ಸಾವಿರಾರು ವರ್ಷಗಳ ಇತಿಹಾಸವಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನ ಕಲ್ಲಿನ ಐರಾವತವನ್ನು (ಆನೆ) ಹೊಂದಿರುವ ಕರ್ನಾಟಕದ ಏಕೈಕ ದೇವಸ್ಥಾನವಾಗಿದ್ದು, ಟಿಪ್ಪುವಿನ ಕಾಲದಲ್ಲಿ ಭಗ್ನಗೊಂಡಿದ್ದ ಕಲ್ಲಿನ ಆನೆಯನ್ನು (ಐರಾವತ) ಇತ್ತೀಚಿನ ವರ್ಷಗಳಲ್ಲಿ ಬದಲು ಮಾಡಿ ಹೊಸ ಐರಾವತವನ್ನು ಕೆತ್ತಿಸಿ ಇಡಲಾಗಿದೆ. ಇದು ದೇವಸ್ಥಾನಕ್ಕೆ ಮುಖ ಮಾಡಿಕೊಂಡಿರುವುದು ವಿಶೇಷ ಎನ್ನಲಾಗಿದೆ. ಇದಕ್ಕೆ ಇಲ್ಲಿ ಮೊದಲ ಪೂಜೆ ಸಲ್ಲುತ್ತದೆ.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಆ.22): ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿವಿಧ ಪೂಜಾವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಸಂದರ್ಭ ಊರಿನವರು ಮಾತ್ರವಲ್ಲದೆ ಹೊರಗಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
undefined
ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಆರಂಭವಾದ ವಿವಿಧ ಪೂಜಾ ವಿಧಿ ವಿಧಾನಗಳು ಮಧ್ಯಾಹ್ನ 1-00 ಗಂಟೆ ತನಕವೂ ನಡೆಯಿತು. ಭಕ್ತರಿಂದ ಸಾಮೂಹಿಕ ಆಶ್ಲೇಷ ಬಲಿ ಪೂಜೆ ಸೇರಿದಂತೆ ನಾಗ ಬನದಲ್ಲಿರುವ ನಾಗ ದೇವರಿಗೆ ವಿಶೇಷ ಪೂಜೆಯ ಜೊತೆಗೆ ವಿವಿಧ ಅಭಿಷೇಕಗಳ ನಡೆದವು. ಪಂಚಾಮೃತ, ಎಳನೀರು, ಹಾಲು ಹಾಗೂ ಜೇನಿನ ಅಭಿಷೇಕ ನಡೆದವು. ಬಳಿಕ ಭದ್ರಕಾಳಿ ದೇವರಿಗೆ ವಿಶೇಷ ಮಹಾ ಮಂಗಳಾರತಿ ನಡೆದು ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಗಾಯತ್ರಿ ಮಂತ್ರದಿಂದ ಹೇಗೆ ಲಾಭ ಪಡ್ಕೋಬೇಕು ಗೊತ್ತಾ? ಇದನ್ನು ಹೇಳೋ ವಿಧಾನದ ಬಗ್ಗೆ ತಿಳ್ಕೊಳಿ
ಸಾವಿರಾರು ವರ್ಷಗಳ ಇತಿಹಾಸವಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನ ಕಲ್ಲಿನ ಐರಾವತವನ್ನು (ಆನೆ) ಹೊಂದಿರುವ ಕರ್ನಾಟಕದ ಏಕೈಕ ದೇವಸ್ಥಾನವಾಗಿದ್ದು, ಟಿಪ್ಪುವಿನ ಕಾಲದಲ್ಲಿ ಭಗ್ನಗೊಂಡಿದ್ದ ಕಲ್ಲಿನ ಆನೆಯನ್ನು (ಐರಾವತ) ಇತ್ತೀಚಿನ ವರ್ಷಗಳಲ್ಲಿ ಬದಲು ಮಾಡಿ ಹೊಸ ಐರಾವತವನ್ನು ಕೆತ್ತಿಸಿ ಇಡಲಾಗಿದೆ. ಇದು ದೇವಸ್ಥಾನಕ್ಕೆ ಮುಖ ಮಾಡಿಕೊಂಡಿರುವುದು ವಿಶೇಷ ಎನ್ನಲಾಗಿದೆ. ಇದಕ್ಕೆ ಇಲ್ಲಿ ಮೊದಲ ಪೂಜೆ ಸಲ್ಲುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಇಲ್ಲಿ ಪೂಜೆ ನಡೆಯಲಿದ್ದು ಭಕ್ತರ ಬಯಕೆಯಂತೆ ಇಲ್ಲಿ ವಿವಿಧ ಪೂಜೆಗಳು ಸೇರಿದಂತೆ ವಿಶೇಷವಾಗಿ ಇಲ್ಲಿ ಸ್ವಯಂವರ ಪೂಜೆ ನಡೆಯುತ್ತದೆ. ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಕೇಕುನ್ನಾಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ, ಗೌರವ ಕಾರ್ಯದರ್ಶಿ ಮೂಕಳೇರ ರಮೇಶ್, ಉಪಾಧ್ಯಕ್ಷ ಕೊಳೇರ ದಿನು ಕಾಳಯ್ಯ, ಆಡಳಿತ ಮಂಡಳಿ ಸದಸ್ಯರಾದ ಮಚ್ಚಿಯಂಡ ರೇಣಾ ಲೊಕೇಶ್, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮಚ್ಚಿಯಂಡ ವೇಣು, ಮೂಕಳೇರ ಧನು ಅಪ್ಪಣ್ಣ, ಸಣ್ಣುವಂಡ ಸನ್ನಿ, ಮೂಕಳೇರ ಪ್ರಥ್ವಿ, ಮಚ್ಚಿಯಂಡ ಶ್ಯಾಮ್, ಚೇಂದಿಮಾಡ ಬಿಂದು ಸೇರಿದಂತೆ ದೇವಸ್ಥಾನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಚಮ್ಮಟೀರ ಡಿಕ್ಕಿ ಕುಶಾಲಪ್ಪ, ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಸಲಹೆಗಾರ ಮೂಕಳೇರ ನಂದಾ ಪೂಣಚ್ಚ, ಜಿ.ಪಂ ಮಾಜಿ ಸದಸ್ಯ ಮೂಕಳೇರ ಎಸ್ ಕುಶಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.