ರಾಕಿಂಗ್ ಸ್ಟಾರ್‌ ಗೆ 8ರ ನಂಟು? ಯಶ್ 'ಟಾಕ್ಸಿಕ್' ನಂಬರ್ 8ರ ಗಂಟು ಬಿಡಿಸಿದ ಫ್ಯಾನ್ಸ್! ಏನಿದರ ಗುಟ್ಟು?

Published : Jul 01, 2026, 03:41 PM IST
Yash

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯ ಸಮಯವು ಅವರ ಅದೃಷ್ಟದ ಸಂಖ್ಯೆ 8ರೊಂದಿಗೆ ಸಂಬಂಧ ಹೊಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಶನಿ ಮತ್ತು ಶುಕ್ರ ಗ್ರಹಗಳನ್ನು ಪ್ರತಿನಿಧಿಸುವ 8 ಮತ್ತು 6 ಸಂಖ್ಯೆಗಳು ಯಶ್ ಅವರ 'ಕೆಜಿಎಫ್' ನಿಂದ 'ಟಾಕ್ಸಿಕ್' ವರೆಗಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಲೇಖನವು ಯಶ್ ಅವರ ವೃತ್ತಿಜೀವನದಲ್ಲಿ ಈ ಸಂಖ್ಯೆಗಳ ಮಹತ್ವವನ್ನು ವಿವರಿಸುತ್ತದೆ.

ಬೆಂಗಳೂರು: 'ಕೆಜಿಎಫ್' (KGF) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿ, ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಎರಡನೇ ಟೀಸರ್ ಸದ್ದಿಲ್ಲದೆ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದೆ. ಆದರೆ, ಈ ಟೀಸರ್ ಬಿಡುಗಡೆಯಾದ ಸಮಯ ಈಗ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ವರೆಗೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ, ಯಶ್ ಅವರ ಯಶಸ್ಸಿನ ಹಿಂದಿರುವ ಆ ಒಂದು ಮ್ಯಾಜಿಕಲ್ ನಂಬರ್!

ಹೌದು, ಇಂದು ಬಿಡುಗಡೆಯಾದ ಟಾಕ್ಸಿಕ್ ಚಿತ್ರದ ಎರಡನೇ ಟೀಸರ್ ಕರೆಕ್ಟ್ ಆಗಿ ಬೆಳಗ್ಗೆ 11:33 ಕ್ಕೆ ರಿಲೀಸ್ ಆಗಿದೆ. ಈ ಸಮಯದ ಅಂಕಿಗಳನ್ನು ಕೂಡಿಸಿದರೆ (1+1+3+3 = 8) ಬರುವ ಸಂಖ್ಯೆ 8! ಯಶ್ ತಮ್ಮ ಸಿನಿಮಾ ಜೀವನದ ಬಹುತೇಕ ಪ್ರಮುಖ ಘಟ್ಟಗಳಲ್ಲಿ 8 ಮತ್ತು 6 ರ ಸಂಖ್ಯೆಗಳನ್ನು ಯಥೇಚ್ಛವಾಗಿ ಬಳಸುತ್ತಾ ಬಂದಿದ್ದಾರೆ. ಹಾಗಾದರೆ ಯಶ್ ಅವರ ಜೀವನದಲ್ಲಿ 'ನಂಬರ್ 8' ರ ಗುಟ್ಟೇನು? ನ್ಯೂಮರಾಲಜಿ (ಸಂಖ್ಯಾಶಾಸ್ತ್ರ) ಇದರ ಬಗ್ಗೆ ಏನು ಹೇಳುತ್ತದೆ? ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

ಸಂಖ್ಯಾಶಾಸ್ತ್ರದ ಪ್ರಕಾರ ನಂಬರ್ 8 ಮತ್ತು 6 ರ ರಹಸ್ಯವೇನು?

