Marriage Fear ಈ ನಾಲ್ಕು ರಾಶಿಯವರಿಗೆ ಮದುವೆ ಅಂದ್ರೇನೆ ಭಯ..

By Suvarna NewsFirst Published Dec 10, 2021, 10:47 AM IST
Highlights

ಕೆಲವು ರಾಶಿಯವರಿಗೆ ಮದುವೆ ಬಗ್ಗೆ ಸಾಕಷ್ಟು ಕನಸುಗಳಿದ್ದರೆ, ಕೆಲವು ರಾಶಿಯವರಿಗೆ ಮದುವೆ ಎಂದರೆ ಭಯ. ಇವರು ಮದುವೆ ಬಗ್ಗೆ ವಿಚಿತ್ರವಾದ ಅನಿಸಿಕೆಯನ್ನು ಇಟ್ಟುಕೊಂಡಿರುತ್ತಾರೆ. ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ...
 

ಜ್ಯೋತಿಷ್ಯ ಶಾಸ್ತ್ರದಲ್ಲಿ (AStrology) ರಾಶಿಗನುಗುಣವಾಗಿ ವ್ಯಕ್ತಿಗಳ ಭವಿಷ್ಯ (Future) ಮತ್ತು ಗುಣ ಸ್ವಭಾವವನ್ನು ತಿಳಿಯಬಹುದಾಗಿದೆ. ಕೆಲವು ರಾಶಿಯವರು ಸ್ವಭಾವದಲ್ಲಿ ತುಂಬಾ ಗಂಭೀರ (Serious) ಮತ್ತು ಮಾತನಾಡುವುದಕ್ಕೂ ಯೋಚಿಸುವಂಥವರಾಗಿರುತ್ತಾರೆ. ಇನ್ನು ಕೆಲವು ರಾಶಿಯವರಿಗೆ  ಉದ್ಯೋಗ (Job), ಪ್ರತಿಷ್ಠೆ ಮತ್ತು ಹಣವೇ ಪ್ರಪಂಚ (World) ಆಗಿರುತ್ತದೆ. ಮತ್ತೆ ಕೆಲವು ರಾಶಿಯವರಿಗೆ ಕನಸೇ (Dream) ಜೀವನ, ಮದುವೆ (Marriage), ಉದ್ಯೋಗ, ಪತಿ (Husband), ಪತ್ನಿ (Wife) ಹೀಗೆ ಹಲವಾರು ಕನಸು ಮತ್ತು ಮದುವೆಯ ಬಗ್ಗೆ ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ. ಮದುವೆಯಾದ ಮೇಲೆ ಹೀಗಿದ್ದರೆ ಚೆಂದ, ಮದುವೆಯಾಗುವ ಹುಡುಗ ಅಥವಾ ಹುಡುಗಿ ಹೀಗಿರಬೇಕು ಎಂದೆಲ್ಲ ಕನಸು ಕಾಣುತ್ತಾ ಇರುತ್ತಾರೆ. ಮದುವೆಯಾದರೆ ಅಂದುಕೊಂಡ ಗುರಿ (Aim) ಸಾಧಿಸುವುದು ಅಸಾಧ್ಯವಾದರೆ ಅಥವಾ ಜೀವನ ಇನ್ಯಾವುದೋ ದಿಕ್ಕಿಗೆ ಸಾಗಿದರೆ ಎಂಬ ಭಯವಿರುತ್ತದೆ. ಕೆಲವು ರಾಶಿವರು ಅದೇ ಯೋಚನೆಯಲ್ಲಿ ವಿವಾಹದ ಬಗ್ಗೆ ನಕಾರಾತ್ಮಕ (Negative) ಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಮದುವೆ ಎಂದರೇ ಈ ನಾಲ್ಕು (Four) ರಾಶಿಯವರಿಗೆ ಎಲ್ಲಿಲ್ಲದ ಭಯ (Scare) ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಈ ರಾಶಿ ಚಕ್ರದ ವ್ಯಕ್ತಿಗಳಿಗೆ ಆರಾಮವಾಗಿ, ಖುಷಿಯಾಗಿ (Happy) ಒಬ್ಬರೇ ಇರುವುದು ತುಂಬಾ ಇಷ್ಟವಂತೆ. ಮದುವೆಯಾದರೆ ಸ್ವತಂತ್ರರಾಗಿರಲು (Independent) ಸಾಧ್ಯವಿಲ್ಲ, ಏಕಾಂತಕ್ಕೆ ಧಕ್ಕೆ ಬರುತ್ತದೆ, ಮದುವೆಯ ನಂತರದ ಜೀವನದ ಬಗ್ಗೆ ಈ ರಾಶಿಯವರಿಗೆ ಮನಸ್ಸಿನಲ್ಲಿ ಭಯ ಮನೆಮಾಡಿರುತ್ತದೆ. ಹಾಗಾಗಿ ಈ ನಾಲ್ಕು ರಾಶಿಯವರಿಗೆ ಮದುವೆ ಎಂದರೆ ಭಯ... ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಇದನ್ನು ಓದಿ: Color and Personality: ನೀವಿಷ್ಟ ಪಡೋ ಬಣ್ಣಗಳು ನಿಮ್ಮ ಗುಣ ಹೇಳುತ್ತವೆ..

