ಈ ದೇವಸ್ಥಾನಕ್ಕೆ ದಂಪತಿ ಒಟ್ಟಿಗೆ ದೇವರ ದರ್ಶನ ಮಾಡುವುದೇ ನಿಷಿದ್ಧ

By Suvarna NewsFirst Published Oct 14, 2022, 5:43 PM IST
Highlights

ದೇವಸ್ಥಾನವೆಂದ್ಮೇಲೆ ದಂಪತಿ ಒಟ್ಟಿಗೆ ಹೋಗಲು ಬಯಸ್ತಾರೆ. ದೇವರ ಮುಂದೆ ನಿಂತು, ದೀರ್ಘಕಾಲ ಒಟ್ಟಿಗೆ ಬಾಳುವಂತೆ ಪ್ರಾರ್ಥನೆ ಮಾಡ್ತಾರೆ. ಆದ್ರೆ ಅಲ್ಲೊಂದು ದೇವಸ್ಥಾನವಿದೆ. ಅಲ್ಲಿ ದೇವರ ಮುಂದೆ ದಂಪತಿ ಒಟ್ಟಿಗೆ ನಿಂತ್ರೆ ಬೇರೆಯಾಗೋದು ನಿಶ್ಚಿತ.
 

ಭಾರತದಲ್ಲಿ ದೇವಾಲಯಗಳ ಸಂಖ್ಯೆ ಸಾಕಷ್ಟಿದೆ. ಒಂದೊಂದು ಗಲ್ಲಿಯಲ್ಲಿ ನಾಲ್ಕೈದು ಮಂದಿರಗಳನ್ನು ನಾವು ನೋಡಬಹುದು. ಕೆಲ ದೇವಸ್ಥಾನಗಳು ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಪ್ರತಿ ದಿನ ಸಾವಿರಾರು ಭಕ್ತರು ಅಲ್ಲಿಗೆ ಬಂದು ಹೋಗ್ತಾರೆ. ಮತ್ತೆ ಕೆಲ ದೇವಾಲಯಗಳು ಅಲ್ಲಿನ ವಾಸ್ತುಶಿಲ್ಪ, ಪದ್ಧತಿಗಳಿಂದ ಪ್ರಸಿದ್ಧಿ ಪಡೆದಿವೆ. 

ಭಾರತ (India) ದಲ್ಲಿ ಮದುವೆ (Marriage)ಯಾದ ಜೋಡಿ ಒಟ್ಟಿಗೆ ದೇವರ ದರ್ಶನ ಪಡೆಯುವ ಪದ್ಧತಿಯಿದೆ. ಯಾವುದೇ ಪೂಜೆ, ಹೋಮ – ಹವನವಿರಲಿ ವಿವಾಹಿತ ಜೋಡಿ ಒಟ್ಟಿಗೆ ಪೂಜೆ ಸಲ್ಲಿಸ್ತಾರೆ. ದೇವಸ್ಥಾನ (Temple) ಗಳಿಗೆ ಪತಿ – ಪತ್ನಿ ಒಟ್ಟಿಗೆ ಹೋಗ್ತಾರೆ. ದಂಪತಿ ಒಟ್ಟಿಗೆ ದೇವರ (God) ಪೂಜೆ ಮಾಡಿದ್ರೆ ಅಥವಾ ದೇವರ ದರ್ಶನ ಪಡೆದ್ರೆ ಪ್ರಾರ್ಥನೆ ಈಡೇರುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಭಾರತದಲ್ಲಿ ದೇವಿ ದೇವಸ್ಥಾನವೊಂದು ಎಲ್ಲಕ್ಕಿಂತ ಭಿನ್ನವಾಗಿದೆ. ಅಲ್ಲಿ ದಂಪತಿ ಒಟ್ಟಿಗೆ ದೇವರ ದರ್ಶನ ಮಾಡುವಂತಿಲ್ಲ. ನಾವಿಂದು ಆ ದೇವಸ್ಥಾನದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

