ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!

By Suvarna News  |  First Published Jun 1, 2020, 2:10 PM IST

ಭವಿಷ್ಯದ ಬಗ್ಗೆ ಚಿಂತೆ ಇರುವುದು ಸಹಜ. ಯಾವ ರೀತಿಯ ಕೆಲಸ ಸಿಗುವುದೋ,ಯಾವಾಗ ಸಿಗುತ್ತದೆಯೋ ಎಂಬೆಲ್ಲಾ ಗೊಂದಲಗಳು ವಿದ್ಯಾಭ್ಯಾಸ ಮುಗಿಯುವ ಹಂತದಲ್ಲೇ ತಲೆಯಲ್ಲಿ ಕೊರೆಯುತ್ತಿರುತ್ತದೆ. ಹಾಗಾಗಿ ಅದಕ್ಕೆ ಪರಿಹಾರ ಜ್ಯೋತಿಷ್ಯ ಶಾಸ್ತ್ರದಲ್ಲಿದೆ, ಜಾತಕದ ಸಹಾಯದಿಂದ ಇದೆಲ್ಲವನ್ನು ಮೊದಲೇ ತಿಳಿದುಕೊಳ್ಳಬಹುದು. ಜಾತಕದಿಂದ ವೃತ್ತಿ ಬಗ್ಗೆ ಹೇಗೆ ತಿಳಿಯಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.


ಜ್ಯೋತಿಷ್ಯ ಶಾಸ್ತ್ರದಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಜಾತಕ ನೋಡಿ ಯಾವ ಕ್ಷೇತ್ರದಲ್ಲಿ ನೌಕರಿ ಮಾಡಿದರೆ ಒಳ್ಳೆಯದಾಗುತ್ತದೆ. ನೌಕರಿ ಯಾವಾಗ ಲಭಿಸುತ್ತದೆ, ವಿವಾಹ ಯಾವ ವರ್ಷಕ್ಕೆ ಆಗಬಹುದು ಎಂಬೆಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. 

ವಿದ್ಯಾಭ್ಯಾಸ ಮುಗಿಯುವ ಮುನ್ನವೇ ಕೆಲಸದ ಚಿಂತೆಯಾಗಿರುತ್ತದೆ. ಉತ್ತಮ ಅಂಕ ಪಡೆದು ಪಾಸಾದವರು ಕೆಲಸಕ್ಕೆ ಪರದಾಡುತ್ತಾರೆ. ಕೆಲವೊಮ್ಮೆ ಏನೂ ಓದದೇ ಜಸ್ಟ್ ಪಾಸಾದವರು ನಂಬುವುದಕ್ಕೇ ಆಗದ ಉತ್ತಮ ಕೆಲಸವನ್ನು ಸಂಪಾದಿಸಿರುತ್ತಾರೆ. ಇಂಥಹ ಹಲವು ನಿದರ್ಶನಗಳನ್ನು ನೋಡಿರುತ್ತೇವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಇದಕ್ಕೆಲ್ಲ ಕಾರಣವೂ ಇದೆ, ಹಾಗೆಯೇ ಪರಿಹಾರವೂ ಇದೆ ಎಂದು ಹೇಳುತ್ತಾರೆ.