ಕನ್ಯಾ ರಾಶಿ (Virgo)
ಈ ರಾಶಿಯವರನ್ನು ಪರಿಪೂರ್ಣರೆಂದು (Perfectionist) ಕರೆಯುತ್ತಾರೆ. ಎಲ್ಲ ವಿಷಯಗಳಲ್ಲೂ ಈ ರಾಶಿಯವರು ಪರ್ಫೆಕ್ಟ್. ಕನ್ಯಾ ರಾಶಿಯವರು ತಮ್ಮ ಗುರಿಯನ್ನು (Aim) ಸಾಧಿಸುವ ಬಗ್ಗೆಯೇ ಗಮನಹರಿಸುತ್ತಿರುತ್ತಾರೆ. ಅದೇ ಅವರ ಪ್ರಪಂಚವಾಗಿರುತ್ತದೆ. ಹಾಗಾಗಿ ಮದುವೆಯ ಬಗ್ಗೆ ಯೋಚಿಸುವುದೇ ಇಲ್ಲ. ಈ ರಾಶಿಯವರಿಗೆ ಮದುವೆಯ ಬಗ್ಗೆ ಒಂದು ರೀತಿಯ ಭಯವಿರುತ್ತದೆ. ಅಷ್ಟೇ ಅಲ್ಲದೆ ಒಮ್ಮೆ ಅಂದುಕೊಂಡದ್ದನ್ನು ಸಾಧಿಸಿಬಿಟ್ಟರೆ ಸಾಕು, ನಂತರ ಮದುವೆಯಾಗಬಹುದು ಎಂಬುದು ಇವರ ಭಾವನೆ. ಗುರಿಯನ್ನು ಸಾಧಿಸಲು ವರ್ಷಗಳೇ ಬೇಕಾಗಬಹುದು, ಮದುವೆಯ ಬಗ್ಗೆ ಸರಿಯಾದ ತೀರ್ಮಾನಕ್ಕೆ ಬರಲು ಸಹ ಈ ರಾಶಿಯವರಿಗೆ ಹೆಚ್ಚಿನ ಸಮಯ (time) ಬೇಕಾಗುತ್ತದೆ. ಹಾಗಾಗಿ ಕನ್ಯಾ ರಾಶಿಯವರು ಮದುವೆಯಾಗದೇ ಉಳಿಯುವ ಸಾಧ್ಯತೆ ಸಹ ಇರುತ್ತದೆ.

ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳು ಮನಸ್ಸಿನ ಮಾತನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ (Share). ಯಾರಾನ್ನಾದರು ಪ್ರೀತಿಸುತ್ತಿದ್ದರೆ (Love) ಅದನ್ನು ಹೇಳಿಕೊಳ್ಳುವುದಕ್ಕೂ ಈ ವ್ಯಕ್ತಿಗಳು ಅಂಜುತ್ತಾರೆ (Fear). ಹಾಗಾಗಿ ಈ ವ್ಯಕ್ತಿಗಳ ಭಾವನೆಗಳು ಇತರರಿಗೆ ಅರ್ಥವಾಗುವುದಿಲ್ಲ. ಇದೇ ಕಾರಣದಿಂದ ಈ ವ್ಯಕ್ತಿಗಳು ಯಾವುದೇ ಸಂಬಂಧಗಳಿಗೆ (Relations) ಬೇಗ ಅಂಟಿಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಆ ವಿಷಯದಲ್ಲಿ ಭಯವೂ ಸಹ ಇವರಿಗಿರುತ್ತದೆ. ಈ ವ್ಯಕ್ತಿಗಳಿಗೆ ಸಂಗಾತಿ (Partner) ದೊರಕಲು ತುಂಬಾ ಸಮಯ ಹಿಡಿಯುತ್ತದೆ.
 
ಧನು ರಾಶಿ (Sagittarius)
ಈ ರಾಶಿಯವರು ಸ್ವತಂತ್ರರು ಮತ್ತು ಸ್ವಾವಲಂಬಿಗಳಾಗಿರುತ್ತಾರೆ. ಇವರಿಗೆ ಒಬ್ಬರೆ ಇರುವುದೆಂದರೆ ಇಷ್ಟ. ಏಕಾಂತದಲ್ಲಿ ಒಬ್ಬರೆ ಕಾಲಕಳೆಯುವ ಸ್ವಭಾವದವರಾಗಿರುತ್ತಾರೆ (Nature). ಈ ವ್ಯಕ್ತಿಗಳ ಜೀವನದ ಬಗ್ಗೆ ಇತರರು ಮೂಗು ತೂರಿಸುವುದು ಇವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಈ ವ್ಯಕ್ತಿಗಳಿಗೆ ಮದುವೆ (Marriage) ಬಗ್ಗೆ ಭಯವಿರುತ್ತದೆ. ಅಷ್ಟೇ ಅಲ್ಲದೆ ಜೊತೆಗೆ ಇನ್ನೊಬ್ಬರು ಇರಬೇಕೆಂದು ಈ ರಾಶಿಯವರಿಗೆ ಅನ್ನಿಸುವುದಿಲ್ಲ, ಅದರಲ್ಲೂ ಸಂಗಾತಿಯ ಅಗತ್ಯವಿಲ್ಲ ಎಂಬುದೇ ಇವರ ಆಲೋಚನೆಯಾಗಿರುತ್ತದೆ.

ಇದನ್ನು ಓದಿ: Monday Born Personality: ಸೋಮವಾರ ಹುಟ್ಟಿದವರು ಹೀಗಿರುತ್ತಾರಂತೆ!

ಮೀನ ರಾಶಿ (Pisces)
ಈ ರಾಶಿಯ ವ್ಯಕ್ತಿಗಳು ಬೇಗ ಇತರರ ಜೊತೆ ಬೆರೆಯುವುದಿಲ್ಲ. ಹಾಗಾಗಿ ಸರಿಯಾದ ಸಂಗಾತಿಯನ್ನು (Partner) ಆಯ್ಕೆ ಮಾಡಲು ಹೆದರುತ್ತಾರೆ ಮತ್ತು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಇವರಿಗೆ ಮದುವೆ ಬಗ್ಗೆ ಭಯವಿರುತ್ತದೆ (Scare). ಮನಸ್ಸಿನಿಂದ ಯಾವುದಾದರೂ ಸಂಬಂಧವನ್ನು ಒಪ್ಪಿಕೊಂಡ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ.

click me!