ನಿಮ್ಮ ಸುತ್ತ ಪ್ರೇತಾತ್ಮಗಳಿವೆಯಾ? ತಿಳಿಯೋದು ಹೇಗೆ?

By Suvarna News  |  First Published May 31, 2020, 3:46 PM IST

ನಮ್ಮ ಸುತ್ತಮುತ್ತ ಸಾಕಷ್ಟು  ಪ್ರೇತಾತ್ಮಗಳಿರಬಹುದು. ಆದರೆ ಅವುಗಳ ಕುರಿತು ನಾವು ತುಂಬಾ ಸೆನ್ಸಿಟಿವ್ ಆಗದ ಹೊರತು ಅವು ನಮ್ಮ ಗಮನಕ್ಕೆ ಬರುವುದಿಲ್ಲ. ಪ್ರೇತಾತ್ಮಗಳ ಕಾರ್ಯಾಚರಣೆ ಬಗ್ಗೆ ಗೊತ್ತು ಮಾಡಿಕೊಳ್ಳೋ ಆಸೆ ಮತ್ತು ಧೈರ್ಯ ಇದ್ರೆ ಮುಂದೆ ಓದಿ. ಭಯ ಇದ್ರೆ ಓದ್ಲೇಬೇಡಿ. ಇವೆಲ್ಲ ಈ ಕುರಿತು ಸಾಕಷ್ಟು ಸಾಧನೆ ಮಾಡಿದ ಜ್ಞಾನಿಗಳೇ ನೀಡಿದ ಮಾಹಿತಿಗಳು.


ಪ್ರತಿದಿನ ಸಾವಿರಾರು ಮಂದಿ ಸಾಯುತ್ತಾರೆ. ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಪುಣ್ಯಾತ್ಮರು‌ ಸ್ವರ್ಗಕ್ಕೂ ಪಾಪಿಗಳು ನರಕಕ್ಕೂ ಹೋಗುತ್ತಾರೆ. ಕೆಲವು ಅತೃಪ್ತರು ಇಲ್ಲೇ ಪ್ರೇತಾತ್ಮಗಳಾಗಿ ಸುಳಿದಾಡುತ್ತಿರುತ್ತಾರೆ. ಲೌಕಿಕ ಬದುಕಿನ ಬಗ್ಗೆ ಅವರಲ್ಲಿ ಇನ್ನೂ ಆಸೆ ಉಳಿದಿರುವುದರಿಂದ, ಬದುಕಿರುವವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರೋಕೆ ಇವರು ಬಯಸುತ್ತಾ ಇರುತ್ತಾರೆ. ನಮ್ಮ ಸುತ್ತಮುತ್ತ ಸಾಕಷ್ಟು  ಪ್ರೇತಾತ್ಮಗಳಿರಬಹುದು. ಆದರೆ ಅವುಗಳ ಕುರಿತು ನಾವು ತುಂಬಾ ಸೆನ್ಸಿಟಿವ್ ಆಗದ ಹೊರತು ಅವು ನಮ್ಮ ಗಮನಕ್ಕೆ ಬರುವುದಿಲ್ಲ.

ಪ್ರೇತಾತ್ಮಗಳ ಕಾರ್ಯಾಚರಣೆ ಬಗ್ಗೆ ಗೊತ್ತು ಮಾಡಿಕೊಳ್ಳೋ ಆಸೆ ಮತ್ತು ಧೈರ್ಯ ಇದ್ರೆ ಮುಂದೆ ಓದಿ. ಭಯ ಇದ್ರೆ ಓದ್ಲೇಬೇಡಿ. ಇವೆಲ್ಲ ಈ ಕುರಿತು ಸಾಕಷ್ಟು ಸಾಧನೆ ಮಾಡಿದ ಜ್ಞಾನಿಗಳೇ ನೀಡಿದ ಮಾಹಿತಿಗಳು.

Tap to resize

Latest Videos

undefined

- ಪಟ್ಟಣದ ನಡುವೆ ಯಾರೂ ಓಡಾಡದ ನಿರ್ಜನ ಪ್ರದೇಶಗಳು ಇರುತ್ತವಲ್ಲ. ಅಂಥ ಕಡೆ ಪ್ರೇತಗಳು ಹೆಚ್ಚಾಗಿ ಇರುತ್ತವೆ. ಸ್ಮಶಾನದಲ್ಲಿ ಜನರ ಓಡಾಟ ಹೆಚ್ಚಾಗಿ ಇರುವುದರಿಂದ ಪ್ರೇತಗಳು ಅಲ್ಲಿರಲು ಬಯಸುವುದಿಲ್ಲ.