Latest Videos

TRAVEL TIPS IN KANNADA: ಅತ್ಯಂತ ಕಡಿಮೆ ಬಜೆಟ್ ನಲ್ಲಿ ಭಾರತದ ಸುಂದರ ತಾಣಗಳನ್ನ ನೋಡಿ

ಅದ್ಭುತ ಮತ್ತು ವಿಶಿಷ್ಟವಾದ ದೇವಾಲಯ ಎಲ್ಲಿದೆ ? : ದಂಪತಿ ಒಟ್ಟಿಗೆ ದೇವರ ದರ್ಶನ ಪಡೆಯಲು ನಿಶಿದ್ಧವಾದ ದೇವಸ್ಥಾನ ದೇವಭೂಮಿ ಹಿಮಾಚಲ ಪ್ರದೇಶ (Himachal Pradesh) ದಲ್ಲಿದೆ. ಶಿಮ್ಲಾ (Shimla) ದಲ್ಲಿರುವ ಈ ದೇವಾಲಯವು ತಾಯಿ ದುರ್ಗೆಯ ದೇವಾಲಯವಾಗಿದೆ. ಈ ವಿಶಿಷ್ಟ ಮತ್ತು ವಿಶೇಷ ದೇವಾಲಯವನ್ನು ಮಾ ದುರ್ಗಾ (Durga) ಶ್ರೀ ಕೋಟಿ ಮಾತಾ ಎಂದು ಕರೆಯಲಾಗುತ್ತದೆ. ಮಾತಾ ಭೀಮಾ ಕಾಳಿ ಟ್ರಸ್ಟ್ ಈ ದೇವಾಲಯದ ನಿರ್ವಹಣೆ ಮಾಡ್ತಿದೆ. ಶಿಮ್ಲಾದ ಈ ದೇವಾಲಯದ ಸಮುದ್ರ ಮಟ್ಟದಿಂದ 11000 ಅಡಿ ಎತ್ತರದಲ್ಲಿದೆ.

ದಂಪತಿ ದರ್ಶನ ಇಲ್ಲಿ ನಿಶಿದ್ಧ : ಸಾಮಾನ್ಯವಾಗಿ ತಾಯಿ ದುರ್ಗೆ ದರ್ಶನವನ್ನು ದಂಪತಿ ಒಟ್ಟಿಗೆ ಪಡೆಯಬೇಕೆಂದು ಹಿಂದುಗಳು ನಂಬುತ್ತಾರೆ. ಆದ್ರೆ ಈ ದುರ್ಗೆಯ ದೇವಾಲಯದಲ್ಲಿ ಮಾತ್ರ ಪತಿ ಮತ್ತು ಪತ್ನಿ  ಒಟ್ಟಿಗೆ ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ. ವಿವಾಹಿತ ದಂಪತಿ ಈ ದೇವಾಲಯಕ್ಕೆ ಭೇಟಿ ನೀಡಿ, ಒಟ್ಟಿಗೆ ತಾಯಿಯ ದರ್ಶನ ಮಾಡಿದ್ರೆ ಅಪರಾಧಕ್ಕಾಗಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಒಂದ್ವೇಳೆ ಪತಿ ಹಾಗೂ ಪತ್ನಿ ಇಬ್ಬರೂ ಈ ದೇವಸ್ಥಾನಕ್ಕೆ ಒಟ್ಟಿಗೆ ಬಂದಿದ್ದರೂ ಒಟ್ಟಿಗೆ ದೇವರ ದರ್ಶನ ಮಾಡಬಾರದು. ಒಬ್ಬರಾದ್ಮೇಲೆ ಒಬ್ಬರಂತೆ ದೇವಿ ದರ್ಶನ ಪಡೆಯಬೇಕು ಎನ್ನಲಾಗುತ್ತದೆ.

