ಮಾನವನ ವಿವಿಧ ಧೋರಣೆಗಳಲ್ಲಿ ಭಾರೀ ಸಂಕೀರ್ಣ ಮತ್ತು ವಿಭಿನ್ನ ಆಯಾಮ ಹೊಂದಿರುವ ಅಂಶವೆಂದರೆ ಲೈಂಗಿಕತೆ. ಎಲ್ಲರಿಗೂ ಲೈಂಗಿಕ ಬಯಕೆಗಳು ಸಾಮಾನ್ಯ. ಆದರೆ, ಕೆಲವು ರಾಶಿಗಳ ಜನರಲ್ಲಿ ಮಾತ್ರ ಲೈಂಗಿಕ ಭಾವನೆ ವಿಶಿಷ್ಟವಾಗಿ ಪ್ರಖರವಾಗಿರುತ್ತದೆ.
ರೋಮ್ಯಾಂಟಿಕ್ ಸಂಬಂಧದಲ್ಲಿ ಅಥವಾ ದಾಂಪತ್ಯದಲ್ಲಿ ಲೈಂಗಿಕವಾದ ಆಕರ್ಷಣೆ ಇರಬೇಕಾಗುತ್ತದೆ. ಇಲ್ಲವಾದಲ್ಲಿ ದಾಂಪತ್ಯ ಕ್ರಮೇಣ ನೀರಸವೆನಿಸುತ್ತದೆ. ಲೈಂಗಿಕ ಕಾಮನೆಗಳು ಮನುಷ್ಯನಲ್ಲಿ ಸಹಜವಾಗಿರುವ ಬಯಕೆಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳಲ್ಲಿ ಲೈಂಗಿಕ ಭಾವನೆಗಳು ಹೆಚ್ಚು ಜಾಗೃತವಾಗಿರುತ್ತವೆ ಹಾಗೂ ಹೆಚ್ಚು ಮೋಹಕವಾಗಿರುತ್ತವೆ. ಯಾವ ದಾಂಪತ್ಯದಲ್ಲಿ ಲೈಂಗಿಕ ಚಟುವಟಿಕೆ ಸಕ್ರಿಯವಾಗಿರುತ್ತದೆಯೋ ಅವರಲ್ಲಿ ಆತ್ಮೀಯತೆ ಹೆಚ್ಚು ಎನ್ನುವುದನ್ನು ಸಾಕಷ್ಟು ಅಧ್ಯಯನಗಳೂ ನಿರೂಪಿಸಿವೆ. ಆಳವಾದ ಬಾಂಧವ್ಯ ಕೇವಲ ಲೈಂಗಿಕತೆಯನ್ನು ಆಧರಿಸಿ ರೂಪುಗೊಳ್ಳುವುದಿಲ್ಲವಾದರೂ ಸಾಂಗತ್ಯ ಹೆಚ್ಚು ಆಪ್ತವಾಗಲು ಇದು ಅಗತ್ಯ. ಪ್ರೀತಿಪಾತ್ರರ ನಡುವೆ ನಡೆಯುವುದು ಕೇವಲ ಲೈಂಗಿಕ ಕ್ರಿಯೆಯಲ್ಲ. ಇದು ಮನಸ್ಸು ಮತ್ತು ಬುದ್ಧಿ, ಭಾವಗಳನ್ನು ಬೆಸೆಯುವ ಕ್ರಿಯೆಯೂ ಹೌದು. ಪ್ರತಿಯೊಬ್ಬರಲ್ಲೂ ಲೈಂಗಿಕ ಭಾವನೆ ಇರುವುದು ಸಹಜವಾಗಿದ್ದರೂ ಕೆಲವರು ಮಾತ್ರ ಅತ್ಯಂತ ತೀಕ್ಷ್ಣವಾದ ಕಾಮನೆಗಳನ್ನು ಹೊಂದಿರುತ್ತಾರೆ ಹಾಗೂ ಅದನ್ನು ಬಹಳ ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಲೈಂಗಿಕವಾಗಿ ಅತ್ಯಂತ ಸಕ್ರಿಯವಾಗಿರುವ ಇವರು ಪ್ಯಾಷನೇಟ್ ಆಗಿ ಪ್ರೀತಿಸುತ್ತಾರೆ.
