ಕಟಕ, ಸಿಂಹ, ಕನ್ಯಾ ರಾಶಿಯವರ ಅದೃಷ್ಟ ಹೀಗಿದೆ ನೋಡಿ!

By Suvarna News  |  First Published May 31, 2020, 3:11 PM IST

ಸೂರ್ಯ ಅಧಿಪತಿಯಾಗಿರೋ ಸಿಂಹ ರಾಶಿಗೆ ಪೂರ್ವ ಅದೃಷ್ಟ ಕೊಡೋ ದಿಕ್ಕು. ಕಟಕ ರಾಶಿಯವರಿಗೆ ಆಗಾಗ ಬರೋ ಸಿಟ್ಟೋ ಅದೃಷ್ಟವನ್ನು ದುರಾದೃಷ್ಟವಾಗಿ ಟರ್ನ್ ಮಾಡುತ್ತೆ. ಕನ್ಯಾ ರಾಶಿಯವ್ರಿಗೆ ಭಾಷೆಯಿಂದ ಸಿದ್ಧಿ ಹೆಚ್ಚು. ಇದ್ರಲ್ಲಿ ನಿಮ್ ರಾಶಿನೂ ಇದೆಯಾ? ಹಾಗಿದ್ರೆ ಅದೃಷ್ಟ ಹೇಗಿದೆ ನೋಡ್ಕೊಳ್ಳಿ.


ಕಟಕ

ಇದೊಂದು ಅದೃಷ್ಟವಂತ ರಾಶಿ. ಚಂದ್ರ ಈ ರಾಶಿಯ ಅಧಿಪತಿ. ದಕ್ಷಿಣ ದಿಕ್ಕು ಈ ರಾಶಿಯವರಿಗೆ ಶುಭ. ಸದ್ಯಕ್ಕೆ ಈ ರಾಶಿಗೆ ಗುರು ಬಲ ಇಲ್ಲ. ನವೆಂಬರ್ ೨೦ ರವರೆಗೆ ಹೊಸ ಕೆಲಸಗಳಿಗೆ ಕೈ ಹಾಕಬೇಡಿ. ಈ ರಾಶಿಯವರಿಗೆ ತಮ್ಮ ಸಂಗಾತಿಯ ಮೇಲೆ ಅಧಿಕ ಪ್ರೀತಿ. ಕಟಕ ಒಂದು ಸ್ತ್ರೀ ರಾಶಿಯಾಗಿರೋ ಕಾರಣ ಈ ರಾಶಿಯವರು ಸ್ತ್ರೀ ಆರಾಧಕರಾಗಿರುತ್ತಾರೆ. ಪ್ರಕೃತಿ ಪ್ರಿಯರು. ಓಡಾಟ ಮಾಡೋದಂದರೆ ಬಹಳ ಪ್ರೀತಿ. ನಿಂತಲ್ಲಿ ನಿಲ್ಲದೋ ಇವರಿಂದ ಸಾಧ್ಯವಾಗದ ಮಾತು. ಸಂಚಾರ ಯೋಗ ಇದ್ದರೆ ಇವರು ಫುಲ್ ಖುಷಿಯಾಗಿರುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಇವರ ರಾಶಿ ಪ್ರಕಾರ ನೋಡೋದಾದ್ರೂ ಸಾಧ್ಯವಿಲ್ಲ. ಈ ರಾಶಿಯವರಿಗೆ ಸಮ್ಮೋಹನಗೊಳಿಸುವ ಮಾತಿನ ಶಕ್ತಿ ಇರುತ್ತದೆ. ಎದುರಿದ್ದವರ ಮನಸ್ಥಿತಿಯನ್ನು ಅರಿತು ವ್ಯವಹರಿಸೋದರಲ್ಲಿ ಎತ್ತಿದ ಕೈ. ಸೈಕಾಲಜಿಯಂಥಾ ಕ್ಷೇತ್ರವನ್ನು ಆರಿಸಿಕೊಂಡರೆ ಇವರು ಬಹಳ ಏಳ್ಗೆ ಹೊಂದುತ್ತಾರೆ. ಸದ್ಯಕ್ಕೆ ನಿಮಗೆ ಗುರುಬಲ ಇಲ್ಲ. ಹಾಗಾಗಿ ಸಾಧ್ಯವಾದಷ್ಟು ಬಿಳಿ ಬಣ್ಣದ ಬಟ್ಟೆ ಧರಿಸಿ ಓಡಾಡಿ. ಮುತ್ತಿನ ಆಭರಣ ನಿಮಗೆ ಶುಭ. ಪುಷ್ಯರಾಗವೂ ಒಳ್ಳೆಯದು. ಪಚ್ಚೆ ಅಥವಾ ಹಸಿರು ಬಣ್ಣದ ಉಡುಗೆ ನಿಮಗೆ ಅಶುಭ. ಈಗ ನಿಮಗೆ ಗುರುಬಲವೂ ಇಲ್ಲದ ಕಾರಣ ಆ ಬಣ್ಣದ ಉಡುಗೆ ಧರಿಸದಿರುವುದು ಒಳ್ಳೆಯದು. ದುರ್ಗೆಯ ಆರಾಧನೆ ನಿಮ್ಮ ಖಿನ್ನಗೊಂಡ ಮನಸ್ಸಿಗೆ ಶಾಂತತೆ ತಂದುಕೊಡುತ್ತದೆ. ಊಟ, ತಿಂಡಿಯ ಮೇಲೆ ಹಿಡಿತ ತಪ್ಪಬಹುದು. ಇದರಿಂದ ಮಧುಮೇಹದಂಥಾ ರೋಗ ಬರಬಹುದು. ಪಾದಗಳಲ್ಲಿ ಉರಿ ಆಗಬಹುದು. ನಿಮ್ಮದು ಕಫ ಪ್ರಕೃತಿಯಾದ ಕಾರಣ ಕಫ ಸಂಬಂಧಿ ಕಾಯಿಲೆಗಳ ಬಗ್ಗೆ ಹುಷಾರಾಗಿರಿ. ಮೂರು ನಿಮ್ಮ ಅದೃಷ್ಟ ಸಂಖ್ಯೆ. ಸೋಮವಾರ, ಬುಧ, ಗುರುವಾರ ಉತ್ತಮ.

