ಪ್ರೀತಿಯನ್ನು ಕೆಲ ಜನ ಸುಲಭವಾಗಿ ವ್ಯಕ್ತಪಡಿಸಿದರೆ ಕೆಲವರಿಗೆ ಇದು ಭಾರೀ ಕಷ್ಟವಾಗುತ್ತದೆ. ಅದರಲ್ಲೂ ಈ ನಾಲ್ಕು ರಾಶಿಯ ಜನ ಪ್ರೀತಿಯನ್ನು ವ್ಯಕ್ತಪಡಿಸಲು ಭಾರೀ ಹಿಂದೆ. ಇವರು ಸಂಗಾತಿ ಜತೆಗೆ ತಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ.
ಪ್ರೀತಿಯನ್ನು ಸೂಕ್ತ ವಿಧಾನದಲ್ಲಿ ವ್ಯಕ್ತಪಡಿಸಲು ಎಲ್ಲರಿಗೂ ಬರುವುದಿಲ್ಲ. ಆದರೆ, ಪ್ರೀತಿಯನ್ನು ವ್ಯಕ್ತಪಡಿಸಬೇಕೆನ್ನುವುದು ಎಲ್ಲರ ಆಸೆ. ತಾವು ಪ್ರೀತಿಸುವವರಿಗೆ ಅದನ್ನು ತಿಳಿಯಪಡಿಸಬೇಕು ಎಂದು ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುತ್ತಾರೆ. ಕೆಲವರಿಗೆ ಅದು ಸುಲಭವಾದರೆ, ಹಲವರಿಗೆ ಇದು ಭಾರೀ ಕಷ್ಟದ ಸಂಗತಿ. ಅಷ್ಟಕ್ಕೂ ಕೆಲವರಿಗೆ ಪ್ರೀತಿಯಲ್ಲಿ ಬೀಳುವುದು ಸುಲಭ. ಆದರೆ, ಅದನ್ನು ವ್ಯಕ್ತಪಡಿಸಲು ಹಿಂಜರಿಕೆ, ಅದೇನೋ ಭಯ, ಒತ್ತಡ. ಪ್ರೀತಿಯ ಬಗ್ಗೆ ಹೇಳಿಕೊಳ್ಳಬೇಕು ಎಂದರೆ ಮುಖ್ಯವಾಗಿ, ಕಂಫರ್ಟ್ ಆಗಿ ಭಾವನೆಯನ್ನು ವ್ಯಕ್ತಡಿಸುವಂತೆ ಇರಬೇಕು. ಇಲ್ಲವಾದಲ್ಲಿ ಅದು ಸಾಧ್ಯವಾಗುವುದಿಲ್ಲ. ಅವರೇನು ಅನ್ನುತ್ತಾರೋ, ಹೇಗೆ ಸ್ವೀಕರಿಸುತ್ತಾರೋ, ನೋ ಎನ್ನುವ ಉತ್ತರ ಬಂದರೆ .. ಎಂಬ ಅನುಮಾನಗಳು, ಒತ್ತಡಗಳು ಇರುತ್ತವೆ. ಇಂತಹ ಭಾವನೆಗಳು ಎಲ್ಲರಿಗೂ ಸಾಮಾನ್ಯ. ಆದರೆ, ಕೆಲವು ರಾಶಿಗಳಿಗೆ ಸೇರಿದ ಜನರಿಗೆ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದರೆ ಭಾರೀ ಹಿಂಸೆ. ಕೆಲವು ಜನ ಲವರ್ ಬಳಿ ಪ್ರೀತಿಯ ಬಗ್ಗೆ ಹೇಳಿಕೊಳ್ಳುವುದು ತಮ್ಮ ದೌರ್ಬಲ್ಯ ಎಂದು ಭಾವಿಸಿದರೆ, ಕೆಲವರಿಗೆ ದೀರ್ಘ ಸಂಬಂಧಕ್ಕೆ ಬದ್ಧರಾಗಲು ಭಯ ಇರುತ್ತದೆ. ಕೆಲವರಿಗೆ ಮುಕ್ತವಾಗಿ ಭಾವನೆಗಳನ್ನು ಹೇಳಿಕೊಳ್ಳುವ ಧೈರ್ಯ ಇರುವುದಿಲ್ಲ. ಹೀಗಾಗಿ, ಈ ರಾಶಿಗಳು ತಮ್ಮ ಲವರ್ ಬಳಿ ಪ್ರೀತಿಯ ಭಾವನೆಯನ್ನು ಹಂಚಿಕೊಳ್ಳಲು ವಿಫಲರಾಗುವ ಸಾಧ್ಯತೆಯೇ ಹೆಚ್ಚು.
