ಸದ್ಗುರು ಜಗ್ಗಿ ವಾಸುದೇವ್ ಅವರ ಬದುಕನ್ನೇ ಬದಲಾಯಿಸಿದ ಆ ಘಟನೆ ಯಾವ್ದು ಗೊತ್ತಾ?

By Suvarna NewsFirst Published Aug 22, 2023, 4:47 PM IST
Highlights

ಕೋಟ್ಯಾಂತರ ಮಂದಿಗೆ ದಾರಿ ದೀಪವಾಗಿರುವ ಸದ್ಗುರು ಬಾಲ್ಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಸದ್ಗುರು ಯಾವ ವಿಷ್ಯದ ಬಗ್ಗೆ ಆಸಕ್ತಿ ಹೊಂದಿದ್ದರು, ಅವರು ಮಾಡ್ತಿದ್ದ ಕೆಲಸವೇನು, ಅವರು ಈ ಹಂತಕ್ಕೆ ಬರಲು ಕಾರಣವೇನು ಎಂಬುದನ್ನು ನಾವಿಲ್ಲಿ ಹೇಳ್ತೇವೆ. 

ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಅವರ ಮಾತು, ವಿಚಾರ ಧಾರೆ, ವ್ಯಕ್ತಿತ್ವ ಅನೇಕ ಮಂದಿಗೆ ದಾರಿದೀಪವಾಗಿದೆ. ಅವರಿಂದಲೇ ಲಕ್ಷಾಂತರ ಮಂದಿ ಸಕಾರಾತ್ಮಕ ಜೀವನ ಕಂಡುಕೊಂಡಿದ್ದಾರೆ. ಯೋಗ ಗುರು, ದಿವ್ಯದರ್ಶಿ, ಕವಿ ಹಾಗೂ ಲೇಖಕರಾದ ಇವರು ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಜಗ್ಗಿ ವಾಸುದೇವ್ (Jaggi Vasudev) ಆಗಿದ್ದಾಗಿನಿಂದ ಸದ್ಗುರು (Sadhguru) ಆಗುವವರೆಗಿನ ಅವರ ಪಯಣ ಬಯಳ ರೋಚಕವಾಗಿದೆ. ಒಬ್ಬ ಸಾಮಾನ್ಯ ಮನುಷ್ಯನಾಗಿದ್ದ ಜಗ್ಗಿ ವಾಸುದೇವ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಲು ಅವರ ಜೀವನದಲ್ಲಿ ನಡೆದ ದುರ್ಘಟನೆಯೇ ಕಾರಣವಾಗಿದೆ. ಅನೇಕರ ಬಾಳಿಗೆ ಬೆಳಕಾಗುತ್ತಿರುವ, ಸನ್ಮಾರ್ಗವನ್ನು ತೋರಿಸುತ್ತಿರುವ ಸದ್ಗುರು ಅವರು ತಮ್ಮ ಜೀವನದಲ್ಲಿ ಅನೇಕ ನೋವುಗಳನ್ನು ಅನುಭವಿಸಿದ್ದಾರೆ. ಅವರ ಜೀವನ ಪಯಣದ ಚಿಕ್ಕ ಪರಿಚಯ ಇಲ್ಲಿದೆ.

ಹೇಗಿತ್ತು ಸದ್ಗುರು ಅವರ ಬಾಲ್ಯದ ಜೀವನ? : ಜಗದೀಶ್ ‘ಜಗ್ಗಿ’ ವಾಸುದೇವ್ ಅವರ ಜನ್ಮ ಡಿಸೆಂಬರ್ 3, 1957ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಆಯಿತು. ಇವರು ತೆಲುಗು ಕುಂಟುಬಕ್ಕೆ ಸೇರಿದವರು. ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಜಗ್ಗಿ ವಾಸುದೇವ್ ಅವರ ಚಿಂತನೆ ಮೊದಲಿನಿಂದಲೂ ವಿಭಿನ್ನವಾಗಿಯೇ ಇತ್ತು. ಅವರು ಚಿಕ್ಕಂದಿನಿಂದಲೂ ಪ್ರತಿಯೊಂದು ವಸ್ತು, ವಿಷಯವನ್ನು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದರು ಮತ್ತು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಅವರ ಈ ಸ್ವಭಾವವೇ ಅವರ ತಂದೆಗೆ ದೊಡ್ಡ ತಲೆನೋವಾಗಿತ್ತು.

ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ತ್ರೀಯರಿಗೆ ದೇಗುಲಗಳಲ್ಲಿ ಹಳದಿ-ಕುಂಕುಮ: ಧಾರ್ಮಿಕ ದತ್ತಿ ಇಲಾಖೆ ಸೂಚನೆ