ನಂಬರ್ 8 (ಶನಿ ಗ್ರಹದ ಸಂಕೇತ): ನ್ಯೂಮರಾಲಜಿ ಪ್ರಕಾರ ಸಂಖ್ಯೆ 8 ಶನಿ ದೇವರನ್ನು ಪ್ರತಿನಿಧಿಸುತ್ತದೆ. ಶನಿ ಎಂದರೆ ಕಷ್ಟಪಟ್ಟು ದುಡಿಯುವವರಿಗೆ ಒಲಿಯುವ ದೇವ. ಇದು ಅಪಾರ ಧೈರ್ಯ, ಕಠಿಣ ಪರಿಶ್ರಮ, ನ್ಯಾಯ ಮತ್ತು ನಿಷ್ಠೆಯ ಸಂಕೇತವಾಗಿದೆ. ಯಶ್ ಅವರ ಜೀವನದಲ್ಲೂ ಶೂನ್ಯದಿಂದ ಬಂದು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದಿರುವುದರ ಹಿಂದೆ ದೇವರ ಕೃಪೆ ಮತ್ತು ಕಠಿಣ ಪರಿಶ್ರಮ ಎದ್ದು ಕಾಣುತ್ತದೆ.

ನಂಬರ್ 6 (ಶುಕ್ರ ಗ್ರಹದ ಸಂಕೇತ): ಸಂಖ್ಯೆ 6 ಶುಕ್ರನನ್ನು ಪ್ರತಿನಿಧಿಸುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಶುಕ್ರ ಎಂದರೆ ಸೌಂದರ್ಯ, ಹಣ, ಐಷಾರಾಮಿ (ಲಕ್ಷುರಿ) ಜೀವನ, ಕಲೆ ಮತ್ತು ಗುರು ತತ್ವದ ಸಂಕೇತ. ಯಶ್ ಅವರ ಸಿನಿಮಾಗಳ ಭವ್ಯತೆ ಮತ್ತು ಅವರ ರಾಯಲ್ ಲೈಫ್‌ಸ್ಟೈಲ್‌ಗೆ ಈ ಸಂಖ್ಯೆಯ ಪ್ರಭಾವವೂ ಕಾರಣ ಎನ್ನಲಾಗುತ್ತದೆ.

ಯಶ್ ಸಿನಿ ಜರ್ನಿಯಲ್ಲಿ 'ನಂಬರ್ 8' ಪ್ಲೇ ಮಾಡಿದ ಮ್ಯಾಜಿಕ್!ಯಶ್ ಅವರ ವೈಯಕ್ತಿಕ ಜೀವನ ಹಾಗೂ ಅವರ ವೃತ್ತಿಬದುಕಿನ ಅತಿ ದೊಡ್ಡ ಮೈಲಿಗಲ್ಲುಗಳನ್ನು ಗಮನಿಸಿದರೆ, ಅಲ್ಲಿ ಸಂಖ್ಯೆ 8 ರ ಪ್ರಭಾವ ಪ್ರಮುಖವಾಗಿ ಎದ್ದು ಕಾಣುತ್ತದೆ.

ಸ್ವತಃ ಯಶ್ ಹುಟ್ಟಿದ ದಿನ ಹಾಗೂ ವರ್ಷ!

ರಾಕಿಂಗ್ ಸ್ಟಾರ್ ಯಶ್ ಜನಿಸಿದ್ದು ಜನವರಿ 8, 1986 ರಂದು. ಇಲ್ಲಿ ಅವರ ಜನ್ಮ ದಿನಾಂಕ '8' ಆಗಿದ್ದರೆ, ಅವರ ಲೈಫ್ ಪಾತ್ ನಂಬರ್ '6' ಆಗಿದೆ. ಹೀಗಾಗಿ ಈ ಎರಡೂ ಸಂಖ್ಯೆಗಳು ಅವರ ಪಾಲಿಗೆ ಅತ್ಯಂತ ಅದೃಷ್ಟದ ನಂಬರ್‌ಗಳಾಗಿವೆ.