• ಮಕರ (Capricorn)
ಮಕರ ರಾಶಿಯ (Zodiac Sign) ಜನ ಸಂಗಾತಿ (Partner), ಲವರ್ (Lover) ಬಳಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಾರೆ. ಇವರ ಪಾಲಿಗೆ ಇದು ಒಂದು ದೌರ್ಬಲ್ಯ (Weakness). ಹೀಗಾಗಿ, ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಈ ಬಗ್ಗೆ ನರ್ವಸ್ ಫೀಲ್ (Feel) ಆಗುತ್ತಾರೆ. ಅಲ್ಲದೆ, ತಮ್ಮಲ್ಲಿರುವ ಭಾವನೆ ನೈಜವಾದದ್ದು ಎಂದು ಖಾತರಿ ಆಗುವವರೆಗೂ ಈ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಲವರ್ ತಮ್ಮ ಜೀವನದಿಂದ ದೂರವಾಗುವ ಮಾತಿಲ್ಲ ಎನ್ನುವುದು ಖಚಿತವಾದ ಬಳಿಕವೇ ಮಾತನಾಡಬಲ್ಲರು. ಏಕೆಂದರೆ, ಇವರಲ್ಲಿ ತಿರಸ್ಕೃತವಾಗುವ ಭಯ ಇದ್ದೇ ಇರುತ್ತದೆ.
Akshaya Tritiya 2023ರಂದು ಮೇಷದಲ್ಲಿ ಪಂಚಗ್ರಹ ಯೋಗ, ಈ ರಾಶಿಗಳಿಗೆ ಶುಭಫಲ
• ಕನ್ಯಾ (Virgo)
ಕನ್ಯಾ ರಾಶಿಯ ಜನ ಸ್ವಭಾವಸಿದ್ಧವಾಗಿ ಪರಿಪೂರ್ಣತೆ (Perfectionist) ಬಯಸುವವರು. ಪ್ರೀತಿಯ ಭಾವನೆ ಹಂಚಿಕೊಳ್ಳಲು ಈ ಮನಸ್ಥಿತಿಯೇ ಇವರನ್ನು ಹಿಂಜರಿಯುವಂತೆ ಮಾಡುತ್ತದೆ. ಆಳವಾದ ಚಿಂತಕರಾಗಿದ್ದು, ವಿಮರ್ಶಕ ಬುದ್ಧಿ ಹೊಂದಿರುತ್ತಾರೆ. ಹೀಗಾಗಿ, ತಮ್ಮ ಸಂಗಾತಿಯ ಆಯ್ಕೆಯಲ್ಲಿ ಪದೇ ಪದೆ ಅವಕಾಶ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಲವರ್ ನಿಂದ ಖಚಿತತೆ ದೊರೆಯುವವರೆಗೂ ನಿರೀಕ್ಷೆ ಮಾಡುತ್ತಾರೆ. ಪ್ರೀತಿಯಲ್ಲಿ (Love) ಸಂಗಾತಿಯ ಮೇಲುಗೈ ಆಗುವುದನ್ನು ಇವರು ಸಹಿಸುವುದಿಲ್ಲ. ಅಂತಿಮವಾಗಿ ಪ್ರೀತಿಯ ಬಗ್ಗೆ ಘೋಷಣೆ ಮಾಡುವವರು ಇವರೇ ಆಗಿರುತ್ತಾರೆ.
