Temple of Bangalore: ಬೆಂಗ್ಳೂರಲ್ಲೂ ಹಿಂಗೆಲ್ಲ ಇದ್ಯಾ ಅನ್ಸೋಂಥ ದೇವಾಲಯಗಳಿವು..

By Suvarna News  |  First Published Dec 9, 2021, 4:44 PM IST

ಬೆಂಗಳೂರಿನ ತುಂಬಾ ಸಾಕಷ್ಟು ದೇವಾಲಯಗಳಿವೆ. ಅವುಗಳಲ್ಲಿ ಕೆಲವೊಂದು ಸಾವಿರಾರು ವರ್ಷಗಳ ಹಿನ್ನೆಲೆ ಹೊಂದಿರುವವೂ ಇವೆ. ಇಂಥ ದೇವಾಲಯಗಳಲ್ಲಿ ಶಿಲ್ಪಕಲೆ, ವಾತಾವರಣ, ಇತಿಹಾಸ ಮುಂತಾದ ಕಾರಣಕ್ಕಾಗಿ ನೀವು ನೋಡಲೇಬೇಕಾದ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 


ಬೆಂಗಳೂರೆಂದರೆ ಐಟಿ ಸಿಟಿ, ಬೆಂಗಳೂರೆಂದರೆ ವಾಣಿಜ್ಯ ನಗರಿ(commercial hub), ಬೆಂಗಳೂರು ಮೆಟ್ರೋ ಸಿಟಿ, ಉದ್ಯಾನ ನಗರಿ, ವಿಜ್ಞಾನ ನಗರಿ, ಸಿಲಿಕಾನ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ ಆಫ್ ಇಂಡಿಯಾ... ಉಫ್! ಅಬ್ಬಾಬ್ಬಾ, ಇಷ್ಟೊಂದು ಹೆಸರುಗಳ ಮಧ್ಯೆ ಬೆಂಗಳೂರು ಸಾಂಸ್ಕೃತಿಕ ನಗರಿ ಎಂಬುದಂತೂ ಮರೆತೇ ಹೋಗುವಂತಿದೆ. ಆದರೆ, ಬೆಂಗಳೂರಿನಲ್ಲಿರುವ ನೂರಾರು ದೇವಾಲಯಗಳ ನಡುವೆ ಅತಿ ಜನಪ್ರಿಯವಾದ ಈ ಕೆಲ ದೇಗುಲಗಳನ್ನು ನೋಡಿದರೂ ಸಾಕು, ಬೆಂಗಳೂರಿನ ಸಾಂಸ್ಕೃತಿಕ ಆಸ್ತಿ, ಧಾರ್ಮಿಕ ನಂಬಿಕೆಗಳ ಬೇರು ಎಷ್ಟು ಬಲವಾಗಿದೆ ಎಂಬುದು ತಿಳಿಯುತ್ತದೆ. ಇವುಗಳಲ್ಲಿ ಬಹುತೇಕ ದೇವಾಲಯಗಳು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಕಲೆ ಹೊಂದಿವೆ. 

ಚೊಕ್ಕನಾಥಸ್ವಾಮಿ ದೇವಾಲಯ(The Chokkanathaswamy Temple)
ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಚೊಕ್ಕನಾಥಸ್ವಾಮಿ ದೇವಾಲಯವು ಬೆಂಗಳೂರಲ್ಲಿರುವ ಅತಿ ಹಳೆಯ ಧಾರ್ಮಿಕ ಕಟ್ಟಡಗಳಲ್ಲೊಂದು. ದೊಮ್ಮಲೂರಿನಲ್ಲಿರುವ ವಿಷ್ಣುವಿಗೆ ಮೀಸಲಾಗಿರುವ ಈ ದೇವಾಲಯವನ್ನು 10ನೇ ಶತಮಾನದಲ್ಲಿ ಚೋಳರು ನಿರ್ಮಿಸಿದ್ದಾರೆ. ದೇವಾಲಯವು ಚೋಳ ಶೈಲಿಯಲ್ಲಿದ್ದು, ಇಲ್ಲಿನ ಕಂಬಗಳ ಮೇಲೆ ತಮಿಳಿನ ಬರಹಗಳ ಕೆತ್ತನೆ(Tamil inscriptions) ಇದೆ. ವಿಷ್ಣುವಿನ 10 ಅವತಾರಗಳೂ ಇವೆ. 

Tap to resize

Latest Videos

undefined

ದೊಡ್ಡ ಬಸವನ ಗುಡಿ(The Bull Temple)
ಬಸವನಗುಡಿಯಲ್ಲಿರುವ ಬುಲ್ ಟೆಂಪಲನ್ನು 1537ರಲ್ಲಿ ವಿಜಯನಗರದ ಅರಸರು ಕಟ್ಟಿಸಿದ್ದಾರೆ. ಇದು ಜಗತ್ತಲ್ಲೇ ನಂದಿಗಾಗಿ ಇರುವ ಅತಿ ದೊಡ್ಡ ದೇವಾಲಯ. ಇಲ್ಲಿರುವ ನಂದಿಯನ್ನು ಏಕಶಿಲೆಯಲ್ಲಿ ನಿರ್ಮಿಸಲಾಗಿದ್ದು, 15 ಅಡಿ ಎತ್ತರವಿದೆ. 

Story of Ravana: ಸಂಜೆ ಸಮಯದಲ್ಲಿ ಸಂಭೋಗಿಸಿದರೆ ಮಕ್ಕಳು ರಾಕ್ಷಸರಾಗುತ್ತಾರಾ?

