Zodiac Signs And Traits: ಈ ನಾಲ್ಕು ರಾಶಿಯ ಹೆಣ್ಮಕ್ಕಳ ಕೈಲಿರುತ್ತೆ ಗಂಡನ ಜುಟ್ಟು!

By Suvarna News  |  First Published Jan 25, 2022, 5:57 PM IST

ಕೆಲ ಹುಡುಗಿಯರ ಸ್ವಭಾವವೇ ಹಾಗಿರುತ್ತದೆ. ಅವರ ಜೊತೆ ಇರುವವರು ಆಟೋಮ್ಯಾಟಿಕ್ ಆಗಿ ಅವರ ಮಾತು ಕೇಳತೊಡಗುತ್ತಾರೆ. ಹೀಗೆ ಗಂಡನನ್ನು ನಿಯಂತ್ರಣದಲ್ಲಿಟ್ಟುಕೊಳ್ಳೋ ಹುಡುಗಿಯರು ಯಾವ ರಾಶಿಗೆ ಸೇರಿದವರು ಗೊತ್ತಾ?


ಯಾರೊಂದಿಗಾದರೂ ಪ್ರೀತಿಯಲ್ಲಿ ಬಿದ್ದಾಗ ಕೇವಲ ಒಳ್ಳೆಯ ಗುಣಗಳಷ್ಟೇ ಕಾಣಿಸುತ್ತಿರುತ್ತದೆ. ಉದಾಹರಣೆಗೆ ಹುಡುಗಿ ಬಜಾರಿಯಾಗಿದ್ದರೆ, ತನಗೆ ಇಂಥವಳೇ ಬೇಕಾಗಿದ್ದವಳು ಎನಿಸುತ್ತದೆ ಹುಡುಗನಿಗೆ. ಆಕೆಯ ಬಜಾರಿತನಕ್ಕೇ ಆತ ಮರುಳಾಗುತ್ತಾನೆ. ಮದುವೆಯಾಗಿ ಕೆಲ ವರ್ಷಗಳಲ್ಲೇ ಆತನನ್ನು ಹೆಂಡತಿಯ ದಾಸ ಎಂದು ಸ್ನೇಹಿತರು ಚುಡಾಯಿಸುತ್ತಿರುತ್ತಾರೆ. ಹಾಗಂಥ ಬಜಾರಿಯಂತೆ ಕಾಣುವವರೆಲ್ಲ ಹೀಗೇ ಎಂದಲ್ಲ. ಸೌಮ್ಯ ಸ್ವಭಾವವಾಗಿ ಕಾಣುವಾಕೆ ಕೂಡಾ ನಯವಾದ ಮಾತಿನಲ್ಲೇ ಪತಿಯನ್ನು ತನ್ನ ನಿಯಂತ್ರಣ(control)ದೊಳಗಿಟ್ಟುಕೊಳ್ಳಬಹುದು. ಆಕೆಯ ಪ್ರೀತಿಗೇ ಆತ ದಾಸನಾಗಿ ಬಿಡಬಹುದು. ಇವೆಲ್ಲ ಹೇಗೆ, ಏನು ಹೇಳುವುದು ಕಷ್ಟ. ಆದರೆ, ರಾಶಿಯ ಪ್ರಕಾರ ಯಾವ ಹೆಣ್ಣುಮಕ್ಕಳು ಪತಿಯ ಜುಟ್ಟನ್ನು ಕೈಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾವಿಲ್ಲಿ ಹೇಳುತ್ತೇವೆ. 

