62 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿ ಇಂದಿನಿಂದ (ಏಪ್ರಿಲ್ 17) ಪ್ರಾರಂಭವಾಗಿದೆ. ನೋಂದಣಿ ಮಾಡಿಕೊಳ್ಳುವ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಕಾಲ ನಡೆಯುವ ಶ್ರೀ ಅಮರನಾಥ ಯಾತ್ರೆಯು ಈ ವರ್ಷ 1 ಜುಲೈ 2023ರಿಂದ ಪ್ರಾರಂಭವಾಗಲಿದೆ. ಈ ಜನಪ್ರಿಯ ತೀರ್ಥಯಾತ್ರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿ ಏಪ್ರಿಲ್ 17ರಿಂದ ಪ್ರಾರಂಭವಾಗಿದೆ. ಈ ಕುರಿತ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಿದ್ದೇವೆ.
62 ದಿನಗಳ ಯಾತ್ರೆ
ನೋಂದಣಿಗಳು ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್ ಮೂಲಕ ಪ್ರಾರಂಭವಾಗುತ್ತವೆ. ಈ ವರ್ಷ ಜುಲೈ 1ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ. ಮೊದಲ ಬ್ಯಾಚ್ ಜೂನ್ 30ರಂದು ಜಮ್ಮುವಿನಿಂದ ಫ್ಲ್ಯಾಗ್ ಆಫ್ ಆಗಲಿದೆ. ಈ ಬಾರಿ ಆಗಸ್ಟ್ 31ರವರೆಗೆ ಯಾತ್ರೆ ನಡೆಯಲಿದೆ. 62 ದಿನಗಳ ಯಾತ್ರೆಗೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಪ್ರಾರಂಭಿಸಿದೆ. ಯಾತ್ರೆ ಪ್ರಾರಂಭವಾಗುವ ಮೊದಲು ಟೆಲಿಕಾಂ ಸೇವೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಅಮರನಾಥ ಯಾತ್ರಿಗಳ ವೈದ್ಯಕೀಯ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ ಮಾಡಲಾಗುತ್ತಿದೆ.
ಅಮರನಾಥ ಯಾತ್ರೆ 2023 ನೋಂದಣಿ
13 ರಿಂದ 70 ವರ್ಷ ವಯಸ್ಸಿನ ಜನರು ಅಮರನಾಥ ಯಾತ್ರೆಗೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಆದರೆ, ಆರು ವಾರ ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಗರ್ಭಿಣಿಯಾಗಿರುವ ಮಹಿಳೆಯರಿಗೆ ಅಮರನಾಥ ಯಾತ್ರೆಗೆ ಅವಕಾಶವಿಲ್ಲ. ಆನ್‌ಲೈನ್ ನೋಂದಣಿಗಾಗಿ, ನೀವು ವೆಬ್‌ಸೈಟ್ https://jksasb.nic.in ಗೆ ಭೇಟಿ ನೀಡಬಹುದು.
Shani Drishti Effects: ಈ 6 ರಾಶಿಗಳಿಗೆ ಶನಿಯ 3ನೇ ದೃಷ್ಟಿ ತರಲಿದೆ ಅಪಾಯ
ಅಮರನಾಥ ಯಾತ್ರೆಗೆ ಟೋಲ್ ಫ್ರೀ ಸಂಖ್ಯೆ
ಗೊತ್ತುಪಡಿಸಿದ ಬ್ಯಾಂಕ್ ಶಾಖೆಗಳ ಪಟ್ಟಿ ಶ್ರೀ ಅಮರನಾಥ ಯಾತ್ರಾ ಶ್ರೈನ್ ಬೋರ್ಡ್ (SASB) ವೆಬ್‌ಸೈಟ್ https://jksasb.nic.in ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಟೋಲ್-ಫ್ರೀ ಸಂಖ್ಯೆಗಳನ್ನು ಸಂಪರ್ಕಿಸಬಹುದು- 18001807198/18001807199.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಪ್ರತಿಯೊಂದು ಶಾಖೆಯಲ್ಲಿ ನೋಂದಣಿ
ಈ ಬಾರಿ ಅಮರನಾಥ ಯಾತ್ರೆಗೆ ಒಟ್ಟು 31 ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ನೋಂದಣಿಯನ್ನು ಮಾಡಲಾಗುತ್ತದೆ. ವೈದ್ಯಕೀಯ ಮತ್ತು ನೋಂದಣಿಗಾಗಿ ಹಲವು ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ, ಇಲ್ಲದೆಯೇ ಪ್ರಯಾಣ ಸಾಧ್ಯವಾಗುವುದಿಲ್ಲ.
ಅಮರನಾಥ ಯಾತ್ರೆಗೆ ಬೇಕಾದ ದಾಖಲೆಗಳು
ಯಾತ್ರಾರ್ಥಿಗಳು ತಮ್ಮೊಂದಿಗೆ ಪಾಸ್‌ಪೋರ್ಟ್ ಅಳತೆಯ ಫೋಟೋ, ಗುರುತಿನ ಚೀಟಿಯ ಪ್ರತಿಯನ್ನು ತರಬೇಕು. ಇದರೊಂದಿಗೆ ಪ್ರಯಾಣದ ದಿನಾಂಕ ಮತ್ತು ಮಾರ್ಗವನ್ನು ಸಹ ನಮೂದಿಸಬೇಕಾಗುತ್ತದೆ.
ನೋಂದಣಿ ಶುಲ್ಕ ಎಷ್ಟು?
