ಗರ್ಭಾವಸ್ಥೆಯ ಪ್ರತಿಯೊಂದು ತಿಂಗಳನ್ನು ಒಂದೊಂದು ಗ್ರಹ ಆಳುತ್ತದೆ. ಯಾವ ತಿಂಗಳನ್ನು ಯಾವ ಗ್ರಹ, ಹೇಗೆ ಆಳುತ್ತದೆ ನೋಡೋಣ.
ಮಗುವು ತಾಯಿಯ ಗರ್ಭದಲ್ಲಿ ಸುಮಾರು 270 ದಿನಗಳ ಕಾಲ ಇರುತ್ತದೆ. ಇದು ತಾಯಿಯ ಋತುಚಕ್ರದ ಅವಧಿಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮಹಿಳೆಯ ಒಂದು ಋತುಚಕ್ರದ ಅವದಿ 27 ದಿನಗಳು. ಇಂಥ 10 ಚಕ್ರಗಳು ಉರುಳುವ ಅವಧಿಗೆ ಮಗು ಜನಿಸುತ್ತದೆ ಎನ್ನಲಾಗುತ್ತದೆ. ತಾಯಿಯ ಜಾತಕದಲ್ಲಿ ಗ್ರಹಗಳ ಚಲನೆ ಹಾಗೂ ಇರುವಿಕೆಯ ಆಧಾರದ ಮೇಲೆ ಗರ್ಭಾವಸ್ಥೆಯ ಫಲಿತಾಂಶ ನಿಂತಿರುತ್ತದೆ. ಗರ್ಭಾವಸ್ಥೆಯ 9 ತಿಂಗಳನ್ನು 9 ಗ್ರಹಗಳು ಆಳುತ್ತವೆ. ತಾಯಿಯ ಜಾತಕದಲ್ಲಿ ಆ ಗ್ರಹ ಕಾರಕನಾಗಿದ್ದಾಗ ಆಯಾ ತಿಂಗಳು ಸುಲಭವಾಗಿ ಕಳೆದು ಹೋಗುತ್ತದೆ. ತಾಯಿಯ ಜಾತಕದಲ್ಲಿ ಮಾರಕವಾಗಿರುವ ಗ್ರಹವು ತಿಂಗಳನ್ನು ಆಳುವಾಗ, ತಾಯಿ, ಮಗು ಇಬ್ಬರೂ ಅಪಾಯ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವ ತಿಂಗಳನ್ನು ಯಾವ ಗ್ರಹ ಆಳುತ್ತದೆ ನೋಡೋಣ.
1ನೇ ತಿಂಗಳು(First month)
ಗರ್ಭಾವಸ್ಥೆಯ ಮೊದಲ ತಿಂಗಳನ್ನು ಶುಕ್ರ ಆಳುತ್ತಾನೆ. ವೀರ್ಯವು ಅಂಡಾಣುವಿಗೆ ಸಂಪರ್ಕ ಸಾಧಿಸಿ ಭ್ರೂಣ ಉಂಟಾಗುತ್ತದೆ. ಇದಿನ್ನೂ ದ್ರವ ರೂಪದಲ್ಲೇ ಇರುತ್ತದೆ. ವೀರ್ಯ ಅಂಡಾಣುವಿಗೆ ಸೇರಲು ಶುಕ್ರನ ಅನುಗ್ರಹವೇ ಕಾರಣ. ಈ ಮಾಸದಲ್ಲಿ ಗರ್ಭಿಣಿಯು ಶುಕ್ರನನ್ನು ಆರಾಧಿಸಬೇಕು. ಮಹಿಳೆಯ ಜಾತಕದಲ್ಲಿ ಶುಕ್ರ ಸರಿಯಾದ ಸ್ಥಾನದಲ್ಲಿಲ್ಲವಾದರೆ, ಹೆಚ್ಚಿನ ಜಾಗರೂಕತೆ ವಹಿಸಬೇಕು.
undefined
ಎರಡನೇ ತಿಂಗಳು(Second month)
ಎರಡನೇ ತಿಂಗಳನ್ನು ಮಂಗಳ ಆಳುತ್ತಾನೆ. ಈ ಸಂದರ್ಭದಲ್ಲಿ ದ್ರವ ರೂಪದಿಂದ ಭ್ರೂಣ ಘನ ರೂಪಕ್ಕೆ ಹೋಗಲು ಮಂಗಳ ಕಾರಣನಾಗುತ್ತಾನೆ. ಭ್ರೂಣ ಗಟ್ಟಿಯಾಗುತ್ತದೆ.
ಮೂರನೇ ತಿಂಗಳು(Third month)
ಇದು ಗುರುವಿನ ತಿಂಗಳು. ಮಗುವಿನ ಅಂಗಾಂಗಳ(Limbs) ಬೆಳವಣಿಗೆ ಆರಂಭವಾಗುತ್ತದೆ. ಈ ಸಮಯದಲ್ಲಿ ಮಗುವಿನ ಕೈ, ಕಾಲು, ಬೆರಳುಗಳು, ಕಿವಿಗಳ ಬೆಳವಣಿಗೆ ಆಗುತ್ತದೆ. ಮಗುವಿನ ಲಿಂಗವೂ ನಿರ್ಧಾರವಾಗುತ್ತದೆ. ಗುರುವಿನ ಕಾರಣದಿಂದ ಭ್ರೂಣಕ್ಕೆ ಜೀವ ತುಂಬುತ್ತದೆ. ಅದಕ್ಕೇ ಗುರುವಿಗೆ ಜೀವ ಪ್ರದಾತೋ ಎನ್ನುವುದು. ಸಾಮಾನ್ಯವಾಗಿ ಅಬಾರ್ಶನ್ ಆಗುವುದು ಈ ಜೀವ ತುಂಬುವ ಮೊದಲೇ.
