್ ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಮುಖ್ಯವಾಗಿ ಲೀನ್ ಪ್ರೋಟೀನ್ ಇರುವ ಚಿಕನ್ ಬ್ರೆಸ್ಟ್ ಅಥವಾ ಮನೆಯಲ್ಲೇ ಮಾಡಿದ ಚಿಕನ್ ಸೂಪ್ ಕೊಟ್ಟರೆ ಅವರಿಗೆ ಬೇಗ ಶಕ್ತಿ ಸಿಗುತ್ತದೆ. ಮಟನ್ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಸಣ್ಣ ಮಕ್ಕಳಿಗೆ ಮಟನ್ ಅನ್ನು ಮಿತವಾಗಿ, ಮೆತ್ತಗೆ ಬೇಯಿಸಿ ಕೊಡುವುದು ಒಳ್ಳೆಯದು.
ಫಿಟ್ನೆಸ್ ಬಯಸುವವರು, ಜಿಮ್‌ಗೆ ಹೋಗುವವರು ಮತ್ತು ಮಸಲ್ಸ್ ಬೆಳೆಸಿಕೊಳ್ಳಲು ಇಷ್ಟಪಡುವವರು ಹೆಚ್ಚಾಗಿ ಚಿಕನ್ ಅನ್ನು ತಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳುತ್ತಾರೆ. ಚಿಕನ್‌ನಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ಪ್ರೋಟೀನ್ ಹೆಚ್ಚಾಗಿರುತ್ತದೆ. ಇದರಿಂದ ತೂಕ ಹೆಚ್ಚಾಗುವ ಭಯ ಇರುವುದಿಲ್ಲ. ಆದರೆ, ದೇಹದಲ್ಲಿ ರಕ್ತದ ಕೊರತೆ ಅಥವಾ ಐರನ್ ಕೊರತೆ ಇರುವವರು ಮಟನ್ ತಿನ್ನುವುದು ಒಳ್ಳೆಯದು. ಇದರಿಂದ ಐರನ್, ಜಿಂಕ್, ವಿಟಮಿನ್ ಬಿ12 ಕೊರತೆ ಕಡಿಮೆಯಾಗುತ್ತದೆ. ಆದರೂ ಮಟನ್ ಅನ್ನು ಮಿತವಾಗಿ ತಿನ್ನುವುದೇ ಬೆಸ್ಟ್.
3. ವಯಸ್ಸಾದವರು ಏನನ್ನು ತಿನ್ನಬೇಕು?
ವಯಸ್ಸಾದಂತೆ ಜೀರ್ಣಶಕ್ತಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಾಗಾಗಿ ಈ ಹಂತದಲ್ಲಿ ಹಗುರವಾದ ಆಹಾರ ಸೇವಿಸುವುದು ಬಹಳ ಮುಖ್ಯ. ವಯಸ್ಸಾದವರಿಗೆ ಚಿಕನ್ ಸುಲಭವಾಗಿ ಜೀರ್ಣವಾಗುವುದರಿಂದ ಇದು ಉತ್ತಮ ಆಯ್ಕೆ. ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆ, ಹೈ ಬಿಪಿ ಅಥವಾ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮಟನ್ ಸಹವಾಸಕ್ಕೆ ಹೋಗದಿರುವುದೇ ಒಳಿತು. ಒಂದು ವೇಳೆ ಮಟನ್ ತಿನ್ನಲೇಬೇಕು ಅನ್ನಿಸಿದರೆ, ಕಡಿಮೆ ಎಣ್ಣೆ ಹಾಕಿ ಬೇಯಿಸಿದ ಸೂಪ್ ರೂಪದಲ್ಲಿ ಅಥವಾ ಅಪರೂಪಕ್ಕೊಮ್ಮೆ ತಿನ್ನುವುದು ಆರೋಗ್ಯಕ್ಕೆ ಸೇಫ್.
ನೆನಪಿಡಿ: “ಚಿಕನ್ ತಿಂದರೆ ತೂಕ ಹೆಚ್ಚಾಗುವುದಿಲ್ಲ” ಅಥವಾ “ಹೃದಯ/ಬಿಪಿ/ಕೊಲೆಸ್ಟ್ರಾಲ್ ಇರುವವರು ಮಟನ್ ಸಂಪೂರ್ಣ ತಪ್ಪಿಸಬೇಕು” ಎಂಬುದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. ಮಾಂಸದ ಕಟ್, ಪ್ರಮಾಣ, ಅಡುಗೆ ವಿಧಾನ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.