Story of Ravana: ಸಂಜೆ ಸಮಯದಲ್ಲಿ ಸಂಭೋಗಿಸಿದರೆ ಮಕ್ಕಳು ರಾಕ್ಷಸರಾಗುತ್ತಾರಾ?

By Suvarna News  |  First Published Dec 9, 2021, 3:01 PM IST

ರಾಕ್ಷಸರ ರಾಣಿಯಾದ ಕೈಕಸೆ ಹಾಗೂ ವಿಶ್ರವಸು ಮುನಿಗಳು ಸಂಜೆಯ ಹೊತ್ತಿನಲ್ಲಿ ಸಂಭೋಗಿಸಿ ಗರ್ಭ ಧರಿಸಿದ ಪರಿಣಾಮ ಏನಾಯಿತು. ಇಲ್ಲಿದೆ ನೋಡಿ.
 


ಲಂಕೆಯಲ್ಲಿ‌ (Lanka) ಮಾಲಿ, ಮಾಲ್ಯವಂತ, ಸುಮಾಲಿ ಎಂಬ ರಾಕ್ಷಸರಿದ್ದರು. ಇವರು ಬ್ರಹ್ಮನ (Brahman) ವರಬಲದಿಂದ ಕೊಬ್ಬಿ, ದೇವಲೋಕಕ್ಕೂ (Heaven) ದಾಳಿ ಮಾಡಿ, ದೇವತೆಗಳನ್ನು ಪೀಡಿಸಲು ಶುರು ಮಾಡಿದರು. ಆಗ ಇಂದ್ರನ ಕೋರಿಕೆಯಂತೆ ವಿಷ್ಣು (Vishnu) ಇವರ ಮೇಲೆ ದಾಳಿ ಮಾಡಿ, ಮಾಲಿಯನ್ನು ಕೊಂದುಹಾಕಿದ. ಸುಮಾಲಿ ಹಾಗೂ ಮಾಲ್ಯವಂತರು ಪಾತಾಳಕ್ಕೆ ಓಡಿಹೋದರು. ರಾಕ್ಷಸರಿಗೆ ಹೀಗಾಯಿತಲ್ಲ, ಹೇಗಾದರೂ ಮಾಡಿ ರಾಕ್ಷಸರಿಗೆ ಇನ್ನಷ್ಟು ಶಕ್ತಿಯನ್ನು ತುಂಬಿ ದೇವತೆಗಳನ್ನು ಬಗ್ಗು ಬಡಿಯಬೇಕು ಎಂಬುದು ಅವರ ವಿಚಾರವಾಗಿತ್ತು.

ಇತ್ತ ಬ್ರಹ್ಮ ಮಾನಸಪುತ್ರರಾದ ಪುಲಸ್ತ್ಯ ಎಂಬವರಿಗೆ ವಿಶ್ರವಸು ಎಂಬವನು ಮಗನಾಗಿ ಜನಿಸಿ, ವೇದಜ್ಞಾನಿಯಾದ ಮುನಿಯಾಗಿ ಬೆಳೆದನು. ಆತನಿಗೆ ದೇವಾರುಣಿ ಎಂಬ ಹೆಂಡತಿ. ಇಬ್ಬರಲ್ಲಿ ವೈಶ್ರವಣ ಎಂಬ ಮಗ ಜನಿಸಿದ, ಅವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅವನನ್ನು ಮೆಚ್ಚಿಸಿ ನಾಲ್ಕು ವರಗಳನ್ನು ಪಡೆದ. ಅವು ಹೀಗಿವೆ. ಅದರಲ್ಲಿ ಲಂಕೆಯ ಆಧಿಪತ್ಯ, ಸಂಪತ್ತಿನ ಆಧಿಪತ್ಯ, ಉತ್ತರ ದಿಕ್ಕಿನ ಆಧಿಪತ್ಯ ಹಾಗೂ ಕೈಲಾಸವಾಸಿ ಶಿವನ ಪರಮಾಪ್ತ ಸ್ನೇಹಿತನಾಗಿರುವ ವರ.