ನಾಲ್ಕನೇ ತಿಂಗಳು(Fourth month)
ನಾಲ್ಕನೇ ತಿಂಗಳನ್ನು ಸೂರ್ಯ ಆಳುತ್ತಾನೆ. ಈ ಸಂದರ್ಭದಲ್ಲಿ ಮೂಳೆಗಳ ಬೆಳವಣಿಗೆಯಾಗುತ್ತದೆ. ಸೂರ್ಯನು ದೇಹಕ್ಕೆ ಶಕ್ತಿಯನ್ನು ಕೊಡುತ್ತಾನೆ.
ಐದನೇ ತಿಂಗಳು(Fifth month)
ಐದನೇ ಮಾಸವನ್ನು ಚಂದ್ರ ಆಳುತ್ತಾನೆ. ಈ ಸಮಯದಲ್ಲಿ ಮಗುವಿನ ಚರ್ಮದ ಬೆಳವಣಿಗೆಯಾಗುತ್ತದೆ. ದೇಹದಲ್ಲಿ ರಕ್ತದ ಉತ್ಪಾದನೆಯಾಗುತ್ತದೆ. ರಕ್ತನಾಳಗಳು ಕಾಣಿಸಿಕೊಳ್ಳುತ್ತವೆ.
ಆರನೇ ತಿಂಗಳು(Sixth month)
ಆರನೇ ತಿಂಗಳಿಗೆ ಶನಿ ಅಧಿಪತಿಯಾಗಿದ್ದಾನೆ. ಈ ಸಂದರ್ಭದಲ್ಲಿ ಭ್ರೂಣದ ತಲೆಕೂದಲು ಹಾಗ ಉಗುರು ಹುಟ್ಟುತ್ತದೆ.
Astro Tips: ದಾಂಪತ್ಯದಲ್ಲಿ ಪ್ರತಿ ದಿನ ಜಗಳ, ಮುನಿಸು ಉಂಟಾಗ್ತಿದ್ಯಾ? ಹೀಗೆ ಮಾಡಿ ನೋಡಿ..
ಏಳನೇ ತಿಂಗಳು(Seventh month)
ಈ ಮಾಸವನ್ನು ಬುಧ ಆಳುತ್ತಾನೆ. ಬುಧನು ಬುದ್ಧಿವಂತಿಕೆಗೆ ಕಾರಣನಾಗಿದ್ದಾನೆ. ಮಗುವಿನ ನರಮಂಡಲ ವ್ಯವಸ್ಥೆಯ(nervous system) ಬೆಳವಣಿಗೆಯಾಗುತ್ತದೆ.
ಎಂಟನೇ ತಿಂಗಳು(Eight month)
ಎಂಟನೇ ತಿಂಗಳನ್ನು ಆಧನ ಲಗ್ನ ಆಳುತ್ತಾನೆ. ಈ ಸಂದರ್ಭದಲ್ಲಿ ಮಗುವಿನ ಹೊಕ್ಕುಳ ಬಳ್ಳಿ(Umbical cord) ಹುಟ್ಟುತ್ತದೆ. ಇದು ಮಗುವಿಗೆ ಆಹಾರವನ್ನು ಸರಬರಾಜು ಮಾಡಲು ಶುರು ಮಾಡುತ್ತದೆ.
ಒಂಬತ್ತನೇ ತಿಂಗಳು(Ninth month)
ಒಂಬತ್ತನೇ ತಿಂಗಳು ಸೂರ್ಯನಿಂದ ಆಳಲ್ಪಡುತ್ತದೆ. ಭ್ರೂಣಕ್ಕೆ ಹಸಿವು, ಬಾಯಾರಿಕೆ ಶುರುವಾಗುತ್ತದೆ.
Science Behind Culture: ಸೋಮವಾರ, ಶನಿವಾರ ಮಾಂಸಾಹಾರ ತಿನ್ನಬೇಡಿ ಅನ್ನೋದು ಏಕೆ?
ಹತ್ತನೇ ತಿಂಗಳು(Tenth month)
ಹತ್ತನೇ ತಿಂಗಳಿಗೆ ಚಂದ್ರ ಅಧಿಪತಿ. ಮಗುವಿನ ಮೆದುಳು ಆ್ಯಕ್ಟಿವ್ ಆಗುತ್ತದೆ. ಅದು ಹೊರ ಬರಲು ಸಜ್ಜಾಗುತ್ತದೆ.
ಒಂದು ವೇಳೆ ಯಾವುದಾದರೂ ಗ್ರಹ ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ಆಗ, ಅಬಾರ್ಶನ್ ಆಗುವ ಸಂಭವವಿರುತ್ತದೆ.