ಸಿಂಹ(Leo)
ಸಿಂಹ ರಾಶಿಯ ಹುಡುಗಿಯರು ಗಂಡನ ವಿಷಯಕ್ಕೆ ಬಂದಾಗ ಸಿಂಹಿಣಿಯರೇ ಸರಿ. ಹಾಗಂಥ ಅವರು ಜೋರಿರುವುದಿಲ್ಲ. ತುಂಬಾ ಸಮಾಧಾನಚಿತ್ತರಾಗಿಯೂ, ಗಂಭೀರವಾಗಿಯೂ ಇರುತ್ತಾರೆ. ಆದರೆ, ಪತಿ(husband)ಯನ್ನು ನಂಬುವವರಲ್ಲ. ಅನುಮಾನ ಜಾಸ್ತಿ. ಅವರ ಈ ಗುಣದಿಂದಾಗಿ, ಪತಿಯನ್ನು ನಿಯಂತ್ರಿಸಲು ಶುರು ಮಾಡುತ್ತಾರೆ. ಎಲ್ಲಿ ಫ್ರೀ ಬಿಟ್ಟರೆ ಕೈ ತಪ್ಪಿ ಹೋಗುವರೋ ಎಂಬ ಭಯದಲ್ಲಿ ಪತಿಯ ಮೇಲೆ ಹೆಚ್ಚು ಆಡಳಿತ ಮಾಡುತ್ತಾ ಹೋಗುತ್ತಾರೆ. ತಮ್ಮ ಮಾತನ್ನು ಕೇಳಲಿಲ್ಲವೆಂದಾಗ ಅನುಮಾನಿಸತೊಡಗುತ್ತಾರೆ. ನಿಧಾನವಾಗಿ ಪತಿ ಪತ್ನಿಯ ನಂಬಿಕೆ(trust) ಗಳಿಸಲು ಆಕೆ ಹೇಳಿದಂತೆ ಕೇಳತೊಡಗುತ್ತಾನೆ. 

Pregnancy and Planets: 9 ತಿಂಗಳ ಗರ್ಭಾವಸ್ಥೆ ಹಾಗೂ 9 ಗ್ರಹಗಳ ನಡುವೆ ಇರುವ ಸಂಬಂಧ ಏನು ಗೊತ್ತೇ ?

Tap to resize

Latest Videos

undefined

ಧನು(Sagittarius)
ಧನು ರಾಶಿಯ ಹುಡುಗಿಯರು ಸ್ವತಂತ್ರ ಸ್ವಭಾವದವರು. ಅವರು ತಮ್ಮ ಮೇಲೆ ಯಾರಾದರೂ ಅಧಿಕಾರ ಚಲಾಯಿಸಿದರೆ ತಡೆದುಕೊಳ್ಳುವವರಲ್ಲ. ಆದರೆ, ತಾವು ಆರ್ಡರ್ ಮಾಡುತ್ತಾರೆ. ತಾವು ಹೇಳಿದಂತೆಯೇ ನಡೆಯಬೇಕು ಎನ್ನುತ್ತಾರೆ. ಇವರು ತಮ್ಮ ಪಾಡಿಗೆ ತಮ್ಮ ಜೀವನ ನಡೆಸಿಕೊಂಡು ಹೋಗಬೇಕು, ಯಾರ ತಂಟೆಗೂ ಹೋಗಬಾರದು ಎಂದುಕೊಂಡಿರುವವರು. ಪತಿಯೂ ಕೂಡಾ ಮತ್ತೊಬ್ಬರ ವಿಷಯಕ್ಕೆ ಮೂಗು ತೂರಿಸದಂತೆ ನೋಡಿಕೊಳ್ಳಲು ಅವನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಪತಿಯ ಪ್ರತಿ ಚಲನವಲನಕ್ಕೂ ಅದು ಹೇಗಿರಬೇಕಿತ್ತು, ಎಲ್ಲಿ ತಪ್ಪಿತು ಎಂದು ವಿವರಿಸತೊಡಗುತ್ತಾರೆ. ನಿಧಾನಕ್ಕೆ ಆತನಿಗೆ ಪತ್ನಿ ಹೇಳುವುದೇ ಸರಿ ಎನಿಸತೊಡಗಿದರೂ ಆಶ್ಚರ್ಯವಿಲ್ಲ.

Astro Tips: ದಾಂಪತ್ಯದಲ್ಲಿ ಪ್ರತಿ ದಿನ ಜಗಳ, ಮುನಿಸು ಉಂಟಾಗ್ತಿದ್ಯಾ? ಹೀಗೆ ಮಾಡಿ ನೋಡಿ..