Tap to resize

Latest Videos

undefined

Anagha Devi: ದತ್ತಾತ್ರೇಯ ಸ್ವಾಮಿಯ ಹೆಣ್ಣು ರೂಪ ಅನಘಾ ದೇವಿ

ಇದೇ ವೇಳೆಗೆ ಸುಮಾಲಿಯ ಮಗಳು ಕೈಕಸೆ ಬೆಳೆದು ನಿಂತಿದ್ದಳು. ಅಪ್ರತಿಮ ಚೆಲುವು ಲಾವಣ್ಯಗಳಿಂದ ಕೂಡಿದ್ದ ಆಕೆಯನ್ನು ನೋಡಿ ಮುನಿ ವಿಶ್ರವಸುವಿನ ಮನಸ್ಸೂ ಚಾಂಚಲ್ಯಕ್ಕೆ ಒಳಗಾಯಿತು. ಇದು ಸುಮಾಲಿಗೂ ಗೊತ್ತಾಯಿತು. ಮಗಳನ್ನು ಈ ಮುನಿಗೆ ಕೊಟ್ಟು ಮದುವೆ ಮಾಡಿದರೆ ದಾನವ ಸಂಕುಲಕ್ಕೂ ಮುಂದೆ ಲಾಭವಾಗುತ್ತದೆ ಎಂಬುದನ್ನು ಆತ ಅರ್ಥ ಮಾಡಿಕೊಂಡ. ಮುಂದೆ ವಿಶ್ರವಸು ಕೈಕಸೆಯನ್ನು ಮದುವೆಯಾದ.

ಈ ನಡುವೆ ವಿಶ್ರವಸುವಿನ ಮೊದಲ ಹೆಂಡತಿ ದೇವಾರುಣಿಯಲ್ಲಿ ಜನಿಸಿದ ವೈಶ್ರವಣ (ಮುಂದೆ ಅವನಿಗೆ ಕುಬೇರ ಎಂದು ಹೆಸರಾಯಿತು) ಲಂಕೆಯ ಒಡೆಯನಾಗಿ, ಸಕಲ ಸಂಪತ್ತಿಗೆ ಅಧಿಪತಿಯಾಗಿ ಮೆರೆಯುತ್ತಿದ್ದುದನ್ನು ನೋಡಿ ಕೈಕಸೆಗೆ ಸಹಿಸಲು ಆಗಲಿಲ್ಲ. ಜೊತೆಗೆ ಆಕೆಯ ತಂದೆಯಾದ ಸುಮಾಲಿ ಕೂಡ, ದಾನವ ಸಾಮ್ರಾಜ್ಯಕ್ಕೆ ಒಡೆಯನಾಗಬಲ್ಲ, ನಾಲ್ಕೂ ಲೋಕಗಳನ್ನೂ ಆಳಬಲ್ಲ ಸಾಮರ್ಥ್ಯ ಹೊಂದಿದ ಮಕ್ಕಳನ್ನು ನೀನು ವಿಶ್ರವಸುಗಳಿಂದ ಪಡೆಯಬೇಕು ಎಂದು ತಾಕೀತು ಮಾಡಿದ್ದ. ಇದನ್ನೇ ಮನಸ್ಸಲ್ಲಿ ಇಟ್ಟುಕೊಂಡಿದ್ದ ಕೈಕಸೆ ಒಂದು ಸಂದ್ಯಾಕಾಲದಲ್ಲಿ ವಿಶ್ರವಸುವಿನ ಬಳಿಗೆ ಬಂದಳು. ಆಗ ತಾನೇ ಆಕೆ ಋತುಸ್ನಾನ ಮುಗಿಸಿ, ಮೈಗೆ ಚಂದನಗಂಧಾದಿಗಳನ್ನು ಪೂಸಿಕೊಂಡು, ಹೂ ಮುಡಿದು, ಮಾದಕವಾದ ವಸನಗಳನ್ನು ಧರಿಸಿ ಶಯ್ಯಾಗೃಹಕ್ಕೆ ವಿಶ್ರವಸುವನ್ನು ಸೆಳೆಯಲು ಸಿದ್ಧಳಾಗಿ ಬಂದಿದ್ದಳು. ವಿಶ್ರವಸುವಿಗೆ ಕೈಕಸೆಯ ಮನದ ಭಾವ ಅರ್ಥವಾಯಿತು.

