ಮೇಷದಿಂದ ಕುಂಭದವರೆಗೆ; ಈ ರಾಶಿಯ ಜನರು ಫೋನಿಗೇ ಅಂಟಿಕೊಂಡಿರುತ್ತಾರೆ!

By Suvarna News  |  First Published Jun 26, 2022, 1:57 PM IST

ಫೋನಿಗೆ ಅಂಟಿಕೊಂಡಿರುವುದು ಈಗ ಅಂಥ ವಿಶೇಷವೇನಲ್ಲ. ಹಾಲು ಕುಡಿಯೋ ಮಗುವಿನಿಂದ ಹಿಡಿದು ಅಜ್ಜಅಜ್ಜಿಯರವರೆಗೆ ಕೈಲಿ ಫೋನ್ ಹಿಡಿದು ಪ್ರಪಂಚವನ್ನೇ ಮರೆಯುವವರು ಸಾಕಷ್ಟಿದ್ದಾರೆ. ಅದರಲ್ಲೂ ಈ ನಾಲ್ಕು ರಾಶಿಯವರು ಫೋನನ್ನು ತಮ್ಮ ದೇಹದ ಭಾಗವೇ ಎಂಬಂತೆ ಬಳಸುತ್ತಾರೆ. 


ಕೆಲವರು ಎದ್ದ ಕ್ಷಣದಿಂದ ನಿದ್ದೆ ಬರುವವರೆಗೂ ಫೋನ್‌ಗೆ ಅಂಟಿಕೊಂಡಿರುತ್ತಾರೆ. ಅವರು ಒಂದೇ ಕೋಣೆಯಲ್ಲಿದ್ದರೂ ಸಹ, ಜೊತೆಗಿರುವವರೊಂದಿಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರಿಗೆ ಮೆಸೇಜ್ ಮಾಡುತ್ತಾರೆ. ಪದೇ ಪದೇ ಫೋನ್ ತೆಗೆದು ಚೆಕ್ ಮಾಡುತ್ತಾರೆ. ಒಂದು ಗಂಟೆ ಫೋನ್ ಕಣ್ಣೆದುರಿಲ್ಲವೆಂದರೂ ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ. ಫೋನ್ ವಿಷಯದಲ್ಲಿ ಇವರಿಗೆ ನಿಯಂತ್ರಣವಿರದ ಕಾರಣ, ಸ್ಕ್ರೀನ್ ಟೈಂ ಕಡಿಮೆ ಮಾಡಬೇಕೆಂದರೂ ಸಾಧ್ಯವಾಗದೆ ಒದ್ದಾಡುತ್ತಾರೆ. ಇದರಿಂದ ಅವರ ಬೇರೆ ಕೆಲಸಗಳಿಗೆ ಅಡ್ಡಿಯಾಗುತ್ತಿರುತ್ತದೆ. ಹೀಗೆ ವ್ಯಸನದ ಮಟ್ಟಿಗೆ ಪೋನ್‌ಗೆ ಅಂಟಿಕೊಂಡಿರುವ 4 ರಾಶಿಚಕ್ರ ಚಿಹ್ನೆಗಳು(Zodiac signs) ಇಲ್ಲಿವೆ.

ಮೇಷ ರಾಶಿ(Aries)
ಮೇಷ ರಾಶಿಯವರು ವಾಸ್ತವಿಕವಾಗಿ ಎಲ್ಲ ಹೊಸ ಟೆಕ್ನಾಲಜಿ ಪ್ರಯತ್ನಿಸುತ್ತಾರೆ ಮತ್ತು ಎಲ್ಲ ರೀತಿಯ ತಂತ್ರಜ್ಞಾನಗಳಿಗೆ ವ್ಯಸನಿಯಾಗುತ್ತಾರೆ. ಮೇಷ ರಾಶಿಯ ಜನರು ಸಾಮಾನ್ಯವಾಗಿ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾರೆ, ಆದ್ದರಿಂದ ಅವರು ತಮ್ಮ ಫೋನ್‌ಗಳನ್ನು ಪ್ರತಿ ಬಾರಿ ಬಳಸುವ ಮೂಲಕ ಮಲ್ಟಿಟಾಸ್ಕ್ ಮಾಡಲು ಪ್ರಯತ್ನಿಸುತ್ತಾರೆ. ನಿರಂತರವಾಗಿ ಫೋನ್‌ನಲ್ಲಿ ಇರುವುದು ಮೇಷ ರಾಶಿಯವರಿಗೆ ಬೇಸರ ಕಳೆಯುತ್ತದೆ. ದಿನ ಮೋನೋಟೋನಸ್ ಬದುಕಿನಿಂದ ಬಿಡುಗಡೆಯ ಹಾಗೆನಿಸುತ್ತದೆ. ಆದರೂ ಇವರಿಗೆ ಫೋನ್ ಬಳಕೆಯಲ್ಲೇ ವ್ಯವಹಾರ ಮಾಡಿ ಹಣ ಗಳಿಸುವುದೂ ಗೊತ್ತು. ಹೀಗಾಗಿ, ಹೆಚ್ಚು ಫೋನ್ ವ್ಯಸನಿಯಾದಷ್ಟೂ ಅದರ ಲಾಭವನ್ನೂ ಅವರು ಪಡೆಯುತ್ತಿರುವ ಬಗ್ಗೆ ಅವರು ಸಮರ್ಥಿಸಿಕೊಳ್ಳುತ್ತಾರೆ. 

