ದೈಹಿಕ ಮತ್ತು ಮಾನಸಿಕ ಫಿಟ್ ನೆಸ್ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ದಿನಚರಿ, ಸರಳ ಆಹಾರ ಅಗತ್ಯ. ಆದರೂ ಕೆಲವರು ಮಾತ್ರವೇ ಫಿಟ್ ನೆಸ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿ ಎನಿಸುತ್ತಾರೆ. ಅವರು ಈ ನಾಲ್ಕು ರಾಶಿಗಳಿಗೆ ಸೇರಿರುವ ಸಾಧ್ಯತೆ ಅಧಿಕ.
ನಮಗ್ಯಾರಿಗೂ ದಪ್ಪಗಾಗುವುದು ಬೇಕಾಗಿಲ್ಲ, ತೆಳು ಮೈಕಟ್ಟಿನ ಸೌಂದರ್ಯ ಹೊಂದಬೇಕೆನ್ನುವುದು ಎಲ್ಲರ ಆಸೆ. ಆದರೆ, ಹೊಟ್ಟೆಯ ಸುತ್ತ ಬೆಳೆದಿರುವ ಟಯರ್ ಅದಕ್ಕೆ ಅವಕಾಶ ಕೊಡುವುದಿಲ್ಲ. ಅದನ್ನು ಹೇಗಾದರೂ ಕಡಿಮೆ ಮಾಡಲೇಬೇಕೆಂಬ ಸಂಕಲ್ಪದೊಂದಿಗೆ ಒಂದು ದಿನ ಶುಭ ಮುಹೂರ್ತದಲ್ಲಿ ವ್ಯಾಯಾಮಕ್ಕೆ ಶುರುವಿಡುತ್ತೇವೆ. ಆಹಾರದಲ್ಲೂ ಕಟ್ಟುನಿಟ್ಟು ಆರಂಭವಾಗುತ್ತದೆ. ನಾಲ್ಕೇ ದಿನ, ಐದನೇ ದಿನಕ್ಕೆ “ಅಯ್ಯಪ್ಪ, ಇದೆಲ್ಲ ನಮ್ಮ ಕೈಲಿ ಆಗುವುದಿಲ್ಲ, ದೇಹ ಹೇಗಿದೆಯೋ ಹಾಗೆಯೇ ಅದನ್ನು ಪ್ರೀತಿಸೋಣʼ ಎನ್ನುವ ತತ್ವ ಹೇಳಿಕೊಂಡು ಸುಮ್ಮನಾಗುತ್ತೇವೆ. ಕೆಲವರು ತೂಕ ಇಳಿಸಿಕೊಳ್ಳಲು ವಿವಿಧ ಔಷಧ ಅಥವಾ ಸಪ್ಲಿಮೆಂಟ್ಸ್ ಮೊರೆಯೂ ಹೋಗಬಹುದು. ಕೆಲವರು ಪದೇ ಪದೆ ಪ್ರಯತ್ನ ನಡೆಸಿ ಕೈ ಸುಟ್ಟುಕೊಳ್ಳಬಹುದು. ಆದರೆ, ಏನೇ ಮಾಡಿದರೂ ಎಲ್ಲರಿಗೂ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರು ಮಾತ್ರವೇ ಈ ಹೋರಾಟದಲ್ಲಿ ಯಶಸ್ವಿ ಆಗುತ್ತಾರೆ. ಅಷ್ಟರಮಟ್ಟಿಗಿನ ಮಾನಸಿಕ ಸ್ಥೈರ್ಯ, ದೃಢ ಚಿತ್ತ ಎಲ್ಲರಿಗೂ ಇರುವುದಿಲ್ಲ. ಏಕೆಂದರೆ, ತೂಕ ಇಳಿಸಿಕೊಳ್ಳಲು ಮುಖ್ಯವಾಗಿ ಬೇಕಾದುದೇ ಬದ್ಧತೆ ಹಾಗೂ ದೃಢ ಸಂಕಲ್ಪ. ಆದರೆ, ಅಂತಹ ಕೆಲವೇ ಜನರನ್ನು ನಮ್ಮ ನಡುವೆ ಕಾಣಬಹುದು. ಅವರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ. ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಲ್ಲಿ ಅವರು ಅತ್ಯಂತ ದೃಢತೆ ಹೊಂದಿರುತ್ತಾರೆ. ಅವರು ಯಾವುದೇ ಪರಿಸ್ಥಿತಿಯಲ್ಲೂ ದೈನಂದಿನ ವ್ಯಾಯಾಮ ಬಿಡುವುದಿಲ್ಲ. ಆಹಾರದ ಮಿತಿ ತಪ್ಪುವುದಿಲ್ಲ. ನಿಮಗೂ ಅಂತಹ ಸ್ನೇಹಿತರು ಯಾರಾದರೂ ಇರಬಹುದು. ಹಾಗಿದ್ದರೆ ಅವರು ಈ ರಾಶಿಗಳಿಗೆ ಸೇರಿದ್ದಾರಾ ನೋಡಿ.