'ಕೆಜಿಎಫ್ ಚಾಪ್ಟರ್ 1' ಬಿಡುಗಡೆ

ಯಶ್ ಅವರನ್ನು ಇಡೀ ಭಾರತ ತಿರುಗಿ ನೋಡುವಂತೆ ಮಾಡಿದ 'ಕೆಜಿಎಫ್-1' ಬಿಡುಗಡೆಯಾಗಿದ್ದು 21-12-2018 ರಂದು. ಈ ದಿನಾಂಕದ ಒಟ್ಟು ಮೊತ್ತವನ್ನು ಲೆಕ್ಕ ಹಾಕಿದರೆ 8 ಬರುತ್ತದೆ.

 'ಕೆಜಿಎಫ್ ಚಾಪ್ಟರ್ 2' ಇತಿಹಾಸ:

ಬಾಕ್ಸ್ ಆಫೀಸ್ ಸುನಾಮಿ ಸೃಷ್ಟಿಸಿದ ಕೆಜಿಎಫ್-2 ಚಿತ್ರ 14-04-2022 ರಂದು ತೆರೆಕಂಡಿತು. ಇದರ ಒಟ್ಟು ಮೊತ್ತವನ್ನು ಕೂಡಿದಾಗಲೂ ಬರುವುದು ಸಂಖ್ಯೆ 8

'ಟಾಕ್ಸಿಕ್' ಚಿತ್ರದಲ್ಲೂ ಮುಂದುವರಿದ ಸಂಖ್ಯೆ 8ರ ನಂಟು!

ಯಶ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಸಿನಿಮಾದ ಪ್ರತಿಯೊಂದು ಅಪ್‌ಡೇಟ್‌ನಲ್ಲೂ ಈ ಸಂಖ್ಯೆಯನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳಲಾಗಿದೆ.

  • ಶೀರ್ಷಿಕೆ ಘೋಷಣೆ (ಡಿಸೆಂಬರ್ 8, 2023): ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದು ಡಿಸೆಂಬರ್ 8 ರಂದು.
  • ಬರ್ತ್‌ಡೇ ಪೀಕ್ ಝಲಕ್ (ಜನವರಿ 8, 2025): 2025ರ ಯಶ್ ಹುಟ್ಟುಹಬ್ಬದ ಅಂಗವಾಗಿ 'ಬರ್ತ್‌ಡೇ ಪೀಕ್' ಹೆಸರಿನಲ್ಲಿ ಬಿಟ್ಟ ಸಣ್ಣ ಝಲಕ್ ಕೂಡ ಜನವರಿ 8 ರಂದೇ ಹೊರಬಿದ್ದಿತ್ತು.
  • ವಿಶೇಷ ಪೋಸ್ಟರ್ (ಜನವರಿ 8, 2026): ಇತ್ತೀಚೆಗಷ್ಟೇ ಅಂದರೆ 2026ರ ಯಶ್ ಬರ್ತ್‌ಡೇಗೆ ಚಿತ್ರತಂಡ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ್ದೂ ಸಹ ಜನವರಿ 8 ರಂದೇ.

ಮೊದಲ ಅಧಿಕೃತ ಟೀಸರ್:

ಟಾಕ್ಸಿಕ್ ಮೊದಲ ಟೀಸರ್‌ನ ರನ್ ಟೈಮ್ 2 ನಿಮಿಷ 51 ಸೆಕೆಂಡು ಆಗಿತ್ತು. ಈ ಅಂಕಿಗಳನ್ನು ಕೂಡಿದರೆ ಬರುವುದು ಅದೇ 8. ಮಾತ್ರವಲ್ಲ ಫೆಬ್ರವರಿ 20ರಂದು 2026 ಈ ಟೀಸರ್ ರಿಲೀಸ್ ಆಗಿತ್ತು. ಅಂದರೆ ಇದನ್ನು ಕೂಡಿದಾಗ ನಂಬರ್ 6 ಬರುತ್ತದೆ. ಜೊತೆಗೆ ಬಿಡುಗಡೆಯಾದ ಮೊದಲ ಟೀಸರ್‌ನ ಬೆಳಗ್ಗೆ ರಾತ್ರಿ 9:35 ಆಗಿತ್ತು. ಇವುಗಳ ಮೊತ್ತವೂ ಎಂಟೇ ಆಗಿದೆ!

