ಇಂಥ ಮೈದುನ ಇದ್ದರೆ ಹೋದ ಮನೆಯಲ್ಲಿ ವಧುವಿಗೆ ತವರಿನ ತಮ್ಮನೇ ಸಿಕ್ಕಷ್ಟು ನೆಮ್ಮದಿಯಾಗುತ್ತದೆ. ಮೈದುನನ ತಮಾಷೆ, ಕಾಳಜಿ ಎಲ್ಲವೂ ಆಕೆಯನ್ನು ಹೊಸ ಮನೆಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ಮದುವೆಯಾದ ಕೂಡಲೇ ಹೆಣ್ಣುಮಕ್ಕಳು ಗಂಡನ ಮನೆಗೆ ಹೋದಾಗ ಸಂಸ್ಕೃತಿ, ಸಂಪ್ರದಾಯ, ಜನರ ಸ್ವಭಾವ ಎಲ್ಲವೂ ಹೊಸತೆನಿಸುತ್ತದೆ. ಎಲ್ಲರ ಜೀವನವೂ ಇದ್ದಂತೆಯೇ ಇದೆ. ತಾನು ಮಾತ್ರ ಹೊಸ ಜೀವನಕ್ಕೆ ಹೊಂದಿಕೊಳ್ಳಬೇಕು ಎಂದಾಗ ಸಾಕಷ್ಟು ಕಷ್ಟವಾಗುತ್ತದೆ. ಬೇಸರ, ನೋವು ಆವರಿಸುತ್ತದೆ. ಅತ್ತೆ ಮಾವರೊಂದಿಗೆ ಹೊಂದಿಕೊಳ್ಳುವುದು ಕಷ್ಟದ ವಿಷಯ ಎನಿಸುತ್ತದೆ. ಆದರೆ, ಈ ಸಂದರ್ಭದಲ್ಲಿ ಹೊಂದಿಕೊಳ್ಳಲು ಸಹಾಯಕ್ಕೆ ಬರುವುದು ಮೈದುನ. ಪತಿಯ ಬೆಂಬಲದ ಜೊತೆಗೆ, ಸ್ನೇಹಿತನಂತೆ ವರ್ತಿಸುವ ಮೈದುನ(Brothers-in-law) ಅತ್ತಿಗೆಯನ್ನು ತನ್ನ ತಮಾಷೆ, ಕಾಳಜಿಯಿಂದ ಸಾಧ್ಯವಾದಷ್ಟು ಕಂಫರ್ಟ್ ಆಗಿಡಲು ಪ್ರಯತ್ನಿಸುತ್ತಾನೆ. ಅತ್ತಿಗೆಯ ಮನಸ್ಸಿನ ಭಾವನೆ ಅರಿತು ತಮ್ಮನಂತೆ ಸ್ನೇಹ ತೋರುತ್ತಾನೆ. ಹೀಗೆ ಅತ್ಯುತ್ತಮ ಮೈದುನನಾಗಿ, ಅತ್ತಿಗೆಯೇ ಫೇವರೇಟ್ ಆಗುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ ?
ಮಿಥುನ(Gemini)
ಹೊಸ ವಧುಗಳು ಯಾವಾಗಲೂ ಮಿಥುನ ರಾಶಿಯ ಮೈದುನರ ಮೇಲೆ ನಂಬಿಕೆ ಇರಿಸಬಹುದು. ಏಕೆಂದರೆ ಅವರು ತುಂಬಾ ವಿನೋದ ಸ್ವಭಾವದವರಾಗಿದ್ದು, ಹೆಚ್ಚು ಸೋಷ್ಯಲ್ ಆಗಿರುತ್ತಾರೆ. ಈ ರಾಶಿಯ ಮೈದುನರ ಸಹಾಯದಿಂದ ಮನೆಯ ಹೊಸ ಸದಸ್ಯರೊಂದಿಗೆ ಬೆರೆಯಲು ಸುಲಭವಾಗುತ್ತದೆ. ಅವರು ಶೀಘ್ರವಾಗಿ ನವ ವಧುವಿನ ಅಚ್ಚುಮೆಚ್ಚಿನವರಾಗುತ್ತಾರೆ. ಅತ್ತಿಗೆಯಾಗಿ ಬಂದವಳಿಗೆ ತನ್ನ ಸ್ವಂತ ತಮ್ಮನೋ, ಹತ್ತಿರದ ಸ್ನೇಹಿತನೋ ಮೈದುನನ ರೂಪದಲ್ಲಿ ಸಿಕ್ಕಂತೆ ನೆಮ್ಮದಿಯಾಗುತ್ತದೆ.
ಹಕ್ಕಿಗಳಿಗೆ ಆಹಾರ ನೀಡಿ ಅದೃಷ್ಟ ಹೆಚ್ಚಿಸ್ಕೊಳೋದು ಹೇಗೆ?
ಕರ್ಕಾಟಕ(Cancer)
ಅವರು ಸೂಕ್ಷ್ಮ ಸ್ವಭಾವದವರು. ಕಾಳಜಿಯುಳ್ಳವರು ಮತ್ತು ಉತ್ತಮ ಸಹಾಯಕರಾಗಿದ್ದಾರೆ. ಅವರು ತಮ್ಮ ಮನೆಯಲ್ಲಿ ಅತ್ತಿಗೆಯು ಆರಾಮದಾಯಕವಾಗಿ ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತಾರೆ. ಹೆಂಡತಿ ಮತ್ತು ಗಂಡನ ನಡುವೆ ಜಗಳ ಉಂಟಾದರೆ, ಕರ್ಕಾಟಕ ರಾಶಿಯ ಮೈದುನರು ಸೂಕ್ಷ್ಮವಾಗಿ ವಿಷಯ ತಿಳಿದುಕೊಂಡು ಸಮಸ್ಯೆ ಬಗ ಹರಿಸಲು ಪ್ರಯತ್ನಿಸುತ್ತಾರೆ. ಅಣ್ಣನಿಗೆ ತಿಳಿ ಹೇಳುತ್ತಾರೆ. ಅತ್ತಿಗೆಯ ಕಷ್ಟಗಳನ್ನು ವಿಚಾರಿಸುತ್ತಾರೆ.
