ಈ ರಾಶಿಯವರ ಜಾತಕದಲ್ಲಿದೆ ಪ್ರೇಮ ಯೋಗ, ಪ್ರೀತಿಯಲ್ಲಿ ಬೀಳೋದು ಗ್ಯಾರಂಟಿ!

By Suvarna News  |  First Published Jun 22, 2023, 5:10 PM IST

ಎಲ್ಲರಂತೆ ಪ್ರೀತಿಸಬೇಕು, ಉತ್ತಮ ಪ್ರೇಮಿಯಾಗಬೇಕು, ಪ್ರೀತಿಸಿದವರನ್ನೇ ಮದುವೆಯಾಗಿ ಬಾಳಬೇಕು ಎನ್ನುವುದು ಬಹಳಷ್ಟು ಜನರ ಆಸೆ. ಆದರೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು ಕಾಣಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದಕ್ಕೆ ಜನ್ಮರಾಶಿಗಳು ಕಾರಣವಾಗಿರಬಹುದು. ಮುಖ್ಯವಾಗಿ ಎಂಟು ರಾಶಿಗಳ ಜನರಲ್ಲಿ ಪ್ರೇಮದ ಯೋಗ ಮತ್ತು ಸಾಫಲ್ಯ ಕಂಡುಬರುತ್ತದೆ.
 


ಪ್ರೀತಿ-ಪ್ರೇಮದ ವಿಚಾರದಲ್ಲಿ ಹಲವು ಜನ ಯಶಸ್ಸು ಕಂಡರೆ, ಬಹಳಷ್ಟು ಜನ ನಿರಾಶೆ ಅನುಭವಿಸುತ್ತಾರೆ. ಪ್ರೇಮಿಯಾಗಬೇಕೆಂಬ ಆಶಯ ಎಲ್ಲರ ಬದುಕಿನಲ್ಲೂ ಸಾಕಾರಗೊಳ್ಳುವುದಿಲ್ಲ. ಕೆಲವೇ ಜನ ಮಾತ್ರ ಇದರಲ್ಲಿ ಸಫಲರಾಗುತ್ತಾರೆ. ನಮ್ಮ ಜೀವನದ ಆಗುಹೋಗುಗಳಿಗೂ ನಮ್ಮ ರಾಶಿಚಕ್ರಕ್ಕೂ ಅವಿನಾಭಾವ ಸಂಬಂಧ ಇದೆ. ರಾಶಿಚಕ್ರ ನಮ್ಮ ಗುಣಾವಗುಣಗಳನ್ನು ನಿರ್ಧರಿಸುವ ಹಾಗೆಯೇ, ಬಹಳಷ್ಟು ವಿಚಾರಗಳಲ್ಲಿ ತನ್ನ ಪ್ರಭಾವ ಹೊಂದಿರುತ್ತದೆ. ಹೀಗಾಗಿ, ಕೆಲವೇ ರಾಶಿಗಳ ಜನ ಪ್ರೀತಿ-ಪ್ರೇಮದ ವಿಚಾರದಲ್ಲಿ ಯಶಸ್ಸು ಕಾಣುತ್ತಾರೆ, ಮತ್ತೆ ಕೆಲವರು ಇಲ್ಲ. ಇವರು ಪ್ರೀತಿಸಿದರೂ ಅವರನ್ನೇ ಜೀವನದ ಸಂಗಾತಿಯನ್ನಾಗಿ ಮಾಡಿಕೊಳ್ಳಲು ವಿಫಲರಾಗಬಹುದು ಅಥವಾ ಪ್ರೀತಿಪಾತ್ರರಿಂದ ದೂರವಾಗಬೇಕಾದ ಸನ್ನಿವೇಶ ಹೇಗಾದರೂ ಸೃಷ್ಟಿಯಾಗಬಹುದು. ವ್ಯಕ್ತಿಗತ ಅನುಭವಗಳು ಮತ್ತು ಪರಿಸ್ಥಿತಿಗಳು ಸಂಬಂಧದಲ್ಲಿ ಮಹತ್ವದ ಪರಿಣಾಮ ಬೀರುತ್ತವೆಯಾದರೂ ರಾಶಿಚಕ್ರದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನರಿಗೆ ಪ್ರೇಮದ ಯೋಗವಿರುತ್ತದೆ. ಸಾಮಾನ್ಯವಾಗಿ ಎಂಟು ರಾಶಿಗಳ ಜನರಲ್ಲಿ ಈ ಯೋಗ ಅಧಿಕವಾಗಿರುತ್ತದೆ. ಅದರಂತೆ ಅವರು ಬಹುಬೇಗ ಪ್ರೇಮದಲ್ಲಿ ಸಫಲತೆ ಕಂಡುಕೊಳ್ಳುತ್ತಾರೆ.

