ಮೇಷದಿಂದ ಸಿಂಹದವರೆಗೆ; ಈ ರಾಶಿಯ ಒಡಹುಟ್ಟಿದವರನ್ನು ಹೊಂದಲು ಪುಣ್ಯ ಮಾಡಿರಬೇಕು!

By Suvarna News  |  First Published Apr 17, 2023, 3:05 PM IST

ಕೆಲವರು ಒಡಹುಟ್ಟಿದವರನ್ನು ಸ್ಪರ್ಧಿಗಳಂತೆ ನೋಡುತ್ತಾರೆ. ಮತ್ತೆ ಕೆಲವರು ಒಡಹುಟ್ಟಿದವರನ್ನು ಜಗತ್ತಲ್ಲೇ ತಮಗೆ ಅತಿ ಪ್ರೀತಿಪಾತ್ರರಂತೆ ನಡೆಸಿಕೊಳ್ಳುತ್ತಾರೆ. ಹೀಗೆ, ಸೋದರ ಸೋದರಿಯರೊಂದಿಗೆ ಬೆಸ್ಟ್ ಫ್ರೆಂಡ್ ರೀತಿ ಕ್ಲೋಸ್ ಆಗಿರುವ ರಾಶಿಗಳಿವು..


ನೀವವರನ್ನು ಪ್ರೀತಿಸಿ ಅಥವಾ ದ್ವೇಷಿಸಿ, ಒಡಹುಟ್ಟಿದವರ ಸಂಬಂಧಗಳು ಅತ್ಯಂತ ವಿಶೇಷವಾಗಿರುತ್ತವೆ. ಅವರು ನಮ್ಮ ಜೀವನದ ಪ್ರತಿ ಕ್ಷಣಕ್ಕೂ ಸಾಕ್ಷಿಯಾಗಿರುತ್ತಾರೆ. ಒಂದೇ ಬಳ್ಳಿಯ ಹೂಗಳಂತೆ ಬಹಳಷ್ಟು ಸಾಮ್ಯತೆಗಳನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಒಡಹುಟ್ಟಿದವರೊಂದಿಗೆ ಸ್ಪರ್ಧೆಗೆ ಬೀಳಬಹುದು. ಆದರೆ, ಧೀರ್ಘಕಾಲದಲ್ಲಿ ಉಳಿಯುವ ಸಂಬಂಧ ಅದೇ ಆಗಿರುತ್ತದೆ. ವ್ಯತ್ಯಾಸಗಳೇನೇ ಇರಲಿ, ಒಡಹುಟ್ಟಿದವರ ಬಳಿ ಅತಿ ಹೆಚ್ಚು ಕ್ಲೋಸ್ ಆಗಿರುವವರೂ ಬಹಳಷ್ಟು ಜನರಿರುತ್ತಾರೆ. ಕೆಲವರಂತೂ ಪೋಷಕರಂತೆ ತಮ್ಮ ಸೋದರ ಸೋದರಿಯರನ್ನು ಸಾಕುತ್ತಾರೆ, ಮತ್ತೆ ಕೆಲವರು ತಮ್ಮೆಲ್ಲ ಗುಟ್ಟುಗಳನ್ನು ಅವರೊಂದಿಗೆ ಮಾತ್ರ ಹಂಚಿಕೊಳ್ಳುತ್ತಿರುತ್ತಾರೆ. ಹೀಗೆ ಒಡಹುಟ್ಟಿದವರಿಗೆ ಬಹಳಷ್ಟು ಹತ್ತಿರದಲ್ಲಿರುವ ರಾಶಿಚಕ್ರ ಚಿಹ್ನೆಗಳು ಯಾವೆಲ್ಲ ನೋಡೋಣ. 

ಮೇಷ ರಾಶಿ
ಮೇಷ ರಾಶಿಯವರು ಸಾಮಾನ್ಯವಾಗಿ ಒಡಹುಟ್ಟಿದವರ ಜೊತೆ ಬೆಳೆಯುತ್ತಾರೆ. ಅವರು ಯಾವಾಗಲೂ ತಿಂಡಿ, ಬೆಡ್‌ರೂಂ ಮತ್ತು ಆಟಿಕೆಗಳಂತಹ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಬಹುಶಃ ಅವರಿಗೆ ಆರಂಭದಲ್ಲಿ ಸೋದರ ಸೋದರಿಯರು ಇಷ್ಟವಿರುವುದಿಲ್ಲ. ಸದಾ ಜಗಳವಾಡುತ್ತಿರುತ್ತಾರೆ. ನಂತರ ನಿಧಾನವಾಗಿ ಅವರಿಲ್ಲದೆ ಇರಲು ಸಾಧ್ಯವಿಲ್ಲ ಎಂಬಂತಾಗುತ್ತದೆ. ಒಡಹುಟ್ಟಿದವರಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯು ಅವರಿಗೆ ಜೀವನದಲ್ಲಿ ಸಾಕಷ್ಟು ಹೊಂದಿಕೊಳ್ಳುವ ಗುಣವನ್ನು ಕಲಿಸುತ್ತದೆ.  ಇದು ನಿಸ್ಸಂಶಯವಾಗಿ ಜೀವನದ ಸವಾಲುಗಳನ್ನು ಸುಲಭಗೊಳಿಸುತ್ತದೆ. ಮೇಷ ರಾಶಿಯವರು ತಮಗೇ ಗೊತ್ತಿಲ್ಲದೆ ತಮ್ಮ ಒಡಹುಟ್ಟಿದವರ ಮೇಲೆ ಅವಲಂಬಿತರಾಗಿರುತ್ತಾರೆ. 