ಗವಿ ಗಂಗಾಧರೇಶ್ವರ ದೇವಸ್ಥಾನ(Gavi Gangadhareshwara Temple)
ಇದು ಕೆಂಪೇಗೌಡ ನಗರದ ಗವಿಪುರದಲ್ಲಿದ್ದು, ಗುಹೆಯನ್ನು ಹೊಂದಿರುವ ದೇವಾಲಯವಾಗಿದೆ. 9ನೇ ಶತಮಾನದಲ್ಲಿ ಇದನ್ನು ಏಕಶಿಲೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇಲ್ಲಿ ಅತಿ ಅಪರೂಪದಲ್ಲಿ ಕಾಣಬಹುದಾದ ಎರಡು ತಲೆ, ಮೂರು ಕಾಲುಗಳ ಅಗ್ನಿಯ ವಿಗ್ರಹವೂ ಇದೆ. 

ಇಸ್ಕಾನ್(The ISKCON)
ಜಗತ್ತಲ್ಲೇ ವೈಷ್ಣವರ ಅತಿ ದೊಡ್ಡ ದೇವಾಲಯ ಇಸ್ಕಾನ್ ರಾಜಾಜಿನಗರದಲ್ಲಿದೆ. 1997ರಲ್ಲಿ ಇದನ್ನು ನಿಯೋ- ಕ್ಲಾಸಿಕಲ್ ಶೈಲಿಯಲ್ಲಿ ಕಟ್ಟಲಾಗಿದೆ. ಕೃಷ್ಣನ ವಿಗ್ರಹವು ಮನ ಸೆಳೆಯುವಂತಿದ್ದು, ಐದು ಪ್ರಾರ್ಥನಾ ಕೋಣೆಗಳಿವೆ. 

Sringeri Sharadamba Temple: ವಿದ್ಯೆಗೆ ಅಧಿದೇವಿ ಶೃಂಗೇರಿ ಶಾರದಾಂಬೆ

ದೊಡ್ಡ ಗಣೇಶ ದೇವಾಲಯ(Dodda Ganesha Temple)
ದೊಡ್ಡ ಬಸವನಗುಡಿ ಹತ್ತಿರದಲ್ಲೇ ಇರುವ ಈ ದೇವಾಲಯದಲ್ಲಿರುವ ಗಣೇಶ ಸುಮಾರು 18 ಅಡಿ ಎತ್ತರ, 16 ಅಡಿ ಅಗಲವಿದ್ದಾನೆ. ಬೆಂಗಳೂರಿನಲ್ಲಿರುವ ಎಲ್ಲ ಗಣೇಶ ವಿಗ್ರಹಕ್ಕಿಂತ ದೊಡ್ಡ ಶಿಲ್ಪ ಇದು. 

ಶಿವ ದೇವಸ್ಥಾನ(Shiva Temple)
ಭಾರತದಲ್ಲಿರುವ ಅತಿ ಸುಂದರ ಶಿವ ದೇವಾಲಯಗಳಲ್ಲಿ ಇದೂ ಒಂದು. ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಇಲ್ಲಿ ಶಿವ ಹಾಗೂ ಗಣೇಶನ ಮೂರ್ತಿಗಳಿವೆ. ಶಿವನ ಪ್ರತಿಮೆ ಸುಮಾರು 65 ಅಡಿ ಎತ್ತರವಿದ್ದು, ಮಾನವನಿರ್ಮಿತ ಕೈಲಾಶ ಸರೋವರದೊಳಗೆ ಕುಳಿತಂತೆ ನಿರ್ಮಿಸಲಾಗಿದೆ. 

ಕೋಟೆ ವೆಂಕಟೇಶ್ವರ (Kote Venkateshwara Temple)
ಬಸವನಗುಡಿಯ ಕೆ.ಆರ್. ರೋಡಿನಲ್ಲಿರುವ ಈ ವೆಂಕಟೇಶ್ವರ ದೇವಾಲಯದ ನಿರ್ಮಾಣ 1689ರಲ್ಲಿ ಆಗಿದೆ. ದ್ರಾವಿಡ ಹಾಗೂ ವಿಜಯನಗರ ವಾಸ್ತುಕಲೆ ಶೈಲಿಯಲ್ಲಿರುವ ಈ ದೇವಾಲಯದ ಗೋಡೆಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಕೆತ್ತನೆಗಳನ್ನು ಕಾಣಬಹುದು. 

ಸೋಮೇಶ್ವರ ದೇಗುಲ(Halasuru Someshwara Temple)
ಉಳ್ಸೂರ್ ರೋಡಿನಲ್ಲಿ ಸೋಮೇಶ್ವರಪುರದಲ್ಲಿರುವ ಈ ಕಲ್ಲಿನ ದೇವಾಲಯವು ವಿಜಯನಗರ ರಾಜರ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಆವರಣದಲ್ಲಿರುವ ಮಂಟಪದಲ್ಲಿ 48 ಕಂಬಗಳಿದ್ದು, ಎಲ್ಲದರ ಮೇಲೂ ದೇವರ ಕೆತ್ತನೆಗಳಿವೆ. ಸೋಮೇಶ್ವರ ಸ್ವಾಮಿಗೆ ಇಲ್ಲಿ ಪ್ರತಿದಿನ ಪೂಜೆ ಸಲ್ಲುತ್ತದೆ. 

ಶೃಂಗಗಿರಿ ಷಣ್ಮುಖ (Shrungagiri Sri Shanmukha Temple)
ರಾಜರಾಜೇಶ್ವರಿ ನಗರದಲ್ಲಿರುವ ಈ ದೇವಾಲಯದ ಗೋಪುರವೇ ಆರು ಮುಖಗಳ ಷಣ್ಮುಖನನ್ನು ಹೊಂದಿದ್ದು ಭಕ್ತರನ್ನು ಸೆಳೆಯುತ್ತದೆ. 
 

click me!