ಗೊತ್ತುಪಡಿಸಿದ ಬ್ಯಾಂಕ್ ಶಾಖೆಗಳ ಮೂಲಕ ಮುಂಗಡ ನೋಂದಣಿ ವೆಚ್ಚವು ಪ್ರತಿ ವ್ಯಕ್ತಿಗೆ 120 ರೂ.
ಆನ್‌ಲೈನ್ ನೋಂದಣಿ ವೆಚ್ಚ ಪ್ರತಿ ವ್ಯಕ್ತಿಗೆ 220 ರೂ.
ಗುಂಪು ನೋಂದಣಿ ವೆಚ್ಚ ಪ್ರತಿ ವ್ಯಕ್ತಿಗೆ 220 ರೂ.
ಎನ್‌ಆರ್‌ಐ ಯಾತ್ರಿಗಳು ಪ್ರತಿ ವ್ಯಕ್ತಿಗೆ 1,520 ರೂ.ಗೆ ಪಿಎನ್‌ಬಿ ಮೂಲಕ ನೋಂದಾಯಿಸಿಕೊಳ್ಳಬಹುದು.
Shani Rahu Yuti: ಜಾತಕದಲ್ಲಿ ಶನಿ ರಾಹು ಸಂಯೋಗದಿಂದಾಗುತ್ತೆ ಪಿಶಾಚ ಯೋಗ; ಬದುಕಾಗುತ್ತೆ ನರಕ
ಅಮರನಾಥ ಯಾತ್ರೆಯ ಹಳೆಯ ಮತ್ತು ಹೊಸ ಮಾರ್ಗ ಯಾವುದು?
ಅಮರನಾಥ ಯಾತ್ರೆಯ ಮಾರ್ಗವು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಈ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣದೊಂದಿಗೆ, ಪ್ರಯಾಣದ ಮಾರ್ಗವೂ ಬದಲಾಗಿದೆ. ಈಗ ಅಮರನಾಥ ಯಾತ್ರೆಗೆ ಎರಡು ಮಾರ್ಗಗಳಿವೆ. ಒಂದು ಮಾರ್ಗವು ಪಹಲ್ಗಾಮ್ ನಿಂದ ಪ್ರಾರಂಭವಾಗುತ್ತದೆ, ಇದು ಸುಮಾರು 46-48 ಕಿ.ಮೀ. ದೂರದ ಯಾತ್ರೆಯಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸಲು 5 ದಿನಗಳು ಬೇಕಾಗುತ್ತದೆ. ಮತ್ತೊಂದೆಡೆ, ಎರಡನೇ ಮಾರ್ಗವು ಬಾಲ್ಟಾಲ್‌ನಿಂದ ಪ್ರಾರಂಭವಾಗುತ್ತದೆ, ಅಲ್ಲಿಂದ ಗುಹೆಯ ಅಂತರವು 14-16 ಕಿಲೋಮೀಟರ್ ಆಗಿದೆ. ಆದರೆ ಕಡಿದಾದ ಏರಿಕೆಯಿಂದಾಗಿ, ಎಲ್ಲರಿಗೂ ಅದರ ಮೂಲಕ ಹೋಗಲು ಸಾಧ್ಯವಿಲ್ಲ.
ಅಮರನಾಥ ಧಾಮ ಮತ್ತು ಅದರ ಪ್ರಾಮುಖ್ಯತೆ
ಅಮರನಾಥ ಧಾಮವು ಜಮ್ಮು-ಕಾಶ್ಮೀರದ ಹಿಮಾಲಯದ ಮಡಿಲಲ್ಲಿರುವ ಪವಿತ್ರ ಗುಹೆಯಾಗಿದೆ. ಇದು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಅಮರನಾಥದ ಪವಿತ್ರ ಗುಹೆಯಲ್ಲಿ ಶಿವನು ಮಂಜುಗಡ್ಡೆಯ ಶಿವಲಿಂಗವಾಗಿ ಅವತರಿಸುತ್ತಾನೆ. ಇದನ್ನು ಬಾಬಾ ಬರ್ಫಾನಿ ಎಂದೂ ಕರೆಯುತ್ತಾರೆ. ಪವಿತ್ರ ಗುಹೆಯು ಹಿಮನದಿಗಳು, ಹಿಮಭರಿತ ಪರ್ವತಗಳಿಂದ ಆವೃತವಾಗಿದೆ. ಗುಹೆಯು ಬೇಸಿಗೆಯಲ್ಲಿ ಕೆಲವು ದಿನಗಳನ್ನು ಹೊರತುಪಡಿಸಿ, ವರ್ಷದ ಬಹುಪಾಲು ಹಿಮದಿಂದ ಆವೃತವಾಗಿರುತ್ತದೆ.
ವಿಶೇಷವೆಂದರೆ ಈ ಗುಹೆಯಲ್ಲಿ ಪ್ರತಿ ವರ್ಷ ಮಂಜುಗಡ್ಡೆಯ ಶಿವಲಿಂಗವು ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಗುಹೆಯ ಮೇಲ್ಛಾವಣಿಯಲ್ಲಿನ ಬಿರುಕುಗಳಿಂದ ನೀರಿನ ಹನಿಗಳು ತೊಟ್ಟಿಕ್ಕುವ ಮೂಲಕ ಮಂಜುಗಡ್ಡೆಯ ಲಿಂಗವು ರೂಪುಗೊಳ್ಳುತ್ತದೆ.