Sringeri Sharadamba Temple: ವಿದ್ಯೆಗೆ ಅಧಿದೇವಿ ಶೃಂಗೇರಿ ಶಾರದಾಂಬೆ

"ಸುಂದರಿ, ನಿನ್ನ ಆಂತರ್ಯದ ತುಡಿತ ನನಗೆ ಅರ್ಥವಾಯಿತು. ಆದರೆ ನೀನು ಆರಿಸಿಕೊಂಡ ಮುಹೂರ್ತ ಸರಿಯಾದುದಲ್ಲ. ಇದು ದುಷ್ಟಶಕ್ತಿಗಳು ತಿರುಗಾಡುವ ಕಾಲ. ನಾನೂ ನೀನೂ ಈ ಕಾಲದಲ್ಲಿ ಸಂಭೋಗಿಸಿದರೆ ನಿಮ್ಮ ಗರ್ಭದಲ್ಲಿ ಬೀಜಾವಾಪ ಆಗಿಯೇ ಆಗುತ್ತದೆ. ಆದರೆ ಅದು ಅಪವಿತ್ರ ಕಾಲದಲ್ಲಿ ಮಾಡಿದ್ದಾದ್ದರಿಂದ ಕೆಡುಕಿನ ಬೀಜವಾಗಿ ಮೊಳೆಯುತ್ತದೆ. ಆದ್ದರಿಂದ ಈಗ ಬೇಡ, ರಾತ್ರಿ ನೋಡೋಣ'' ಎಂದ ವಿಶ್ರವಸು. ಆದರೆ ಕೈಕಸೆ ಕೇಳಲೇ ಇಲ್ಲ. ಹಠ ಹಿಡಿದಳು. ನನಗೆ ಈಗಲೇ ನಿಮ್ಮ ಜೊತೆ ಸರಸ ಬೇಕು ಎಂದಳು.

''ಸರಿ, ಹಾಗೆಯೇ ಆಗಲಿ. ನಿನ್ನ ಹಠದ ಪರಿಣಾಮವನ್ನು ಲೋಕವೇ ನೋಡುವಂತಾಗಲಿ'' ಎಂದು ಹೇಳಿ ವಿಶ್ರವಸು ಕೈಕಸೆಯನ್ನು ಕೂಡಿದ. ಸಂಭೋಗ ಮುಗಿಸಿದ ನಂತರ ಹೇಳಿದ- ''ನೋಡು, ಈಗಿನ ನಮ್ಮ ಸಮ್ಮಿಲನದ ಫಲವಾಗಿ ನಿನ್ನಲ್ಲಿ ಮೂರು ಮಕ್ಕಳು ಜನಿಸಲಿದ್ದಾರೆ. ಅವರು ಮೂವರೂ ನಿನ್ನ ಇಚ್ಛೆಯಂತೆಯೇ ಮಹಾ ಬಲಶಾಲಿಗಳೂ ಅಸುರ ಸಾಮ್ರಾಜ್ಯಕ್ಕೆ ಆಧಾರಸ್ತಂಭಗಳೂ ಆಗಲಿದ್ದಾರೆ. ಆದರೆ ಅವರ ದುರ್ಗುಣಗು ತುಂಬಿ ತುಳುಕಲಿದ್ದು, ಲೋಕಕಂಟಕರಾಗುತ್ತಾರೆ'' ಎಂದು ಹೇಳಿದ.

ಇದನ್ನು ಕೇಳಿ ಕೈಕಸೆಗೆ ದುಃಖವಾಯಿತು. ಏನು ಮಾಡೋಣ? ಆಗುವುದು ಆಗಿಬಿಟ್ಟಿತ್ತು. ಕೈಕಸೆಯ ದುಃಖವನ್ನು ಗ್ರಹಿಸಿ ವಿಶ್ರವಸು ಹೇಳಿದ- ಅಳಬೇಡ, ನಿನ್ನಲ್ಲಿ ಇನ್ನೂ ಒಬ್ಬ ಜನಿಸುವಂತೆ ನಾನು ಆಶೀರ್ವಾದ ಮಾಡುತ್ತೇನೆ. ಅವನು ಮಾತ್ರ ಈ ಹಿಂದಿನ ಮೂವರಂತೆ ಆಗದೆ, ಪರಮ ಭಾಗವತೋತ್ತಮ, ವಿಷ್ಣುಭಕ್ತನಾಗುತ್ತಾನೆ- ಎಂದು ವರ ನೀಡಿದ.

ಹೀಗೆ ಜನಿಸಿದ ನಾಲ್ವರೇ ರಾವಣ, ಕುಂಭಕರ್ಣ, ಶೂರ್ಪನಖಿ ಹಾಗೂ ಕೊನೆಯವನೇ ವಿಭೀಷಣ.

click me!