• ಧನು (Sagittarius)
ಬದ್ಧತೆಯುಳ್ಳ, ಪ್ರೀತಿಸುವ ಸಂಗಾತಿಯಾಗಬಲ್ಲ ಧನು ರಾಶಿಯ ಜನ ತಮ್ಮ ಸ್ವಾತಂತ್ರ್ಯಕ್ಕೆ (Freedom) ಎಲ್ಲಕ್ಕಿಂತ ಅಧಿಕವಾಗಿ ಬೆಲೆ ನೀಡುತ್ತಾರೆ. ಸ್ವಾತಂತ್ರ್ಯದೊಂದಿಗೆ ಹೊಂದಾಣಿಕೆ (Adjust) ಮಾಡಿಕೊಳ್ಳಬೇಕಾದ ಯಾವುದೇ ಸಂಗತಿಯನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೂ ಇದೇ ಕಾರಣಕ್ಕೆ ಹಿಂದೇಟು ಹಾಕುತ್ತಾರೆ. ಬಾಯಿಬಿಟ್ಟು ಪ್ರೀತಿಯನ್ನು ಹೇಳದಿದ್ದರೂ ಇವರು ಸಂಗಾತಿ ಜತೆಗೆ ಅದ್ಭುತವಾದ ಸಾಂಗತ್ಯ (Relation) ಹೊಂದಬಲ್ಲರು. ಒಮ್ಮೆ ಭಾವನೆ ಹಂಚಿಕೊಂಡ ಬಳಿಕ ದೃಢವಾದ ಸಂಬಂಧ ಹೊಂದುತ್ತಾರೆ.
500 ವರ್ಷಗಳ ಬಳಿಕ ಕೇದಾರ ಯೋಗ, ನಿಮ್ಮ ರಾಶಿಗಿದೆಯಾ ಮಹಾ ಅದೃಷ್ಟ?
• ಕುಂಭ (Aquarius)
ಕುಂಭ ರಾಶಿಯವರಿಗೆ ಭಾವನೆಗಳು ಸವಾಲು (Challenge) ಎನಿಸುತ್ತವೆ. ಆದರೆ, ಭಾವನೆಗಳಲ್ಲಿ ಇವರು ಕಡಿಮೆಯಾಗಿರುವುದಿಲ್ಲ. ಆದರೆ, ಹೇಗೆ ವ್ಯಕ್ತಪಡಿಸಬೇಕು ಎನ್ನುವ ಬಗ್ಗೆ ಖಚಿತತೆ ಹೊಂದಿರುವುದಿಲ್ಲ. ಹೀಗಾಗಿ, ಪ್ರೀತಿಯನ್ನು ವ್ಯಕ್ತಪಡಿಸುವ ಬದಲು ಭಯದಿಂದ (Fear) ಕೂಡಿರುವಂತೆ ವರ್ತಿಸುತ್ತಾರೆ. ರೋಮ್ಯಾಂಟಿಕ್ (Romantic) ಭಾವನೆಯನ್ನು ವಿಭಿನ್ನವಾಗಿ ತೋರ್ಪಡಿಸಿಕೊಳ್ಳುತ್ತಾರೆಯೇ ಹೊರತು, ಸಿಂಪಲ್ಲಾಗಿ “ಐ ಲವ್ ಯು’ ಎನ್ನುವುದೇ ಇಲ್ಲ. ಭಾವನೆ ವ್ಯಕ್ತಪಡಿಸಲು ಸಿಕ್ಕಾಪಟ್ಟೆ ಯೋಚನೆ ಮಾಡುತ್ತಾರೆ.