Marriage Horoscope: ಈ ಐದು ರಾಶಿಯವರಿಗೆ ಹತ್ತಿರದಲ್ಲಿದೆ ವಿವಾಹ ಯೋಗ

Suvarna News   | Asianet News
Published : Jan 30, 2022, 11:10 AM ISTUpdated : Jan 30, 2022, 11:13 AM IST
Marriage Horoscope: ಈ ಐದು ರಾಶಿಯವರಿಗೆ ಹತ್ತಿರದಲ್ಲಿದೆ ವಿವಾಹ ಯೋಗ

ಸಾರಾಂಶ

ಈಗಿನ್ನು ಹೊಸ ವರ್ಷದ ಪ್ರಾರಂಭದಲ್ಲಿದ್ದೇವೆ. ಈ ವರ್ಷದಿಂದ ತೊಂದರೆಗಳೆಲ್ಲ ನಿವಾರಣೆಯಾಗಿ ಹೆಚ್ಚು ಸಂತೋಷದ ವಿಷಯಗಳು ಕಿವಿಗೆ ಬೀಳುವಂತಾಗಬಹುದು ಎಂಬ ವಿಶ್ವಾಸದಲ್ಲಿದ್ದೇವೆ. ಇಂತಹ ಸಿಹಿ ಸುದ್ಧಿಗಳ ಸಾಲಿಗೆ ಮದುವೆ ಕೂಡಾ ಸೇರಿಕೊಳ್ಳುತ್ತದೆ. ಹಾಗಾದರೆ ಈ ವರ್ಷದಲ್ಲಿ ಮದುವೆಯ ಭಾಗ್ಯ ಯಾವೆಲ್ಲಾ ರಾಶಿಗಳಿಗಿದೆ ನೋಡೋಣ.

ಮದುವೆ ಅನ್ನೋದು ಸುಮ್ಮನೆ ಆಗಿ ಬಿಡುವ ಕಾರ್ಯವಲ್ಲ, ಅದಕ್ಕೆ ಎರಡು ಕುಟುಂಬಗಳು ಒಂದಾಗಬೇಕು. ಅದಕ್ಕಿಂತ ಮುಖ್ಯವಾಗಿ ಹುಡುಗ ಹುಡುಗಿ ಒಪ್ಪಿಕೊಳ್ಳಬೇಕು. ಇದೆಲ್ಲದರ ನಡುವೆ ಮದುವೆಯಾಗುವ ಹುಡುಗ ಹುಡುಗಿಯ ರಾಶಿಗಳು ಹೊಂದಿಕೆಯಾಗುತ್ತವೆಯಾ ಎಂಬುದನ್ನು ಮನೆಯವರು ನೋಡಿಯೇ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಕೆಲವು ರಾಶಿಯವರಿಗೆ ಇದೊಂದು ಸಿಹಿ ಸುದ್ಧಿ ಇದೆ ನೋಡಿ. ಇದೇ 2022 ಮುಗಿಯುವುದರ ಒಳಗೆ ನಿಮಗೆ ಮದುವೆಯಾಗುವ ಯೋಗ ಇದೆ. ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಗುರು ಗ್ರಹದ ಅನುಗ್ರಹ ನಿಮ್ಮ ಮೇಲೆ ಇದ್ದರೆ ಆಗ ಮಾತ್ರ ಮದುವೆಯ ಯೋಗ ಕೂಡಿ ಬರುತ್ತದೆ. 

ಕರ್ಕಾಟಕ ರಾಶಿ (Cancer)