ಕನ್ಯಾ(Virgo)
ಅವರು ತಮ್ಮ ಅತ್ತಿಗೆಗೆ ನಿಜವಾದ ಸಹೋದರನಂತೆ ವರ್ತಿಸುತ್ತಾರೆ. ಕನ್ಯಾ ರಾಶಿಯವರು ತಮ್ಮ ಪ್ರೀತಿಪಾತ್ರರನ್ನು ಪ್ರೋತ್ಸಾಹಿಸುವುದರಲ್ಲಿ ಬಹಳ ಸ್ಥಿರವಾಗಿರುತ್ತಾರೆ. ಇದು ಪ್ರೀತಿ ಮತ್ತು ಗೌರವವನ್ನು ತೋರಿಸುವ ಅವರ ಸ್ವಭಾವದಲ್ಲಿ ಒಂದಾಗಿದೆ. ಅವರು ತುಂಬಾ ಕರುಣಾಮಯಿ, ಶಾಂತಿ-ಪ್ರೀತಿಯ ಜನರಾಗಿದ್ದು, ತಮ್ಮ ಪ್ರೀತಿಪಾತ್ರರು ಕಷ್ಟದಲ್ಲಿದ್ದರೆ, ನೋವಿನಲ್ಲಿದ್ದರೆ, ಅಥವಾ ಬೇಜಾರಲ್ಲಿದ್ದರೆ ಸಹಿಸುವವರಲ್ಲ. ಹೀಗಾಗಿ, ಅತ್ತಿಗೆಯ ಕಷ್ಟಗಳನ್ನು ಆಲಿಸುವ ಜೊತೆಗೆ, ಆಕೆಯ ಜೊತೆ ಆರಾಮಾಗಿ ಮಾತಾಡಿಕೊಂಡಿದ್ದು, ತವರಿನ ನೆನಪು ಹೆಚ್ಚು ಬಾಧಿಸದಂತೆ ನೋಡಿಕೊಳ್ಳುತ್ತಾರೆ.
Name Astrology: ಈ ಹೆಸರಿನ ಜನರಿಗಿದೆ ರಾಜಯೋಗ! ನಿಮ್ಮ ಹೆಸರು ಏನನ್ನುತ್ತೆ?
ಮೀನ(Pisces)
ಈ ರಾಶಿಯ ಮೈದುನರು ತಮ್ಮ ಅತ್ತಿಗೆಯನ್ನು ಬಹಳ ಕಾಳಜಿ ಮಾಡುತ್ತಾರೆ. ಎರಡನೇ ತಾಯಿಯಂತೆ ನೋಡಲು ಬಯಸುತ್ತಾರೆ. ಜೊತೆಗೆ, ಅವರೊಂದಿಗೆ ಸ್ನೇಹದಿಂದ ಇರಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಹೊಸ ಕುಟುಂಬದಲ್ಲಿಯೂ ಹಳಬಳಂತೆ ಫೀಲ್ ಮಾಡಲು ನವವಧುವಿಗೆ ಸಾಧ್ಯವಾಗುತ್ತದೆ. ಮೀನ ರಾಶಿಯವರು ಸೂಕ್ಷ್ಮ ಸ್ವಭಾವದವರು ಮತ್ತು ನಿಷ್ಠಾವಂತರು. ಅವರು ಎಂದಿಗೂ ಯಾರಿಗೂ ನೋವುಂಟು ಮಾಡುವುದಿಲ್ಲ. ಮತ್ತೊಬ್ಬರು ನೋವಲ್ಲಿದ್ದರೆ ನೋಡಿಕೊಂಡು ಸುಮ್ಮನಿರುವವರೂ ಅಲ್ಲ. ಹೀಗಾಗಿ, ಅತ್ತಿಗೆಯಾಗಿ ಬಂದಾಕೆಯ ಕಷ್ಟಗಳು ಅವರಿಗೆ ಅರ್ಥವಾಗುತ್ತವೆ. ಅತ್ತಿಗೆಯ ಜೊತೆ ಕೇರಂ, ಚೆಸ್ ಆಡುವುದು, ಅವರಿಗೆ ತಮ್ಮ ಮನೆಯವರ ಎಲ್ಲರ ಸ್ವಭಾವಗಳನ್ನು ತಿಳಿಸಿ ಹೇಳುವುದು, ತಮ್ಮ ಪ್ರೀತಿ, ಪ್ರಣಯ, ಕಾಲೇಜಿನ ಕತೆಗಳನ್ನು ಹೇಳುತ್ತಾ ಸಂತೋಷವಾಗಿಡುತ್ತಾರೆ.
ಇನ್ನು ವಿವಾಹವಾಗುವಾಗ ಕೇವಲ ಗಂಡನದಲ್ಲ, ಮೈದುನನ ರಾಶಿಯನ್ನೂ ತಿಳಿದುಕೊಂಡಿದ್ದರೆ ಒಳಿತು. ಏನಂತೀರಿ?!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.