• ವೃಶ್ಚಿಕ (Scorpio)
ಲೈಂಗಿಕವಾಗಿ (Sexually) ಸಕ್ರಿಯವಾಗಿರುವ (Active) ರಾಶಿಗಳ ಪೈಕಿ ವೃಶ್ಚಿಕ ರಾಶಿಯ ಜನರನ್ನು ಪ್ರಮುಖವಾಗಿ ಗುರುತಿಸಬಹುದು. ಈ ವಿಚಾರದಲ್ಲಿ ಅವರು ಮ್ಯಾಗ್ನೆಟಿಕ್ (Magnetic) ಎನ್ನುವಂತಹ ಎನರ್ಜಿ (Energy) ಹೊಂದಿರುತ್ತಾರೆ. ಇತರರನ್ನು ಬಹುಬೇಗ ಆಕರ್ಷಿಸುತ್ತಾರೆ. ಆಳವಾದ ಕಾಮನೆಗಳು (Desire) ಮತ್ತು ಭಾವನಾತ್ಮಕ ಸಾಂಗತ್ಯದಿಂದಾಗಿ ಇವರು ಲೈಂಗಿಕವಾಗಿ ಅತ್ಯಂತ ಪ್ರಬುದ್ಧರಾಗಿರುತ್ತಾರೆ. ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳಲು ಇವರಿಗೆ ಯಾವ ಮುಜುಗರವೂ ಇರುವುದಿಲ್ಲ. ಸಂತಸಕ್ಕಾಗಿ ಯಾವುದೇ ಮಿತಿ ದಾಟಬಲ್ಲರು. ಈ ಗುಣ ಇವರನ್ನು ಸಹಜವಾಗಿ ಸಾಹಸಿ ಮತ್ತು ಪ್ಯಾಷನೇಟ್ ಲವರ್ (Passionate Lover) ಆಗಿ ರೂಪಿಸುತ್ತದೆ.
ಶನಿ- ಮಂಗಳ ಯೋಗದಿಂದ ಈ ಐದು ರಾಶಿಯವರಿಗೆ ಕಾದಿದೆ ಅಪಾಯ
• ವೃಷಭ (Taurus)
ವೃಷಭ ರಾಶಿಯ ಜನ ದೈಹಿಕ (Body) ಭಾವನೆಗಳೊಂದಿಗೆ ಸದೃಢ ಸಂಪರ್ಕ ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಇವರು ತಮ್ಮ ದೇಹದ ಬಗ್ಗೆ ಸೂಕ್ಷ್ಮರಾಗಿರುತ್ತಾರೆ. ಜೀವನದಲ್ಲಿ ಅತ್ಯುತ್ತಮವಾದ ಅನುಭವ (Experience) ಹೊಂದುವುದನ್ನು ಬಯಸುತ್ತಾರೆ. ಆಪ್ತ ಸಂಬಂಧದಲ್ಲಿ (Intimate Relationship) ತೃಪ್ತಿ ಮತ್ತು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಂಪರ್ಕ ಹೊಂದಿರುತ್ತಾರೆ.
• ಸಿಂಹ (Leo)
ನೈಸರ್ಗಿಕವಾಗಿ ಆಕರ್ಷಕರಾಗಿರುವ ಸಿಂಹ ರಾಶಿಯ ಜನ ವರ್ಚಸ್ಸಿನಿಂದ ಕೂಡಿರುತ್ತಾರೆ. ಎಲ್ಲರ ಕೇಂದ್ರಬಿಂದುವಾಗಲು ಇಷ್ಟಪಡುತ್ತಾರೆ. ತಮ್ಮ ಉತ್ಸಾಹ ಮತ್ತು ಚೈತನ್ಯವನ್ನು (Energy) ಲೈಂಗಿಕತೆಗೂ ವಿಸ್ತರಿಸಲು ಇಷ್ಟಪಡುತ್ತಾರೆ. ಪ್ಯಾಷನೇಟ್ ಸೆಕ್ಸುವಲ್ ಅನುಭವ ತಮಗೂ, ಸಂಗಾತಿಗೂ (Partner) ದೊರೆಯಬೇಕು ಎನ್ನುತ್ತಾರೆ.
