ಹಕ್ಕಿಗಳಿಗೆ ಆಹಾರ ನೀಡಿ ಅದೃಷ್ಟ ಹೆಚ್ಚಿಸ್ಕೊಳೋದು ಹೇಗೆ?

By Suvarna News  |  First Published Apr 3, 2022, 2:03 PM IST

ಜ್ಯೋತಿಷ್ಯದಲ್ಲಿ ಹಕ್ಕಿಗಳಿಗೆ ಆಹಾರ ನೀಡುವುದಕ್ಕೆ ವಿಶೇಷ ಮಹತ್ವವಿದೆ. ಇದರಿಂದ ಗ್ರಹಗಳ ಕೆಟ್ಟ ಪರಿಣಾಮಗಳನ್ನು ಸಾಕಷ್ಟು ತಡೆಯಲು ಸಾಧ್ಯವಾಗುತ್ತದೆ. ಆದರೆ, ಯಾವ ದಿನ, ಯಾವ ಹಕ್ಕಿಗೆ ಏನು ಕೊಡಬೇಕೆಂಬ ಜ್ಞಾನ ಇರಬೇಕು.


ಬಹಳಷ್ಟು ಜನ ಹಕ್ಕಿ(birds)ಗಳಿಗೆ ಪ್ರತಿದಿನ ಏನಾದರೂ ಕಾಳುಕಡಿಗಳನ್ನು ನೀಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಬಾಯಾರಿಕೆ ನೀಗಿಸಲು ಮನೆಯ ಮೇಲೆ ನೀರಿಡುತ್ತಾರೆ. ಎಲ್ಲವೂ ಸಹಬಾಳ್ವೆಯ ತತ್ವವನ್ನೊಳಗೊಂಡಿದೆ. ಬಹಳ ಒಳ್ಳೆಯ ಅಭ್ಯಾಸ(good habit) ಇದಾಗಿದೆ. ಜ್ಯೋತಿಷ್ಯ(astrology)ದಲ್ಲೂ ಪಕ್ಷಿಗಳಿಗೆ ಆಹಾರ ನೀಡುವುದಕ್ಕೆ(feeding birds) ಮಹತ್ವವಿದೆ. ಆದರೆ, ಸಾಮಾನ್ಯವಾಗಿ ಹಕ್ಕಿಗಳಿಗೆ ಆಹಾರ ನೀಡುವುದಕ್ಕೂ, ಜ್ಯೋತಿಷ್ಯದ ಪ್ರಕಾರ ನೀಡುವುದಕ್ಕೂ ಇರುವ ವ್ಯತ್ಯಾಸವೆಂದರೆ, ಜ್ಯೋತಿಷ್ಯದಲ್ಲಿ ಯಾವ ದೋಷವಿದ್ದರೆ ಯಾವ ದಿನ ಯಾವ ಪಕ್ಷಿಗಳಿಗೆ ಆಹಾರ ನೀಡಬೇಕು, ಯಾವ ಆಹಾರ ನೀಡಬೇಕು ಎಲ್ಲವನ್ನು ನಿರ್ದಿಷ್ಟವಾಗಿ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಕೆಲವೊಂದು ದೋಷಗಳಿಂದ ಮುಕ್ತವಾಗಬಹುದಲ್ಲದೆ, ಅದೃಷ್ಟ(Luck) ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. 

ವಾರವೊಂದರಲ್ಲಿ ಏಳು ದಿನಗಳಿದ್ದು, ಪ್ರತಿಯೊಂದು ದಿನವನ್ನೂ ಒಂದೊಂದು ಗ್ರಹ ಆಳುತ್ತವೆ. ಜೊತೆಗೆ, ಪ್ರತಿ ಗ್ರಹಕ್ಕೂ ಸಂಬಂಧಿಸಿದ ನಿರ್ದಿಷ್ಟ ಆಹಾರ ಪದಾರ್ಥಗಳಿವೆ. ಹಾಗಾಗಿ, ಯಾವಾಗ ಜಾತಕದಲ್ಲಿ ಯಾವುದಾದರೊಂದು ದೋಷ ಕಾಣಿಸಿಕೊಳ್ಳುತ್ತದೋ, ಆಗ ಆ ಗ್ರಹಕ್ಕೆ ಸಂಬಂಧಿಸಿದ ಆಹಾರವನ್ನು, ಅದಕ್ಕೆ ಸಂಬಂಧಿಸಿದ ವಾರದ ದಿನದಂದು ಹಕ್ಕಿಗಳಿಗೆ ನೀಡಲು ಜ್ಯೋತಿಷ್ಯದಲ್ಲಿ ಸಲಹೆ ಮಾಡಲಾಗುತ್ತದೆ. 

Tap to resize

Latest Videos

ಸಾಮಾನ್ಯವಾಗಿ ಶ್ರಾದ್ಧದ ಸಂದರ್ಭದಲ್ಲಿ ಪಿಂಡ ಇಟ್ಟಾಗ ಕಾಗೆಗಳನ್ನು(crows) ಕರೆದು ಊಟ ನೀಡಲಾಗುತ್ತದೆ. ಇದರಿಂದ ನಮ್ಮ ಪಿತೃಗಳು(ancestors) ಕಾಗೆಗಳ ರೂಪದಲ್ಲಿ ಬಂದು ಆಹಾರ ಸೇವಿಸಿ ಸಂತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ. ಅಂತೆಯೇ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದೊಂದು ಪಕ್ಷಿಯನ್ನು ಪರಿಗಣಿಸಬೇಕಾಗುತ್ತದೆ. 