•    ಮೇಷ (Aries)
ಉತ್ಸಾಹ (Enthusiasm) ಮತ್ತು ಆತ್ಮವಿಶ್ವಾಸ (Confidence), ಹೋರಾಟಕ್ಕಾಗಿ ಮೇಷ ರಾಶಿಯವರು ಎತ್ತಿದ ಕೈ. ತಮ್ಮ ರೋಮ್ಯಾಂಟಿಕ್‌ (Romantic) ಜೀವನದಲ್ಲೂ ಇವರು ಬಹಳ ಸಕ್ರಿಯರಾಗಿರುತ್ತಾರೆ. ಪ್ರೀತಿಗೆ (Love) ಧಕ್ಕೆ ಉಂಟಾಗುವ  ಸಮಯ ಬಂದಾಗ ಇವರು ಬಹಳ ಸಾಹಸಿ ಮನೋಭಾವ ಪ್ರದರ್ಶಿಸುತ್ತಾರೆ. ಸಾಹಸ ಮತ್ತು ಸವಾಲನ್ನು ಸ್ವೀಕರಿಸುವ ಬುದ್ಧಿಯಿಂದಾಗಿ ಇವರಿಗೆ ಪ್ರೇಮದಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚು.

Tap to resize

Latest Videos

ಇವರು ಪ್ರತಿಯೊಂದನ್ನು ಶೇರ್ ಮಾಡ್ತಾರೆ: ಆಮೇಲೆ ಅಯ್ಯೋ ಅಂತಾರೆ..!

•    ವೃಷಭ (Taurus)
ಈ ರಾಶಿಯ ವ್ಯಕ್ತಿಗಳು ವಿಶ್ವಸನೀಯರಾಗಿದ್ದು (Trustful), ಧೈರ್ಯವಂತರು, ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸುವವರಾಗಿರುತ್ತಾರೆ. ಇವರು ಸಂಬಂಧದಲ್ಲಿ (Relation) ಯಾವಾಗಲೂ ಸ್ಥಿರತೆ (Stability) ಮತ್ತು ಸುರಕ್ಷತೆ (Safety) ಬಯಸುತ್ತಾರೆ. ಸಂಬಂಧವನ್ನು ಗಟ್ಟಿಯಾಗಿಸಲು ಶ್ರಮಪಡುವ ಮನಸ್ಥಿತಿ ಹೊಂದಿದ್ದು, ನಿಷ್ಠೆಯಲ್ಲಿ ಇವರನ್ನು ಮೀರಿಸುವವರಿಲ್ಲ. ಇವರಿಗೂ ಪ್ರೇಮದ (Love) ಯೋಗ ಇರುವ ಸಾಧ್ಯತೆ ಇದ್ದು, ಯಶಸ್ಸು ದೊರೆಯುತ್ತದೆ.

•    ಮಿಥುನ (Gemini)
ಅತ್ಯಂತ ಚಲನಶೀಲ ಜನರಾಗಿದ್ದು, ಸಾಮಾಜಿಕ ಕೌಶಲ (Social Skill) ಅದ್ಭುತವಾಗಿರುತ್ತದೆ. ಇವರು ಸುಲಭವಾಗಿ ಹೊಸಬರೊಂದಿಗೆ ಬೆರೆತು ಹೃದಯಸ್ಪರ್ಶಿ ಮಾತುಕತೆಯಲ್ಲಿ ತೊಡಗಬಲ್ಲರು. ಇವರ ಆಕರ್ಷಕ ವ್ಯಕ್ತಿತ್ವ (Attractive Personality) ಮತ್ತು ಬೌದ್ಧಿಕ ಕೌಶಲಗಳಿಂದ ಬಹುಬೇಗ ಸಂಬಂಧ ಗಳಿಸುತ್ತಾರೆ ಹಾಗೂ ಪ್ರೇಮದಲ್ಲಿ ಯಶಸ್ಸು ಕಾಣುತ್ತಾರೆ.

•    ಸಿಂಹ (Leo)
ಸಿಂಹ ರಾಶಿಯ ಜನ ಆತ್ಮವಿಶ್ವಾಸಿಗಳಾಗಿದ್ದು, ವರ್ಚಸ್ಸು (Charm) ಹೊಂದಿರುತ್ತಾರೆ, ನೈಸರ್ಗಿಕ ನಾಯಕರಾಗಿರುವ ಇವರು ಇತರರನ್ನು ತಮ್ಮೆಡೆಗೆ ಸುಲಭವಾಗಿ ಸೆಳೆಯುತ್ತಾರೆ. ಉದಾರತೆ ಮತ್ತು ಆತ್ಮೀಯತೆಯಿಂದ ವರ್ತಿಸುತ್ತಾರೆ. ಪ್ರೀತಿ ಮತ್ತು ಸ್ನೇಹದಲ್ಲಿ ಅತ್ಯಂತ ಮುಕ್ತವಾಗಿ ಭಾವನೆಗಳನ್ನು ವ್ಯಕ್ತಪಡಿಸುವ ಇವರ ರೀತಿಯಿಂದಾಗಿ ರೋಮ್ಯಾಂಟಿಕ್‌ ಸಂಬಂಧದಲ್ಲಿ ಬಹುಬೇಗ ಯಶಸ್ಸು (Success) ಲಭಿಸುತ್ತದೆ.