Tap to resize

Latest Videos

undefined

 

 

ಈ ಗಣಪನಿಗೆ ನಿತ್ಯ ಸಾವಿರ ಕೊಡ ಅಭಿಷೇಕ ಆಗಲೇಬೇಕು!

 

ಸಿಂಹ

 

ಸಿಂಹರಾಶಿಯವರಿಗೆ ಅಹೋಭಾಗ್ಯವಾಗಿದೆ. ಅತ್ಯಂತ ಶುಭವಿದೆ. ಒಂದರಮೇಲೊಂದು ಶುಭ ಫಲಗಳು ಬರುತ್ತಲೇ ಇರುತ್ತವೆ. ಈಗಾಗಲೇ ಒಂದು ಮನೆ ಇದ್ದರೆ ಇನ್ನೊಂದು ಫ್ಲೋರ್ ಕಟ್ಟಬಹುದು. ಭೂ ವ್ಯವಹಾರದಲ್ಲಿ ಕೈ ಹಾಕಿದರೆ ಪ್ರಗತಿ ಶತಃಸಿದ್ಧ. ಉಚ್ಛಸ್ಥಾನದಲ್ಲಿ ರಾಹು ಇದ್ದಾನೆ. ಅವನೂ ಅನುಕೂಲ ಮಾಡಿಕೊಡುತ್ತಾನೆ. ನಾಲ್ಕನೇ ಮನೆಯಲ್ಲಿರುವ ಕುಜನಿಂದ ತುಸು ಆರೋಗ್ಯ ಸಮಸ್ಯೆ ಬಾಧಿಸಬಹುದು. ಆದಿತ್ಯ ಹೃದಯವನ್ನು ಓದಿದರೆ ಸಣ್ಣಪುಟ್ಟ ಕಷ್ಟಗಳೂ ನಿವಾರಣೆಯಾಗುತ್ತವೆ. ಸಿಂಹ ರಾಶಿಗೆ ಸೂರ್ಯ ಅಧೀಪತಿ. ಪೂರ್ವ ದಿಕ್ಕು ಶುಭ. ನಿತ್ಯವೂ ಬೆಳಗ್ಗೆ ಸೂರ್ಯೋದಯವನ್ನು ನೋಡಿ. ಸೂರ್ಯದೇವನಿಗೆ ಕೈ ಮುಗಿದು ದಿನದ ಆರಂಭ ಮಾಡಿ. ನಿಮ್ಮೆಲ್ಲ ಕೆಲಸ ಕಾರ್ಯಗಳೂ ಪೂರ್ವ ದಿಕ್ಕಿನಿಂದ ಆರಂಭವಾಗಲಿ. ನಿಮ್ಮ ಅದೃಷ್ಟ ಸಂಖ್ಯೆ ಒಂದು. ನಿಮ್ಮ ಗಾಡಿಯ ನಂಬರ್ ಬೇರೆ ಇರಬಹುದು. ಈ ಒಂದು ನಂಬರ್‌ಅನ್ನು ಗಾಡಿಯ ಮುಖ್ಯಭಾಗದಲ್ಲಿ ಕಾಣುವಂತೆ ಅಂಟಿಸಿದರೆ ಪಾಸಿಟಿವ್ ವೈಬ್ರೇಶನ್ ಸಿಗುತ್ತೆ. ಈಶ್ವರ ನಿಮಗೆ ಒಲಿಯುತ್ತಾನೆ, ಹೆಚ್ಚೆಚ್ಚು ಈಶ್ವರನ ಆರಾಧನೆ ಮಾಡಿದರೆ ನಿಮ್ಮ ಆಸೆಗಳು ಈಡೇರುತ್ತವೆ. ನಿಮಗೆ ಸಿಂಹಾಸನ ಅಥವಾ ಮೇಲಿನ ಸ್ಥಾನದಲ್ಲಿ ಕೂರುವ ಭಾಗ್ಯವಿದೆ. ನಿಮ್ಮ ದೇಹ ಉಷ್ಣದ್ದು. ಸದಾ ಬಿಸಿಯಾಗಿರುತ್ತೆ. ನಿಮ್ಮ ಮನಸ್ಸೂ ಸದಾ ನಿಗಿನಿಗಿ ಅಂತಿರುತ್ತೆ. ನೀವು ಯಾರ ಮಾತನ್ನೂ ಕೇಳಲ್ಲ. ಎಲ್ಲರೂ ನಿಮ್ಮ ಮಾತು ಕೇಳಬೇಕು ಅಂತ ಬಯಸುತ್ತೀರಿ. ನಿಮ್ಮ ಆ ಬಯಕೆಯೂ ಈಗ ಈಡೇರುತ್ತದೆ. ಸೂರ್ಯನ ಆರಾಧನೆ ಮರೀಬೇಡಿ. ಹೊಟ್ಟೆ, ಬೆನ್ನು, ಕಣ್ಣಿನ ಭಾಗಕ್ಕೆ ಸೂರ್ಯನ ಬಿಸಿಲು ಬೀಳೋ ಹಾಗೆ ನೋಡ್ಕೊಳ್ಳಿ.