ಜಗ್ಗಿ ವಾಸುದೇವ್ ಅವರ ಬೆಳೆದು ದೊಡ್ಡವರಾಗುತ್ತಿದ್ದಂತೆ ಅವರ ಮನಸ್ಸಿನಲ್ಲಿ ಇನ್ನೂ ಹೆಚ್ಚಿನ ಪ್ರಶ್ನೆಗಳು ಮೂಡತೊಡಗಿದವು. ಚಿಕ್ಕ ವಯಸ್ಸಿನಲ್ಲೇ ಅವರು ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. 11 ನೇ ವಯಸ್ಸಿನಲ್ಲಿಯೇ ಅವರು ಯೋಗ ಗುರು ರಾಜೇಂದ್ರ ಭಾವ ಜೀ ಮಹಾರಾಜ್ ಅವರ ಬಳಿ ಯೋಗ ಕಲಿಯಲು ಆರಂಭಿಸಿದರು. 12 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಸದ್ಗುರು ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಪದವಿ ಪಡೆದ ನಂತರ ಇವರು ಕೋಳಿ ಪಾರ್ಮ್, ಇಟ್ಟಿಗೆ ನಿರ್ಮಾಣದ ಉದ್ಯಮ ಆರಂಭಿಸಿ ಸಕ್ಸಸ್ಫುಲ್ ಬ್ಯುಸಿನೆಸ್ ಮನ್ ಕೂಡ ಆದರು.

ಈ ಘಟನೆ ಸದ್ಗುರು ಅವರ ಜೀವನವನ್ನೇ ಬದಲಾಯಿಸಿತು : 1984ರಲ್ಲಿ ಸದ್ಗುರು ಅವರಿಗೆ ವಿಜ್ಜಿ ಎನ್ನುವವರ ಜೊತೆ ವಿವಾಹವಾಯ್ತು. ವಿವಾಹವಾದ 6 ವರ್ಷದ ಬಳಿಕ 1990 ರಲ್ಲಿ ಅವರಿಗೆ ಒಬ್ಬ ಮಗಳೂ ಜನಿಸಿದಳು. ಅವಳಿಗೆ ರಾಧೆ ಎಂದು ನಾಮಕರಣ ಮಾಡಲಾಯ್ತು. 1997ರಲ್ಲಿ ಸದ್ಗುರು ಅವರ ಧರ್ಮಪತ್ನಿ ಇಹಲೋಕ ತ್ಯಜಿಸಿದರು.

ಈ ದರಿದ್ರ ಕೆಲಸದಿಂದ ‘ಲಕ್ಷ್ಮಿ ದೇವಿ’ ಕೋಪಗೊಳ್ಳುವಳು; ಇವುಗಳನ್ನು ಇಂದೇ ನಿಲ್ಲಿಸಿ.!

ಸದ್ಗುರು ಅವರಿಗೆ 25 ವರ್ಷವಾದಾಗ ಅವರು ಒಮ್ಮೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು. ಅಲ್ಲಿನ ಎತ್ತರದ ಕಲ್ಲುಬಂಡೆಯ ಮೇಲೆ ಕುಳಿತ ಅವರು ನಿಧಾನವಾಗಿ ಧ್ಯಾನಾಸಕ್ತರಾದರು. ಅವರು ಧ್ಯಾನದಲ್ಲಿ ಎಷ್ಟು ತಲ್ಲೀನರಾದರೆಂದರೆ ಅದು ಅವರನ್ನು ಸಮಾಧಿ ಸ್ಥಿತಿಗೆ ತಲುಪಿಸಿತ್ತು. ಸಮಾಧಿ ಸ್ಥಿತಿಯಿಂದ ಹೊರಬಂದ ನಂತರ ಸದ್ಗುರು ಅವರು ತಾನು 10 ನಿಮಿಷ ಧ್ಯಾನದಲ್ಲಿ ಕುಳಿತಿದ್ದೆ ಎಂದು ಅಂದುಕೊಂಡರು. ಆದರೆ ಅವರು ಸಮಾಧಿ ಸ್ಥಿತಿ ತಲುಪಿ ನಾಲ್ಕು ಗಂಟೆಯಾಗಿತ್ತು. ಅವರು ಸಮಾಧಿ ಸ್ಥಿತಿಯಿಂದ ಹೊರಬರುವಷ್ಟರಲ್ಲಿ ಅವರ ಸುತ್ತ ಅನೇಕ ಮಂದಿಯಿದ್ದರು ಹಾಗೂ ಅವರ ಕೊರಳಲ್ಲಿ ಅನೇಕ ಹಾರಗಳು ಕೂಡ ಇದ್ದವು. ಇದಾದ ಕೆಲವು ದಿನಗಳಲ್ಲಿ ಅವರು 13 ದಿನಗಳ ಕಾಲ ಸಮಾಧಿ ಸ್ಥಿತಿಯನ್ನು ತಲುಪಿದ್ದರು.

ಸಮಾಧಿ ಸ್ಥಿತಿಯ ಅದ್ಭುತ ಅನುಭವ ಸದ್ಗುರು ಅವರ ಜೀವನವನ್ನೇ ಬದಲಾಯಿಸಿತು. ಇದಾದ ನಂತರ ಅವರು ತಮ್ಮ ವ್ಯವಹಾರಗಳನ್ನೆಲ್ಲ ಬಿಟ್ಟು ತಮ್ಮ ಅನುಭವ, ಜ್ಞಾನ ಮತ್ತು ವಿಚಾರಧಾರೆಗಳನ್ನು ಜನರಲ್ಲಿ ಬಿತ್ತಲು ಆರಂಭಿಸಿದರು.

click me!