ವೈವಾಹಿಕ ಜೀವನ ಮುಳುಗುತ್ತಿದ್ದರೂ, ದಡ ಮುಟ್ಟಿಸುವ ಹಟದವರು ಈ ರಾಶಿಯವರು

•    ತುಲಾ (Libra)
ತುಲಾ ರಾಶಿಯ ಜನ ಸಾಮರಸ್ಯ (Harmony) ಮತ್ತು ಸಂಬಂಧದಲ್ಲಿ ಸಮತೋಲನಕ್ಕಾಗಿ ಗುರುತಿಸಲಾಗುತ್ತದೆ. ಇವರಿದ್ದಲ್ಲಿ ವಿನೋದಕ್ಕೆ ಕೊರತೆ ಇರುವುದಿಲ್ಲ. ರೋಮ್ಯಾಂಟಿಕ್‌ ಜೀವನದಲ್ಲೂ ಸಕ್ರಿಯರಾಗಿರುತ್ತಾರೆ. ಆಕರ್ಷಕ ತಂತ್ರಗಳು ಮತ್ತು ಹೊಂದಾಣಿಕೆ (Adjustment) ಮಾಡಿಕೊಳ್ಳುವ ಇವರ ಗುಣದಿಂದಾಗಿ ಇವರ ಸಂಬಂಧ ಸಂತೃಪ್ತ ಮತ್ತು ಸಫಲವಾಗುವತ್ತ ಸಾಗುತ್ತದೆ.

•    ಧನು (Sagittarius)
ಸಾಹಸಿಗಳಾಗಿರುವ, ಮೋಜು-ಮಸ್ತಿಯನ್ನು ಇಷ್ಟಪಡುವ ಧನು ರಾಶಿಯ ಜನ ತೀವ್ರ ಆಶಾವಾದಿಗಳಾಗಿರುತ್ತಾರೆ. ಸ್ವತಂತ್ರ ಬುದ್ಧಿ ಪ್ರಬಲವಾಗಿರುತ್ತದೆ. ಮುಕ್ತ ವಿಚಾರ (Open Thought) ಮತ್ತು ಹೊಸ ಅನುಭವಗಳನ್ನು ಹುಡುಕುವ ಬುದ್ಧಿಯಿಂದಾಗಿ ಪ್ರೀತಿಯಲ್ಲಿ ಬಹಳ ಬೇಗ ಸಾಫಲ್ಯ ಕಾಣುತ್ತಾರೆ.

•    ಕುಂಭ (Aquarius)
ಜೀವನ (Life) ಮತ್ತು ಸಂಬಂಧಗಳ ವಿಚಾರದಲ್ಲಿ ವಿಶಿಷ್ಟ ವಿಚಾರ ಹೊಂದಿರುತ್ತಾರೆ. ಪ್ರಬುದ್ಧ ಬೌದ್ಧಿಕ ಸಂಬಂದಕ್ಕೆ ಆದ್ಯತೆ ನೀಡುತ್ತಾರೆ. ಬುದ್ಧಿಯನ್ನು ಉತ್ತೇಜಿಸುವ ಸಂಗಾತಿಯನ್ನು ಬಯಸುತ್ತಾರೆ. ವಿಶಿಷ್ಟ ಚಿಂತನೆ ಮತ್ತು ವ್ಯಕ್ತಿತ್ವದಿಂದಾಗಿ ಪ್ರೀತಿಯಲ್ಲಿ ಯಶಸ್ಸು ಕಾಣುತ್ತಾರೆ.

•    ಮೀನ (Pisces)
ಸಂವೇದನಾಶೀಲರಾಗಿರುವ ಮೀನ ರಾಶಿಯ ಜನ ಭಾವನಾತ್ಮಕವಾಗಿ (Emotional) ಇತರರೊಂದಿಗೆ ಒಂದಾಗುತ್ತಾರೆ. ದಯೆ ಮತ್ತು ಭಾವನಾತ್ಮಕ ನಿಲುವಿನಿಂದ ಪ್ರೀತಿಪಾತ್ರರನ್ನು ಪೊರೆಯುತ್ತಾರೆ. ಹೀಗಾಗಿ, ಇವರು ಪ್ರೇಮದಲ್ಲಿ ಯಶಸ್ಸು ಕಾಣುವುದು ಹೆಚ್ಚು.  

click me!