FIFA ವಿಶ್ವಕಪ್‌ ಸೋಲಿಗೆ ತಲೆಬಾಗಿದ ಜಪಾನ್ ಕೋಚ್: 2 ಪದಗಳಲ್ಲಿ ಆನಂದ್‌ ಮಹೀಂದ್ರಾ ಬಣ್ಣಿಸಿದ್ದು ಹೀಗೆ..

By BK Ashwin  |  First Published Dec 6, 2022, 10:12 PM IST

ಜಪಾನ್‌ ಫುಟ್ಬಾಲ್‌ ತಂಡದ ಕೋಚ್ ಹಜಿಮೆ ಮೊರಿಯಾಸು ಕತಾರ್‌ನ ಅಲ್ ಜನೌಬ್ ಕ್ರೀಡಾಂಗಣದಲ್ಲಿ ತಂಡದ ಸೋಲಿನ ನಂತರ ನೆರೆದಿದ್ದ ಪ್ರೇಕ್ಷಕರಿಗೆ ತಲೆ ಬಾಗಿ ನಮಸ್ಕರಿಸಿದ್ದಾರೆ. 


ಜಗತ್ತಿನ ಪ್ರಖ್ಯಾತ ಕ್ರೀಡೆಗಳಲ್ಲೊಂದಾದ ಫುಟ್ಬಾಲ್‌ ವಿಶ್ವಕಪ್‌ (FIFA World Cup) ಮುಂದುವರಿದಿದ್ದು, ಕುತೂಹಲ ಘಟ್ಟದಲ್ಲಿದೆ. ಕತಾರ್‌ನಲ್ಲಿ (Qatar) ನಡೆಯುತ್ತಿರುವ ಈ ವಿಶ್ವಕಪ್‌ನಲ್ಲಿ (World Cup) ಅನೇಕ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದ್ದು, ಅನೇಕ ಬಲಾಢ್ಯ ತಂಡಗಳೇ ಕೆಳ ಕ್ರಮಾಂಕದ ತಂಡಗಳ ವಿರುದ್ಧ ಸೋಲನುಭವಿಸಿದೆ. ಇದೇ ರೀತಿ, ಕ್ರೊಯೇಷಿಯಾ (Croatia) ವಿರುದ್ಧದ ಸೋಲಿನ ನಂತರ ಜಪಾನ್ (Japan) ಸೋಮವಾರ  FIFA ವಿಶ್ವಕಪ್ 2022 ನಿಂದಲೇ ನಿರ್ಗಮಿಸಿದೆ. ನಾಲ್ಕು ಬಾರಿ ಏಷ್ಯಾ ಚಾಂಪಿಯನ್‌ (Asia Champions) ಎನಿಸಿಕೊಂಡಿರುವ ಜಪಾನ್‌ ಕಳೆದ 16 ವಿಶ್ವಕಪ್‌ಗಳಲ್ಲಿ ನಾಲ್ಕನೇ ಬಾರಿ ರೌಂಡ್‌ ಆಫ್‌ 16 ನಿಂದ (Round of 16) ಹೊರಬಿದ್ದಿದೆ. ಆದರೂ, ಜಪಾನ್‌ ಇತರೆ ಕಾರಣಗಳಿಂದಾಗಿ ನೆಟ್ಟಿಗರ ಹಾಗೂ ಜಗತ್ತಿನ ಹಲವರ ಹೃದಯಗಳನ್ನು ಗೆಲ್ಲುತ್ತಿದ್ದಾರೆ. 

ಜಪಾನ್‌ ಫುಟ್ಬಾಲ್‌ ತಂಡದ ಕೋಚ್ ಹಜಿಮೆ ಮೊರಿಯಾಸು (Hajime Moriyasu) ಕತಾರ್‌ನ ಅಲ್ ಜನೌಬ್ ಕ್ರೀಡಾಂಗಣದಲ್ಲಿ ತಂಡದ ಸೋಲಿನ ನಂತರ ನೆರೆದಿದ್ದ ಪ್ರೇಕ್ಷಕರಿಗೆ ತಲೆ ಬಾಗಿ ನಮಸ್ಕರಿಸಿದ್ದಾರೆ. ಈ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮೊರಿಯಾಸು ಅವರ ಈ ಉತ್ತಮ ನಡೆ 2022ರ ಫುಟ್‌ಬಾಲ್ ವಿಶ್ವಕಪ್‌ನ ಈವರೆಗಿನ ನಿರ್ಣಾಯಕ ಕ್ಷಣವಾಗಿದೆ. ಜಪಾನ್‌ ಕೋಚ್‌ನ ಈ ನಡೆಗೆ ಜಗತ್ತಿನ ಎಲ್ಲಾ ಭಾಗಗಳ ಜನರು ಅವರನ್ನು ಮತ್ತು ತಂಡವನ್ನು ಶ್ಲಾಘಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: FIFA World Cup 2022: ಶೂಟೌಟ್ ಗೆದ್ದ ಕ್ರೊವೇಷಿಯಾ, ಜಪಾನ್ ತಂಡಕ್ಕೆ ನಿರಾಸೆ..!

ಭಾರತದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಸಹ ಸಾಮಾಜಿಕ ಜಾಲತಾಣದಲ್ಲಿ ಜಪಾನ್‌ ಕೋಚ್‌ ಅವರ ಈ ನಡೆಯನ್ನು ಘನತೆ ಮತ್ತು ಸೌಜನ್ಯ ಎಂಬ 2 ಪದಗಳಲ್ಲಿ ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇದನ್ನು ವಿವರಿಸಲು ಕೇವಲ ಎರಡು ಪದಗಳು: ಘನತೆ. ಸೌಜನ್ಯ’’ ಎಂದು ಆನಂದ್‌ ಮಹಿಂದ್ರಾ ಅವರು ಗಮನಾರ್ಹ ಕ್ಷಣದ ಫೋಟೋವನ್ನು ಶೇರ್‌ ಮಾಡಿಕೊಂಡು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಈ ಟ್ವೀಟ್‌ ಸಹ ವೈರಲ್‌ ಆಗುತ್ತಿದೆ. 

Just two words to describe this: Dignity. Grace.
(Team Japan manager Hajime Moriyasu bowing to fans in gratitude) pic.twitter.com/wH2rNMhZ2A

— anand mahindra (@anandmahindra)

ಸೋಲಿನ ಬಳಿಕ ಜಪಾನ್‌ ಕೋಚ್‌ ಹೇಳಿದ್ದೀಗೆ..
ನಾವು ಒಂದೇ ಸಮಯದಲ್ಲಿ ಸೂಪರ್‌ ಹೀರೋಗಳಾಗಲು ಸಾಧ್ಯವಿಲ್ಲ ಎಂದು ಜಪಾನ್‌ ತಂಡದ ಸೋಲಿನ ನಂತರ ಕೋಚ್‌ ಹಜಿಮೆ ಮೊರಿಯಾಸು ಹೇಳಿದ್ದಾರೆ. ಅಲ್ಲದೆ, ನಾವು ಹಂತ ಹಂತವಾಗಿ ಸುಧಾರಿಸಬೇಕು. ಆದರೆ ಜಪಾನ್, ವಿಶ್ವ ವೇದಿಕೆಯಲ್ಲಿ ನಾವು ಆಡುವ ಮಟ್ಟವನ್ನು ತಲುಪುತ್ತಿದೆ ಎಂದೂ ಅವರು ಹೇಳಿದರು.ಹಾಗೆ, ಈ ಆಟಗಾರರು ಈಗ ಯಾರೊಂದಿಗಾದರೂ ಕಣ್ಣಿಗೆ ಕಣ್ಣಿಟ್ಟು ನೋಡಬಹುದು ಮತ್ತು ನಾವು ಯಾರನ್ನು ಸೋಲಿಸುತ್ತೇವೆ ಎಂಬ ವಿಶ್ವಾಸವನ್ನು ತೆಗೆದುಕೊಳ್ಳಬಹುದು ಎಂದೂ ಕೋಚ್‌ ವಿಶ್ವಕಪ್‌ ಟೂರ್ನಿಯ ಪಾಸಿಟಿವ್‌ ಅಂಶಗಳನ್ನು ಹೇಳಿದ್ದಾರೆ. 

ಇದನ್ನು ಓದಿ: FIFA World Cup 2022: ಕ್ವಾರ್ಟರ್‌ ಫೈನಲ್‌ಗೆ ಹಾಲಿ ಚಾಂಪಿಯನ್‌ ಫ್ರಾನ್ಸ್‌!

ಇನ್ನು, ತಮ್ಮ ತಂಡದ ಸೋಲಿನ ನಂತರ ಜಪಾನ್‌ ಕೋಚ್‌ ಹಜಿಮೆ ಮೊರಿಯಾಸು, ಫುಟ್ಬಾಲ್‌ ಸ್ಟೇಡಿಯಂ ಮಧ್ಯಭಾಗದಲ್ಲಿ ತಮ್ಮ ತಂಡವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ, ಅನೇಕ ಆಟಗಾರರು ನೆಲದ ಮೇಲೆ ಕುಸಿದರು, ಇತರರು ಅಳುತ್ತಿದ್ದರು, ಮತ್ತು ಕೆಲವು ಆಟಗಾರರು ತಮ್ಮ ಹತ್ತಿರ ಇದ್ದ ಇತರೆ ಆಟಗಾರರಿಗೆ ಸಾಂತ್ವನ ಹೇಳುತ್ತಿದ್ದರು.

ಕಳೆದ ತಿಂಗಳು, ಆತಿಥೇಯ ದೇಶವಾದ ಕತಾರ್‌ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ನಂತರ ಜಪಾನ್‌ ಫುಟ್ಬಾಲ್ ಅಭಿಮಾನಿಗಳು ಕತಾರ್ ಕ್ರೀಡಾಂಗಣವನ್ನು ಸ್ವಚ್ಛಗೊಳಿಸುವ ಸ್ಪೂರ್ತಿದಾಯಕ ವಿಡಿಯೋವೊಂದನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದರು. ಅವರು ಕ್ಯಾಮೆರಾಗಳಿಗಾಗಿ ಇದನ್ನು ಮಾಡುತ್ತಿಲ್ಲ ಎಂದು ಅವರು ಹೇಳಿದರು, ಆದರೂ, ಕ್ಯಾಮೆರಾಗಳು ಅವರನ್ನು ಗುರುತಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ಪ್ರದರ್ಶಿಸುತ್ತಿರುವ ಮೌಲ್ಯಗಳು ಜಾಗತಿಕ ಪ್ರೇಕ್ಷಕರಿಗೆ ಯೋಗ್ಯವಾಗಿವೆ ಎಂದು ಆನಂದ್‌ ಮಹೀಂದ್ರಾ ಟ್ವೀಟ್ ಮಾಡಿದ್ದರು. 

click me!