- ಅಪಮೃತ್ಯು, ಆತ್ಮಹತ್ಯೆ, ಕೊಲೆ ಮುಂತಾದವು ಸಂಭವಿಸಿದ ಮನೆಗಳಲ್ಲಿ ಖಂಡಿತವಾಗಿಯೂ ಆತ್ಮಗಳು ಇರುವ ಸಂಭವ ಇದೆ.

- ಹಲವಾರು ವರ್ಷಗಳಿಂದ ಪಾಳುಬಿದ್ದಿರುವ ಮನೆ, ಬಾವಿ, ಗುಹೆಗಳು ಆತ್ಮಗಳ ಆವಾಸ ಸ್ಥಾನ ಆಗಿರುತ್ತವೆ.

- ಆಕ್ಸಿಡೆಂಟ್ ಅಥವಾ ದೊಡ್ಡ ದುರಂತಗಳು ಸಂಭವಿಸಿ ಹೆಚ್ಚು ಜನರು ಸತ್ತ ಜಾಗದಲ್ಲಿ ಕೆಲವಾದರೂ ಪ್ರೇತಗಳು ದುಃಖದಿಂದ ರೋದಿಸುತ್ತ ಓಡಾಡುತ್ತ ಇರುತ್ತವೆ.

- ಅರ್ಧಕ್ಕೆ ಕೆಲಸ ನಿಲ್ಲಿಸಿದ ಕಟ್ಟಡ, ಪಾಳುಬಿದ್ದ ಫ್ಯಾಕ್ಟರಿ, ದೊಡ್ಡ ದೊಡ್ಡ ಡ್ರೈನೇಜುಗಳು ಕೂಡ ಇವುಗಳಿಗೆ ಮನೆ ಆಗಬಹುದು.

ಪ್ರೇತಗಳು ಇವೆ ಅಂತ ನಿಮಗೆ ಗೊತ್ತಾಗೋದು ಹೇಗೆ?

- ನಿರ್ಜನ ಪ್ರದೇಶಗಳಿಂದ ನಿಮಗೆ ಅದೇನು ಅಂತ ಅರ್ಥವಾಗದ ಶಬ್ದ ಕೇಳಿಸುವುದು.

- ಯಾವ ಪ್ರಾಣಿಯ ಕೂಗು ಕೂಡ ಅಲ್ಲ ಅನಿಸುವ ಶಬ್ದ, ಯಾರೋ ನಿರಂತರವಾಗಿ ಅಳುವ ಶಬ್ದ, ಗಾಳಿಯೇ ಇಲ್ಲದ ಹೊತ್ತಿನಲ್ಲಿ ಮರದ ಗೆಲ್ಲು ಅಲ್ಲಾಡಿದ ಅಥವಾ ಏನೋ ಬಿದ್ದ ಶಬ್ದಗಳು ಆಗುವುದು.

- ನೀವು ಇದುವರೆಗೆ ಅನುಭವಿಸಿಲ್ಲದ ವಿಚಿತ್ರ ಪರಿಮಳವೊಂದು ಬರುವುದು. ಆ ಪರಿಮಳದ ಮೂಲ ಗೊತ್ತಾಗದಿರುವುದು.

- ನಡುರಾತ್ರಿ ಯಾರೋ ನಡೆದಂತೆ ಗೆಜ್ಜೆ ಸದ್ದು ಅಥವಾ ಹೆಜ್ಜೆ ಸದ್ದುಗಳು. 

- ನಡೆಯುವಾಗ ನಮ್ಮ ಹಿಂದೆ ಯಾರೋ ಹಿಂಬಾಲಿಸುತ್ತಿದ್ದಾರೆ ಅನಿಸುವುದು. ಇದ್ದಕ್ಕಿದ್ದಂತೆ ತಣ್ಣನೆಯ ಗಾಳಿಯೊಂದು ನಿಮ್ಮ ಮೈಯಲ್ಲಿ ನಡುಕ ಮೂಡಿಸುತ್ತಾ ಹಾದುಹೋಗುವುದು.

ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು!

ಪ್ರೇತಗಳಿಗೇನು ಬೇಕು?

ಇವು ಅತೃಪ್ತ ಆತ್ಮಗಳು. ಲೌಕಿಕ ಬದುಕಿನಲ್ಲಿ ಯಾವುದೋ ಆಸೆಯನ್ನು ಉಳಿಸಿಕೊಂಡಿರುತ್ತವೆ. ಅದನ್ನು ಈಡೇರಿಸುವ ದಾರಿ ಕಾಯುತ್ತಾ ಇರುತ್ತವೆ. ಆದರೆ ಅವುಗಳ ಆಸೆ ಪೂರ್ಣವಾಗುವುದು ಬಲು ಕಡಿಮೆ. ಅವುಗಳ ಲೋಕ ಈ ಜಗತ್ತಿಗಿಂತ ಭಿನ್ನವಾದುದರಿಂದ, ನಮ್ಮ ಬದುಕಿನಲ್ಲಿ ಯಾವುದೇ ಕೈವಾಡ ನಡೆಸಲು ಅವುಗಳಿಂದ ಸಾಧ್ಯ ಆಗುವುದಿಲ್ಲ. ನಾವು ಮಾಡುತ್ತಿರುವುದನ್ನು ಅವುಗಳು ನೋಡಲು ಸಾಧ್ಯವಿದೆ. ಆದರೆ ಅದನ್ನು ಕೆಡಿಸಲು ಅವುಗಳಿಂದ ಸಾಧ್ಯವಿಲ್ಲ. ಯಾಕೆಂದರೆ ಅವುಗಳಿಗೆ ಮೈಯಿಲ್ಲ.

ಇನ್ನು ಕೆಲವು ಆತ್ಮಗಳು ಬಹಳ ಬಲಿಷ್ಠವಾಗಿರುತ್ತವೆ. ಇವುಗಳು ಇನ್ನೊಬ್ಬರ ಮೈಮೇಲೆ ಬರಬಹುದು. ಬಂದಷ್ಟೇ ಬೇಗನೆ ತಿರುಗಿ ಹೋಗುತ್ತವೆ ಕೂಡ. ಯಾಕೆಂದರೆ ಬಹು ದೀರ್ಘ ಕಾಲ ಸೂರ್ಯನ ಬೆಳಕಿನಲ್ಲಿ ಇರಲು ಇವುಗಳಿಗೆ ಸಾಧ್ಯವಾಗುವುದಿಲ್ಲ. ಕತ್ತಲೇ ಇವುಗಳ ರಾಜ್ಯ. ಕತ್ತಲೆಯೇ ಇವುಗಳ ಬದುಕು.

ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!

ಈ ಪ್ರೇತಗಳು ತಮ್ಮ ಪೂರ್ವಜನ್ಮದ ಪರಿಚಿತರನ್ನು ಬಂಧುಗಳನ್ನು ನೋಡಲು, ಮುಟ್ಟಲು ಬಯಸುವುದು ನಿಜ. ಇವುಗಳಲ್ಲಿ ಅತ್ಯಲ್ಪ ಪ್ರೇತಗಳಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಆದರೆ ಅವುಗಳ ಜೊತೆಗೆ ಸಂವಹನ ನಡೆಸಲು ಕೆಲವೇ ಪರಿಣತರಿಗೆ ಮಾತ್ರ ಸಾಧ್ಯ.

ನಿಮ್ಮ ಸುತ್ತ ಪ್ರೇತಗಳು ಇವೆ ಅನಿಸಿದರೆ ಭಯ ಬೇಡ. ಆ ಭಯವನ್ನು ಮೀರಲೂ ಕೆಲವು ಉಪಾಯಗಳಿವೆ ಅನ್ನುತ್ತಾರೆ ತಜ್ಞರು. ಅವು ಯಾವುವು ಅಂತ ಮುಂದೊಮ್ಮೆ ವಿವರವಾಗಿ ನೋಡೋಣ.

ರಾಶಿ ಅನುಸಾರ ನಿಮ್ಮ ಈ ಅಂಗಗಳು ಆಕರ್ಷಕವಾಗಿರುತ್ತವೆ!

click me!