 

 

ಜಗತ್ತಿನ ಮೊದಲ ಮಂಗಳಮುಖಿ ಯಾರು ನಿಮಗೆ ಗೊತ್ತಾ?

 

ಕನ್ಯಾ

 

ಕನ್ಯಾ ರಾಶಿಯ ಅಧಿಪತಿ ಬುಧ. ಇವರು ಬಹಳ ಬೇಗ ಒಂದು ಭಾಷೆಯನ್ನು ಕಲಿಯಬಲ್ಲರು. ಮಹಾವಿಷ್ಣುವಿನ ಅಂಶವುಳ್ಳ ರಾಶಿಯಿದು. ಈ ರಾಶಿಯವರಿಗೆ ನೈರುತ್ಯ ದಿಕ್ಕು ಶುಭ ಫಲವನ್ನು ನೀಡುತ್ತದೆ. ನಿಮಗೆ ಈ ವರ್ಷ ಅತ್ಯಂತ ಶುಭಕರವಾಗಿದೆ. ಕೇಂದ್ರಾಧಿಪತ್ಯ ಯೋಗ ನಿಮಗಿದೆ. ಗಜಕೇಸರಿ ಯೋಗವೂ ನಿಮ್ಮ ರಾಶಿಗಿದೆ. ಇದರಿಂದ ಸಾಕಷ್ಟು ಅನುಕೂಲತೆಗಳಾಗಬಹುದು. ಧನ, ಕನಕ, ವಾಹನ ಹೀಗೆ ನೀವು ಬಯಸಿದ ಸಮೃದ್ಧಿ ಎಲ್ಲ ಸಿಗುವ ಸಮಯವಿದು. ನಾಲ್ಕನೇ ಮನೆಯಲ್ಲಿ ಶನಿ ಇರುವ ಕಾರಣ ವಾಹನದಿಂದ, ಇತರ ಕಾರಣಕ್ಕೆ ಸಣ್ಣಪುಟ್ಟ ಗಾಯಗಳು ಆಗಾಗ ಆಗಬಹುದು. ವಾಹನ ಸವಾರರಿಗೆ ತುಸು ಅಪಾಯವಿದೆ. ಮೊಬೈಲ್‌ ಕಳೆದುಕೊಳ್ಳುವ ಸಂಭವವಿದೆ. ದಾಂಪತ್ಯದಲ್ಲಿ ತುಸು ವಿರಸ ಕಾಣಬಹುದು. ಒಂದು ಹಂತದಲ್ಲಿ ಈ ವಿರಸ ಹೆಚ್ಚುತ್ತಲೇ ಹೋಗಬಹುದು. ದುಶ್ಚಟ ಅಂಟಿಕೊಳ್ಳಬಹುದು. ದಿವಸವೂ ಹೆಸರು ಕಾಳು ತಿನ್ನುತ್ತಿರಿ. ಹಸಿರು ನಿಮಗೆ ಅದೃಷ್ಟ ತರಲಿದೆ. ಕಿರು ಬೆರಳಿಗೆ ಬೆಳ್ಳಿಯ ಕಟ್ಟಿರುವ ಪಚ್ಚೆಯ ಉಂಗುರ ಧರಿಸಿ. ಹೆಣ್ಮಕ್ಕಳಾದರೆ ಎಡಗೈಗೆ ಧರಿಸಿ. ಗಂಡಸರು ಬಲಗೈಗೆ ಧರಿಸಿ. ವಿಷ್ಣ ಸಹಸ್ರನಾಮ ಪಠಿಸುತ್ತಿದ್ದರೆ ನೆಮ್ಮದಿ ನಿಮ್ಮದಾಗುತ್ತೆ. ನಾರಾಯಣ ಸ್ಮರಣೆ ಮಾಡೋದನ್ನು ಮರೀಬೇಡಿ.

ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

click me!