ತುಲಾ(Libra)
ತುಲಾ ರಾಶಿಯ ಹುಡುಗಿಯರಲ್ಲಿ ನಾಯಕತ್ವ(leadership) ಗುಣವಿರುತ್ತದೆ. ಹೆಚ್ಚಿನ ಬಾರಿ ಆಕೆಯ ಈ ಗುಣವೇ ಪತಿಯಾದವನಿಗೆ ಇಷ್ಟವಾಗಿರುತ್ತದೆ. ಆತ ಆಕೆಯನ್ನ ಹೆಚ್ಚು ಇಷ್ಟಪಟ್ಟಷ್ಟೂ ಆಕೆ ಆತನನ್ನು ತಾನೇ ನಿಯಂತ್ರಿಸತೊಡಗುತ್ತಾಳೆ. ತೋರಿಕೆಯ ಗುಣ ಜಾಸ್ತಿ ಇರುವ ಈ ಹುಡುಗಿಯರು, ಪತಿಯ ಕುರಿತ ಸಣ್ಣಪುಟ್ಟ ವಿಷಯವೂ ತಮಗೆ ತಿಳಿದಿರಬೇಕೆಂದು ಬಯಸುತ್ತಾರೆ. ಅದನ್ನು ಆತ ವರದಿ ಒಪ್ಪಿಸದಿದ್ದರೆ, ತಮ್ಮದೇ ರೀತಿಯಲ್ಲಿ ಎಲ್ಲವನ್ನೂ ಬಾಯಿ ಬಿಡಿಸುತ್ತಾರೆ. ಅವನ ಬಗ್ಗೆ ಎಲ್ಲ ತಿಳಿದ ಮೇಲೆ ಇನ್ನೇನು,  ಕಡೆಗೆ ಪತಿಯನ್ನು ಬೆರಳ ತುದಿಯಲ್ಲಿ ಆಡಿಸುತ್ತಾರೆ. 

ಕನ್ಯಾ(Virgo)
ಈ ರಾಶಿಯ ಹೆಣ್ಣುಮಕ್ಕಳು ತಮ್ಮ ಸಂಗಾತಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಪ್ರೀತಿಯಿಂದಲೇ ಕಟ್ಟಿ ಹಾಕಿ ಬಿಡುತ್ತಾರೆ. ಅವರ ಪ್ರೀತಿಯೇ ಪತಿಯನ್ನು ಮೋಹದಲ್ಲಿ ಸಿಕ್ಕಿಸುತ್ತದೆ. ಸಂಗಾತಿಯು ಬೇರೆ ಯಾರೊಂದಿಗೆ ಕಾಣಿಸಿಕೊಂಡರೂ ಇವರಿಂದ ಅದನ್ನು ಸಹಿಸಲಾಗುವುದಿಲ್ಲ. ಈ ಕಾರಣದಿಂದ ಪತಿಯನ್ನು ನಿಯಂತ್ರಿಸಲು ಶುರು ಮಾಡುತ್ತಾರೆ. ಇವರ ಪ್ರೀತಿಯ ಸಾಗರದಲ್ಲಿ ಮಿಂದೆದ್ದ ಆತನೂ ಈಕೆಯ ನಿಯಂತ್ರಣವನ್ನೇ ಮೆಚ್ಚತೊಡಗುತ್ತಾನೆ. ಆಕೆ ಹೇಳಿದಂತೆ ಕೇಳತೊಡಗುತ್ತಾನೆ. ಒಟ್ಟಿನಲ್ಲಿ ಈ ರಾಶಿಯ ಹೆಣ್ಮಕ್ಕಳು ಪತಿಯ ಜುಟ್ಟನ್ನು ನೋವಾಗದಂತೆ ಕೈಗೆ ತೆಗೆದುಕೊಳ್ಳುತ್ತಾರೆ.
 

click me!