ಜಾತಕದ ಗ್ರಹಗಳ ಬದಲಾವಣೆ ಶುಭ ಮತ್ತು ಅಶುಭ ಫಲಗಳ ಮೇಲೆ ನಮ್ಮ ಭವಿಷ್ಯ ನಿರ್ಧರಿತವಾಗಿರುತ್ತದೆ. ಕೆಲಸ ಸಿಗಬೇಕಾದ ವಯಸ್ಸಿನಲ್ಲಿ ಜಾತಕದ ಗ್ರಹಗಳು ಶುಭ ಸ್ಥಿತಿಯಲ್ಲಿದ್ದು ಶುಭಫಲವನ್ನು ನೀಡುತ್ತಿದ್ದರೆ ಅನುಭವವಿಲ್ಲದಿದ್ದರೂ ಉತ್ತಮ ಕೆಲಸ ಮತ್ತು ಪದವಿ ಸಿಗುತ್ತದೆ. ಎಷ್ಟೇ ವರ್ಷಗಳ ಅನುಭವವಿದ್ದು, ಉತ್ತಮ ಯೋಗ್ಯತೆ ಇದ್ದರೂ ಕೆಲವು ಬಾರಿ ಬಯಸಿದ ಕೆಲಸ ಸಿಗುವುದಿಲ್ಲ, ಕಾರಣ ಆ ಸಮಯದಲ್ಲಿ ಗ್ರಹಗತಿಗಳು ಉತ್ತಮವಾಗಿರುವುದಿಲ್ಲ ಅಶುಭ ಗ್ರಹದ ಪ್ರಭಾವ ಅಧಿಕವಾಗಿದ್ದಾಗ, ಇನ್ನೇನು ಸಿಕ್ಕೇ ಬಿಟ್ಟಿತು ಎಂಬ ಕೆಲಸವೂ ಸಿಗುವುದಿಲ್ಲ. ಇದಕ್ಕೆಲ್ಲ ಪರಿಹಾರವೆಂದರೆ ಸರಿಯಾದ ಸಮಯದಲ್ಲಿ ಜಾತಕವನ್ನು ಪರೀಕ್ಷಿಸಿ, ಗ್ರಹಗತಿಗಳ ಫಲಗಳ ಬಗ್ಗೆ ತಿಳಿದುಕೊಂಡು, ಅಶುಭ ಗ್ರಹಗಳಿಗೆ ಸಂಬಂಧಿಸಿದ ಪರಿಹಾರವನ್ನು ಮಾಡಿಕೊಳ್ಳಬೇಕು. ಶುಭಗ್ರಹಗಳಿಗೆ ಸಂಬಂಧಿಸಿದ ರತ್ನವನ್ನು ಧರಿಸುವುದರಿಂದ ಸಮಸ್ಯೆಗಳ ನಿವಾರಣೆ ಸಾಧ್ಯ.

ಇದನ್ನು ಓದಿ: ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ.

ಉತ್ತಮ ನೌಕರಿಗೆ ಜಾತಕದ ಯಾವ ದಶೆ ಕಾರಣ?
ಮೊದಲು ಜಾತಕದ ಪ್ರಥಮ ಮನೆ ಅಂದರೆ ಲಗ್ನ ಮತ್ತು ಲಗ್ನದ ಅಧಿಪತಿ ಗ್ರಹವನ್ನು ನೋಡಲಾಗುವುದು. ಲಗ್ನದಲ್ಲಿ ಗ್ರಹದ ಸ್ಥಿತಿ ಶುಭವಾಗಿದ್ದರೆ ಅಥವಾ ಲಗ್ನದ ಅಧಿಪತಿ ಗ್ರಹವು ಶುಭಸ್ಥಾನದಲ್ಲಿದ್ದರೆ ಅಂತಹ ಜಾತಕದವರಿಗೆ ಉತ್ತಮ ನೌಕರಿ ಮತ್ತು ಪದವಿ ಸಿಗುತ್ತದೆ ಎಂದು ಹೇಳಿದರೂ ಕೆಲವು ಷರತ್ತುಗಳು ಅನ್ವಯಿಸುತ್ತದೆ. ಅದೇನೆಂದರೆ ನೌಕರಿ ಪಡೆಯುವ ವಯಸ್ಸಿಗೆ ಸರಿಯಾಗಿ ಶುಭದಶೆ ನಡೆಯುತ್ತಿದ್ದರೆ ಮಾತ್ರ ಸಾಧ್ಯ. ಗ್ರಹದ ಶುಭದಶೆ ನಡೆಯುವ ಸಮಯ ಪ್ರಮುಖವಾಗುತ್ತದೆ.