• ಮೇಷ (Aries)
ಅಧಿಕ ಎನರ್ಜಿ ಮಟ್ಟ ಹೊಂದಿರುವ ಇವರು ಬೋಲ್ಡ್ ನೆಸ್ ಗೂ ಹೆಸರುವಾಸಿ. ರೋಮಾಂಚಕ (Adventurous) ಅನುಭವಕ್ಕೆ ತೆರೆದುಕೊಂಡಿರುತ್ತಾರೆ. ಅತ್ಯಂತ ಸದೃಢರಾಗಿ, ಅಪಾರ ಉತ್ಸಾಹದಿಂದ ಲೈಂಗಿಕತೆಯಲ್ಲಿ ತೊಡಗುವುದು ಇವರಿಗೆ ಇಷ್ಟ. ಹೊಸ ಅನುಭವಗಳನ್ನು ಹೊಂದಲು ಬಯಸುತ್ತಾರೆ. ಸಂಗಾತಿಯೊಂದಿಗೆ ತಾವೇ ಮೊದಲು ಸರಸ-ಸಲ್ಲಾಪದಲ್ಲಿ ತೊಡಗುತ್ತಾರೆ. ಈ ಗುಣ ಇವರ ಸಂಬಂಧವನ್ನು ಚೆನ್ನಾಗಿರಿಸುತ್ತದೆ.
Tilak Remedies: ರಾಶಿ ಪ್ರಕಾರ ಈ ರೀತಿ ತಿಲಕವಿಟ್ಟರೆ, ಎಲ್ಲ ಕೆಲಸದಲ್ಲಿ ಯಶಸ್ಸು
• ಮಿಥುನ (Gemini)
ಅತ್ಯಂತ ಕುತೂಹಲಿಗಳಾಗಿರುವ (Curious) ಮಿಥುನ ರಾಶಿಯ ಜನ ಬೌದ್ಧಿಕ ಉತ್ತೇಜನ (Intellectual Stimulation) ಬಯಸುತ್ತಾರೆ. ಈ ಬೌದ್ಧಿಕ ಉತ್ತೇಜನವನ್ನು ಲೈಂಗಿಕತೆಗೂ ವಿಸ್ತರಿಸುತ್ತಾರೆ. ಮುಕ್ತ ಮನಸ್ಸನ್ನು ಹೊಂದಿರುವ ಇವರು ವಿಭಿನ್ನ ವಿಚಾರ, ಫ್ಯಾಂಟಸಿ, ತಂತ್ರಗಳನ್ನು ಲೈಂಗಿಕತೆಯಲ್ಲಿ ಬಳಕೆ ಮಾಡುತ್ತಾರೆ. ಲೈಂಗಿಕತೆಗಾಗಿ ಇವರು ವ್ಯಕ್ತಪಡಿಸುವ ಭಾವನೆಗಳು (Feelings) ಮಾನಸಿಕವಾಗಿ ತೃಪ್ತಿಪಡಿಸುತ್ತವೆ.
• ಧನು (Sagittarius)
ಜೀವನ ಎಲ್ಲ ವಿಧದಲ್ಲೂ ಉತ್ಸಾಹ, ರೋಮಾಂಚನದಿಂದ ಕೂಡಿರಬೇಕು ಎನ್ನುವ ಧನು ರಾಶಿಯ ಜನ ಲೈಂಗಿಕತೆಗೂ ಇದನ್ನು ವಿಸ್ತರಿಸುತ್ತಾರೆ. ಹೊಸ ಅನುಭವ ಮತ್ತು ವಿಭಿನ್ನ ಆಯಾಮಗಳ (Dimensions) ಮೂಲಕ ಸಂತಸ (Pleasure) ಪಡೆಯುತ್ತಾರೆ. ಮುಕ್ತ ಮನಸ್ಸಿನ ಲವರ್ ಆಗಿ ಗುರುತಿಸಿಕೊಳ್ಳುತ್ತಾರೆ. ಆತ್ಮೀಯ ಸಂಬಂಧದಲ್ಲಿ ಅತ್ಯಂತ ಸಾಹಸಿ ಲೈಂಗಿಕತೆ ಪ್ರದರ್ಶಿಸುತ್ತಾರೆ.
• ತುಲಾ (Libra)
ದೇಹ, ಮನಸ್ಸು ಮತ್ತು ಚೈತನ್ಯಗಳಲ್ಲಿ ಸಾಮರಸ್ಯ ಹೊಂದುವ ಆಶಯದ ತುಲಾ ರಾಶಿಯ ಜನಕ್ಕೆ ಭಾವನಾತ್ಮಕ (Emotiona) ಅಗತ್ಯಗಳ ಪೂರೈಕೆಗಾಗಿ ಲೈಂಗಿಕ ಕ್ರಿಯೆ ಅಗತ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಆಪ್ತ ಹಾಗೂ ಸಮತೋಲನದ ಬಾಂಧವ್ಯ (Relationship) ಹೊಂದಲು ಇಷ್ಟಪಡುತ್ತಾರೆ.