Tap to resize

Latest Videos

Zodiac Sign: ಸಂಗಾತಿ ಜತೆ ಪ್ರೀತಿ ಭಾವನೆ ಹಂಚ್ಕೊಳೋಕೆ ಈ ರಾಶಿಯವರೇಕೆ ಹಿಂದೇಟು ಹಾಕ್ತಾರೆ?

ಮಕರ ರಾಶಿ
ಮಕರ ರಾಶಿಯವರು ಬಹಳ ತಾಳ್ಮೆಯುಳ್ಳವರು. ಅವರು ಯೋಚಿಸದೆ ಏನನ್ನೂ ಮಾತನಾಡುವುದಿಲ್ಲ. ಹಾಗಾಗಿ, ಸಾಮಾನ್ಯವಾಗಿ ತಮ್ಮ ಸೋದರ, ಸೋದರಿಯರೊಂದಿಗ ಜಗಳವಾಡುವುದಿಲ್ಲ. ಬದಲಿಗೆ ಅವರು ಎಲ್ಲವನ್ನೂ ಒಡಹುಟ್ಟಿದವರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಅವರಿಗೆ ಎಷ್ಟೇ ವಯಸ್ಸಾಗಲಿ, ಒಡಹುಟ್ಟಿದವರ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಅವರು ತಮ್ಮ ಜೊತೆ ಹುಟ್ಟಿದವರ ಬೆಳವಣಿಗೆಯನ್ನು ಸದಾ ಬಯಸುತ್ತಾರೆ. ಅವರ ಏಳ್ಗೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಅವರು ತಮ್ಮೆಲ್ಲ ವಸ್ತುಗಳನ್ನು ಹಂಚಿಕೊಳ್ಳುವುದರಲ್ಲಿಯೇ ಸಂತಸ ಕಾಣುತ್ತಾರೆ. ಒಡಹುಟ್ಟಿದವರ ಬಗ್ಗೆ ಯಾರು ಏನೇ ಮಾತನಾಡಿದರೂ ಸಹಿಸದೆ ಅವರ ಪರ ನಿಲ್ಲುತ್ತಾರೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ಒಡಹುಟ್ಟಿದವರನ್ನು ತಮ್ಮ ಸಂಗಾತಿ ಅಥವಾ ಉತ್ತಮ ಸ್ನೇಹಿತನಂತೆ ಪ್ರೀತಿಸದಿರಬಹುದು, ಆದರೆ ಅವರು ಸೋದರರ ಅಭಿಪ್ರಾಯವನ್ನು ಗೌರವಿಸುತ್ತಾರೆ. ಯಾವಾಗಲೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೆ ಹೋದರೂ ಒಡಹುಟ್ಟಿದವರಿಗೆ ಅಗತ್ಯವಿರುವಾಗ ಜೊತೆಗೆ ನಿಲ್ಲುತ್ತಾರೆ. ಸಾಧ್ಯವಾದಷ್ಟು ತಮ್ಮ ಒಡಹುಟ್ಟಿದವರ ಬದುಕು ಸುಲಭವಾಗಲು ಶ್ರಮಿಸುತ್ತಾರೆ. ಎಷ್ಟೇ ವಯಸ್ಸಾದರೂ ಸೋದರ, ಸೋದರಿಯರೊಂದಿಗಿನ ಬಾಂಧವ್ಯ ಹಾಳಾಗದಂತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಎಷ್ಟೇ ಮೆಟೀರಿಯಲಿಸ್ಟಿಕ್ ಆಗಿದ್ದರೂ, ಸೋದರರೊಂದಿಗಿನ ಬಾಂಧವ್ಯವನ್ನು ಮಾತ್ರ ಗೌರವಿಸುವುದು ಇವರ ಅನನ್ಯ ಗುಣ. 

Amarnath Yatra 2023ಗೆ ನೋಂದಣಿ ಆರಂಭ, ಇಲ್ಲಿದೆ ಸಂಪೂರ್ಣ ವಿವರ..

ಸಿಂಹ ರಾಶಿ
ಒಡಹುಟ್ಟಿದವರೊಂದಿಗೆ ಅತಿ ಹೆಚ್ಚಿನ ಒಡನಾಟದ ಬಾಲ್ಯದ ನೆನಪುಗಳು ಸಿಂಹ ರಾಶಿಯವರಿಗಿರುತ್ತದೆ. ಇದು ಅವರನ್ನು ದೊಡ್ಡಗಾದ ಮೇಲೆಯೂ  ಪರಸ್ಪರ ಹತ್ತಿರ ತರುತ್ತದೆ. ಸಿಂಹ ರಾಶಿಯವರು ಬಾಲ್ಯದಲ್ಲಿ ಸೋದರ, ಸೋದರಿ ಜೊತೆ ಎಷ್ಟೇ ಜಗಳವಾಡಿರಲಿ- ದೊಡ್ಡಗಾದ ನಂತರ ಅವರಿಗೆ ಸದಾ ಹತ್ತಿರವಿರಲು ಬಯಸುತ್ತಾರೆ. ಇವರು ಒಡಹುಟ್ಟಿದವರನ್ನು ಚಾಳಿಸುವುದನ್ನು, ಅವರನ್ನು ಬ್ಲ್ಯಾಕ್‌ಮೇಲ್ ಮಾಡುವುದನ್ನು, ಅವರ ಗುಟ್ಟು ರಟ್ಟಾಗಿಸುವುದಾಗಿ ಹೆದರಿಸುವುದನ್ನು ಎಂಜಾಯ್ ಮಾಡುತ್ತಾರೆ. ಹಾಗಿದ್ದೂ, ಅವರಿಗೆ ಅಗತ್ಯವಿದ್ದಾಗ ಮೊದಲು ಜೊತೆಯಾಗುವುದೇ ಇವರು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!