ನವಗ್ರಹ ಮತ್ತು ದಾನ
ನವಗ್ರಹಗಳ ಸಮಸ್ಯೆ ಹಾಗೂ ದೋಷ ಪರಿಹಾರಕ್ಕಾಗಿ ಏನು ದಾನ ಮಾಡಬೇಕು ನೋಡೋಣ. 

ಬುಧ(Mercury) ದುರ್ಬಲನಾಗಿದ್ದರೆ
ಬುಧನು ಜಾತಕದಲ್ಲಿ ದುರ್ಬಲನಾಗಿದ್ದರೆ, ಅಥವಾ ಬುಧನು ಸಮಸ್ಯೆ ನೀಡುವ ಸ್ಥಾನದಲ್ಲಿದ್ದರೆ, ಆಗ ಪ್ರತಿದಿನ ಗಿಳಿಗಳಿಗೆ(parrots) ಆಹಾರ ನೀಡುವುದು ಉತ್ತಮವಾಗಿದೆ. ಬುಧನಿಗೆ ಇಷ್ಟದ ಬಣ್ಣ ಹಸಿರಾಗಿದೆ. ಇದರಿಂದ ಬುಧನ ಕೆಟ್ಟ ಪರಿಣಾಮಗಳನ್ನು ತಗ್ಗಿಸಬಹುದಾಗಿದೆ. ಇದಲ್ಲದೆ, ಹಸಿರು ಕಾಳುಗಳನ್ನು ಬುಧವಾರದ ದಿನ ಹಕ್ಕಿಗಳಿಗೆ ನೀಡುವುದು ಕೂಡಾ ಬುಧನನ್ನು ಸಬಲವಾಗಿಸುತ್ತದೆ.\

Name Astrology: ಈ ಹೆಸರಿನ ಜನರಿಗಿದೆ ರಾಜಯೋಗ! ನಿಮ್ಮ ಹೆಸರು ಏನನ್ನುತ್ತೆ?

ಪಿತೃದೋಷ
ಪಿತೃದೋಷದಿಂದಾಗಿ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದರೆ, ಶನಿಯು ಒಂದಾದ ಮೇಲೊಂದು ಸಮಸ್ಯೆಯನ್ನು ಬದುಕಿಗೆ ತಂದೊಡ್ಡುತ್ತಿದ್ದರೆ, ಆಗ ಪ್ರತಿದಿನ ಕಾಗೆಗಳಿಗೆ ಆಹಾರ ಹಾಕಬೇಕು. ಕಾಗೆಗಳಿಗೆ ಚಪಾತಿಯ ಮೇಲೆ ಸಾಸಿವೆ ಎಣ್ಣೆ(mustard oil) ಹಾಕಿ ನೀಡುವುದರಿಂದ ಶನಿ ಹಾಗೂ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ. 

ಚಂದ್ರ(Moon) ದುರ್ಬಲನಾಗಿದ್ದರೆ
ಜಾತಕದಲ್ಲಿ ಚಂದ್ರ ವಿಷಮ ಸ್ಥಾನದಲ್ಲಿದ್ದರೆ, ಸಮಸ್ಯೆಗಳನ್ನು ತಂದೊಡ್ಡುತ್ತಿದ್ದರೆ, ಆಗ ಪ್ರತಿ ದಿನ ಹಕ್ಕಿಗಳ ಬಾಯಾರಿಕೆ ನೀಗಿಸುವ ಕೆಲಸ ಮಾಡಿ. ಮನೆಯ ಯಾವೊಂದು ಸ್ಥಳದಲ್ಲಿ ಹಕ್ಕಿಗಳಿಗೆ ನೀರನ್ನು ಇಡಿ. ಇದರಿಂದ ಜೀವನದಲ್ಲಿ ಸಾಕಷ್ಟು ಲಾಭಗಳು ಉಂಟಾಗುತ್ತವೆ. 

ವಾರದ ಯಾವ ದಿನ ಯಾವ ಕೆಲಸಕ್ಕೆ ಸೂಕ್ತ?

ಮಂಗಳ(Mars)ನ ದೋಷವಿದ್ದರೆ
ಕುಜ ದೋಷದಿಂದಾಗಿ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದರೆ ಆಗ, ಸಿಹಿಯಾದ ಚಪಾತಿಗಳು ಇಲ್ಲವೇ ಸಿಹಿ ಬ್ರೆಡ್ಡನ್ನು ಮಂಗಳವಾರ(Tuesday)ದ ದಿನ ಹಕ್ಕಿಗಳಿಗೆ ನೀಡಿ. 

ಹಕ್ಕಿಗಳು ನಮ್ಮ ಸಹಜೀವಿಗಳು. ಅವುಗಳಿಗೆ ಆಹಾರ ನೀಡುವ ಮೂಲಕ ಅವುಗಳಿಗೆ ನಾವು ಸಹಾಯ ಮಾಡುತ್ತಿಲ್ಲ. ಬದಲಿಗೆ ಹಕ್ಕಿಗಳಿಗೆ ಊಟ ನೀಡುವ ಮೂಲಕ ನಾವು ನಮಗೇ ಒಳಿತು ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡು ಸಹಬಾಳ್ವೆಯ ಜೀವನ ನಡೆಸೋಣ. ನಮ್ಮೊಂದಿಗೆ ಇರುವ ಜೀವಿಗಳನ್ನು ಪ್ರೀತಿಸೋಣ. ಅವುಗಳ ಕಷ್ಟಗಳಲ್ಲಿಯೂ ಪಾಲುದಾರರಾಗೋಣ. ಏನಂತೀರಾ?
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!