ಟಾಕ್ಸಿಕ್ ಗ್ರಾಂಡ್ ರಿಲೀಸ್ ಡೇಟ್ (ಆಗಸ್ಟ್ 26): ಚಿತ್ರದ ಬಿಡುಗಡೆಯ ದಿನಾಂಕ( 26-8-2026) ಆಗಸ್ಟ್ 26 ಅನ್ನು ನಿಗದಿಪಡಿಸಲಾಗಿದೆ. ಇಲ್ಲಿ ದಿನಾಂಕ 26 ರ ಅಂಕಿಗಳನ್ನು ಕೂಡಿದರೆ ಮತ್ತೊಮ್ಮೆ ನಂಬರ್ 8 ಮ್ಯಾಜಿಕ್ ರಿಪೀಟ್ ಆಗುತ್ತದೆ! ಮಾತ್ರವಲ್ಲ ತಿಂಗಳು ಕೂಡ 8! ಅಷ್ಟೇ ಯಾಕೆ ಇಡೀ ನಂಬರ್ ಕೂಡಿದಾಗಲೂ ಬರುವ ಸಂಖ್ಯೆ 8 ಆಗಿದೆ.

ಚಿತ್ರದ ಬಿಡುಗಡೆಯ ದಿನಾಂಕದಿಂದ ಹಿಡಿದು ಟೀಸರ್ ರಿಲೀಸ್ ಮಾಡುವ ನಿಮಿಷಗಳವರೆಗೂ ಯಶ್ ಮತ್ತು 'ಟಾಕ್ಸಿಕ್' ತಂಡ ಅತ್ಯಂತ ಯೋಜನಾಬದ್ಧವಾಗಿ ಸಂಖ್ಯಾಶಾಸ್ತ್ರವನ್ನು (Numerology) ಪಾಲಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೆಜಿಎಫ್ ಸರಣಿಗೆ ಭರ್ಜರಿ ಯಶಸ್ಸು ತಂದುಕೊಟ್ಟ ಈ 'ನಂಬರ್ 8' ರ ಸೆಂಟಿಮೆಂಟ್ ಮತ್ತು ಶನಿ ದೇವರ ಕೃಪೆ, ಈಗ 'ಟಾಕ್ಸಿಕ್' ಚಿತ್ರಕ್ಕೂ ಜಾಗತಿಕ ಮಟ್ಟದಲ್ಲಿ ಮತ್ತೊಂದು ದಾಖಲೆಯ ಯಶಸ್ಸನ್ನು ತಂದುಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಬಾಬಾ ವಂಗಾ ಅವರ ಮುಂದಿನ 6 ತಿಂಗಳ ಭವಿಷ್ಯ ವೈರಲ್, ಜುಲೈ-ಡಿಸೆಂಬರ್‌ನಲ್ಲಿ ಕೋಟ್ಯಾಧಿಪತಿಗಳಾಗುವ ಹಾದಿಯಲ್ಲಿ 5 ರಾಶಿ
ಸತ್ತ ನಂತ್ರವೂ ಆತ್ಮಗಳಿಗೆ ಕುಟುಂಬಸ್ಥರ ಧ್ವನಿ ಕೇಳಿಸುತ್ತಾ? ಸತ್ಯ ತಿಳಿಯಲು ಧೈರ್ಯ ಬೇಕು