ನೀವು ಕರ್ಕಾಟಕ ರಾಶಿಯವರಾಗಿದ್ದರೆ ನಿಮಗೆ ಇದು ಬಹಳ ಮುಖ್ಯವಾದ (Important) ವರ್ಷವಾಗಿರುತ್ತದೆ. ಈ ವರ್ಷವನ್ನು ನೀವು ಜೀವನವಿಡೀ ಮರೆಯುವ ಅವಕಾಶವೇ ಇಲ್ಲ. ನಿಮ್ಮ ಜೀವನ ಸಂಗಾತಿ ಸಿಕ್ಕುವ ವಿಶೇಷ ವರ್ಷವಿದು. ಶನಿ ಗ್ರಹವು ನಿಮ್ಮ ಜಾತಕಕ್ಕೆ ಮದುವೆಯ ಯೋಗ ತಂದಿದೆ. ಇದರ ದೃಷ್ಟಿಯು ಬೇರೆ ಕಡೆ ತಿರುಗುವ ಮೊದಲು ಅಂದರೆ ಏಪ್ರಿಲ್‌ ನಂತರದಲ್ಲಿ ಈ ಅವಕಾಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಬಿಡುವ ಸಾಧ್ಯತೆಯಿದೆ. ಅದಕ್ಕಿಂತ ಮುಂಚೆ ನಿಮ್ಮ ಸಂಗಾತಿಯನ್ನು ಹುಡುಕಿಕೊಳ್ಳಿ. ಅದರಲ್ಲೂ ಲವ್‌ ಮಾರೇಜ್‌ ಆಗ ಬಯಸುವವರಿಗೆ ಇದು ಹೇಳಿ ಮಾಡಿಸಿರುವ ವರ್ಷ ಈ ಅವಕಾಶ ತಪ್ಪಿಸಿಕೊಳ್ಳಬೇಡಿ.

Empathetic Zodiacs: ಈ ನಾಲ್ಕು ರಾಶಿಯ ಸ್ನೇಹಿತರಿದ್ದರೆ ನೀವೇ ಅದೃಷ್ಟವಂತರು!

ಸಿಂಹ ರಾಶಿ (Leo)
ಈ ರಾಶಿಯವರು ಈ ವರ್ಷದ ಪ್ರಾರಂಭದಲ್ಲಿ ಮದುವೆಯಾಗುವ ಹೆಚ್ಚು ಸಂಭವವಿದೆ. ನಿಮ್ಮ ಜೀವನಕ್ಕೆ ಒಬ್ಬ ವಿಶೇಷ (Special) ವ್ಯಕ್ತಿ ಬರುವವರಿದ್ದಾರೆ, ನಿಮ್ಮ ಜೀವನವನ್ನು ಬಹಳ ಸುಂದರಗೊಳಿಸುವ ಆ ವ್ಯಕ್ತಿಯನ್ನು ಈ ವರ್ಷದ ಏಪ್ರಿಲ್‌ ಸಮಯದಲ್ಲಿ ಕೈ ಹಿಡಿಯುವ ಸಾದ್ಯತೆಯಿದೆ. ಶನಿಯು ನಿಮಗೆ ಮದುವೆಯ ಯೋಗವನ್ನು ಇದೇ ವರ್ಷದಲ್ಲಿ ಕರುಣಿಸಲಿದ್ದಾನೆ. ಜುಲೈವರೆಗೆ ನಿಮಗೆ ಸಮಯವಿದೆ. ಈಗಾಗಲೇ ನೀವು ಇಂತಹ ವಿಶೇಷ ವ್ಯಕ್ತಿಯನ್ನು ಹುಡುಕಿಕೊಂಡಿದ್ದೀರಿ ಎಂದಾದರೆ ನಿಮಗೂ ಸಧ್ಯದಲ್ಲಿಯೇ ಕಂಕಣ ಭಾಗ್ಯವಿದೆ.