Tap to resize

Latest Videos



ಜಾತಕದ ಒಂದನೇ, ಎರಡನೇ, ನಾಲ್ಕನೇ, ಏಳನೇ, ಒಂಭತ್ತನೇ, ಹತ್ತನೇ ಮತ್ತು ಹನ್ನೊಂದನೇ ಮನೆಯ ಗ್ರಹ ಮತ್ತು ಅದರ ಅಧಿಪತಿ ಗ್ರಹಗಳು ವ್ಯಕ್ತಿಯು ಕೆಲಸ ಮಾಡುವ ಸಮಯದಲ್ಲಿ ಉತ್ತಮ ಫಲವನ್ನು ನೀಡುತ್ತವೆ. ಆರನೇ ಮನೆ ಮತ್ತು ಅದರ ಅಧಿಪತಿ ಗ್ರಹ ಈ ವಿಷಯದಲ್ಲಿ ಉತ್ತಮವಲ್ಲ ಎಂಬುದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರು ಕೆಲವು ಪರಿಸ್ಥಿತಿಗಳನ್ನು ಹೊರತು ಪಡಿಸಿದರೆ ಆರನೇ ಮನೆ ಮತ್ತು ಅದರ ಅಧಿಪತಿ ಗ್ರಹ ಉಚ್ಛ ಪದವಿ ಮತ್ತು ನೌಕರಿಗೆ ಸಂಬಂಧಿಸಿದಂತೆ ಒಳಿತನ್ನು ಮಾಡುತ್ತದೆ ಎನ್ನುತ್ತಾರೆ.

ಇದನ್ನು ಓದಿ: ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ! 

ವ್ಯಕ್ತಿಯ ವೃತ್ತಿಗೆ-ಹತ್ತನೇ ಮನೆ
ಹತ್ತು ಮತ್ತು ಹನ್ನೊಂದನೇ ಮನೆ ಮತ್ತು ಅಧಿಪತಿ ಗ್ರಹವು ವ್ಯಕ್ತಿಯ ಅಭಿವೃದ್ಧಿಗೆ ಕಾರಣವನ್ನುಂಟು ಮಾಡುತ್ತದೆ. ಹತ್ತನೆ ಮನೆಯು ವ್ಯಕ್ತಿಯ ಕೆಲಸಕ್ಕೆ ಸಂಬಂಧಿಸಿದ್ದರೆ, ಹನ್ನೊಂದನೆ ಮನೆಯು ಆದಾಯವನ್ನು ತೋರಿಸುತ್ತದೆ. ಈ ಮನೆಗಳಲ್ಲಿ ಶುಭ ಗ್ರಹದ ಸ್ಥಿತವಾಗಿದ್ದರೆ,ಅಧಿಪತಿ ಗ್ರಹ ಶುಭಸ್ಥಾನದಲ್ಲಿದ್ದರೆ ಅಥವಾ ಈ ಗ್ರಹಗಳ ಶುಭದಶೆಯು ವ್ಯಕ್ತಿಯ ಮಧ್ಯಮ ವಯಸ್ಸಿನಲ್ಲಿ ಬಂದರೆ ಆಗ ಉನ್ನತ ಮಟ್ಟದ ಜೀವನ ಶೈಲಿ, ಉಚ್ಛ ಪದವಿ ಮತ್ತು ಕೆಲಸವನ್ನು ಹೊಂದಿ ಉತ್ತಮ ಆಧಾಯ ಗಳಿಸಬಹುದಾಗಿದೆ.

ಇದನ್ನು ಓದಿ: ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ! 

ಸರ್ಕಾರಿ ಕೆಲಸ ಸಿಗುವ ಸಂಭವ
ಜಾತಕದಲ್ಲಿ ಸೂರ್ಯ ಅಥವಾ ಚಂದ್ರ ಯಾವುದಾದರೊಂದು ಗ್ರಹ ಉಚ್ಛವಾಗಿದ್ದಾಗ, ಪಂಚಮಹಾಪುರುಷ ಯೋಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಯೋಗವಿದ್ದರೆ, ಶನಿಯ ಸ್ಥಿತಿ ಉಚ್ಛ್ರಾಯವಾಗಿದ್ದರೆ ಅಥವಾ ಸಾಡೇ ಸಾಥ್ ಇಲ್ಲವೇ ಅರ್ಧಾಷ್ಟಮ ನಡೆಯುತ್ತಿದ್ದರೆ, ಕೈಯಲ್ಲಿ ಸೂರ್ಯನ ಉಭಯ ರೇಖೆ ಇದ್ದರೆ, ಕೈಯಲ್ಲಿ ಬೃಹಸ್ಪತಿ ಪರ್ವತ ಇರುವ ಜಾಗದಲ್ಲಿ ಡೊಂಕಾಗಿದ್ದರೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಹೆಚ್ಚು. 

click me!