• ಸಿಂಹ (Leo)
ದೃಢವಾದ ನಿರ್ಧಾರಕ್ಕೆ (Strong Determination) ಇವರು ಹೆಸರುವಾಸಿ. ಹಾಗೂ ಇವರ ಗುರಿಗಳು (Aims) ಭಾರೀ ಎತ್ತರದಲ್ಲಿರುತ್ತವೆ. ದೈಹಿಕವಾಗಿ ಫಿಟ್ (Fit) ಆಗಿರಬೇಕು, ಆರೋಗ್ಯ Health) ಹೊಂದಬೇಕು ಎನ್ನುವ ಸಂಕಲ್ಪ ಹೊಂದಿದರೆ ಅದಕ್ಕೆ ಎಂದಿಗೂ ಬದ್ಧರಾಗಿರುತ್ತಾರೆ. ತಮ್ಮ ಉತ್ಸಾಹಭರಿತ ಮನಸ್ಸು ಹಾಗೂ ಅಸೂಯೆ ಸ್ವಭಾವದಿಂದಾಗಿ ಗುರಿ ಸಾಧಿಸುವವರೆಗೂ ನಿಲ್ಲುವುದಿಲ್ಲ.
ಈ ರಾಶಿಗಳಿಗಿದೆ ಪ್ರೇಮವಿವಾಹವಾಗೋ ಭಾಗ್ಯ, ನಿಮ್ಮದ್ಯಾವ ರಾಶಿ?
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯವರು ಸ್ವಲ್ಪ ಭಾವನಾತ್ಮಕ (Emotional) ವ್ಯಕ್ತಿತ್ವ ಹೊಂದಿದ್ದರೂ, ಉತ್ತಮ ಮಾನಸಿಕ (Mental) ಮತ್ತು ದೈಹಿಕ (Physical) ಆರೋಗ್ಯ ಹೊಂದಿರಬೇಕೆನ್ನುವ ಕುರಿತು ಭಾರೀ ಸ್ಪಷ್ಟ ಅರಿವು ಹೊಂದಿರುತ್ತಾರೆ ಹಾಗೂ ದೃಢ ಸಂಕಲ್ಪ (Will Power) ಮಾಡುತ್ತಾರೆ. ಒಂದಾದ ಮೇಲೆ ಒಂದರಂತೆ ಕೆಲಸ ಮಾಡುತ್ತಿರುವುದು ಭಾವನಾತ್ಮಕ ಹಿಂಸೆಗಳನ್ನು ಮೆಟ್ಟಿ ನಿಲ್ಲಲು ಉತ್ತಮ ಮಾರ್ಗ ಎನ್ನುವುದು ಇವರ ನಂಬಿಕೆ. ಹೀಗಾಗಿ, ನಿರಂತರವಾಗಿ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ದೃಢ ಚಿತ್ತದಿಂದಲೇ ಆರೋಗ್ಯವನ್ನೂ ಕಾಯ್ದುಕೊಳ್ಳುತ್ತಾರೆ.
• ವೃಷಭ (Taurus)
ಅತ್ಯುತ್ತಮ ಭಾವನಾತ್ಮಕ ಸ್ಥಿರತೆ (Stability) ಹಾಗೂ ಸಮತೋಲನ ಹೊಂದಿರುತ್ತಾರೆ. ಹೀಗಾಗಿ, ಸದಾಕಾಲ ಸದೃಢ ಹಾಗೂ ಶಕ್ತಿಯುತ (Powerful) ಮನಸ್ಥಿತಿ ಇವರದ್ದಾಗಿರುತ್ತದೆ. ಸಕಾರಾತ್ಮಕ (Positive) ನಿಲುವು ಹಾಗೂ ಪರಿಶ್ರಮಕ್ಕೆ ಇವರು ಹೆಸರುವಾಸಿ. ಸ್ವಲ್ಪ ಅಸೂಯೆ (Zealousness) ಸ್ವಭಾವ ಇರುವುದರಿಂದಲೇ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಶ್ರಮ ಹಾಕುತ್ತಾರೆ.
ಈ ರಾಶಿಯವರಿಗೆ ಕಡಿಮೆ ವಯಸ್ಸಿನ ಗಂಡಸರೆಡೆಗೆ ಅಟ್ರಾಕ್ಷನ್ ಜಾಸ್ತಿ!
• ಮಕರ (Capricorn)
ಶಾಂತ (Cool) ಮನಸ್ಥಿತಿ ಕಾಪಾಡಿಕೊಳ್ಳಲು ಇವರು ನಿಪುಣರಾಗಿರುತ್ತಾರೆ. ತಮ್ಮ ಗುರಿಯ ಕುರಿತು ಆಳವಾದ ಬಾಂಧವ್ಯ (Connection) ಹೊಂದಿರುತ್ತಾರೆ. ಒಮ್ಮೆ ತಮಗಾಗಿ ಒಂದು ಮಾನದಂಡ ನಿಗದಿ ಮಾಡಿಕೊಂಡರೆ ಅದಕ್ಕೆ ಬದ್ಧರಾಗಿರುತ್ತಾರೆ. ಅಷ್ಟೇ ಅಲ್ಲ, ಅದಕ್ಕಾಗಿ ದುಪ್ಪಟ್ಟು ಕೆಲಸ (Double Work) ಮಾಡುತ್ತಾರೆ. ಇವರ ಉತ್ಸಾಹದ ಗುಣ ಇವರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ ಮತ್ತು ಆರೋಗ್ಯ (Health) ಸಂಬಂಧಿ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.