ಕನ್ಯಾ ರಾಶಿ (Virgo)
ಕೆಲವು ಗ್ರಹಗಳ ಸ್ಥಾನಪಲ್ಲಟದಿಂದ ತುಂಬಾ ಒಳ್ಳೆಯ ಸುದ್ದಿಗಳನ್ನು ನೀವು ಕೇಳಲಿದ್ದೀರಿ. ಆ ಕೆಲವು ಸುದ್ದಿಗಳಲ್ಲಿ ಮದುವೆಯೋಗ ಕೂಡಾ ಒಂದು. ನೀವು ತುಂಬಾ ದಿನಗಳಿಂದ ಮದುವೆಯಾಗುವುದಕ್ಕೆ ಕಾಯುತ್ತಿದ್ದೀರಿ ಎಂದಾದರೆ ನಿಮ್ಮ ಕಾಯುವಿಕೆ (Waiting) ಈ 2022ರ ಪ್ರಾರಂಭದ ಮೂರು ತಿಂಗಳಿನ ಒಳಗೆ ಮುಗಿಯುತ್ತದೆ. ಶನಿದೇವನ ಕೃಪೆಯಿಂದ ನಿಮ್ಮ ಕುಟುಂಬ ಹಾಗೂ ಮನೆಯ ಪರಿಸ್ಥತಿಗಳೆಲ್ಲಾ ಉತ್ತಮವಾಗುತ್ತದೆ. ಹಾಗೆಯೇ ನಿಮಗಿಷ್ಟವಾಗುವ ಜೀವನ ಸಂಗಾತಿಯನ್ನು ಭೇಟಿ ಮಾಡಲಿದ್ದೀರಿ ಹಾಗೂ ಆದಷ್ಟು ಶೀಘ್ರದಲ್ಲಿ ಅವರೊಂದಿಗೆ ಮದುವೆಯಾಗುವ ಭಾಗ್ಯ ಕೂಡ ಈ ವರ್ಷದಲ್ಲಿದೆ.

Astro Tips: ದಾಂಪತ್ಯದಲ್ಲಿ ಪ್ರತಿ ದಿನ ಜಗಳ, ಮುನಿಸು ಉಂಟಾಗ್ತಿದ್ಯಾ? ಹೀಗೆ ಮಾಡಿ ನೋಡಿ..

ವೃಶ್ಚಿಕ ರಾಶಿ (Scorpio)
ಈ ರಾಶಿಯವರ ಈ ಇಡೀ ವರ್ಷದ ಭವಿಷ್ಯ ನೋಡಿದರೆ ನಿಮಗೆ ಈ ವರ್ಷವೇ ಮದುವೆ ಯೋಗ ಕಂಡು ಬರುತ್ತದೆ. ನಿಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವಾಗ ಸ್ವಲ್ಪ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ಎಲ್ಲ ಸವಾಲುಗಳನ್ನು ಎದುರಿಸಿದ ನಂತರ ನಿಮ್ಮ ಮನಸ್ಸಿಗೆ ಹಿಡಿಸುವ ಸಂಗಾತಿ ಸಿಗುತ್ತಾರೆ. ಅವರೊಂದಿಗೇ ಇದೇ ವರ್ಷ ಮುಗಿಯುವ ಮುನ್ನ ಮದುವೆಯಾಗಿತ್ತೀರಿ, ನಿಮಗೆ ಜುಲೈ ಬಳಿಕ ಶನಿ ಹಾಗೂ ಗುರು ಎರೆಡೂ ಗ್ರಹಗಳು ಒಂದೆಡೆ ಸೇರಿ ನಿಮ್ಮ ಯೋಜನೆಗಳೆಲ್ಲ ಸಫಲಗೊಳ್ಳುತ್ತದೆ.

ಮೀನ ರಾಶಿ (Pisces)
ಈ ರಾಶಿಯವರಿಗೆ ಏಪ್ರಿಲ್‌ ಬಳಿಕ ಗುರು ಗ್ರಹದ ಬಲ ಬರಲಿದೆ. ಇದು ನಿಮಗೆ ಮದುವೆ ಯೋಗ ನೀಡುವ ಕಾರಣದಿಂದಲೇ ಬಂದಂತಿದೆ, ನೀವು ಯಾವ ರೀತಿಯ ಸಂಗಾತಿಯನ್ನು ಬಯಸುತ್ತಿದ್ದೀರೋ ಅಂತಹ ಸಂಗಾತಿಯೇ ನಿಮಗಾಗಿ ಬರುತ್ತಾರೆ. ಗುರು ಗ್ರಹ ರಾಶಿಗೆ ಬಂದ ಪ್ರಾರಂಭದ ಮೂರು ತಿಂಗಳಿನೊಳಗಾಗಿಯೇ ನಿಮಗೆ ಮದುವೆಯಾಗುವ ಹೆಚ್ಚಿನ ಸಾಧ್ಯತೆಯಿದೆ.

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