Tap to resize

Latest Videos

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಕೊಳ್ಳೋದು ಅಶುಭ!

ತುಲಾ ರಾಶಿ(Libra)
ತುಲಾ ರಾಶಿಯವರಿಗೆ ಫೋನ್ ಬಳಕೆ ಒಂದು ಉತ್ಸಾಹದ ಕೆಲಸ. ಇವರ ವ್ಯಸನ ಸುತ್ತಮುತ್ತಲಿರುವವರಿಗೆ ಕಿರಿಕಿರಿಯಾಗಬಹುದು. ಆದರೆ, ಇವರು ಮಾತ್ರ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಇಡೀ ದಿನ ಫೋನ್‌ಗೆ ಅಂಟಿಕೊಂಡಿರುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಮಯ ಕಳೆಯುತ್ತಾರೆ. ಚಾಟ್ ಮಾಡುವುದು, ವಿಡಿಯೋ ನೋಡುವುದು ಎಲ್ಲವೂ ಇವರನ್ನು ಸೆಳೆಯುತ್ತದೆ. ಫೋನ್‌ನಲ್ಲಿ ಮಾಜಿಯ ಬಗ್ಗೆ ಕೆದಕುವುದು, ಅವರನ್ನು ಸ್ಟ್ಯಾಕ್ ಮಾಡುವುದು ಕೂಡಾ ಇವರ ಚಟ. ಫಂಕ್ಷನ್‌ಗಳಿಗೆ ತೆರಳಿದಾಗಲೂ ಫೋನ್‌ನಲ್ಲಿ ಮುಳುಗಿರುತ್ತಾರೆ. 

ಧನು ರಾಶಿ(Sagittarius)
ಧನು ರಾಶಿ ಗಮನವನ್ನು ಬೇಡುತ್ತದೆ ಮತ್ತು ಸಾಮಾಜಿಕ ಮಾಧ್ಯಮವು ಅವರಿಗೆ ಬೇಕಾದ ಈ ಲೈಕು, ಕಾಮೆಂಟು ಇತ್ಯಾದಿ ಅಟೆನ್ಷನ್ ಸಾಕಷ್ಟು ನೀಡುತ್ತದೆ. ಹಾಗಾಗಿ ಅವರು ಯಾವಾಗಲೂ ತಮ್ಮ ಫೋನ್‌ಗಳಲ್ಲಿ ಇರುತ್ತಾರೆ, ಇತರರಿಗೆ ತಮ್ಮ ಜೀವನಶೈಲಿ, ಇರುವ ಸ್ಥಳ, ತಿರುಗಾಡಿದ್ದು, ತಿಂದಿದ್ದು ಎಲ್ಲವನ್ನೂ ತಿಳಿಸುತ್ತಾ ಸಾರ್ವಜನಿಕ ಬೆಳಕಿನಲ್ಲಿ ಜನಪ್ರಿಯವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೊಸ ಲೈಕ್‌ಗಳ ನಿರೀಕ್ಷೆಯಲ್ಲಿ ಧನು ರಾಶಿಯವರು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳನ್ನು ಬ್ರೌಸ್ ಮಾಡುತ್ತಾ ಇರುತ್ತಾರೆ. ಅವರು ಫೋನ್‌ನಲ್ಲಿ ಅಥವಾ ಪಠ್ಯ ಸಂದೇಶಗಳ ಮೂಲಕ ಗಂಟೆಗಟ್ಟಲೆ ಮಾತನಾಡಬಹುದು. ಏಕೆಂದರೆ ಅವರು ಇತರರೊಂದಿಗೆ ಮಾತನ್ನು ಆನಂದಿಸುತ್ತಾರೆ.

ಈ ರಾಶಿಗಳು ಖುಷಿಯಾಗಿರೋದೇ ಅಪರೂಪ!

ಕುಂಭ ರಾಶಿ(Aquarius)
ಚೆನ್ನಾಗಿ ಓದಿದ ಮತ್ತು ಜ್ಞಾನವುಳ್ಳವರಾಗಿರುವ ಅವರ ಖ್ಯಾತಿಯಿಂದಾಗಿ, ಕುಂಭ ರಾಶಿಯವರು ಫೋನ್‌ನಲ್ಲಿ ಸಾಕಷ್ಟು ಸಮಯ ಕಳೆಯಬಹುದು. ಅವರು ನಿರಂತರವಾಗಿ ತಂತ್ರಜ್ಞಾನವನ್ನು ಅಧ್ಯಯನ ಮಾಡುತ್ತಾರೆ, ಎಲ್ಲಾ ಹೊಸ ಬೆಳವಣಿಗೆಗಳ ಬಗ್ಗೆ ಅಪ್‌ಡೇಟ್ ಆಗಿರಲು ಬಯಸುತ್ತಾರೆ. ಮತ್ತು ಹೊಸ ಗ್ಯಾಜೆಟ್‌ಗಳ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಾರೆ. ಹೀಗಾಗಿ ಅವರು ನಿರಂತರವಾಗಿ ತಮ್ಮ ಫೋನ್ ಪರದೆಗೆ ಅಂಟಿಕೊಂಡಿರುತ್ತಾರೆ. ಪ್ರತಿದಿನ ಕುತೂಹಲಕ್ಕಾಗಿ ಹೊಸ ಅಪ್ಲಿಕೇಶನ್‌ಗಳನ್ನು ಪ್ರಯತ್ನಿಸುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!