ಟ್ರಾವೆಲ್ ಪ್ರಿಯರಿಗೊಂದು ಸಿರಿ ಸುದ್ದಿ, ಯುರೋಪ್ ಹೀಗ್ ಸುತ್ತಬಹುದು ನೋಡಿ

ಪದ್ಧತಿ ಹಿಂದಿದೆ ಒಂದು ಕಥೆ : ಒಮ್ಮೆ ಶಿವ ಹಾಗೂ ಪಾರ್ವತಿ ತಮ್ಮ ಮಕ್ಕಳಾದ ಗಣೇಶ ಹಾಗೂ ಕಾರ್ತಿಕೇಯನನ್ನು ಪರೀಕ್ಷೆ ಮಾಡಲು ಬಯಸ್ತಾರೆ. ಬ್ರಹ್ಮಾಂಡ ಸುತ್ತಿ ಬರುವಂತೆ ಮಕ್ಕಳಿಗೆ ಹೇಳ್ತಾರೆ. ಕಾರ್ತಿಕೇಯ ಬ್ರಹ್ಮಾಂಡ ಸುತ್ತಲು ಹೊರಡ್ತಾನೆ. ಗಣೇಶ ಮಾತ್ರ, ಶಿವ ಪಾರ್ವತಿ ಪ್ರದಕ್ಷಣೆ ಮಾಡ್ತಾನೆ. ತಂದೆ- ತಾಯಿಯೇ ಬ್ರಹ್ಮಾಂಡ. ಹಾಗಾಗಿ ಅವರನ್ನೇ ಪ್ರದಕ್ಷಣೆ ಹಾಕಿದೆ ಎಂದು ತನ್ನ ಬುದ್ಧಿವಂತಿಕೆ ತೋರಿಸ್ತಾನೆ. ಇತ್ತ ಕಾರ್ತಿಕೇಯ ಬ್ರಹ್ಮಾಂಡ ಸುತ್ತಿ ಬರುತ್ತಾನೆ. ಅಷ್ಟರಲ್ಲಿ ಗಣೇಶನಿಗೆ ಮದುವೆಯಾಗಿರುತ್ತದೆ. ತಾನು ಬರುವ ಮೊದಲೇ ಗಣೇಶನಿಗೆ ಮದುವೆಯಾಗಿದ್ದನ್ನು ನೋಡಿ ಕೋಪಗೊಳ್ಳುವ ಕಾರ್ತಿಕೇಯ ಮಹತ್ವದ ನಿರ್ಧಾರ ತೆಗೆದುಕೊಳ್ತಾನೆ. ನಾನು ಮದುವೆಯಾಗುವುದಿಲ್ಲವೆಂದು ನಿರ್ಣಯಿಸ್ತಾನೆ. ಕಾರ್ತಿಕೇಯನ ಈ ನಿರ್ಧಾರದಿಂದ ಪಾರ್ವತಿಗೆ ಕೋಪಬರುತ್ತದೆ. ಎಲ್ಲಿ ಕಾರ್ತಿಕೇಯ ತಂಗಿದ್ದಾನೋ ಆ ಸ್ಥಳಕ್ಕೆ ದಂಪತಿ ಒಟ್ಟಿಗೆ ಬಂದು ದರ್ಶನ ಪಡೆದ್ರೆ ದಂಪತಿ ದೂರವಾಗ್ತಾರೆ ಎಂದು ಪಾರ್ವತಿ ಹೇಳ್ತಾಳೆ. ಕಾರ್ತಿಕೇಯ ತಂಗಿದ್ದು ಶಿಮ್ಲಾದ ಅದೇ ಸ್ಥಳವಾಗಿತ್ತು ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಭಕ್ತರು ದಂಪತಿ ಸಮೇತ ದೇವಸ್ಥಾನಕ್ಕೆ ಭೇಟಿ ನೀಡುವುದಿಲ್ಲ. ದುರ್ಗೆಯ ದರ್ಶನವನ್ನು ಒಟ್ಟಿಗೆ ಮಾಡಿದ್ರೆ ದಾಂಪತ್ಯ ಮುರಿದು ಬೀಳಬಹುದು ಎಂಬ ಭಯ ಭಕ್ತರಲ್ಲಿದೆ. 
 

click me!